ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ ಇವರಿಗೆ ಅವರ ನಾಗರಿಕರಿಂದಲೇ ನಡು ರಸ್ತೆಯಲ್ಲಿ ಮುಖಭಂಗ !

ನಿಮ್ಮಿಂದ ದೇಶ ಹಾಳಾಯಿತು ?

ಓಟಾವಾ (ಕೆನಡಾ) – ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ ಇವರು ಟೊರೆಂಟ್ ದಲ್ಲಿ ಒಂದು ಕಾರ್ಯಕ್ರಮಕ್ಕಾಗಿ ಬಂದಾಗ ಒಬ್ಬ ಸಾಮಾನ್ಯ ನಾಗರಿಕನು ಅವರ ಎದುರಿಗೆ ‘ನೀವು ದೇಶ ಹಾಳು ಮಾಡಿದಿರಿ’ ಎಂದು ಮುಖಭಂಗ ಮಾಡಿದನು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

೧. ಟ್ರುಡೋ ಇವರು ಕಾರ್ಯಕ್ರಮದ ಸ್ಥಳದಿಂದ ಹೊರಡುವಾಗ ಅವರನ್ನು ನೋಡಲು ಬಂದಿರುವ ನಾಗರಿಕರಿಗೆ ವಂದನೆ ಸಲ್ಲಿಸಿ ಹೋಗುತ್ತಿರುವಾಗ ಓರ್ವ ವ್ಯಕ್ತಿ ಅವರಗೆ ನಾನು ನಿಮಗೆ ಶೇಖ್ ಹ್ಯಾಂಡ್ ಮಾಡುವುದಿಲ್ಲ, ನೀವು ದೇಶವನ್ನು ಹಾಳು ಮಾಡಿದ್ದೀರಿ’, ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದರು.

೨. ಜಸ್ಟಿನ್ ಟ್ರುಡೋ ಇವರು ಅಲ್ಲಿಯೇ ಆ ವ್ಯಕ್ತಿಗೆ ‘ನಾನು ಈ ದೇಶ ಹೇಗೆ ಹಾಳು ಮಾಡಿದ್ದೇನೆ ?’ ಎಂದು ಪ್ರಶ್ನೆ ಕೇಳಿದರು. ಅದಕ್ಕೆ ‘ಇಲ್ಲಿ ಯಾರೂ ಮನೆ ಕೂಡ ಕೊಳ್ಳಲು ಸಾಧ್ಯವಿಲ್ಲ ? ನೀವು ಜನರ ಮೇಲೆ ‘ಕಾರ್ಬನ್ ಟ್ಯಾಕ್ಸ್’ ವಿಧಿಸುತ್ತೀರಿ; ಆದರೆ ನಿಮ್ಮ ಪಡೆಯಲ್ಲಿ ೯ ‘ವ್ಹಿಎಟ್’ ವಾಹನಗಳಿವೆ’, ಎಂದು ಹೇಳುತ್ತಾ ಟ್ರುಡೋ ಇವರ ಪಡೆಯಲ್ಲಿರುವ ಬೆಲೆ ಬಾಳುವ ವಾಹನಗಳ ಮೇಲೆ ಆಕ್ಷೇಪ ವ್ಯಕ್ತಪಡಿಸಿದರು.
೩. ಟ್ರುಡೋ ಇವರು ಆ ವ್ಯಕ್ತಿಗೆ ತಿಳಿಸಿ ಹೇಳಲು ಪ್ರಯತ್ನಿಸಿದರು, ‘ನೀವು ನೀಡುವ ‘ಕಾರ್ಬನ್ ಟ್ಯಾಕ್ಸ್’ನ ಹಣ ನಾವು ಏನು ಮಾಡುತ್ತೇವೆ ? ಏನು ಮಾಡುತ್ತೇವೆ ಎಂಬುದು ನಿಮಗೆ ಗೊತ್ತಿದೆಯೇ ? ನಾವು ಮಾಲಿನ್ಯದ ತೆರಿಗೆ ವಿಧಿಸುತ್ತೇವೆ ಮತ್ತು ಆ ಹಣ ನಿಮ್ಮಂತಹ ಕುಟುಂಬಗಳಿಗೆ ಹಿಂತಿರುಗಿ ಕಳಿಸುತ್ತೇವೆ, ಎಂದು ಟ್ರುಡೋ ಇವರು ಹೇಳಿದರು. ಆದರೆ ಇದರಿಂದ ಆ ವ್ಯಕ್ತಿಗೆ ಸಮಾಧಾನವಾಗಲಿಲ್ಲ.
೪. ‘ನೀವು ಈ ಎಲ್ಲಾ ಹಣ ಉಕ್ರೇನಿಗೆ ಕಳಿಸುತ್ತೀರಾ’ ಎಂದು ಆ ವ್ಯಕ್ತಿ ಆಪಾದನೆ ಮಾಡಿದ ನಂತರ ಟ್ರುಡೊ ಇವರು ‘ನೀವು ವ್ಲಾದಿಮಿರ್ ಪುಟಿನ್ ಇವರ ಭಾಷಣಗಳನ್ನು ಕೇಳುತ್ತೀರ, ಹೀಗೆ ಅನಿಸುತ್ತದೆ, ನಿಮ್ಮ ಬಳಿ ರಷ್ಯಾದ ಬಗ್ಗೆ ಬಹಳ ತಪ್ಪಾದ ಮಾಹಿತಿ ಇದೆ, ಎಂದು ಹೇಳುತ್ತಾ ಅಲ್ಲಿಂದ ಹೊರಟು ಹೋದರು.