‘ಡಿಸಿಜ್ ಎಕ್ಸ್’ ಹೆಸರಿನ ಕೋರೋನಾಗಿಂತಲೂ ೭ ಪಟ್ಟು ಹೆಚ್ಚು ಅಪಾಯಕಾರಿ ಮಹಾಮಾರಿ ಬರಲಿದೆ ! – ವಿಶ್ವ ಆರೋಗ್ಯ ಸಂಸ್ಥೆ

  • ವಿಶ್ವ ಆರೋಗ್ಯ ಸಂಸ್ಥೆಯ ದಾವೆ !

  • ಈ ರೋಗದಿಂದ ಜಗತ್ತಿನಲ್ಲಿನ ೫ ಕೋಟಿ ಜನರು ಸಾವಿಗೀಡಾಗಬಹುದು ಎಂದು ಸಂಘಟನೆಯಿಂದ ಕಳವಳ ವ್ಯಕ್ತ !

ಜಿನೇವಾ (ಸ್ವೀಜರ್ಲ್ಯಾಂಡ್) – ಜಗತ್ತಿನಲ್ಲಿ ಕೊರೋನಾ ಮಹಾಮಾರಿಯಿಂದ ಹಾಹಕಾರ ಸೃಷ್ಟಿಸಿದ ನಂತರ ಈಗ ಈ ರೀತಿಯ ಹೊಸ ಮಹಾಮಾರಿ ಬರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯು ದಾವೆ ಮಾಡಿದೆ. ಈ ಮಹಾಮಾರಿ ಕೊರೋನಾಗಿಂತಲೂ ೭ ಪಟ್ಟು ಹೆಚ್ಚು ಘಾತಕವಾಗಿದ್ದು ಇದರಿಂದ ಜಗತ್ತಿನಲ್ಲಿನ ೫ ಕೋಟಿ ಜನರು ಜೀವ ಕಳೆದುಕೊಳ್ಳಬಹುದು, ಎಂದು ಸಂಘಟನೆ ದಾವೆ ಮಾಡಿದೆ.

ಬ್ರಿಟನ್ ನ ‘ವ್ಯಾಕ್ಸಿನ್ ಟಾಸ್ಕ್ ಫೋರ್ಸ್’ನ ಮುಖ್ಯಸ್ಥ ಕೇಟ್ ಬಿಂಘಮ ಇವರು ಈ ಕುರಿತು, ವಿಶ್ವ ಆರೋಗ್ಯ ಸಂಘಟನೆಯು ಈ ಮಹಾಮಾರಿಗೆ ‘ಡಿಸೀಜ್ ಎಕ್ಸ್’ ಎಂದು ಹೆಸರು ನೀಡಿದೆ, ಅದು ಯಾವಾಗ ಬೇಕಿದ್ದರೂ ಜಗತ್ತಿನಲ್ಲಿ ದಾಳಿ ಮಾಡಬಹುದು. ಏನಾದರೂ ಈ ರೋಗ ಮಹಾಮಾರಿಯ ರೂಪ ಪಡೆದರೆ, ಆಗ ಕನಿಷ್ಠ ೫ ಕೋಟಿ ಜನರು ಜೀವ ಕಳೆದುಕೊಳ್ಳಬಹುದು. ೧೯೧೮-೧೯೧೯ ರಲ್ಲಿ ಒಂದು ಮಹಾಮಾರಿಯಿಂದ ಇದೇ ರೀತಿ ೫ ಕೋಟಿ ಜನರು ಸಾವನ್ನಪ್ಪಿದ್ದರು. ವಿಜ್ಞಾನಿಗಳು ಈ ರೋಗದ ಬಗ್ಗೆ ಮಾಹಿತಿ ಒಗ್ಗೂಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ವಿಶ್ವ ಆರೋಗ್ಯ ಸಂಸ್ಥೆಯ ಸ್ಥಾಪನೆಯು ಜಗತ್ತಿನ ಮಟ್ಟದಲ್ಲಿ ಮನುಷ್ಯನ ಆರೋಗ್ಯದಲ್ಲಿ ಸುಧಾರಣೆ ಮಾಡುವುದಕ್ಕಾಗಿ ಆಗಿದೆ. ಈ ಉದ್ದೇಶಪೂರ್ತಿಗಾಗಿ ಅದು ಜಗತ್ತಿನಲ್ಲಿನ ದೇಶಗಳ ಜೊತೆಗೆ ಕಾರ್ಯ ಮಾಡುತ್ತದೆ. ಹೀಗೆ ಇದ್ದರೂ ಕೂಡ ಅದು ಈ ರೀತಿಯ ಆಘಾತಕಾರಿ ಮಹಾಮಾರಿಗಳನ್ನು ತಡೆಯಲು ಏಕೆ ಸಾಧ್ಯವಿಲ್ಲ ? ಕೊರೊನಾ ಮಹಾಮಾರಿಯ ನಿರ್ಮಾಣ ಮಾಡುವುದರ ಹಿಂದೆ ಚೀನಾ ಜೊತೆಗೆ ಇದೇ ಸಂಘಟನೆಯ ಕೈವಾಡವಿತ್ತು. ಎಂದೂ ಹೇಳಲಾಗುತ್ತದೆ. ಆದ್ದರಿಂದ ಈಗ ಈ ಸಂಘಟನೆಯ ಪದಾಧಿಕಾರಿಗಳ ತನಖೆ ನಡೆಸಲು ಆಗ್ರಹಿಸಿದರೆ ಅದರಲ್ಲಿ ತಪ್ಪೇನು ಇಲ್ಲ ?