ಇಸ್ಲಾಮಾಬಾದ್ (ಪಾಕಿಸ್ತಾನ) – ಕುಖ್ಯಾತ ಭಯೋತ್ಪಾದಕ ಹಫೀಜ್ ಸಯೀದ್‌ನ ಮಗ ಕಮಾಲುದ್ದೀನ್ ಸಯೀದ್‌ನ ಹತ್ಯೆಯಾಗಿರುವ ವರದಿಯಾಗಿದೆ. ಸೆಪ್ಟೆಂಬರ್ ೨೬ ರಂದು ಅವನನ್ನು ಅಪರಿಚಿತ ವ್ಯಕ್ತಿಗಳು ಅಪಹರಿಸಿದ್ದರು. ಪಾಕಿಸ್ತಾನದ ಗುಪ್ತಚರ ಸಂಸ್ಥೆ ’ಐ.ಎಸ್.ಐ.’ ಕೂಡ ಆತನನ್ನು ಪತ್ತೆ ಹಚ್ಚುವಲ್ಲಿ ವಿಫಲರಾದರು ಎಂದು ಹೇಳಲಾಗುತ್ತಿದೆ. ಜಬ್ಬಾ ಕಣಿವೆಯಲ್ಲಿ ಕಮಾಲುದ್ದೀನ್ ಸಯೀದ್‌ನ ಶವ ಪತ್ತೆಯಾಗಿದೆ ಎಂದು ಕೆಲವು ಸಾಮಾಜಿಕ ಮಾಧ್ಯಮ ಖಾತೆಗಳಿಂದ ದಾವೆ ಮಾಡಲಾಗುತ್ತಿವೆ.
#NBTwitterScan | Terror group #LeT chief #HafizSaeed’s son #Kamaluddin abducted and killed? Here’s the #truth– https://t.co/k6509m39Hl
— News Bharati (@eNewsBharati) September 30, 2023
ಜಿಹಾದಿ ಭಯೋತ್ಪಾದಕ ಸಂಘಟನೆಯ ’ಜಮಾದ್-ಉದ್-ದವಾ’ ಸಂಸ್ಥಾಪಕನಾಗಿದ್ದ ಹಫೀಜ್ ಸಯೀದ್‌ನು, ಲಷ್ಕರ್-ಎ-ತೊಯ್ಬಾ ಕೂಡ ಸ್ಥಾಪಿಸಿದ್ದನು. ಈ ಸಂಘಟನೆಗೆ ಭಾರತ ಸಹಿತ ಅಮೆರಿಕ, ಯೊತೋಪಿಯ ಒಕ್ಕೂಟ, ಆಸ್ಟ್ರೇಲಿಯಾ ಮತ್ತು ರಷ್ಯಾಗಳು ’ಭಯೋತ್ಪಾದಕ ಸಂಘಟನೆ’ ಎಂದು ಘೋಷಿಸಿವೆ.