ಬೆಂಗಳೂರು – ಇಲ್ಲಿಯ ಮಹಾನಗರ ಪಾಲಿಕೆಯ ಕೋವಿಡ್ ವಾರ್ ರೂಮ್‍ನಲ್ಲಿ ಮುಸಲ್ಮಾನ ಸದಸ್ಯರನ್ನೇ ನೇಮಕ ಮಾಡಿರುವುದನ್ನು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಇವರು ಟೀಕಿಸಿದ್ದಾರೆ. ಈ ಸಮಯದಲ್ಲಿ ಅವರು ‘ಕೋವಿಡ್ ವಾರ್ ರೂಮ್’ಗೆ ನೇಮಕಗೊಂಡ ೧೭ ಜನರ ಹೆಸರನ್ನು ಓದಿದರು. ಪಟ್ಟಿಯಲ್ಲಿ ಕೇವಲ ಒಂದು ಸಮುದಾಯದ ಹೆಸರುಗಳು ಇರುವುದನ್ನು ನೋಡಿ ಅವರು ಆಕ್ಷೇಪಿಸಿದರು. ಈ ಸಮಯದಲ್ಲಿ ಶಾಸಕರಾದ ರವಿ ಸುಬ್ರಹ್ಮಣ್ಯಂ, ಸತೀಶ ರೆಡ್ಡಿ ಮತ್ತು ಉದಯ ಗರುಡಾಚಾರ್ ಕೂಡ ಇದನ್ನು ದೃಢ ಪಡಿಸಿದ್ದಾರೆ.
(ಸೌಜನ್ಯ : MOJO STORY)
೧. ಸೂರ್ಯ ಇವರು, ಇವರೆಲ್ಲರೂ ಯಾರು ?, ಅವರನ್ನು ನೇಮಕಕ್ಕಾಗಿ ಯಾವ ಮಾನದಂಡವನ್ನು ಪರಿಗಣಿಸಲಾಗಿತ್ತು ಅವು ಯಾವುವು ? ಅವರನ್ನು ನೇಮಿಸಿದವರು ಯಾರು ? ಆ ದಳವನ್ನು ಕರೆಯಿರಿ ಎಂದು ಹೇಳಿದರು.
೨. ಶಾಸಕ ರವಿ ಸುಬ್ರಹ್ಮಣ್ಯಂ ಅವರು, ಈ ನೇಮಕಾತಿಗಳನ್ನು ಮದರಸಾಗಾಗಿ ಮಾಡಲಾಗಿದೆಯೋ ಅಥವಾ ಮಹಾನಗರ ಪಾಲಿಕೆಗಾಗಿ ಮಾಡಲಾಗಿದೆಯೋ ? ಎಂದು ವಿಚಾರಿಸದರು.
೩. ಶಾಸಕ ಸತೀಶ ರೆಡ್ಡಿಯವರು, ‘ಇವರೆಲ್ಲರನ್ನು ಬಿಟ್ಟು ಬೇರೆ ಯಾರು ಸಿಗಲಿಲ್ಲವೇ ?’, ಎಂದು ಪ್ರಶ್ನಿಸಿದರು.