ದಿವ್ಯ ಶಂಖನಾದ !

ಸನಾತನದ ಪುರೋಹಿತರಾದ ಶ್ರೀ. ಅಮರ ಜೋಶಿ ಅವರು ಮಾಡಿದ ಶಂಖನಾದದಿಂದ ಶುಭಾರಂಭ ! ಮಹಾಗಣಪತಿ ಪೂಜೆ ಹಾಗೂ ಪುಣ್ಯಾಹವಾಚನ ಮಾಡಲಾಯಿತು !
ಶ್ರೀ ರಾಜಮಾತಂಗಿ ಮಹಾಯಜ್ಞದ ಸಂಕಲ್ಪ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಪ್ರೇರಣೆಯಿಂದ ರಾಷ್ಟ್ರದ ಹಿತಕ್ಕಾಗಿ ಸಂಕಲ್ಪವನ್ನು ಕೈಗೊಳ್ಳಲಾಯಿತು !
ಸಂತರು ಮಹಾಯಜ್ಞದ ಯಜಮಾನತ್ವ ವಹಿಸಿ ರಾಷ್ಟ್ರರಕ್ಷಣೆ ಮತ್ತು ಲೋಕಕಲ್ಯಾಣಕ್ಕಾಗಿ ದೈವಿಶಕ್ತಿ ವೃದ್ಧಿಸಿದರು.

ದೇವಿಯ ಆರಾಧನೆ !

ಹಿಂದುತ್ವನಿಷ್ಠ ನ್ಯಾಯವಾದಿ ಶ್ರೀ. ಮತ್ತು ಸೌ. ಪುನಾಳೇಕರ್ ಸಹಿತ ಇತರ ಭಕ್ತರಿಂದ ಯಜ್ಞ ಸ್ಥಳದಲ್ಲಿ ಚೈತನ್ಯದಾಯಕ ಶ್ರೀ ಮಹಿಷಾಸುರ ಮರ್ದಿನಿ ಸ್ತೋತ್ರ ಪಠಣ !
ಕುಂಕುಮಾರ್ಚನೆ !

ಶ್ರೀ ರಾಜಮಾತಂಗಿ ದೇವಿಯೊಂದಿಗೆ ದಶಮಹಾವಿದ್ಯಾ ಆದಿಶಕ್ತಿಯರ ಕೃಪೆ ಪಡೆಯಲು ಲಲಿತಾ ತ್ರಿಶತಿ ಕುಂಕುಮಾರ್ಚನೆ ಮಾಡಲಾಯಿತು
ಭಾರತದ ಸಂರಕ್ಷಣೆ ಮತ್ತು ಲೋಕಕಲ್ಯಾಣಕ್ಕಾಗಿ ‘ಸಾಮೂಹಿಕ ಸಂಕಲ್ಪ! 
ಶಿವಾಗಮ ವಿದ್ಯಾನಿಧಿ ಆಗಮಾಚಾರ್ಯ ಶ್ರೀ. ಅರುಣಕುಮಾರ್ ಗುರುಮೂರ್ತಿ ಅವರು ೮ ಸಾವಿರಕ್ಕೂ ಹೆಚ್ಚು ಪ್ರತ್ಯಕ್ಷ ಭಕ್ತರು ಮತ್ತು ಭಾರತ ಸಹಿತ ೪೦ ದೇಶಗಳಿಂದ ಆನ್‌ಲೈನ್ ಮೂಲಕ ಜೋಡಿಸಲ್ಪಟ್ಟಿದ್ದ ಭಕ್ತರಿಂದ ಸಮಷ್ಟಿ ಸಂಕಲ್ಪವನ್ನು ಮಾಡಿಸಿದರು.
ಆಹುತಿ ಸಮರ್ಪಣೆ !

ಶ್ರೀ ರಾಜಮಾತಂಗಿ ದೇವಿಯ ಮೂಲಮಂತ್ರಗಳೊಂದಿಗೆ ಯಜ್ಞದಲ್ಲಿ ೯೬ ಪ್ರಕಾರದ ೧೦೮ ದ್ರವ್ಯಗಳ ಆಹುತಿಗಳನ್ನು ಸಮರ್ಪಿಸಲಾಯಿತು. ತಮಿಳುನಾಡಿನ ಶ್ರೀ ಗುರುಮೂರ್ತಿ ಶಿವಾಚಾರ್ಯರು ಯಜ್ಞದ ಮುಖ್ಯ ಪೌರೋಹಿತ್ಯವನ್ನು ವಹಿಸಿದ್ದರು.
ಮಹಾಯಜ್ಞದ ಮಹಾಪೂರ್ಣಾಹುತಿ !

ಮಹಾಯಜ್ಞದಲ್ಲಿ ಏನಾದರೂ ಹೆಚ್ಚು-ಕಡಿಮೆ ಆಗಿದ್ದರೆ, ಅದನ್ನು ನಿವಾರಿಸಲು ಪೂರ್ಣಾಹುತಿಯನ್ನು ನೀಡಲಾಗುತ್ತದೆ. ಶತ್ರುವನ್ನು ನಿಯಂತ್ರಿಸುವ ಸಾಮರ್ಥ್ಯವಿರುವ ಶ್ರೀ ರಾಜಮಾತಂಗಿ ಯಜ್ಞದ ಪೂರ್ಣ ಫಲವನ್ನು ಪಡೆಯಲು ವಸ್ತ್ರ ಮತ್ತು ತುಪ್ಪದ ಸಂತತಧಾರೆಯನ್ನು (ನಿರಂತರ ಧಾರೆ) ಅರ್ಪಿಸಿ ಮಹಾಪೂರ್ಣಾಹುತಿ ನೀಡಲಾಯಿತು!
ಶ್ರೀ ರಾಜಮಾತಂಗಿ ದೇವಿಯ ಆರತಿ !

ಆರತಿ ಎಂದರೆ ದೇವಿಯ ಸ್ತುತಿ! ಶ್ರೀ ರಾಜಮಾತಂಗಿದೇವಿಯ ಕೃಪೆಯನ್ನು ಸಂಪಾದಿಸಲು ಅವಳನ್ನು ಸ್ತುತಿಸಿ, ಈ ಯಜ್ಞವು ಫಲಪ್ರದವಾಗಲಿ ಎಂದು ದೇವಿಗೆ ಪ್ರಾರ್ಥನೆ ಮಾಡಲಾಯಿತು. ಉಪಸ್ಥಿತರಿದ್ದ ಭಕ್ತರು ಮತ್ತು ಪ್ರೇಕ್ಷಕರು ಮಾಡಿದ ಭಾವಪೂರ್ಣ ಆರತಿಯೊಂದಿಗೆ ಮಹಾಯಜ್ಞವು ಯಥಾಸಾಂಗವಾಗಿ ನೆರವೇರಿತು!
ಯಜ್ಞದ ಮಹಿಮೆ !

ಸಾಕ್ಷಾತ್ ಪ್ರಭು ಶ್ರೀರಾಮಚಂದ್ರನೂ ಸಹ ಅಶ್ವಮೇಧ ಯಜ್ಞವನ್ನು ಮಾಡಿ ವಿಶ್ವವಿಜಯವನ್ನು ಸಾಧಿಸಿದ್ದನು. ಯುದ್ಧದಲ್ಲಿ ಸ್ಥೂಲವಾಗಿ ವಿಜಯವನ್ನು ಪಡೆಯುವ ಮುನ್ನ, ಸೂಕ್ಷ್ಮ ಜಗತ್ತಿನಲ್ಲಿ ಆಧ್ಯಾತ್ಮಿಕ ಮಟ್ಟದ ವಿಘ್ನಗಳು ದೂರವಾಗುವುದು ಅತ್ಯಗತ್ಯ. ಶ್ರೀ ರಾಜಮಾತಂಗಿ ಮಹಾಯಜ್ಞದ ಫಲಶ್ರುತಿಯ ಪ್ರತ್ಯಕ್ಷ ಅನುಭವವು ಮುಂಬರುವ ಯುದ್ಧಕಾಲದಲ್ಲಿ ಭಾರತದ ರಕ್ಷಣೆಯಾಗುವ ಮೂಲಕ ಎಲ್ಲರಿಗೂ ಮನವರಿಕೆಯಾಗಲಿದೆ ! ಆದಿಶಕ್ತಿಯ ‘ಪ್ರಧಾನಮಂತ್ರಿಯಾಗಿರುವ ಶ್ರೀ ರಾಜಮಾತಂಗಿ ದೇವಿಯು ಈ ಯಜ್ಞದ ಮಾಧ್ಯಮದಿಂದ ಕರುಣಿಸಿದ ಆಧ್ಯಾತ್ಮಿಕ ತೇಜಸ್ಸು ಮತ್ತು ಓಜಸ್ಸು ರಾಷ್ಟ್ರವನ್ನು ವಿಜಯದ ಪಥದತ್ತ ಮುನ್ನಡೆಸಲಿದೆ !
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ