ಟ್ರುಡೋ ಇವರು ನಿಜ್ಜರ ಹತ್ಯೆಯ ಬಗ್ಗೆ ಹೇಳಿರುವ ಸಾಕ್ಷಿಗಳು ಇಂಟರ್ನೆಟ್ ನಲ್ಲಿ ಮೊದಲೇ ಉಪಲಬ್ಧವಿದೆ.

ಕೆನಡಾದ ಬ್ರಿಟಿಷ್ ಕೊಲಂಬಿಯಾ ರಾಜ್ಯದ ರಾಜ್ಯಪಾಲರು ಪ್ರಧಾನಮಂತ್ರಿ ಟ್ರುಢೋ ಇವರ ಮಾನ ಕಳೆದರು !

ಓಟಾವ್ (ಕೆನಡಾ) – ಖಲಿಸ್ತಾನಿ ಭಯೋತ್ಪಾದಕ ಹರದೀಪಸಿಂಹ ನಿಜ್ಜರ್ ಇವನ ಕೆನಡಾದಲ್ಲಿನ ಬ್ರಿಟಿಷ್ ಕೊಲಂಬಿಯಾ ರಾಜ್ಯದಲ್ಲಿನ ಸರೆ ನಗರದಲ್ಲಿ ಹತ್ಯೆ ಮಾಡಿದ ನಂತರ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ ಇವರು ಈ ಹತ್ಯೆಯಲ್ಲಿ ಭಾರತದ ಕೈವಾಡ ಇರುವುದೆಂದು ಆರೋಪಿಸುತ್ತಾ ಅದರ ಬಗ್ಗೆ ಸಾಕ್ಷಿ ಇರುವ ಬಗ್ಗೆ ಕೂಡ ದಾವೆ ಮಾಡಿದ್ದರು; ಆದರೆ ಅವರು ಯಾವುದೇ ಸಾಕ್ಷಿ ಪ್ರಸ್ತುತಪಡಿಸಿಲ್ಲ. ಇದರ ಬಗ್ಗೆ ಈಗ ಬ್ರಿಟಿಷ್ ಕೊಲಂಬಿಯಾ ರಾಜ್ಯದ ರಾಜ್ಯಪಾಲ ಡೇವಿಡ್ ಎ.ಬಿ ಇವರು ಟ್ರುಡೋ ಇವರ ಮಾನ ಕಳೆದಿದ್ದಾರೆ. ಅವರು, ನಿಜ್ಜರ್ ನ ಹತ್ಯೆಯ ಬಗ್ಗೆ ನಮಗೆ ಏನೆಲ್ಲಾ ತಿಳಿದಿದೆ ಅದು ಸಾರ್ವಜನಿಕ ಸ್ಥಳದಲ್ಲಿ ಲಭ್ಯವಿದೆ. ಇದು ಬಹಳ ನಿರಾಶದಾಯಕವಾಗಿದೆ. ಟ್ರುಡೋ ಇವರು ಕೆನಡಾದ ಗೂಢಾಚಾರ ಇಲಾಖೆಯಿಂದ ಮಾಹಿತಿ ಪಡೆದಿದ್ದರು; ಆದರೆ ಅದು ಇಂಟರ್ನೆಟ್ ನಲ್ಲಿ ಲಭ್ಯವಿದೆ. ಆ ಮಾಹಿತಿ ಅಲ್ಲದೆ ನನಗೆ ಬೇರೆ ಏನು ತಿಳಿದಿಲ್ಲ ಎಂದು ಹೇಳಿದರು.

ಸಂಪಾದಕೀಯ ನಿಲುವು

ಟ್ರುಡೋ ಇವರು ಭಾರತದ ಮೇಲೆ ಆರೋಪ ಮಾಡಿದಾಗಿನಿಂದ ಅವರ ದೇಶದಲ್ಲಿನ ಪ್ರಸಾರ ಮಾಧ್ಯಮಗಳು, ವಿರೋಧಿ ಪಕ್ಷದ ನಾಯಕರು, ರಾಜಕೀಯ ಮುಖಂಡರು ಹಾಗೂ ಜನರು ಕೂಡ ಅವರನ್ನು ಟೀಕಿಸುತ್ತಿದ್ದಾರೆ. ಇದರಿಂದ ಟ್ರುಡೋ ಜಗತ್ತಿನೆದರೂ ನೆಲಕಚ್ಚಿದ್ದಾರೆ.