ಮಸ್ತುಂಗ (ಬಲೂಚಿಸ್ತಾನ) – ಇಲ್ಲಿ ಬೆಳಿಗ್ಗೆ ೧೦.೩೦ಕ್ಕೆ ನಡೆದ ಭೀಕರ ಬಾಂಬ್ ಸ್ಫೋಟದಲ್ಲಿ ಇಲ್ಲಿಯವರೆಗೆ ೫೪ ಜನರು ಸಾವನ್ನಪ್ಪಿದ್ದು ೩೦ಕ್ಕೂ ಹೆಚ್ಚಿನವರು ಗಾಯಗೊಂಡಿರುವ ಸುದ್ದಿಯಿದೆ. ಈ ಬಾಂಬ್ ಸ್ಫೋಟವು ಇಲ್ಲಿನ ಮದಿನಾ ಮಸೀದಿಯ ಬಳಿ ನಡೆದಿದೆ. ಈದ್ ನ ನಿಮಿತ್ತ ನಡೆಸಲಾಗಿದ್ದ ಮೆರವಣಿಗೆಗಾಗಿ ಜನರು ಇಲ್ಲಿ ಸೇರಿದಾಗ ಈ ಬಾಂಬ್ ಸ್ಫೋಟ ನಡೆಸಲಾಗಿದೆ. ಇಲ್ಲಿಯವರೆಗೂ ಯಾವುದೇ ಭಯೋತ್ಪಾದಕ ಸಂಘಟನೆಯು ಈ ಆಕ್ರಮಣದ ಹೊಣೆಯನ್ನು ಹೊತ್ತಿಕೊಂಡಿಲ್ಲ.
🇵🇰Au moins 52 morts et des dizaines de blessés dans un attentat suicide au #Pakistan. L’explosion est survenue près de la mosquée Madina alors que des fidèles se rassemblaient pour l’Aïd Miladun Nabi, l’anniversaire de la naissance du prophète Mahomet. https://t.co/cjArQxJL3y
— France•TV New Delhi (@F2newdelhi) September 29, 2023
ಪೊಲೀಸರು, ಇದು ಆತ್ಮಹತ್ಯಾ ಬಾಂಬ್ ಸ್ಫೋಟ ಆಗಿತ್ತು. ಬಾಂಬ್ ಸ್ಫೋಟ ಮಾಡಲಿದ್ದ ಭಯೋತ್ಪಾದಕನು ಮೆರವಣಿಗೆಯ ಬಳಿ ನಿಂತಿದ್ದ ಪೊಲೀಸ ಅಧಿಕಾರಿಯ ಗಾಡಿಯ ಬಳಿ ನಿಂತಿದ್ದು ಅಲ್ಲಿಯೆ ಸ್ಫೋಟ ಮಾಡಿದನು, ಎಂದು ಹೇಳಿದರು.