ವಿಶ್ವ ಕಪ್ ಕ್ರಿಕೆಟ್ ಸ್ಪರ್ಧೆಗಾಗಿ ಪಾಕಿಸ್ತಾನ ಕ್ರಿಕೆಟ್ ಸಂಘ ಭಾಗ್ಯನಗರಕ್ಕೆ ತಲುಪಿದ ನಂತರ ಉತ್ಸಾಹದಿಂದ ಸ್ವಾಗತ !
ಇಸ್ಲಾಮಾಬಾದ (ಪಾಕಿಸ್ತಾನ) – ವಿಶ್ವ ಕಪ್ ಕ್ರಿಕೆಟ್ ಸ್ಪರ್ಧೆಗಾಗಿ ಪಾಕಿಸ್ತಾನ ಕ್ರಿಕೆಟ್ ಸಂಘ ಭಾರತಕ್ಕೆ ತಲುಪಿದೆ. ಇದರ ಹಿನ್ನೆಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಝಕಾ ಅಶ್ರಫ್ ಇವರು ಭಾರತವನ್ನು ‘ಶತ್ರುದೇಶ’ ಎಂದು ಉಲ್ಲೇಖಿಸಿದ್ದಾರೆ.
(ಸೌಜನ್ಯ – India Today)
ಝಕಾ ಅಶ್ರಫ್ ಪಾಕಿಸ್ತಾನಿ ಆಟಗಾರರಿಗೆ ಹೆಚ್ಚಿಸಿರುವ ವೇತನದ ಬಗ್ಗೆ ಪ್ರಸಾರ ಮಾಧ್ಯಮಗಳ ಜೊತೆಗೆ ಮಾತನಾಡುವಾಗ, ನಾವು ನಮ್ಮ ಆಟಗಾರರಿಗೆ ಎಷ್ಟು ಹಣ ನೀಡಿದ್ದೇವೆ ಎಂದರೆ ಬಹುಶಃ ಇತಿಹಾಸದಲ್ಲಿ ಇಷ್ಟೊಂದು ಹಣ ಎಂದು ಆಟಗಾರರಿಗೆ ಸಿಕ್ಕಿರಲಿಲ್ಲ. ‘ನಮ್ಮ ಆಟಗಾರರ ಮನೋಬಲ ಹೆಚ್ಚಿಸಬೇಕು’, ಇದೇ ನನ್ನ ಉದ್ದೇಶವಾಗಿತ್ತು. ಅವರು ಯಾವುದೇ ಶತ್ರುದೇಶದಲ್ಲಿ ಅಥವಾ ಸ್ಪರ್ಧೆ ಆಯೋಜಿಸಿರುವ ಎಲ್ಲೇ ಹೋದರು ಒಳ್ಳೆಯ ರೀತಿ ಆಡಬೇಕು ಇದಕ್ಕಾಗಿ ಅವರಿಗೆ ಬೆಂಬಲ ನೀಡಬೇಕು.
ಪಾಕಿಸ್ತಾನ ಸಂಘದ ಭಾಗ್ಯನಗರ (ಹೈದ್ರಾಬಾದ) ಮತ್ತು ಕರ್ಣಾವತಿ (ಅಹ್ಮದಾಬಾದ) ಇಲ್ಲಿಯ ಮುಸಲ್ಮಾನರ ಬೆಂಬಲ ಸಿಗುವುದು ! – ಪಾಕಿಸ್ತಾನದ ಮಾಜಿ ಕ್ರಿಕೆಟ ಪಟು ಮುಶ್ತಾಕ್ ಅಹಮದ್ಪಾಕಿಸ್ತಾನಕ್ಕೆ ಭಾರತದಲ್ಲಿನ ಯಾವ ಜನರು ಬೆಂಬಲ ನೀಡುತ್ತಾರೆ, ಎಂಬುದು ಇದರಿಂದ ಮತ್ತೊಮ್ಮೆ ಬಹಿರಂಗವಾಗಿದೆ. ಇದರ ಬಗ್ಗೆ ದೇಶದಲ್ಲಿನ ಜಾತ್ಯತೀತರು, ಪ್ರಗತಿ (ಅಧೋಗತಿ) ಪರರು ಬಾಯಿ ಬಿಡುವುದಿಲ್ಲ, ಇದನ್ನು ತಿಳಿದುಕೊಳ್ಳಿ ! ವಿಶ್ವಕಪ್ ಕ್ರಿಕೆಟ್ ಸ್ಪರ್ಧೆಗಾಗಿ ಭಾರತಕ್ಕೆ ಬಂದಿರುವ ಪಾಕಿಸ್ತಾನಿ ಸಂಘದ ಬಗ್ಗೆ ಪಾಕಿಸ್ತಾನದಲ್ಲಿನ ‘ಸಮಾ ಟಿವಿ’ ಈ ವಾರ್ತಾ ವಾಹಿನಿಯಲ್ಲಿನ ಚರ್ಚೆಯಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟ ಆಟಗಾರ ಮುಶ್ತಾಕ್ ಅಹಮದ್ ಇವರು, ಹೈದರಾಬಾದ್ ಮತ್ತು ಅಹಮದಾಬಾದ್ ನಗರದಲ್ಲಿ ಮುಸಲ್ಮಾನರ ಸಂಖ್ಯೆ ಹೆಚ್ಚಾಗಿದೆ. ಅಲ್ಲಿ ನಮ್ಮ ಸಂಘಕ್ಕೆ ಬಹಳಷ್ಟು ಬೆಂಬಲ ದೊರೆಯುವುದು ಎಂದು ಹೇಳಿದರು. |
ಸಂಪಾದಕೀಯ ನಿಲುವು‘ಪಾಕಿಸ್ತಾನಿ ಸಂಘವನ್ನು ಭಾಗ್ಯನಗರದಲ್ಲಿ ಉತ್ಸಾಹದಿಂದ ಸ್ವಾಗತ ಮಾಡುವವರು ಯಾರು ?’, ಇದನ್ನು ಪರಿಶೀಲಿಸಬೇಕು ! ಭಾರತವು ಪಾಕಿಸ್ತಾನದ ಕ್ರಿಕೆಟ್ ಸಂಘಕ್ಕೆ ಇಲ್ಲಿ ಬರಲು ಅನುಮತಿ ನೀಡಬಾರದಿತ್ತು, ಇದೇ ಇದರಿಂದ ಸ್ಪಷ್ಟವಾಗುತ್ತದೆ ! ಆಟದಲ್ಲಿ ಕೂಡ ಶತ್ರುತ್ವ ತೋರಿಸುವ ಇಂತಹ ದೇಶವನ್ನು ಭಾರತ ಬಹಿಷ್ಕರಿಸಬೇಕು ! ಇದಕ್ಕಾಗಿ ಜನರು ಸರಕಾರದ ಮೇಲೆ ಒತ್ತಡ ಹೇರಬೇಕು ! |