೭೨ ವರ್ಷಗಳ ಹಿಂದೆ ಅಪ್ರಾಪ್ತ ಹುಡುಗಿಯ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬರ್ಲಿನ್ (ಜರ್ಮನಿ) ಇಲ್ಲಿಯ ಕಾರ್ಡಿನಲ್ ನ ಪುತ್ತಳಿ ತೆರವು !

(ಕಾರ್ಡಿನಲ್ ಎಂದರೆ ಚರ್ಚ್ ನಲ್ಲಿ ಪಾದ್ರಿಗಳಿಗೆ ದೊರೆಯುವ ಸ್ಥಾನ)

ಬರ್ಲಿನ್ (ಜರ್ಮನಿ) – ಜರ್ಮನಿಯಲ್ಲಿ ೭೨ ವರ್ಷಗಳ ಹಿಂದೆ ಅಪ್ರಾಪ್ತ ಹುಡುಗಿಯ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಫ್ರಾಂಜಾ ಹೆಂಗಬಸ್ಕ್ ಈ ಕಾರ್ಡಿನಲ್ ನ ಪುತ್ತಳಿಯನ್ನು ಬರ್ಲಿನ್ ಇಲ್ಲಿಯ ಎಸೆನ್ ಕ್ಯಾಥೆಡ್ರಲ್ (ಪ್ರಮುಖ ಪಾದ್ರಿಯ ಸ್ಥಾನ ಇರುವ ಚರ್ಚ್) ಇಲ್ಲಿಂದ ತೆರವುಗೊಳಿಸಲಾಗಿದೆ. ಈ ಪುತ್ತಳಿ ೨೦೧೧ ರಲ್ಲಿ ನಿಲ್ಲಿಸಲಾಗಿತ್ತು. ಈ ಕಾರ್ಡಿನಲ್ ೧೯೯೧ ರಲ್ಲಿ ಸಾವನ್ನಪ್ಪಿದ್ದ. ಅವನು ಮಾಡಿರುವ ಲೈಂಗಿಕ ಕಿರುಕುಳ ಪ್ರಕರಣ ಈಗ ಬಹಿರಂಗವಾಗಿದೆ.

ಎಸೇನ್ ಕಥೆಡ್ರಲ್ ಇವರಿಂದ, ಫ್ರಾಂಜಾ ೧೯೫೦ ರ ದಶಕದಲ್ಲಿ ಓರ್ವ ೧೬ ವರ್ಷದ ಹುಡುಗಿಯ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಸಂದೇಹವಿದೆ ಹಾಗೂ ಇನೋರ್ವ ಮಹಿಳೆಯಿಂದ ಕೂಡ ೧೯೬೭ ರಲ್ಲಿ ಫ್ರಾಂಜಾ ಇವನು ಆಕೆಯ ಲೈಂಗಿಕ ಕಿರುಕುಳ ನೀಡಿರುವ ಆರೋಪ ಮಾಡಲಾಗಿತ್ತು. ಆ ಸಮಯದಲ್ಲಿ ಫ್ರಾಂಜಾ ಬಿಷಪ್ (ಹಿರಿಯ ಪಾದ್ರಿ) ಆಗಿದ್ದ. ಈ ಸ್ಥಾನದಲ್ಲಿ ಆತ ೩೩ ವರ್ಷ ಇದ್ದ. ೨೦೧೧ ರಲ್ಲಿ ವ್ಯಾಟಿಕನ್, ‘ಫ್ರಾಂಜಾನ ಮೇಲೆ ಮಾಡಿರುವ ಆರೋಪ ಯೋಗ್ಯ ಅನಿಸುವುದಿಲ್ಲ’ ಎಂದು ಹೇಳಿತ್ತು. ಈಗಿನ ಬಿಷಪ್ ಜೋಸೆಫ್ ಇವರು, ೨೦೧೧ ರಲ್ಲಿ ಫ್ರಾಂಜಾದ ವಿರುದ್ಧ ಆರೋಪ ಮಾಡಲಾಗಿತ್ತು; ಆದರೆ ಅದರ ಸರಿಯಾದ ತನಿಖೆ ಮಾಡಲಾಗಿಲ್ಲ.

ಸಂಪಾದಕೀಯ ನಿಲುವು

ಈ ಘಟನೆಯಿಂದ ಈಗ ಇಂತಹ ಎಷ್ಟು ಪಾದ್ರಿಗಳು ಬದುಕಿದ್ದಾರೆ ಅಥವಾ ಮೃತರಾಗಿದ್ದಾರೆ, ಅವರ ಮೇಲೆ ಇಂತಹ ಆರೋಪ ಮಾಡಲಾಗಿದೆ, ಅದರ ತನಿಖೆ ನಡೆಯಬೇಕು ಇದರಿಂದ ಗಮನಕ್ಕೆ ಬರುತ್ತದೆ !