ಮಹಾಲಯದ ಅವಧಿಯು 29 ಸೆಪ್ಟೆಂಬರ್ 2023 ರಿಂದ ಪ್ರಾರಂಭವಾಗಿ 14 ಅಕ್ಟೋಬರ್ 2023 ರಂದು ಕೊನೆಗೊಳ್ಳುತ್ತದೆ. ಈ 15 ದಿನಗಳ ಅವಧಿಯನ್ನು ಪಿತೃ ಪಕ್ಷ ಎಂದು ಕರೆಯಲಾಗುತ್ತದೆ. ಹಿಂದೂ ಧರ್ಮಗ್ರಂಥಗಳ ಪ್ರಕಾರ, ಪಿತೃಪಕ್ಷದ ಅವಧಿಯಲ್ಲಿ ನಮ್ಮ ಮೃತ ಪೂರ್ವಜರಿಗೆ ಶ್ರಾದ್ಧದ ಆಚರಣೆಯನ್ನು ಮಾಡಬೇಕು. ಅನೇಕ ವಿದೇಶಿಯರೂ ಸಹ ಭಾರತಕ್ಕೆ ಭೇಟಿ ನೀಡಿ, ಅತ್ಯಂತ ನಂಬಿಕೆಯಿಂದ ಶ್ರಾದ್ಧ ಮಾಡುವುದನ್ನು ಕಾಣಬಹುದು.
ಶ್ರಾದ್ಧ ವಿಧಿಯ ಆಚರಣೆಯ ಕುರಿತು ಅನೇಕ ಜನರ ಮನಸ್ಸಿನಲ್ಲಿ ಪ್ರಶ್ನೆಗಳಿರುತ್ತವೆ, ಇದಕ್ಕಾಗಿ ಸನಾತನ ಸಂಸ್ಥೆಯು ’ಶ್ರಾದ್ಧಾ ರಿಚುವಲ್ಸ್’ ಆಂಡ್ರಾಯ್ಡ್ ಅಪ್ಲಿಕೇಶನ್ ಅನ್ನು ವಿಕಸಿತಗೊಳಿಸಿದೆ. ಶ್ರಾದ್ಧಾ ವಿಷಯಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿ ಮತ್ತು ಪ್ರಶ್ನೋತ್ತರಗಳು ಒಳಗೊಂಡಿರುವ ಈ ಅಪ್ಲಿಕೇಶನ್ ಕನ್ನಡ, ತೆಲುಗು, ಮರಾಠಿ, ಮಲಯಾಳಂ, ಹಿಂದಿ, ಇಂಗ್ಲಿಷ್, ಗುಜರಾತಿ ಈ 7 ಭಾಷೆಗಳನ್ನು ಒಳಗೊಂಡಿದೆ. ಗೂಗಲ್ ಪ್ಲೇ ಸ್ಟೋರ್ ನಲ್ಲಿ ಅಪ್ಲಿಕೇಶನ್ ಉಚಿತವಾಗಿ ಲಭ್ಯವಿದ್ದು sanatan.org/shraddh-app ಈ ಲಿಂಕ್ ನಲ್ಲಿ ಭೇಟಿ ನೀಡಿ ಇನ್ಸ್ಟಾಲ್ ಮಾಡಬಹುದು.
’ಶ್ರಾದ್ಧ ಕರ್ಮ’ ಅಪ್ಲಿಕೇಶನ್‌ನ ವೈಶಿಷ್ಟ್ಯಗಳು –
-
ಶ್ರಾದ್ಧಾ ಆಚರಣೆಯ ಬಗ್ಗೆ ಧಾರ್ಮಿಕ ಮಾಹಿತಿ
-
ಶ್ರಾದ್ಧ ಆಚರಣೆಗೆ ಸಂಬಂಧಿಸಿದ ವೀಡಿಯೊಗಳು
-
ದತ್ತ ದೇವರನ್ನು ಪೂಜಿಸುವ ಮಾಹಿತಿ
-
ದೇವತೆ ದತ್ತನ ಪಠಣದ ಆಡಿಯೋ
ಪಿತೃಪಕ್ಷದ ಕಾಲಾವಧಿಯಲ್ಲಿ ಈ ಅಪ್ಲಿಕೇಶನ್ ಅನ್ನು ಅವಶ್ಯವಾಗಿ ಡೌನ್ಲೋಡ್ ಮಾಡಿ ಹಾಗೂ ಭಾವಪೂರ್ಣ ಶ್ರಾದ್ಧಾ ಆಚರಣೆಯನ್ನು ಮಾಡಿರಿ ಎಂದು ಈ ಮೂಲಕ ಸನಾತನ ಸಂಸ್ಥೆಯು ಕರೆ ನೀಡಿದೆ.