ಕೆನಡಾದಲ್ಲಿ ಮಾನವ ಕಳ್ಳ ಸಾಗಾಣಿಕೆ, ಪ್ರತ್ಯೇಕತಾವಾದ, ಹಿಂಸಾಚಾರ ಮತ್ತು ಭಯೋತ್ಪಾದನೆಯ ಮಿಶ್ರಣ ! – ಡಾ. ಜೈ ಶಂಕರ್

ಡಾ. ಜೈ ಶಂಕರ್ ಇವರಿಂದ ಕೆನಡಾಗೆ ಛೀಮಾರಿ !

ವಾಷಿಂಗ್ಟನ್ (ಅಮೇರಿಕಾ) – ಕೆನಡಾವು ಭಯೋತ್ಪಾದನೆ ಮತ್ತು ಭಯೋತ್ಪಾದಕ ಕಾರ್ಯಾಚರಣೆಯಲ್ಲಿ ಸಹಭಾಗಿಯಾಗುವ ಜನರಿಗೆ ಜೊತೆ ನೀಡುತ್ತಿದೆ. ಕೆನಡಾದಲ್ಲಿ ಇಂತಹ ಜನರಿಗೆ ಸ್ಥಳ ದೊರೆತಿದೆ. ಅಮೇರಿಕಾದ ಜನ ಕೆನಡಾವನ್ನು ಬೇರೆಯೇ ದೃಷ್ಟಿಯಿಂದ ನೋಡುತ್ತಾರೆ: ಆದರೆ ನಮಗೆ ಕೆನಡಾ ಒಂದು ಇಂತಹ ದೇಶವಾಗಿದೆ ಎಂದರೆ ಅದು ಭಾರತ ವಿರೋಧಿ ಕಾರ್ಯಾಚರಣೆಯ ಕೇಂದ್ರವಾಗಿದೆ. ಭಾರತದಲ್ಲಿ ಸಂಘಟಿತ ಅಪರಾಧಗಳಲ್ಲಿ ಸಹಭಾಗಿ ಆಗಿರುವ ಜನರು ಕೆನಡಾಕ್ಕೆ ಪಲಾಯನ ಮಾಡುತ್ತಾರೆ. ಕೆನಡಾದಲ್ಲಿ ಮಾನವ ಕಳ್ಳ ಸಾಗಾಣಿಕೆ, ಪ್ರತ್ಯೇಕತಾವಾದ, ಹಿಂಸೆ ಮತ್ತು ಭಯೋತ್ಪಾದನೆಯ ಮಿಶ್ರಣ ಮಿತಿಮೀರಿದೆ, ಹೀಗೆ ಭಾರತದ ವಿದೇಶಾಂಗ ಸಚಿವ ಡಾ. ಎಸ್ ಜೈಶಂಕರ ಇವರು ಕೆನಡಾಗೆ ಮತ್ತೊಮ್ಮೆ ಛೀಮಾರಿ ಹಾಕಿದ್ದಾರೆ. ಪ್ರಸ್ತುತ ಅವರು ಅಮೆರಿಕಾದ ಪ್ರವಾಸದಲ್ಲಿದ್ದಾರೆ. ಅವರು ಇಲ್ಲಿಯ ಹಡಸನ ಇನ್ಸ್ಟಿಟ್ಯೂಟ್ ನಲ್ಲಿಯ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಕೆನಡಾದಲ್ಲಿನ ರಾಜಕಾರಣದಿಂದ ಖಲಿಸ್ತಾನಿ ಭಯೋತ್ಪಾದಕರಿಗೆ ಆಶ್ರಯ ದೊರೆಯುತ್ತಿದೆ !

ಡಾ. ಜೈ ಶಂಕರ ಮಾತು ಮುಂದುವರಿಸಿ, ಕೆನಡಾವು ಭಾರತದ ಮೇಲೆ ಯಾವ ಆಪಾದನೆ ಮಾಡಿದೆ, ಅದು ಅರ್ಥಹೀನವಾಗಿದೆ. ಕೆನಡಾದಲ್ಲಿ ರಾಜಕೀಯ ಲಾಭದಿಂದ ಖಲಿಸ್ತಾನಿ ಭಯೋತ್ಪಾದಕರಿಗೆ ಆಶ್ರಯ ನೀಡಲಾಗುತ್ತಿದೆ ಅಲ್ಲಿ ಭಯೋತ್ಪಾದನೆಯ ಮತ್ತು ಹಿಂಸಾಚಾರದ ಕಾರ್ಯಾಚರಣೆಯ ಪರವಾಗಿ ಒಳ್ಳೆಯ ವಾತಾವರಣವಿದೆ. ಅವರಿಗೆ ಕೆನಡಾದಲ್ಲಿನ ರಾಜಕಾರಣದಿಂದ ಸ್ವಾತಂತ್ರ್ಯ ದೊರೆತಿದೆ.

ವಾಕ್ ಸ್ವಾತಂತ್ರ್ಯದ ಉಪಯೋಗ ಹಿಂಸಾಚಾರಕ್ಕೆ ಪ್ರಚೋದನೆ ನೀಡುವುದು ಸಾಧ್ಯವಿಲ್ಲ !

ಇಲ್ಲಿ ಒಂದು ಪತ್ರಕರ್ತರ ಸಭೆಯಲ್ಲಿ ಡಾ. ಜೈಶಂಕರ್ ಇವರು, ಭಾರತ ಒಂದು ಪ್ರಜಾಪ್ರಭುತ್ವ ದೇಶವಾಗಿದೆ. ನಮಗೆ ಇತರರಿಂದ ವಾಕ್ ಸ್ವಾತಂತ್ರ್ಯ ಅಂದರೆ ಏನು, ಇದನ್ನು ಕಲಿಯುವ ಆವಶ್ಯಕತೆ ಇಲ್ಲ; ಆದರೆ ನಾವು ಜನರಿಗೆ, ವಾಕ್ ಸ್ವಾತಂತ್ರ್ಯ ಹಿಂಸಾಚಾರಕ್ಕೆ ಪ್ರಚೋದನೆ ನೀಡುವುದು ಆಗಿರಬಾರದು ಎಂದು ಹೇಳಬಹುದು. ಇದು ನಮಗೆ ಈ ಸ್ವಾತಂತ್ರ್ಯದ ದುರುಪಯೋಗವಾಗಿದೆ ಎಂದು ಹೇಳಿದರು.

ಭಾರತದ ಜಾಗದಲ್ಲಿ ನೀವು ಇದ್ದರೆ, ಏನು ಮಾಡುತ್ತಿದ್ದಿರಿ ?

ಏನಾದರೂ ಇತರ ದೇಶಗಳು ಭಾರತದ ಜಾಗದಲ್ಲಿ ಇದ್ದಿದ್ದರೆ, ಅವರ ಅಧಿಕಾರಿಗಳಿಗೆ, ರಾಯಭಾರಿಗಳಿಗೆ ಮತ್ತು ನಾಗರಿಕರಿಗೆ ಬೆದರಿಕೆ ಸಿಗುತ್ತಿದ್ದರೆ, ಅವರ ರಕ್ಷಣೆಯ ಬಗ್ಗೆ ಸಂಕಷ್ಟ ನಿರ್ಮಾಣವಾಗುತ್ತಿತ್ತು, ಆಗ ನೀವು ಏನು ಮಾಡ ಬಹುದಾಗಿತ್ತು ? ನೀವು ಏನಾದರೂ ನನ್ನ ಜಾಗದಲ್ಲಿ ಇದ್ದಿದ್ದರೆ ಆಗ ನೀವು ಏನು ಹೇಳಬಹುದು ಮತ್ತು ಏನು ಮಾಡಬಹುದು ? ಇದೆಲ್ಲಾ ನಿಮ್ಮ ರಾಯಭಾರಿ ಅಧಿಕಾರಿ ಮತ್ತು ನಾಗರಿಕರಾಗಿದ್ದರೆ, ಆಗ ನಿಮ್ಮ ಪ್ರತಿಕ್ರಿಯೆ ಏನಾಗಿರುತ್ತಿತ್ತು ? ಎಂದು ಡಾ. ಜೈ ಶಂಕರ್ ಇವರು ಈ ಸಮಯದಲ್ಲಿ ಪ್ರಶ್ನೆ ಕೇಳಿದರು.