ಖಲಿಸ್ತಾನಿಗಳು ಕೆನಡಾದಲ್ಲಿ ಭಾರತದ ವಿರುದ್ಧ ಮೆರವಣಿಗೆ ನಡೆಸುವರು !

ವಾಷಿಂಗ್ಟನ (ಅಮೇರಿಕ) – ಭಾರತ ಮತ್ತು ಕೆನಡಾದ ಮಧ್ಯೆ ಖಲಿಸ್ತಾನಿ ಭಯೋತ್ಪಾದಕ ನಿಜ್ಜರ ಹತ್ಯೆ ವಿವಾದ ಮುಂದುವರೆದಿದ್ದು, ನಿಜ್ಜರನ ಹತ್ಯೆಯಾದ ಗುರುದ್ವಾರದ ಬಳಿ ಖಲಿಸ್ತಾನಿಗಳು ಭಾರತದ ವಿರುದ್ಧ ಮೆರವಣೆಗೆ ಮಾಡಲಿದ್ದಾರೆ. ಈ ಮೆರವಣಿಗೆಯ ಆಯೋಜಕರು ಕೆನಡಾದಲ್ಲಿನ ಸಂಪೂರ್ಣ ಖಲಿಸ್ತಾನಿಗಳನ್ನು ಆಹ್ವಾನಿಸಿದ್ದಾರೆ. ಆಯೋಜಕರು ಕಳುಹಿಸಿದ ಆಮಂತ್ರಣ ಪತ್ರದಲ್ಲಿ, ಕೆನಡಾದಲ್ಲಿ ಭಾರತೀಯರು ಎದುರಿಸುತ್ತಿರುವ ಹಿಂಸಾಚಾರ ಮತ್ತು ಬೆದರಿಕೆಗಳ ಕುರಿತು ಚರ್ಚಿಸಲಾಗುವುದು ಎಂದು ಸಂಘಟಿಕರು ಕಳುಹಿಸಿರುವ ಆಹ್ವಾನ ಪತ್ರಿಕೆಯಲ್ಲಿ ಹೇಳಿದ್ದಾರೆ. ಭಾರತದ ವಿರುದ್ಧ ಮುಂದಿನ ರಣತಂತ್ರ ಮಾಡಬೇಕಾಗಿದೆ ಎಂದಿದ್ದಾರೆ.

(ಸೌಜನ್ಯ – News18 English)

ಹಿಂಸಾಚಾರದ ವಿರುದ್ಧ ಭಾರತಕ್ಕೆ ಧ್ವನಿ ಎತ್ತಬೇಕಾಗಬಹುದು !

ಈ ಕುರಿತು ಭಾರತದ ವಿದೇಶಾಂಗ ಸಚಿವ ಡಾ. ಎಸ. ಜೈಶಂಕರ ಇವರು, ಕೆನಡಾದಲ್ಲಿ ಭಾರತದ ವಿರುದ್ಧ ನಡೆಯುತ್ತಿರುವ ಘಟನೆಗಳನ್ನು “ಸಾಮಾನ್ಯ” ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದಿದ್ದಾರೆ.ವಿದೇಶದಲ್ಲಿ ಖಲಿಸ್ತಾನಿ ಭಯೋತ್ಪಾದಕರು ಭಾರತೀಯ ಅಧಿಕಾರಿಗಳ ವಿರುಧ್ದ ಹಿಂಸಾಚಾರ ಮಾಡುತ್ತಿದ್ದಾರೆ, ಅದರ ವಿರುಧ್ದ ಧ್ವನಿ ಎತ್ತಬೇಕಾಗಿದೆ ಎಂದರು.

ಸಂಪಾದಕೀಯ ನಿಲುವು

ಇದರಿಂದ, ಕೆನಡಾ ಸರಕಾರ ಖಲಿಸ್ತಾನಿಗಳಿಗೆ ಮುಕ್ತವಾಗಿ ಬಿಟ್ಟಿದೆ. ಭಾರತ ಈಗ ಕೆನಡಾವನ್ನು ಬಹಿಷ್ಕರಿಸುವ ನಿರ್ಣಯ ತೆಗೆದುಕೊಳ್ಳಬೇಕು ಎಂದು ಗಮನಕ್ಕೆ ಬರುವುದು !