ಕೆನಡಾದಲ್ಲಿ ಭಯೋತ್ಪಾದನೆ, ಕಟ್ಟರವಾದ ಮತ್ತು ಹಿಂಸಾಚಾರಗಳಿಗೆ ಮುಕ್ತ ವಾತಾವರಣ ! – ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್

ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಇವರು ಅಮೆರಿಕದಿಂದ ತಪರಾಕಿ !

ವಾಷಿಂಗ್ಟನ (ಅಮೇರಿಕಾ) – ಕೆನಡಾ ಮತ್ತು ಕೆನಡಾ ಸರಕಾರದೊಂದಿಗಿನ ಸಮಸ್ಯೆಗಳು ಕಳೆದ ಕೆಲವು ವರ್ಷಗಳಿಂದ ನಿರ್ಮಾಣವಾಗಿದೆ. ಈ ಸಮಸ್ಯೆಗಳು ಭಯೋತ್ಪಾದನೆ, ಕಟ್ಟರತೆ ಮತ್ತು ಹಿಂಸಾಚಾರಕ್ಕೆ ಮುಕ್ತ ವಾತಾವರಣವನ್ನು ನೀಡಿರುವುದರಿಂದ ನಿರ್ಮಾಣವಾಗಿದೆ. ನಾವು ಕೆನಡಾದಲ್ಲಿದ್ದ ಕೆಲವು ಅಪರಾಧಿಗಳನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಒತ್ತಾಯಿಸಿದ್ದೆವು; ಆದರೆ ಕೆನಡಾದಿಂದ ಮಾತ್ರ ಇದಕ್ಕೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿರುವುದಿಲ್ಲ. ಇದರಿಂದಲೂ ಕೆನಡಾದಲ್ಲಿ ಅಪರಾಧಿಗಳನ್ನು ಹೇಗೆ ರಕ್ಷಿಸಲಾಗುತ್ತಿದೆಯೆಂಬುದು ಗಮನಕ್ಕೆ ಬರುತ್ತದೆ, ಎಂದು ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈ ಶಂಕರ ಇವರು ಕೆನಡಾಗೆ ಕಠೋರ ಪದಗಳಲ್ಲಿ ಕಿವಿ ಹಿಂಡಿದ್ದಾರೆ. ಅವರು ಸದ್ಯ ಅಮೇರಿಕಾದ ಪ್ರವಾಸದಲ್ಲಿದ್ದಾರೆ. ಅವರು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

‘ನಾವು ಯಾರನ್ನು ಹಸ್ತಾಂತರಿಸುವಂತೆ ಕೋರಿದ್ದೆವೋ ಅವರು ಭಾರತದಲ್ಲಿ ಹಿಂಸಾಚಾರ ಮತ್ತು ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಮತ್ತು ಅದನ್ನು ಸ್ವತಃ ಅವರೇ ಒಪ್ಪಿಕೊಂಡಿದ್ದಾರೆ; ಅಂದರೆ ಈ ಮಾಹಿತಿ ಎಲ್ಲಿಯೂ ಮುಚ್ಚಿಡಲಾಗಿಲ್ಲ’ ಎಂದೂ ಸಹ ಡಾ. ಜೈ ಶಂಕರ ಇವರು ಸ್ಪಷ್ಟಪಡಿಸಿದರು.

ಖಾಲಿಸ್ತಾನದ ಬೇಡಿಕೆ ಬೆರಳೆಣಿಕೆಯಷ್ಟು !

ಡಾ. ಜೈ ಶಂಕರ ಮಾತನ್ನು ಮುಂದುವರಿಸಿ, ಇತ್ತೀಚೆಗೆ ಆಗುತ್ತಿರುವ ಚರ್ಚೆ (ಖಾಲಿಸ್ತಾನ)ಯು ಸಂಪೂರ್ಣ ಸಿಖ್ ಸಮುದಾಯವನ್ನು ಪ್ರತಿನಿಧಿಸುತ್ತದೆ ಎಂದು ನನಗೆ ಅನಿಸುವುದಿಲ್ಲ, ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದದ ಬಗ್ಗೆ ಮಾತನಾಡುವವರು ಬಹಳ ಕಡಿಮೆ ಜನರಿದ್ದಾರೆ. ಅವರ ಮೇಲೆ ಸರಕಾರ ಕ್ರಮ ಕೈಗೊಳ್ಳಬೇಕು. ‘ಪ್ರತ್ಯೇಕತಾವಾದಿಗಳ ವಿಚಾರವು ಸಂಪೂರ್ಣ ಸಿಖ್ ಸಮುದಾಯದ ವಿಚಾರವಾಗಿದೆ’ಯೆಂದು ತಿಳಿಯಬಾರದು ಎಂದು ಹೇಳಿದರು.