31 ವರ್ಷಗಳ ಹಿಂದೆ ದಾಳಿಯ ಹೆಸರಿನಲ್ಲಿ ಅನ್ಯಾಯ ಮತ್ತು ಬಲಾತ್ಕಾರ ನಡೆಸಿದ ತಮಿಳುನಾಡಿನ 215 ಅಧಿಕಾರಿಗಳಿಗೆ ಶಿಕ್ಷೆ


ಚೆನ್ನೈ (ತಮಿಳುನಾಡು) – ಶ್ರೀಗಂಧದ ಕಳ್ಳಸಾಗಣೆದಾರರ ವಿರುದ್ಧ ಕ್ರಮ ನಡೆಸುವ ಹೆಸರಿನಲ್ಲಿ ಒಂದು ವಸಾಹತುವಿನ ಮೇಲೆ ನಡೆದ ದಾಳಿಯ ಸಮಯದಲ್ಲಿ ಜನರ ಮೇಲೆ ಬಲಾತ್ಕಾರ ನಡೆಸಿರುವ ಮತ್ತು 18 ಮಹಿಳೆಯರ ಮೇಲೆ ಬಲಾತ್ಕಾರ ನಡೆಸಿರುವ ಅಪರಾಧಕ್ಕಾಗಿ ಮದ್ರಾಸ್ ಉಚ್ಚನ್ಯಾಯಾಲಯವು 215 ಸರಕಾರಿ ಅಧಿಕಾರಿಗಳಿಗೆ ಶಿಕ್ಷೆಯನ್ನು ವಿಧಿಸಿದೆ. 31 ವರ್ಷಗಳ ಹಿಂದೆ ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ವಾಚಥಿಯಲ್ಲಿ ಈ ಘಟನೆ ನಡೆದಿತ್ತು. ಅತ್ಯಾಚಾರಕ್ಕೊಳಗಾದ ಮಹಿಳೆಯರಲ್ಲಿ ಒಬ್ಬಳು ಗರ್ಭಿಣಿಯಾಗಿದ್ದಳು, ಹಾಗೂ ಇನ್ನೊಬ್ಬಳು 13 ವರ್ಷ ವಯಸ್ಸಿನವಳಾಗಿದ್ದಳು.

ಈ ಬಲಾತ್ಕಾರದ ಪ್ರಕರಣದಲ್ಲಿ 17 ಜನ ಆರೋಪಿಗಳನ್ನು ದೋಷಿಗಳೆಂದು ತೀರ್ಮಾನಿಸಲಾಗಿದೆ. ಈ ಪ್ರಕರಣ ನಡೆಯುತ್ತಿರುವಾಗಲೇ 50ಕ್ಕೂ ಹೆಚ್ಚು ಆರೋಪಿಗಳು ಸಾವನ್ನಪ್ಪಿದ್ದಾರೆ. ಇನ್ನುಳಿದ ಆರೋಪಿಗಳಿಗೆ 2011 ರಲ್ಲಿ, ಸೆಷನ್ಸ್ ನ್ಯಾಯಾಲಯವು 1 ರಿಂದ 10 ವರ್ಷಗಳವರೆಗೆ ಶಿಕ್ಷೆಯನ್ನು ವಿಧಿಸಿತ್ತು. ಇವರೆಲ್ಲರ ಶಿಕ್ಷೆಯನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.

ಸಂಪಾದಕೀಯ ನಿಲುವು

ಈ ರೀತಿ ಅಧಿಕಾರ ದುರುಪಯೋಗ ಪಡಿಸಿಕೊಳ್ಳುವವರಿಗೆ ಜೀವಾವಧಿ ಶಿಕ್ಷೆ ವಿಧಿಸುವುದು ಆವಶ್ಯಕವಿದೆ !
ಬಲಾತ್ಕಾರ ಮತ್ತು ಅತ್ಯಾಚಾರ ಪ್ರಕರಣದಲ್ಲಿ 31 ವರ್ಷಗಳ ನಂತರ ಸಿಕ್ಕಿರುವ ನ್ಯಾಯವೆಂದರೆ ಅನ್ಯಾಯವೇ ಆಗಿದೆ !