1 ಸಾವಿರ ಪೊಲೀಸರ ನಿಯೋಜನೆ

ವಾರಾಣಸಿ (ಉತ್ತರ ಪ್ರದೇಶ) – ಇಲ್ಲಿ ಜೂನ್ 2 ರ ಮಧ್ಯರಾತ್ರಿ ಆಡಳಿತ ಮಂಡಳಿಯು ಬುಲ್ಡೋಜರ್ ಮೂಲಕ ‘ಅಜಗೈಬ್ ಶಹೀದ್ ಮಸೀದಿ’ಯನ್ನು ಕೆಡವಿತು. ಕೇವಲ 22 ನಿಮಿಷಗಳಲ್ಲಿ 5 ಬುಲ್ಡೋಜರ್ಗಳು 42 ಅಡಿ ಎತ್ತರದ ಮಸೀದಿಯನ್ನು ನೆಲಸಮಗೊಳಿಸಿದವು. ಸಂಪೂರ್ಣ ಅವಶೇಷಗಳನ್ನು ಸಹ ರಾತ್ರಿಯ ಕತ್ತಲಲ್ಲೇ ಟ್ರಕ್ ಗಳಲ್ಲಿ ತುಂಬಿಸಿ ತೆರವುಗೊಳಿಸಲಾಯಿತು. ಈ ಸಮಯದಲ್ಲಿ 1 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು. ಈ ಮಸೀದಿಯು 200 ವರ್ಷಗಳಷ್ಟು ಹಳೆಯದಾಗಿತ್ತು ಎಂದು ಪ್ರತಿಪಾದಿಸಲಾಗುತ್ತಿದ್ದರೂ, ಸ್ಥಳೀಯರ ಪ್ರಕಾರ ಈ ಮಸೀದಿಯನ್ನು ಕಳೆದ ಕೆಲವು ದಶಕಗಳಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತಿದೆ.
🏛️ Authorities in Kashi demolished a mosque built on railway land following a court order !
🚨👮♂️ Around 1,000 police personnel were deployed !
😲 The scale of deployment required to remove an unauthorised mosque indicates who is responsible for violence in the country 🔥
— Sanatan Prabhat (@SanatanPrabhat) June 3, 2026
ಮಸೀದಿಯನ್ನು ರೈಲ್ವೆಯ ಜಾಗದಲ್ಲಿ ನಿರ್ಮಿಸಲಾಗಿತ್ತು ಎಂದು ಆಡಳಿತ ಮಂಡಳಿ ಹೇಳಿದೆ. ಪ್ರಕರಣವು ನ್ಯಾಯಾಲಯಕ್ಕೆ ಹೋಗಿತ್ತು, ಅಲ್ಲಿಂದ ತೀರ್ಪು ರೈಲ್ವೆಯ ಪರವಾಗಿ ಬಂದಿತು. ಭೂಮಿಯನ್ನು ಖಾಲಿ ಮಾಡಲು ರೈಲ್ವೆಯು 3 ಬಾರಿ ನೋಟಿಸ್ ನೀಡಿತ್ತು; ಆದರೆ ಭೂಮಿಯನ್ನು ಖಾಲಿ ಮಾಡಿರಲಿಲ್ಲ. ಅದರ ನಂತರ ಈ ಕ್ರಮ ಕೈಗೊಳ್ಳಲಾಗಿದೆ. (ಇದರಿಂದ ದೇಶದಲ್ಲಿ ಕಾನೂನನ್ನು ಯಾರು ಪಾಲಿಸುವುದಿಲ್ಲ ಎಂಬುದು ತಿಳಿಯುತ್ತದೆ ! ಇಂತವರನ್ನು ಭಾರತದಿಂದ ಓಡಿಸುವುದೇ ಈಗ ಉಳಿದಿರುವ ಶಾಶ್ವತ ಪರಿಹಾರವಾಗಿದೆ ! -ಸಂಪಾದಕರು) ಇಲ್ಲಿ ಕಾಶಿ ರೈಲ್ವೆ ನಿಲ್ದಾಣದ ವಿಸ್ತರಣೆ ಮಾಡಲಾಗುತ್ತಿದೆ. ಇದೇ ಕಾರಣಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ. (ಇದರರ್ಥ ವಿಸ್ತರಣಾ ಕಾರ್ಯದ ಉದ್ದೇಶ ಇರದೇ ಇರುತ್ತಿದ್ದರೆ, ಅನಧಿಕೃತ ಮಸೀದಿಯನ್ನು ಹಾಗೆಯೇ ಉಳಿಯಲು ಬಿಡಲಾಗುತ್ತಿತ್ತೇ ? ಈ ಸ್ಥಿತಿಯು ಆಡಳಿತಾತ್ಮಕ ನಿರ್ಲಕ್ಷ್ಯದ ಭಾಗವೇ ಆಗಿದೆ ಎಂದು ಹೇಳಬೇಕಾಗುತ್ತದೆ ! –ಸಂಪಾದಕರು)
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!