ಸ್ಕಾಟಲ್ಯಾಂಡದಲ್ಲಿ ಖಲಿಸ್ತಾನಿಯರು ಭಾರತೀಯ ಉಚ್ಚಾಯುಕ್ತರಿಗೆ ಗುರುದ್ವಾರಾದಲ್ಲಿ ಪ್ರವೇಶ ತಡೆದರು !

ಲಂಡನ್ (ಬ್ರಿಟನ್) – ಸ್ಕಾಟಲ್ಯಾಂಡ್ ನಲ್ಲಿನ ಗುರುದ್ವಾರಕ್ಕೆ ಭೇಟಿ ನೀಡಲು ಹೋಗಿದ್ದ ಬ್ರಿಟನ್ ನಲ್ಲಿಯ ಭಾರತೀಯ ಉಚ್ಚಾಯುಕ್ತ ವಿಕ್ರಂ ದೊರೈಸ್ವಾಮಿ ಇವರನ್ನು ಖಲಿಸ್ತಾನಿಗಳು ತಡೆದರು. ದೊರೈಸ್ವಾಮಿ ಇವರು ಗುರುದ್ವಾರ ಸಮಿತಿಯ ಜೊತೆ ಸಭೆ ನಡೆಸಲು ಬಂದಿದ್ದರು. ಖಲಿಸ್ತಾನಿಗಳ ಕಾರ್ಯಾಚರಣೆಯ ಸಂದರ್ಭದಲ್ಲಿ ಈ ಸಭೆ ಆಯೋಜಿಸಲಾಗಿತ್ತು. ದೊರೈಸ್ವಾಮಿ ಇವರನ್ನು ತಡೆದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. ಖಲಿಸ್ತಾನಿಗಳು ವಿರೋಧಿಸಿದ ನಂತರ ದೊರೈಸ್ವಾಮಿ ಇವರು ಅವರ ವಾಹನದಿಂದ ಹಿಂತಿರುಗಿರುವುದು ಕಾಣುತ್ತಿದೆ. ಈ ಘಟನೆಯ ಬಗ್ಗೆ ಸ್ಕಾಟ್ಲ್ಯಾಂಡ್ ಪೋಲಿಸರಿಗೆ ತಿಳಿಸಿದ ನಂತರ ಭಾರತ ಸರಕಾರವು ಈ ಪ್ರಕರಣ ಬ್ರಿಟನ್ ನ ವಿದೇಶಾಂಗ ಸಚಿವಾಲಯದಲ್ಲಿ ಮಂಡಿಸಿದೆ. ಲಂಡನ್ ನಲ್ಲಿನ ಭಾರತೀಯ ರಾಯಭಾರಿ ಕಚೇರಿಯ ಮೇಲೆ ದಾಳಿ ನಡೆದ ನಂತರ ಇದು ಎರಡನೆಯ ದೊಡ್ಡ ಘಟನೆಯಾಗಿದೆ.

ಈ ಘಟನೆಯ ಸಂದರ್ಭದಲ್ಲಿನ ಒಬ್ಬ ಖಲಿಸ್ತಾನಿಯು, ಇಲ್ಲಿ ಕೆಲವು ಜನರಿಗೆ ದೊರೈಸ್ವಾಮಿ ಸಭೆಗಾಗಿ ಇಲ್ಲಿ ಬರುವವರಿದ್ದಾರೆ ಎಂದು ತಿಳಿದಿತ್ತು. ಆದ್ದರಿಂದ ಅವರು ಯಾವಾಗ ವಾಹನದಿಂದ ಅಲ್ಲಿ ತಲುಪಿದರು, ಆಗ ಅವರಿಗೆ ಜನರು ಹಿಂತಿರುಗಿ ಹೋಗಲು ಹೇಳಿದರು. ಈ ಘಟನೆಯಿಂದ ಗುರುದ್ವಾರ ಸಮಿತಿಗೆ ಬಹಳ ನೋವು ಉಂಟಾಗಿರಬಹುದು; ಆದರೆ ಬ್ರಿಟನ್ ನಲ್ಲಿನ ಯಾವುದೇ ಗುರುದ್ವಾರದಲ್ಲಿ ಭಾರತೀಯ ಅಧಿಕಾರಿಗಳ ಸ್ವಾಗತ ಮಾಡಲಾಗದು. ನಾವು ಬ್ರಿಟನ್ ಮತ್ತು ಭಾರತ ಇವರ ಮೈತ್ರಿಯಿಂದ ರೋಸಿ ಹೋಗಿದ್ದೇವೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಬ್ರಿಟಿಷ ಸರಕಾರವು ಖಲಿಸ್ತಾನಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಕ್ಕೆ ತತ್ಪರತೆಯಿಂದ ಪ್ರಯತ್ನ ಮಾಡುವುದು ಆವಶ್ಯಕವಾಗಿದೆ, ಇದೆ ಈ ಘಟನೆಯಿಂದ ತಿಳಿದು ಬರುತ್ತದೆ.