ವಿದ್ಯುತ್ ತಂಪುಪೆಟ್ಟಿಗೆಯ ತುಲನೆಯಲ್ಲಿ ಮಣ್ಣಿನ ತಂಪುಪೆಟ್ಟಿಗೆಯಲ್ಲಿ ಇಟ್ಟಿದ್ದ ಆಹಾರದಿಂದ ಸಕಾರಾತ್ಮಕ ಸ್ಪಂದನಗಳ ಪ್ರಮಾಣ ಬಹಳ ಹೆಚ್ಚು ಪ್ರಕ್ಷೇಪಿತವಾಗುವುದು
‘ಹಿಂದಿನ ಕಾಲದಲ್ಲಿ ಆಹಾರ ಪದಾರ್ಥಗಳನ್ನು ಸಂರಕ್ಷಿಸಲು ಮಣ್ಣಿನ ತಂಪು ಪೆಟ್ಟಿಗೆಗಳನ್ನು (ಟಿಪ್ಪಣಿ) ಉಪಯೋಗಿಸುತ್ತಿದ್ದರು. ಇದರಿಂದ ಆಹಾರಪದಾರ್ಥಗಳು ಸ್ಥೂಲದಲ್ಲಿ ಉತ್ತಮವಾಗಿ ಉಳಿದು ಅವುಗಳಲ್ಲಿ ಸಾತ್ತ್ವಿಕತೆಯೂ ಉಳಿಯುತ್ತಿತ್ತು. ನೈಸರ್ಗಿಕ ಪದ್ಧತಿಯಿಂದ ಉಳಿಸಿಡಲಾದ ಆಹಾರ ಪದಾರ್ಥಗಳು ಸಾತ್ತ್ವಿಕವಾಗಿರುವುದರಿಂದ ಅವುಗಳನ್ನು ಸೇವಿಸುವವರಿಗೆ ಅವುಗಳಿಂದ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಸ್ತರದಲ್ಲಿ ಲಾಭವಾಗುತ್ತಿತ್ತು.