ಕೆನಡಾದಲ್ಲಿನ ಭಾರತೀಯ ರಾಯಭಾರಿ ಕಚೇರಿಯ ಹೊರಗೆ ಖಾಲಿಸ್ತಾನಿಗಳ ಪ್ರತಿಭಟನೆ

ಭಾರತೀಯ ರಾಷ್ಟ್ರಧ್ವಜ ಸುಟ್ಟರು !

ವ್ಯಾಂಕೋವರ್ (ಕೆನಡಾ) – ಕೆನಡಾದಲ್ಲಿ ಸೆಪ್ಟೆಂಬರ್ ೨೫ ರಂದು ೨ ಸ್ಥಳಗಳಲ್ಲಿ ಖಲಿಸ್ತಾನಿಗಳು ಭಾರತದ ವಿರೋಧದಲ್ಲಿ ಪ್ರತಿಭಟಿಸಿತು. ಈ ಸಮಯದಲ್ಲಿ ಭಾರತದ ರಾಷ್ಟ್ರಧ್ವಜ ಹಾಗೆಯೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪುತ್ತಳಿಯನ್ನು ಸುಡಲಾಯಿತು. ಈ ಪ್ರತಿಭಟನೆಯನ್ನು ಖಲಿಸ್ತಾನಿ ಭಯೋತ್ಪಾದ ಸಂಘಟನೆಯಾದ ‘ಸೀಖ ಫಾರ್ ಜಸ್ಟಿಸ್’ ಇದರ ಮುಖ್ಯಸ್ಥ ಗುರುಪತವಂತ ಸಿಂಹ ಪನ್ನು ಆಯೋಜಿಸಿದ್ದ.

೧. ವ್ಯಾಂಕುವರ್‌ದಲ್ಲಿ ಭಾರತೀಯ ರಾಯಭಾರಿ ಕಚೇರಿಯ ಹೊರಗೆ ಖಲಿಸ್ತಾನಿಗಳು ಪ್ರತಿಭಟಿಸಿದರು. ಅವರು ಭಾರತದ ವಿರೋಧದಲ್ಲಿ ಘೋಷಣೆ ಕೂಗಿದರು. ಹಾಗೆಯೇ ಭಾರತದ ರಾಷ್ಟ್ರಧ್ವಜವನ್ನು ಹರಿದರು.

೨. ಓಟಾವಾದಲ್ಲಿಯೂ ಭಾರತೀಯ ರಾಯಭಾರಿ ಕಚೇರಿಯ ಹೊರಗೆ ಪ್ರಟಿಭಟಿಸಲಾಯಿತು. ಈ ಸಮಯದಲ್ಲಿ ಕೇವಲ ೩೦ ಸೀಖ್ಕರು ಇದ್ದರು. ಈ ಹಿಂದೆ ಹೋಲಿಸಿದರೆ ಖಲಿಸ್ತಾನಿಗಳ ಸಂಖ್ಯೆ ಕಡಿಮೆಯಾಗುತ್ತಿದೆ, ಎಂದು ಇದರಿಂದ ಗಮನಕ್ಕೆ ಬರುತ್ತದೆ.

ಭಾರತ ‘ಓವರಸೀಜ್ ಸಿಟಿಝನ್ ಆಫ್ ಇಂಡಿಯಾ’ ಕಾರ್ಡನ್ನು ರದ್ದುಗೊಳಿಸುವ ಸಿದ್ಧತೆಯಲ್ಲಿ !

ಭಾರತೀಯ ರಾಯಭಾರಿ ಕಚೇರಿಯ ಹೊರಗೆ ಪ್ರತಿಭಟಿಸುವ ಖಲಿಸ್ತಾನಗಳನ್ನು ಗುರುತಿಸುವ ಪ್ರಕ್ರಿಯೆಯನ್ನು ಭಾರತವು ಪ್ರಾರಂಭಿಸಿದೆ. ಈ ನಂತರ ಭಾರತ ಸರಕಾರವು ಈ ಎಲ್ಲ ಪ್ರತಿಭಟನಕಾರರ ‘ಓವರಸೀಜ್ ಸಿಟಿಝನ್ ಆಫ್ ಇಂಡಿಯಾ’ದ ಕಾರ್ಡನ್ನು ರದ್ದುಗೊಳಿಸಲಿದೆ. ಈ ಕಾರ್ಡು ವಿದೇಶದಲ್ಲಿ ನೆಲೆಸಿರುವ ಭಾರತೀಯರಿಗೆ ದ್ವಿಪೌರತ್ವವನ್ನು ಒದಗಿಸುತ್ತದೆ. ಒಂದು ವೇಳೆ ಈ ಕಾರ್ಡು ರದ್ದುಗೊಳಿಸಿದರೆ, ಕೆನಡಾದಲ್ಲಿ ನೆಲೆಸಿರುವ ಖಲಿಸ್ತಾನಿಗಳು ಭಾರತದಲ್ಲಿ ಮರಳಿ ಬರಲು ಸಾಧ್ಯವಿಲ್ಲ. ಎಂಬ ಭಯದಿಂದಾಗಿ ಅವರು ಬಹಿರಂಗವಾಗಿ ಮುಂದೆ ಬರಲು ತಪ್ಪಿಸಿಕೊಳ್ಳುತ್ತಿದ್ದಾರೆ.