ಒಟ್ಟಾವಾ (ಕೆನಡಾ) – ಕೆನಡಾದಲ್ಲಿ ಮಣಿಪುರದ ಕ್ರೈಸ್ತ ಕುಕಿ ಸಮುದಾಯ ಮತ್ತು ಖಲಿಸ್ತಾನಿ ಭಯೋತ್ಪಾದಕರ ನಡುವೆ ಮೈತ್ರಿ ಆಗಿರುವ ಸುದ್ದಿಯಿದೆ. ಖಲಿಸ್ತಾನಿ ಭಯೋತ್ಪಾದಕ ನಿಜ್ಜರನ ಹತ್ಯೆ ನಡೆದಿದ್ದ ಕೆನಡಾದ ಸರೆ ನಗರದ ಗುರುದ್ವಾರದಲ್ಲಿಯೇ ಕುಕಿ ಸಮುದಾಯದ ಸಂಘಟನೆಯಾಗಿರುವ ‘ನಾರ್ತ್ ಅಮೇರಿಕನ್ ಮಣಿಪುರ್ ಟ್ರೈಬಲ್ ಅಸೋಸಿಯೇಷನ್’ನ ನಾಯಕರೊಬ್ಬನು ಭಾರತದ ವಿರುದ್ಧ ವಾಗ್ದಾಳಿ ನಡೆಸಿದ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಆತನೇ ಪ್ರಸಾರ ಮಾಡಿದ್ದನು; ಆದರೆ ಭಾರತ ಮತ್ತು ಕೆನಡಾ ನಡುವಿನ ವಿವಾದದ ನಂತರ ಅವನು ಈ ವೀಡಿಯೊವನ್ನು ಮಾಧ್ಯಮದಿಂದ ತೆಗೆದುಹಾಕಿದ್ದಾನೆ. ಈ ವೀಡಿಯೊವನ್ನು ಇದೇ ವರ್ಷದ ಆಗಸ್ಟ್ 7 ರಂದು ಪ್ರಸಾರವಾಗಿತ್ತು.
ಈ ಸಂಘಟನೆಯ ಮುಖ್ಯಸ್ಥ ಲಿ ಎನ್ ಗಾಂಗತೆ ಇವನು, ಮಣಿಪುರದಲ್ಲಿ ಮೇ 3 ರಿಂದ ಇಲ್ಲಿಯವರೆಗೆ (ಅಗಸ್ಟ 7ರ ವರೆಗೆ) ನಡೆದಿರುವ ಹಿಂಸಾಚಾರದಲ್ಲಿ 120 ಕ್ಕೂ ಹೆಚ್ಚು ಜನರು ಹತರಾಗಿದ್ದು, 7 ಸಾವಿರ ಮನೆಗಳನ್ನು ಲೂಟಿ ಮಾಡಿ ಬೆಂಕಿ ಹಚ್ಚಲಾಗಿದೆಯೆಂದು ಹೇಳಿದ್ದನು. ನೂರಾರು ಚರ್ಚ್ ಗಳು ಸುಡಲಾಗಿದ್ದು, 200 ಗ್ರಾಮಗಳು ನಾಶಗೊಳಿಸಲಾಗಿದೆ. ಈ ನಿಟ್ಟಿನಲ್ಲಿ ಆಡಳಿತ ಏನೂ ಮಾಡುತ್ತಿಲ್ಲ, ಪೊಲೀಸರು ಗಲಭೆಕೋರರನ್ನು ಬೆಂಬಲಿಸುತ್ತಿದ್ದಾರೆ. ಅಲ್ಲಿಂದ ಕುಕಿ ಸಮುದಾಯದ ಜನರನ್ನು ಹೊರಹಾಕಲಾಗಿದೆ. ಭಾರತದಲ್ಲಿ ಈಗ ಅಲ್ಪಸಂಖ್ಯಾತರು, ಅವರು ಮುಸ್ಲಿಮರು, ಸಿಖ್ಖರು ಅಥವಾ ಕ್ರೈಸ್ತರಾಗಿರಲಿ ಸುರಕ್ಷಿತವಾಗಿಲ್ಲ. ಈ ನಿಟ್ಟಿನಲ್ಲಿ ನಮಗೆ ಕೆನಡಾ ಸರಕಾರ ಸಹಾಯ ಮಾಡಬೇಕು, ಎಂದು ಗಾಂಗತೆ ಮನವಿ ಮಾಡಿದ್ದನು.
ಗುಪ್ತಚರ ದಳದ ನಿಗಾ !
ಭಾರತೀಯ ಗುಪ್ತಚರ ದಳವು ಖಲಿಸ್ತಾನಿ ಮತ್ತು ‘ನಾರ್ಥ ಅಮೇರಿಕನ್ ಮಣಿಪುರ ಟ್ರೈಬಲ್ ಅಸೋಸಿಯೇಷನ್’ ಗುರುದ್ವಾರದಲ್ಲಿ ನಡೆಸಿದ ಸಭೆಯ ನಂತರ ಅವರ ಮೇಲೆ ನಿಗಾ ವಹಿಸಿದೆ. ಹಾಗೆಯೇ ಮಣಿಪುರ ಸರಕಾರವೂ ಇವರ ಮೇಲೆ ಕಣ್ಣಿಟ್ಟಿದೆ.
Kuki Zo organisation NAMTA join hand with Pro-Khalistani radicals in Canada; Union Home Ministry urged to take action
via @eOrganiser https://t.co/IqdJxF9hw8
— Organiser Weekly (@eOrganiser) September 23, 2023
ಸಂಪಾದಕೀಯ ನಿಲುವುಭಾರತ ವಿರೋಧಿ ಚಟುವಟಿಕೆಗಳಿಗೆ ಅಲ್ಪಸಂಖ್ಯಾತ ಸಮುದಾಯ ಒಗ್ಗೂಡುತ್ತಿದ್ದರೇ ಭಾರತದ ಎಲ್ಲಾ ಹಿಂದೂಗಳು ಸಂಘಟಿತರಾಗಬೇಕು ಮತ್ತು ಹಿಂದೂ ರಾಷ್ಟ್ರವನ್ನು ಸ್ಥಾಪಿಸಬೇಕು ಎನ್ನುವುದೇ ಇದರಿಂದ ಗಮನಕ್ಕೆ ಬರುತ್ತದೆ ! |