ಸರಕಾರವು ಯಾರ ಸಂಪ್ರದಾಯದಲ್ಲಿ ಕೂಡ ಹಸ್ತಕ್ಷೇಪ ಮಾಡುವ ಪ್ರಯತ್ನ ಮಾಡಬಾರದು ! – ಸರ್ವೋಚ್ಚ ನ್ಯಾಯಾಲಯ

  • ತಮಿಳುನಾಡಿನ ದ್ರಮುಕ ಸರಕಾರಕ್ಕೆ ಸರ್ವೋಚ್ಚ ನ್ಯಾಯಾಲಯದಿಂದ ತಪರಾಕಿ !

  • ತಮಿಳುನಾಡಿನಲ್ಲಿನ ಸರಕಾರಿಕರಣ ಆಗಿರುವ ಆಗಮಿಕ ದೇವಸ್ಥಾನದಲ್ಲಿ ಅರ್ಚಕರ ನೇಮಕಾತಿ ಪ್ರಕರಣ

ನವ ದೆಹಲಿ – ತಮಿಳುನಾಡಿನಲ್ಲಿನ ಆಗಮಿಕ ದೇವಸ್ಥಾನದಲ್ಲಿನ ಅರ್ಚಕರ ನೇಮಕಾತಿ ಸರಕಾರದ ಆದೇಶದಂತೆ ನಡೆಯುವುದರ ಬಗ್ಗೆ ಸರ್ವೋಚ್ಚ ನ್ಯಾಯಾಲಯವು ಮದ್ರಾಸ್ ಉಚ್ಚ ನ್ಯಾಯಾಲಯದ ತೀರ್ಪು ಎತ್ತಿ ಹಿಡಿದು ಸ್ತಗಿತ ಗೊಳಿಸಿದೆ. ಸರ್ವೋಚ್ಚ ನ್ಯಾಯಾಲಯವು, ‘ಸರಕಾರವು ಯಾವುದೇ ಸಂಪ್ರದಾಯಗಳಲ್ಲಿ ಹಸ್ತಕ್ಷೇಪ ಮಾಡುವ ಪ್ರಯತ್ನ ಮಾಡಬಾರದು.’ ಇದರ ಸಂದರ್ಭದಲ್ಲಿ ‘ಅಖಿಲ ಭಾರತೀಯ ಆದಿ ಶೈವ ಶಿವಾಚಾರ್ಯರ್ಗಲ್ ಸೇವಾ ಅಸೋಸಿಯೇಷನ್’ನಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿತ್ತು. ಅದರ ಬಗ್ಗೆ ನಡೆದಿರುವ ವಿಚಾರಣೆಯಲ್ಲಿ ನ್ಯಾಯಾಲಯವು ತಡೆ ಆಜ್ಞೆ ಖಾಯಂ ಗೊಳಿಸಿದೆ.

೧. ‘ವಿಚಾರಣೆಯ ಸಮಯದಲ್ಲಿ ಅಖಿಲ ಭಾರತೀಯ ಆದಿ ಶೈವ ಶಿವಾಚಾರ್ಯರ್ಗಲ ಸೇವಾ ಅಸೋಸಿಯೇಷನ್’ ನಿಂದ , ಮದ್ರಾಸ್ ಉಚ್ಚ ನ್ಯಾಯಾಲಯವು ತಡೆ ಆಜ್ಞೆ ನೀಡಿದ ನಂತರ ಕೂಡ ರಾಜ್ಯ ಸರಕಾರ ಮನಬಂದಂತೆ ವರ್ತಿಸುತ್ತಿದೆ ಮತ್ತು ಆಗಮಿಕ ಸಾಂಪ್ರದಾಯದ ಹೊರಗಿನ ಜನರನ್ನು ಅರ್ಚಕರೆಂದು ನೇಮಿಸುತ್ತಿದೆ. (ನ್ಯಾಯಾಲಯದ ಅವಮಾನ ಮಾಡುವವರಿಗೆ ಸರಕಾರಕ್ಕೆ ನ್ಯಾಯಾಲಯ ಶಿಕ್ಷೆ ವಿಧಿಸುವುದು ಅವಶ್ಯಕವಾಗಿದೆ, ಹೀಗೆ ಜನರಿಗೆ ಅನಿಸುತ್ತದೆ – ಸಂಪಾದಕರು) ಸರಕಾರವು, ‘ಜನರು ಇದಕ್ಕಾಗಿ ಪ್ರಶಿಕ್ಷಣ ಪಡೆದಿದ್ದಾರೆ ಮತ್ತು ಅವರು ಪೂಜೆ ಮಾಡಲು ಸಕ್ಷಮರಾಗಿದ್ದಾರೆ.’ ನ್ಯಾಯಾಲಯವು, ಆಗಮಿಕ ದೇವಸ್ಥಾನದಲ್ಲಿ ಅವರದೇ ಆದ ಪರಂಪರೆ ಇದೆ. ಇಂತಹ ಸಮಯದಲ್ಲಿ ಅದನ್ನ ನಂಬುವ ಜನರನ್ನು ನೇಮಕ ಮಾಡಬೇಕು ಎಂದು ಸ್ಪಷ್ಟವಾಗಿ ಹೇಳಿತು.

೨. ತಮಿಳುನಾಡಿನಲ್ಲಿ ಸುಮಾರು ೪೨ ಸಾವಿರದ ೫೦೦ ಕ್ಕಿಂತಲೂ ಹೆಚ್ಚಿನ ದೇವಸ್ಥಾನಗಳಿವೆ. ಇದರಲ್ಲಿ ಅರ್ಚಕರ ನೇಮಕಾತಿ ಸರಕಾರದಿಂದ ಆಗುತ್ತದೆ. ಇದರಲ್ಲಿನ ಶೇ. ೧೦ ದೇವಸ್ಥಾನಗಳು ಆಗಮಿಕ ಸಂಪ್ರದಾಯದ ಪ್ರಕಾರ ನಡೆಯುತ್ತವೆ. ಇವು ಪುರಾತನ ದೇವಸ್ಥಾನಗಳಾಗಿವೆ. ಇದರದೇ ಆದ ವಿಶೇಷ ಸಂಪ್ರದಾಯಾಗಿದ್ದು ಅವರು ಅವರ ನೀತಿಯನ್ನು ಪಾಲಿಸುತ್ತರೆ. ಅರ್ಚಕರ ನೇಮಕಾತಿಯ ಸಂದರ್ಭದಲ್ಲಿ ಸರಕಾರದಿಂದ ನಿಯಮ ರೂಪಿಸಲಾಗಿದೆ. ಅರ್ಚಕರ ಸ್ಥಾನದ ‘ಡಿಪ್ಲೋಮಾ’ (ಪದವಿ) ಮಾಡಿರುವ ವ್ಯಕ್ತಿಯೇ ಅರ್ಚಕರಾಗಲು ಯೋಗ್ಯವಾಗಿರುವರು. ಇದರಿಂದ ಅವರು ಅನೇಕ ವರ್ಷದಿಂದ ದೇವಸ್ಥಾನದಲ್ಲಿ ಅರ್ಚಕರೆಂದು ಕಾರ್ಯನಿರತವಾಗಿದ್ದಾರೆ ಅವರ ಬಳಿ ಈ ಪದವಿ ಇಲ್ಲದಿರುವುದರಿಂದ ಅವರು ಅರ್ಚಕರ ಸ್ಥಾನದಲ್ಲಿ ಇರಲು ಸಾಧ್ಯವಿಲ್ಲ ಎಂದು ಹೇಳಿದೆ.

೩. ತಮಿಳುನಾಡಿನಲ್ಲಿನ ದೇವಸ್ಥಾನದಲ್ಲಿ ಅರ್ಪಣೆ ಎಂದು ಬರುವ ಪ್ರತಿಯೊಂದು ವಸ್ತುವಿನ ಮೇಲೆ ಸರಕಾರದ ಧಾರ್ಮಿಕ ದತ್ತಿ ಇಲಾಖೆ ನಿಯಂತ್ರಿಸುತ್ತದೆ. ಅದರ ಬದಲು ಇಲಾಖೆಯಿಂದ ದೇವಸ್ಥಾನದ ವ್ಯವಸ್ಥಾಪನೆಗೆ ವಹಿಸಲಾಗುತ್ತದೆ. ಇದರಲ್ಲಿ ಅರ್ಚಕರು ಮತ್ತು ಸಿಬ್ಬಂದಿಗಳ ನೇಮಕಾತಿ ಕೂಡ ಒಳಗೊಂಡಿದೆ.

ಏನಿದು ಪ್ರಕರಣ ?

ತಮಿಳುನಾಡು ಸರಕಾರವು ೨೦೨೦ ರಲ್ಲಿ ಕಾನೂನು ರೂಪಿಸಿತ್ತು. ಇದಕ್ಕೆ ‘ತಮಿಳುನಾಡು ಹಿಂದೂ ಧಾರ್ಮಿಕ ಸಂಸ್ಥಾನ ಕರ್ಮಚಾರಿ ನಿಯಮ, ೨೦೨೦’, ಎಂದು ಹೆಸರಿಸಲಾಗಿದೆ. ಈ ಕಾನೂನಿನ ಅಡಿಯಲ್ಲಿಯೇ ಸರಕಾರ ದೇವಸ್ಥಾನದಲ್ಲಿ ಅರ್ಚಕರ ನೇಮಕ ಮಾಡುತ್ತದೆ; ಆದರೆ ೨೦೨೨ ರಲ್ಲಿ ಮದ್ರಾಸ್ ಉಚ್ಚ ನ್ಯಾಯಾಲಯವು ಇದರಿಂದ ಆಗಮಿಕ ದೇವಸ್ಥಾನಗಳನ್ನು ಬಿಡುವಂತೆ ತೀರ್ಪು ನೀಡಿತ್ತು. ‘ಈ ದೇವಸ್ಥಾನಗಳು ವಿಶೇಷ ಸಂಪ್ರದಾಯದ ಪ್ರಕಾರ ನಡೆಯುತ್ತವೆ ಆದ್ದರಿಂದ ಸರಕಾರದ ಹಸ್ತಕ್ಷೇಪದ ಅವಶ್ಯಕತೆ ಇಲ್ಲ’, ಎಂದು ನ್ಯಾಯಾಲಯ ಹೇಳಿತ್ತು. ಅದರ ನಂತರ ಕೂಡ ಸರಕಾರ ಆಗಮಿಕ ದೇವಸ್ಥಾನದಲ್ಲಿ ಸಂಪ್ರದಾಯದ ಹೊರಗಿನ ಅರ್ಚಕರ ನೇಮಕ ಮಾಡುತ್ತಿರುವುದರಿಂದ ಇದಕ್ಕೆ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು.

ಆಗಮಿಕ ದೇವಸ್ಥಾನ ಎಂದರೆ ಏನು ?

ತಮಿಳುನಾಡಿನಲ್ಲಿ ೮ ಸಾವಿರಗಿಂತಲೂ ಹೆಚ್ಚಿನ ಆಗಮಿಕ ದೇವಸ್ಥಾನಗಳಿವೆ. ಈ ದೇವಸ್ಥಾನಗಳು ಶೈವ, ವೈಷ್ಣವ ಮತ್ತು ತಾಂತ್ರಿಕ ಸಾಂಪ್ರದಾಯದ ಅಥವಾ ದ್ರವಿದ ಸಂಪ್ರದಾಯ ಪಾಲಿಸುತ್ತಾರೆ. ಈ ದೇವಸ್ಥಾನಗಳು ಇತರ ದೇವಸ್ಥಾನಗಳಿಗಿಂತ ಬೇರೆ ಆಗಿವೆ. ‘ಈ ದೇವಸ್ಥಾನಗಳಲ್ಲಿ ಶೈವ, ವೈಷ್ಣವ ಮತ್ತು ತಾಂತ್ರಿಕ ಸಾಂಪ್ರದಾಯದ ಅರ್ಚಕರು ನೇಮಕವಾಗುವುದು ಅವಶ್ಯಕವಿದೆ. ಇಂತಹ ಸ್ಥಳದಲ್ಲಿ ಇತರ ಸಂಪ್ರದಾಯದ ಅರ್ಚಕರನ್ನು ನೇಮಕ ಮಾಡಲು ಸಾಧ್ಯವಿಲ್ಲ’.

ತಮಿಳುನಾಡಿನಲ್ಲಿ ದೇವಸ್ಥಾನಗಳ ಬಗ್ಗೆ ಅನೇಕ ಅರ್ಜಿ ಬಾಕಿ !

ತಮಿಳುನಾಡಿನಲ್ಲಿನ ದೇವಸ್ಥಾನಗಳ ಮೇಲೆ ಸರಕಾರದ ನಿಯಂತ್ರಣವಿದೆ. ಇದಕ್ಕೆ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದ ಅನೇಕ ಅರ್ಜಿಗಳು ದಾಖಲಿಸಲಾಗಿದ್ದವು. ಇದರಲ್ಲಿ ಹಿರಿಯ ನಾಯಕ ಡಾ. ಸುಬ್ರಹ್ಮಣ್ಯಂ ಸ್ವಾಮಿ ಇವರ ಅರ್ಜಿ ಕೂಡ ಇದೆ. ಅವರು ದೇವಸ್ಥಾನಗಳ ಸರಕಾರಿಕರಣದಿಂದ ಮುಕ್ತಗೊಳಿಸಲು ಆಗ್ರಹಿಸಿದ್ದಾರೆ. ಡಾ. ಸ್ವಾಮಿ ಇವರ ಪ್ರಕಾರ, ಸರಕಾರದಿಂದ ನಾಸ್ತಿಕರನ್ನು ಅರ್ಚಕರೆಂದು ನೇಮಕಗೊಳಿಸಲು ಸಾಧ್ಯವಿಲ್ಲ ಎಂದಾಗಿದೆ.

ಸಂಪಾದಕೀಯ ನಿಲುವು

ದೇಶದಲ್ಲಿನ ದೇವಸ್ಥಾನಗಳಿಂದಾಗುವ ಸರಕಾರಿಕರಣ ನಿಲ್ಲಿಸಿ ಎಲ್ಲಾ ದೇವಸ್ಥಾನಗಳು ಸರಕಾರಿಕರಣದಿಂದ ಮುಕ್ತಗೊಳಿಸುವುದಕ್ಕಾಗಿ ಕೇಂದ್ರದಲ್ಲಿನ ಭಾಜಪ ಸರಕಾರವೇ ಕಾನೂನು ಜಾರಿಗೊಳಿಸಬೇಕೆಂದು ದೇಶದಲ್ಲಿನ ಹಿಂದೂಗಳ ಅಪೇಕ್ಷೆಯಾಗಿದೆ !