ಭಯೋತ್ಪಾದನೆಯ ವಿರುದ್ಧ ಜಮ್ಮು-ಕಾಶ್ಮೀರ ಉಚ್ಚ ನ್ಯಾಯಾಲಯದ ತೀರ್ಪು !

ಸೈನಿಕರ ಮೇಲೆ ಕಲ್ಲು ತೂರಾಟದಂತಹ ಕುಕೃತ್ಯಗಳಲ್ಲಿ ತೊಡಗಿರುವುದು ಮತ್ತು ಲಷ್ಕರ್‌-ಎ-ತೊಯಾಬಾ’ ಈ ಜಾಗತಿಕ ಭಯೋತ್ಪಾದಕ ಸಂಘಟನೆಯೊಂದಿಗೆ ನಂಟಿರುವ ಪ್ರಕರಣದಲ್ಲಿ ಮಹಮ್ಮದ ಯೂನಸ್‌ ಮೀರ ಇವನ ವಿರುದ್ಧ ಜಮ್ಮು-ಕಾಶ್ಮೀರದ ಬುಡಗಾಮ್‌ ಜಿಲ್ಲಾಧಿಕಾರಿಗಳು ಪ್ರತಿಬಂಧಾತ್ಮಕ ಬಂಧನದ ಆದೇಶವನ್ನು ನೀಡಿದರು. ಈ ನಿರ್ಣಯದ ವಿರುದ್ಧ ಯೂನಸ್‌ ಜಮ್ಮು-ಕಾಶ್ಮೀರ ಮತ್ತು ಲಡಾಖ ಉಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ದಾಖಲಿಸಿದನು. ಈ ಅರ್ಜಿಯ ಪ್ರಕರಣದಲ್ಲಿ ನ್ಯಾಯಾಲಯ ಕಾಶ್ಮೀರದ ಭದ್ರತೆಗೆ ಅನುಕೂಲಕರ ತೀರ್ಪು ನೀಡಿತು. ಈ ನಿರ್ಣಯವನ್ನು ಆಧರಿಸಿ ಈ ಲೇಖನದಲ್ಲಿ ವಿಚಾರವಿನಿಮಯ ಮಾಡಲಾಗಿದೆ.

ಪೂ. (ನ್ಯಾಯವಾದಿ) ಸುರೇಶ್ ಕುಲಕರ್ಣಿ

೧. ಜಿಲ್ಲಾಧಿಕಾರಿಗಳು ನೀಡಿದ ಬಂಧನದ ಆದೇಶದ ವಿರುದ್ಧ ಆರೋಪಿಯಿಂದ ಜಮ್ಮು-ಕಾಶ್ಮೀರ ಮತ್ತು ಲಡಾಖ್‌ ಉಚ್ಚನ್ಯಾಯಾಲಯದಲ್ಲಿ ಅರ್ಜಿ !

ಬುಡಗಾಮಿನ ಜಿಲ್ಲಾಧಿಕಾರಿಗಳು ‘ಯೂನಸ್‌ ಮೀರನಿಗೆ ಪ್ರತಿಬಂಧಾತ್ಮಕ ಬಂಧನದಲ್ಲಿಡಬೇಕು’, ಎಂದು ಆದೇಶ ನೀಡಿದರು. ಈ ಆದೇಶವನ್ನು ‘ಜಮ್ಮು-ಕಾಶ್ಮೀರ ಪಬ್ಲಿಕ್‌ ಸೇಫ್ಟಿ ಆಕ್ಟ್‌’ನ ಪರಿಚ್ಛೇದ (೮) ಕ್ಕನುಸಾರ ನೀಡಲಾಯಿತು. ಈ ಆದೇಶಕ್ಕೆ ಯೂನಸ್‌ ಮೀರ್‌ ಜಮ್ಮು-ಕಾಶ್ಮೀರ ಮತ್ತು ಲಡಾಖ್‌ ಉಚ್ಚ ನ್ಯಾಯಾಲಯದಲ್ಲಿ ಸವಾಲೊಡ್ಡಿದನು. ‘ಈ ನಿರ್ಣಯದಲ್ಲಿ ಬಂಧನಕ್ಕೆ ನೀಡಿದ ಕಾರಣಗಳು ಸಾಕಾಗುವಷ್ಟಿಲ್ಲ. ಆದ್ದರಿಂದ ಈ ಆದೇಶ ರದ್ದಾಗಬೇಕು’, ಎಂದು ಅವನು ಈ ಅರ್ಜಿಯಲ್ಲಿ ವಿನಂತಿಸಿದ್ದೇನೆಂದರೆ, ತನ್ನ ವಿರುದ್ಧ ೨೦೨೧ ರಲ್ಲಿ ಕ್ರಿಮಿನಲ್‌ ಅಪರಾಧವನ್ನು ದಾಖಲಿಸಲಾಗಿತ್ತು. ಅದರಲ್ಲಿ ತನ್ನನ್ನು ಜಾಮೀನಿನ ಮೇಲೆ ಮುಕ್ತಗೊಳಿಸಲಾಗಿತ್ತು. ಅದಕ್ಕಾಗಿ ಏಪ್ರಿಲ್‌ ೨೦೨೨ ರಲ್ಲಿ ಬಂಧಿಸುವುದು ತಪ್ಪಾಗುತ್ತದೆ. ಸಂವಿಧಾನಕ್ಕನುಸಾರ ಒಂದೇ ಅಪರಾಧಕ್ಕೆ ೨ ಶಿಕ್ಷೆಗಳನ್ನು ನೀಡಲು ಬರುವುದಿಲ್ಲ. ಬಂಧನದ ವಿರುದ್ಧ ಅರ್ಜಿ ಮಾಡಲು ಸಾಕಷ್ಟು ಅವಕಾಶವೂ ಅರ್ಜಿದಾರನಿಗೆ ಸಿಕ್ಕಿಲ್ಲ ಎಂದು ಹೇಳಿದನು.

೨. ಸರಕಾರಿ ಪಕ್ಷದಿಂದ ಅರ್ಜಿದಾರನ ವಿರುದ್ಧ ನ್ಯಾಯಾಲಯದಲ್ಲಿ ಪ್ರತಿವಾದ !

ಈ ‘ರಿಟ್’ ಅರ್ಜಿಯನ್ನು ವಿರೋಧಿಸಿದ ಸರಕಾರಿ ಪಕ್ಷವು ಮುಂದಿನಂತೆ ವಾದ ಮಂಡಿಸಿತು, ಅರ್ಜಿದಾರನು ಸೈನಿಕರ ಮೇಲೆ ಕಲ್ಲು ತೂರುವ ಕೃತ್ಯದಲ್ಲಿ ಪಾಲ್ಗೊಂಡಿದ್ದನು. ಅವನಿಗೆ ‘ಲಷ್ಕರ್‌-ಎ-ತೊಯಾಬಾ’ ಈ ಜಾಗತಿಕ ಭಯೋತ್ಪಾದಕ ಸಂಘಟನೆಯೊಂದಿಗೆ ನಂಟಿದೆ. ಅವನ ವಿರುದ್ಧ ಶಸ್ತ್ರಾಸ್ತ್ರ ಪ್ರತಿಬಂಧಕ ಕಾನೂನಿನಡಿಯಲ್ಲಿ ಅಪರಾಧವನ್ನು ದಾಖಲಿಸ ಲಾಗಿದೆ. ಹಾಗೆಯೇ ಅವನ ವಿರುದ್ಧ ‘ಕಾನೂನುಬಾಹಿರ ಕೃತ್ಯ ಪ್ರತಿಬಂಧ’ ಕಾನೂನಿನಂತೆಯೂ ಅಪರಾಧವನ್ನು ದಾಖಲಿಸ ಲಾಗಿದೆ. ಅವನು ಭವಿಷ್ಯದಲ್ಲಿ ಅಪರಾಧ ಮಾಡಬಾರದೆಂದು ಈ ಪ್ರತಿಬಂಧಾತ್ಮಕ ಬಂಧನದ ಆದೇಶ ನೀಡಲಾಗಿದೆ. ಗಸ್ತು ಹಾಕುತ್ತಿರುವ ಕೇಂದ್ರೀಯ ಮೀಸಲು ಪೊಲೀಸ್‌ (ಸೆಂಟ್ರಲ್‌ ರಿಜರ್ವ್ ಪೊಲೀಸ್) ಪಡೆಯ ಸೈನಿಕರು ಅವನಿಂದ ಚೀನಿ ಬಂದೂಕು, ಮ್ಯಾಗಜಿನ್‌ ಮತ್ತು ೮ ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಅವನ ಜೊತೆಗೆ ೪ ಜನ ಭಯೋತ್ಪಾದಕರನ್ನೂ ಬಂಧಿಸಲಾಗಿದೆ. ಅವರ ಕಡೆ ೨ ಗ್ರೆನೇಡ್ಸ್‌, ಎಕೆ-೪೭ ಬಂದೂಕು, ೬ ಜೀವಂತ ಗುಂಡುಗಳು, ೧೦ ಭಿತ್ತಿಪತ್ರಗಳು ಮತ್ತು ‘ಲಷ್ಕರ್‌-ಎ-ತೊಯಬಾದ ಧ್ಯೇಯ ಧೋರಣೆಗಳ ಪ್ರಸಾರದ ಸಾಹಿತ್ಯಗಳು ದೊರಕಿವೆ. ‘ಈ ವ್ಯಕ್ತಿಯನ್ನು ಅಪರಾಧ ಮಾಡದಂತೆ ತಡೆಯಬೇಕು’, ಎಂಬುದು ಜಿಲ್ಲಾಧಿಕಾರಿಗಳ ಖಚಿತ ಅಭಿಪ್ರಾಯವಿರಬಹುದು. ಆದ್ದರಿಂದ ಅವರಿಗೆ ಮುಂಜಾಗ್ರತಾ ಕ್ರಮಕೈಗೊಳ್ಳಬೇಕೆಂಬ ಅಭಿಪ್ರಾಯ ಮೂಡಿದೆ. ಆರೋಪಿಯ ಪೂರ್ವೈತಿಹಾಸ ಮತ್ತು ಪೂರ್ವಗ್ರಹದೂಷಿತ ಕಾರ್ಯಾಚರಣೆಗಳನ್ನು ಗಮನಿಸ ಬೇಕಾಗುತ್ತದೆ. ಇದರಲ್ಲಿ ಉಚ್ಚ ನ್ಯಾಯಾಲಯ ಮೇಲಧಿಕಾರಿಗಳ ಹಾಗೆ ಕಾರ್ಯ ನಿರ್ವಹಿಸುವಂತಿಲ್ಲ.

ಪ್ರತಿಬಂಧಾತ್ಮಕ ಬಂಧನದ ವಿಷಯದಲ್ಲಿ ನ್ಯಾಯಾಲಯವು ೧೯೫೧ ರ ‘ಆತ್ಮಾರಾಮ ಶ್ರೀಧರ ವೈದ್ಯ’ ಖಟ್ಲೆಯಲ್ಲಿ ೬ ಜನ ನ್ಯಾಯಾಧೀಶರು ನೀಡಿದ ನಿರ್ಣಯವನ್ನು ಅವಲೋಕನ ಮಾಡಿತು. ಅದರಲ್ಲಿ ಆರೋಪಿಯಿಂದ ಅಪರಾಧವಾಗುವ ಸಾಧ್ಯತೆ ಖಚಿತವಿದ್ದರೆ, ಅವನ ಕೃತ್ಯಗಳು ದೇಶದ ಭದ್ರತೆಗೆ ಅಪಾಯವನ್ನುಂಟು ಮಾಡುವ ಮತ್ತು ಸಂರಕ್ಷಕದಳಕ್ಕೆ ತೊಂದರೆದಾಯಕವಾಗಿದ್ದರೆ ಅಥವಾ ಅವನ ಕೃತ್ಯದಿಂದ ಜೀವನಾವಶ್ಯಕ ವಸ್ತುಗಳ ಪೂರೈಕೆ ಮಾಡುವುದರಲ್ಲಿ ಅಡಚಣೆಯುಂಟಾಗುತ್ತಿದ್ದರೆ ಮತ್ತು ಈ ವಿಷಯದಲ್ಲಿ ಸರಕಾರ ಮತ್ತು ಜಿಲ್ಲಾದಂಡಾಧಿಕಾರಿಗಳಿಂದ ನಿರ್ಣಯವಾಗಿದ್ದರೆ, ಇಂತಹ ಪ್ರತಿಬಂಧಾತ್ಮಕ ಬಂಧನದ ವಿಷಯದಲ್ಲಿ ನ್ಯಾಯಾಲಯ ಬೇರೆ ನಿಲುವನ್ನು ಮಂಡಿಸಬಾರದು ಮತ್ತು ಇಂತಹ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಬಾರದು’, ಎಂದು ಸ್ಪಷ್ಟವಾಗಿ ಹೇಳಲಾಗಿತ್ತು.

೩. ಉಚ್ಚ ನ್ಯಾಯಾಲಯದಿಂದ ಅರ್ಜಿ ತಿರಸ್ಕ್ರತ ಸರ್ವೋಚ್ಚ ನ್ಯಾಯಾಲಯದ ತೀರ್ಪು ಮತ್ತು ಅನಂತರ ‘ಕಾನೂನುಬಾಹಿರ ಕೃತ್ಯ ಪ್ರತಿಬಂಧ’ ಕಾನೂನಿನ ಆಧಾರ ಪಡೆದು ಉಚ್ಚ ನ್ಯಾಯಾಲಯವು ತೀರ್ಪನ್ನು ನೀಡಿತು. ದೇಶವಿರೋಧಿ ಮತ್ತು ಭಯೋತ್ಪಾದಕ ಕೃತ್ಯವನ್ನು ಮಾಡಿರುವ ಆರೋಪವಿರುವ ವ್ಯಕ್ತಿ ಭವಿಷ್ಯದಲ್ಲಿ ಅಪರಾಧ ಮಾಡಬಾರದೆಂದು ಮುಂಜಾಗ್ರತಾ ಕ್ರಮ ಆವಶ್ಯಕವಾಗಿದೆ. ಅಂತಹ ಅಧಿಕಾರವು ಜಿಲ್ಲಾ ದಂಡಾಧಿಕಾರಿಗಳಿಗಿದೆ. ಇದನ್ನು ಗಮನಿಸಿ ಪ್ರತಿಬಂಧಾತ್ಮಕ ಬಂಧನದ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಉಚ್ಚ ನ್ಯಾಯಾಲಯ ನಿರಾಕರಿಸಿತು. ಅಂದರೆ ಅರ್ಜಿಯನ್ನು ತಿರಸ್ಕರಿಸಿತು.

೪. ಕಾಶ್ಮೀರದ ಸ್ಥೈರ್ಯಕ್ಕಾಗಿ ಪ್ರಜಾಪ್ರಭುತ್ವದ ನಾಲ್ಕೂ ಸ್ತಂಭಗಳು ಒಟ್ಟಾಗಿ ಕಾರ್ಯ ಮಾಡುವುದು ಆವಶ್ಯಕ !

ಕಳೆದ ೭ ವರ್ಷಗಳಲ್ಲಿ ಜಮ್ಮು-ಕಾಶ್ಮೀರದ ಪರಿಸ್ಥಿತಿ ತುಂಬಾ ಬದಲಾಗಿದೆ. ಇಲ್ಲಿ ಕಾನೂನು-ವ್ಯವಸ್ಥೆಯನ್ನು ಶಾಶ್ವತವಾಗಿಡಲು ಇಂದಿನ ವರೆಗಿನ ಎಲ್ಲ ಪಕ್ಷಗಳ ಆಡಳಿತದಾರರಿಗೆ ಕಠಿಣವೆನಿಸು ತ್ತಿತ್ತು. ಜಿಹಾದಿಗಳಿಗೆ ಪಾಕಿಸ್ತಾನದಿಂದ ಬಹಿರಂಗ ಬೆಂಬಲವಿದೆ. ಅಲ್ಲಿನ ಭಯೋತ್ಪಾದನೆಗೆ ಪ್ರಾದೇಶಿಕ ರಾಜಕೀಯ ಪಕ್ಷಗಳು ಮತ್ತು ಕಾಂಗ್ರೆಸ್‌ ಇವು ನೀರುಗೊಬ್ಬರ ಹಾಕಿವೆ. ಆದ್ದರಿಂದ ಉಚ್ಚ ನ್ಯಾಯಾಲಯ ನೀಡಿದ ತೀರ್ಪನ್ನು ಸ್ವಾಗತಿಸಬೇಕು. ಅರ್ಜಿದಾರರ ತಥಾಕಥಿತ ಮೂಲಭೂತ ಅಧಿಕಾರಕ್ಕಿಂತ ಸ್ಥಳೀಯ ನಾಗರಿಕರು ಶಾಂತಿಯಿಂದ ಜೀವಿಸುವುದು ಮಹತ್ವದ್ದಾಗಿದೆ. ದೇಶದ ಸಾರ್ವಭೌಮತ್ವವನ್ನು ಕಾಪಾಡುವುದು ಆಡಳಿತ, ಪೊಲೀಸ್, ಸಂರಕ್ಷಕದಳ ಮತ್ತು ನ್ಯಾಯಾಲಯ ಸಹಿತ ಪತ್ರಿಕೋದ್ಯಮದ್ದೂ ಹೊಣೆಯಾಗಿದೆ. ನಾಲ್ಕೂ ಸ್ತಂಭಗಳು ಒಟ್ಟಾಗಿ ಕಾರ್ಯ ಮಾಡಿದಾಗಲೆ ಕಾಶ್ಮೀರದಲ್ಲಿನ ಸ್ಥೈರ್ಯ ಉಳಿಯಬಹುದು.’

– ಪೂ. ನ್ಯಾಯವಾದಿ ಸುರೇಶ ಕುಲಕರ್ಣಿ, ಮುಂಬಯಿ ಉಚ್ಚ ನ್ಯಾಯಾಲಯ (೫.೯.೨೦೨೩)