ರಾವಲ್‍ಪಿಂಡಿಯಲ್ಲಿ (ಪಾಕಿಸ್ತಾನ) ಮತಾಂಧರಿಂದ ಹಿಂದೂ ದೇವಾಲಯ ಧ್ವಂಸ !

ಬಾಂಗ್ಲಾದೇಶದ ನಂತರ ಪಾಕಿಸ್ತಾನದಲ್ಲಿ ಹಿಂದೂ ದೇವಾಲಯಗಳ ಮೇಲೆ ದಾಳಿ ! ಇಂತಹ ಘಟನೆಗಳನ್ನು ತಡೆಯಲು ಭಾರತ ಸರಕಾರವು ಯಾವಾಗ ಕ್ರಮ ತೆಗೆದುಕೊಳ್ಳಲಿದೆ ?

ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದ ರಾವಲ್‍ಪಿಂಡಿಯಲ್ಲಿ ೧೦೦ ವರ್ಷಗಳಷ್ಟು ಹಳೆಯದಾದ ದೇವಾಲಯದ ಮೇಲೆ ೧೦ ರಿಂದ ೧೫ ಮತಾಂಧರು ದಾಳಿ ಮಾಡಿದ್ದಾರೆ. ಈ ದೇವಾಲಯ ನವೀಕರಣಗೊಳ್ಳುತ್ತಿರುವಾಗ ದಾಳಿ ನಡೆದಿದೆ. ಅವರು ದೇವಾಲಯದ ಮೇಲಿನ ಮಹಡಿಗಳ ಬಾಗಿಲು ಮತ್ತು ಮೆಟ್ಟಿಲುಗಳನ್ನು ಒಡೆದರು. ಈ ಘಟನೆಯನ್ನು ಇವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ (ಇಟಿಪಿಬಿ) ಯ ಉತ್ತರ ಪ್ರಾಂತ್ಯದ ಭದ್ರತಾ ಅಧಿಕಾರಿ ಸೈಯದ್ ರಜಾ ಅಬ್ಬಾಸ್ ಜೈದಿ ಅವರು ಪೊಲೀಸ್ ಠಾಣೆಗೆ ವರದಿ ಮಾಡಿದ್ದಾರೆ. ದೇವಸ್ಥಾನದ ಆಡಳಿತಾಧಿಕಾರಿ ಓಂ ಪ್ರಕಾಶ್‍ರವರು, ಪೊಲೀಸರು ದೇವಾಲಯ ಮತ್ತು ನನ್ನ ಮನೆಯ ಹೊರಗೆ ಭದ್ರತೆ ಒದಗಿಸಿದ್ದಾರೆ’ ಎಂದು ಹೇಳಿದ್ದಾರೆ.

ಈ ದೇವಾಲಯದ ಮೇಲೆ ಅತಿಕ್ರಮಣ ಮಾಡಲಾಗಿತ್ತು ಮತ್ತು ನಾವು ಅದನ್ನು ನಾವು ೪ ದಿನಗಳ ಮೊದಲೇ ತೆಗೆದು ಹಾಕಿದ್ದೇವೆ, ಇನ್ನೂ ಈ ದೇವಾಲಯದಲ್ಲಿ ವಿಗ್ರಹಗಳನ್ನು ಇಟ್ಟಿರಲಿಲ್ಲ, ಮತ್ತು ಯಾವುದೇ ಧಾರ್ಮಿಕ ಚಟುವಟಿಕೆಗಳು ಪ್ರಾರಂಭವಾಗಿರಲಿಲ್ಲ ಎಂದು ಹೇಳಿದ್ದಾರೆ.