ಮುಲತಾನ (ಪಾಕಿಸ್ತಾನ) – ಜಗತ್ತಿನಲ್ಲಿ ಭಿಕ್ಷೆ ಬೇಡುತ್ತಿರುವಾಗ ಬಂಧಿಸಲಾಗಿರುವುದರಲ್ಲಿ ಎಲ್ಲಕ್ಕಿಂತ ಹೆಚ್ಚು ಎಂದರೆ ಶೇಕಡ ೯೦ ರಷ್ಟು ಜನರು ಪಾಕಿಸ್ತಾನಿ ಆಗಿದ್ದಾರೆ, ಹೀಗೆ ಸ್ವತಃ ಪಾಕಿಸ್ತಾನ ಸರಕಾರದ ಒಂದು ಸಮಿತಿಯಿಂದ ಹೇಳಿದ ಎರಡು ದಿನಗಳ ನಂತರ ಪಾಕಿಸ್ತಾನದ ಮುಲತಾನದಿಂದ ಸೌದಿ ಅರೇಬಿಯಾಗೆ ಹೋಗುವ ೧೬ ಪಾಕಿಸ್ತಾನಿ ಭಿಕ್ಷುಕರನ್ನು ವಿಮಾನದಿಂದ ಕೆಳಗಿಳಿಸಲಾಯಿತು. ಇದರಲ್ಲಿ ೧೧ ಮಹಿಳೆಯರು, ೪ ಪುರುಷರು ಮತ್ತು ೧ ಹುಡುಗ ಇರುವರು. ಇವರೆಲ್ಲರೂ ಹಜಯಾತ್ರೆಯ ಹೆಸರಿನಲ್ಲಿ ಸೌದಿ ಅರೇಬಿಯಾಗೆ ಹೋಗುತ್ತಿದ್ದರು. ಅವರನ್ನು ಹೆಚ್ಚಿನ ವಿಚಾರಣೆಗಾಗಿ ಬಂಧಿಸಲಾಗಿದೆ. ವಿಮಾನ ನಿಲ್ದಾಣದಲ್ಲಿನ ಅಧಿಕಾರಿಗಳು ಈ ಎಲ್ಲರನ್ನೂ ವಿಚಾರಣೆ ನಡೆಸಿದಾಗ ಅವರು, ಅವರೆಲ್ಲರೂ ಭಿಕ್ಷೆ ಕೇಳುವುದಕ್ಕಾಗಿ ಸೌದಿ ಅರೇಬಿಯಾಗೆ ಹೋಗುತ್ತಿದ್ದರು ಎಂದು ಒಪ್ಪಿಕೋಂಡಿದ್ದಾರೆ. ಹಾಗೂ ಅವರು, ಭಿಕ್ಷೆ ಕೇಳಿ ಸಂಗ್ರಹಿಸಿರುವ ಹಣಲ್ಲಿನ ಅರ್ಧ ಹಣ ಅವರು ಇಲ್ಲಿ ಕಳಿಸುವುದಕ್ಕಾಗಿ ವ್ಯವಸ್ಥೆ ಮಾಡಿಕೊಡುವ ದಲ್ಲಾಳಿಗೆ ನೀಡಬೇಕಾಗಿತ್ತು ಎಂಬುದು ಒಪ್ಪಿಕೊಂಡಿದ್ದಾರೆ.
Sixteen alleged #Pakistani beggars disguised as #pilgrims were offloaded from a #SaudiArabia-bound flight and arrested for trying to travel to the Gulf Kingdom to indulge in begging, according to a media report on Sunday.https://t.co/FYJwMr4chm
— Economic Times (@EconomicTimes) October 1, 2023
ಸಂಪಾದಕೀಯ ನಿಲುವುಯಥಾ ರಾಜಾ ತಥಾ ಪ್ರಜಾ ! ಈಗ ಇತರ ದೇಶದ ಬಳಿ ಭಿಕ್ಷಾಟನೆಗಾಗಿ ಹೋಗುವ ಪಾಕಿಸ್ತಾನದ ರಾಜಕಾರಣಿಗಳನ್ನು ಕೂಡ ಇದೆ ರೀತಿ ವಿಮಾನದಿಂದ ಕೆಳಗಿಳಿಸುವ ಧೈರ್ಯ ತೋರಿಸಲಾಗುವುದೇ ? ಪಾಕಿಸ್ತಾನದ ಈ ಸ್ಥಿತಿ ನೋಡಿದರೆ ಭಾರತದಲ್ಲಿನ ಪಾಕಿಸ್ತಾನ ಪ್ರೇಮಿಗಳಿಗೆ ಭಾರತದ ಮಹತ್ವ ತಿಳಿಯುವುದು, ಎಂದು ಅಪೇಕ್ಷಿಸಲು ಸಾಧ್ಯವಿಲ್ಲ. ಕಾರಣ ‘ಭಾರತವನ್ನು ಇಸ್ಲಾಂ ಮಾಡುವುದು’, ಇದು ಏಕೈಕ ಉದ್ದೇಶವಾಗಿದೆ, ಇದನ್ನು ತಿಳಿದುಕೊಳ್ಳಿ ! |