ಒಂದೇಒಂದು ಹಾಸಿಗೆ ಖಾಲಿಯಿಲ್ಲದಿದ್ದ ಸ್ಥಿತಿಯಿಂದ ಈಗ ಒಂದೇ ದಿನದಲ್ಲಿ ೩ ಸಾವಿರ ೨೧೦ ಹಾಸಿಗೆಗಳು ಖಾಲಿಯಾಗಿವೆ !

ಆಸ್ಪತ್ರೆಯ ಹಾಸಿಗೆ ಹಗರಣವನ್ನು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಬಹಿರಂಗಪಡಿಸಿದ ಪರಿಣಾಮ !

‘ಇಷ್ಟು ದೊಡ್ಡ ಪ್ರಮಾಣದಲ್ಲಿ ಹಗರಣವು ನಡೆಯುತ್ತಿದ್ದಾಗ ಆಡಳಿತವು ಏನು ಮಾಡುತ್ತಿತ್ತು?’ ಎಂಬ ಪ್ರಶ್ನೆ ಜನರ ಮನಸ್ಸಿನಲ್ಲಿ ಮೂಡುತ್ತಿರಬಹುದು ! ಸರಕಾರವು ಈಗ ಇದರ ಬಗ್ಗೆ ತನಿಖೆ ನಡೆಸಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು !

ಬೆಂಗಳೂರು – ನಗರದ ಆಸ್ಪತ್ರೆಗಳಲ್ಲಿ ಹಾಸಿಗೆ ಪಡೆಯಲು ಲಂಚ ತೆಗೆದುಕೊಳ್ಳಲಾಗುತ್ತಿದೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ ನಂತರ, ಈಗ ಆಸ್ಪತ್ರೆಗಳಲ್ಲಿ ೩೨೧೦ ಹಾಸಿಗೆಗಳು ಖಾಲಿ ಇವೆ ಎಂದು ಜಾಲತಾಣದಲ್ಲಿ ತೋರಿಸಲಾಗುತ್ತಿದೆ. ನಿನ್ನೆ ತನಕ ಈ ಜಾಲತಾಣದಲ್ಲಿ ಒಂದೇ ಒಂದು ಹಾಸಿಗೆ ಖಾಲಿಯಿಲ್ಲ ಎಂದು ತೋರಿಸಲಾಗುತ್ತಿತ್ತು. ಇದರಿಂದ ಹಾಸಿಗೆಗಳ ಲಭ್ಯತೆಯಲ್ಲಿ ಹಗರಣವು ನಡೆದಿರುವುದು ಬೆಳಕಿಗೆ ಬಂದಿದೆ. ಪುರಸಭೆಯ ಕೋವಿಡ್ ವಾರ್ ರೂಮ್ ನಲ್ಲಿ ಮುಸಲ್ಮಾನರನ್ನೇ ಹೆಚ್ಚಿನ ಸಂಖ್ಯೆಯಲ್ಲಿ ನೇಮಕ ಮಾಡಲಾಗಿದೆ ಎಂದು ಸಂಸದ ಸೂರ್ಯ ಆರೋಪಿಸಿದ್ದರು. ಅದರ ನಂತರ, ಸತ್ಯ ಹೊರಬಂದ ತಕ್ಷಣ, ಗುತ್ತಿಗೆದಾರರ ೧೭ ಸಿಬ್ಬಂದಿಗಳನ್ನು ತೆಗೆದುಹಾಕಲಾಗಿದೆ.

. ಸರಕಾರಿ ಕೋಟಾದ ೧೨೭೩೬ ಹಾಸಿಗೆಗಳಲ್ಲಿ, ತೀವ್ರ ನಿಗಾ ಘಟಕದಲ್ಲಿ ಹಾಗೂ ವೆಂಟಿಲೇಟರ್ ಗಳಲ್ಲಿ ಬೆರಳೆಣಿಕೆಯಷ್ಟು ಹಾಸಿಗೆಗಳಿವೆ ಎಂದು ತೋರಿಸುವ ಕೇಂದ್ರ ಆಸ್ಪತ್ರೆಯ ಹಾಸಿಗೆ ನಿರ್ವಹಣಾ ಜಾಲತಾಣದಲ್ಲಿ ಈಗ ೩೨೧೦ ಹಾಸಿಗೆಗಳು ಖಾಲಿಯಾಗಿದೆ ಎಂದು ತೋರಿಸುತ್ತಿದೆ.

. ಈ ಪೈಕಿ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ೧೨, ಸರಕಾರಿ ಆಸ್ಪತ್ರೆಗಳಲ್ಲಿ ೬೭, ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ೧೧೯೭ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ೪೦೨ ಒಟ್ಟು ೧೬೯೩ ಹಾಸಿಗೆಗಳು ಖಾಲಿ ಇವೆ. ಇದಲ್ಲದೆ, ಆಮ್ಲಜನಕ ಲಭ್ಯತೆಯ ಕೋವಿಡ್ ಕೇರ್ ಕೇಂದ್ರದಲ್ಲಿ ೧೫೧೭ ಹಾಸಿಗೆಗಳು ಖಾಲಿ ಇವೆ. ಖಾಸಗಿ ಆಸ್ಪತ್ರೆಗಳಲ್ಲಿ ೧೨೭, ಸರಕಾರಿ ತೀವ್ರ ನಿಗಾ ಘಟಕಗಳಲ್ಲಿ ೨೯ ಹಾಸಿಗೆಗಳು ಇದ್ದು, ೧೩ ವೆಂಟಿಲೇಟರ್ ಹಾಸಿಗೆಗಳು ಖಾಲಿಯಾಗಿವೆ.