ಹೂಡಿಕೆ ಮಾಡಿದ ಹಣಕ್ಕೆ ಬಡ್ಡಿ ಸಿಗಲಿದೆ ಮತ್ತು ಅವಧಿ ಮುಗಿದ ನಂತರ ಅಸಲು ಹಣ ಕೈಸೇರಲಿದೆ

ನವ ದೆಹಲಿ – ಕೇಂದ್ರ ಸರಕಾರವು ದೇಶೀಯ ಹೂಡಿಕೆ ಮಾರುಕಟ್ಟೆಯಲ್ಲಿ ‘ಟೆಂಪಲ್ ಬಾಂಡ್ಸ್’ ಹೆಸರಿನ ಸಂಪೂರ್ಣ ಹೊಸ ಯೋಜನೆಯನ್ನು ತರಲು ಸಿದ್ಧತೆ ನಡೆಸುತ್ತಿದೆ. ಈ ಯೋಜನೆಯ ಮೂಲಕ ಸಾಮಾನ್ಯ ನಾಗರಿಕರು, ಅಂದರೆ ಹೂಡಿಕೆದಾರರು ದೇವಸ್ಥಾನಗಳ ಅಭಿವೃದ್ಧಿಯಲ್ಲಿ ಹೂಡಿಕೆ ಮಾಡಬಹುದು ಮತ್ತು ಅದರಿಂದ ಲಾಭವನ್ನು ಪಡೆಯಬಹುದು.
ಏನಿದು ಟೆಂಪಲ್ ಬಾಂಡ್ಸ್ ?
ಟೆಂಪಲ್ ಬಾಂಡ್ಸ್ ಒಂದು ‘ಫಿಕ್ಸ್ಡ್ ಇನಕಮ್ ಇನ್ವೆಸ್ಟ್ ಮೆಂಟ್ ಪ್ರಾಡಕ್ಟ್’ (ಸ್ಥಿರ ಆದಾಯದ ಹೂಡಿಕೆ ಉತ್ಪನ್ನ) ತರಹ ಕೆಲಸ ಮಾಡುತ್ತದೆ. ಇದರಲ್ಲಿ ಒಂದು ನಿರ್ದಿಷ್ಟ ಅವಧಿಗೆ ಹಣವನ್ನು ಹೂಡಿಕೆ ಮಾಡಲಾಗುತ್ತದೆ, ಇದರ ಮೇಲೆ ಸರಕಾರ ಅಥವಾ ಸಂಬಂಧಪಟ್ಟ ದೇವಸ್ಥಾನದ ಟ್ರಸ್ಟ್ ಹೂಡಿಕೆದಾರರಿಗೆ ನಿಯಮಿತವಾಗಿ ನಿರ್ದಿಷ್ಟ ದರದಲ್ಲಿ ಬಡ್ಡಿಯನ್ನು ನೀಡುತ್ತದೆ ಮತ್ತು ಅವಧಿ ಮುಗಿದ ನಂತರ ಅಸಲು ಹಣವನ್ನು ಸಹ ಸುರಕ್ಷಿತವಾಗಿ ಮರಳಿ ನೀಡಲಾಗುತ್ತದೆ. ಇದರಲ್ಲಿ ಸರಕಾರವೇ ಸ್ವತಃ ಭಾಗಿಯಾಗಿರುವುದರಿಂದ ಹೂಡಿಕೆಗೆ ರಕ್ಷಣೆ ಸಿಗಲಿದೆ.
ಮಧ್ಯಪ್ರದೇಶ ಸರಕಾರ ೨೦೦ ಕೋಟಿ ರೂಪಾಯಿಯ ಮೊದಲ ‘ಟೆಂಪಲ್ ಬಾಂಡ್’ ತರಲಿದೆ!
೨೦೨೮ ರಲ್ಲಿ ಉಜ್ಜಯಿನಿಯಲ್ಲಿ ನಡೆಯಲಿರುವ ‘ಸಿಂಹಸ್ಥ ಕುಂಭಮೇಳ’ಕ್ಕೂ ಮುನ್ನ ಮಧ್ಯಪ್ರದೇಶದ ಭಾಜಪ ಸರಕಾರವು ೨೦೦ ಕೋಟಿ ರೂಪಾಯಿಯ ಟೆಂಪಲ್ ಬಾಂಡ್ಸ್ ಬಿಡುಗಡೆ ಮಾಡುವ ಪ್ರಸ್ತಾಪವನ್ನು ಮುಂದಿಟ್ಟಿದೆ. ಈ ಮೂಲಕ ಸಂಗ್ರಹಿಸಲಾಗುವ ಹಣವನ್ನು ಉಜ್ಜಯಿನಿ ಮತ್ತು ಅದರ ಸುತ್ತಮುತ್ತಲಿನ ಐತಿಹಾಸಿಕ ದೇವಸ್ಥಾನಗಳ ಅಭಿವೃದ್ಧಿಗೆ, ಹಾಗೂ ಭಕ್ತರಿಗಾಗಿ ರಸ್ತೆ, ಪಾರ್ಕಿಂಗ್, ಕುಡಿಯುವ ನೀರು ಮತ್ತು ಇತರ ನಾಗರಿಕ ಸೌಲಭ್ಯಗಳ ಅಭಿವೃದ್ಧಿಗಾಗಿ ಬಳಸಲಾಗುವುದು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!