ಉದಯನಿಧಿ ಸ್ಟಾಲಿನ್ ಗೆ ಸರ್ವೋಚ್ಚ ನ್ಯಾಯಾಲಯದಿಂದ ನೋಟಿಸ್ !

  • ಉದಯನಿಧಿ ಸ್ಟಾಲಿನ್ ಇವರು ಸನಾತನ ಧರ್ಮದ ವಿರುದ್ಧ ನೀಡಿದ ಹೇಳಿಕೆ ಪ್ರಕರಣ

  • ಸ್ಟಾಲಿನ್ ವಿರುದ್ಧ ದೂರು ದಾಖಲಿಸುವುದಕ್ಕಾಗಿ ಅರ್ಜಿ ದಾಖಲು !

ನವ ದೆಹಲಿ – ತಮಿಳುನಾಡು ಸರಕಾರದಲ್ಲಿನ ಹಿಂದೂದ್ರೋಹಿ ಸಚಿವ ಉದಯನಿಧಿ ಸ್ಟಾಲಿನ್ ಇವರು ಸನಾತನ ಧರ್ಮದ ವಿರುದ್ದ ನೀಡಿರುವ ಖೇದಕರ ಹೇಳಿಕೆಯ ಕುರಿತು ವಿಚಾರಣೆ ನಡೆಸುವುದಕ್ಕಾಗಿ ಸರ್ವೋಚ್ಚ ನ್ಯಾಯಾಲಯವು ಒಪ್ಪಿಗೆ ಸೂಚಿಸಿದೆ. ಇದರ ಹಿನ್ನೆಲೆಯಲ್ಲಿ ಉದಯನಿಧಿ ಸ್ಟಾಲಿನ್, ಏ. ರಾಜ ಮತ್ತು ಇತರರಿಗೆ ಸರ್ವೋಚ್ಚ ನ್ಯಾಯಾಲಯ ನೋಟಿಸ ನೀಡಿದೆ, ಹೀಗೆ ಇದ್ದರೂ ನ್ಯಾಯಾಲಯವು ಈ ನೋಟಿಸಿಗೆ ಅವರ ಮೂರು ಜನರಿಂದ ನೀಡಲಾಗಿರುವ ದ್ವೇಷಪೂರಿತ ಹೇಳಿಕೆಯ ವಿರುದ್ಧದ ಮನವಿ ಜೋಡಣೆಗೆ ನಿರಾಕರಿಸಿದೆ.

ಉದಯನಿಧಿ ಸ್ಟಾಲಿನ್ ಇವರು ಸನಾತನ ಧರ್ಮದ ಉಚ್ಛಾಟನೆ ಮಾಡುವ ಹೇಳಿಕೆಯ ವಿರುದ್ಧ ದಾಖಲಿಸಿರುವ ಅರ್ಜಿಯ ವಿಚಾರಣೆಯ ಸಮಯದಲ್ಲಿ ಸರ್ವೋಚ್ಚ ನ್ಯಾಯಾಲಯವು ಈ ನೋಟಿಸ್ ನೀಡಿದೆ. ಅರ್ಜಿದಾರನು ಸ್ಟಾಲಿನ್ ಹಾಗೂ ಸನಾತನ ಧರ್ಮ ಉಚ್ಛಾಟನ ಸಮ್ಮೇಳನದ ಆಯೋಜಕರ ವಿರುದ್ಧ ದೂರು ದಾಖಲಿಸಲು ಆಗ್ರಹಿಸಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯಲ್ಲಿ ಅವರ ಹೇಳಿಕೆ ಸಂವಿಧಾನ ಬಾಹಿರವಾಗಿದ್ದು ಈ ಪ್ರಕರಣದ ತನಿಖೆ ಸಿಬಿಐಗೆ ಒಪ್ಪಿಸಬೇಕು ಎಂದು ಆಗ್ರಹಿಸಲಾಗಿದೆ.

ಸಂಪಾದಕೀಯ ನಿಲುವು

೧೦೦ ಕೋಟಿ ಹಿಂದುಗಳ ದೇಶದಲ್ಲಿ ಅವರ ಧರ್ಮದ ಬಗ್ಗೆ ನೀಡಿರುವ ಪ್ರಚೋದನಕಾರಿ ಹೇಳಿಕೆಯ ವಿರುದ್ಧ ಹಿಂದುಗಳಿಗೆ ಸಾಮಾನ್ಯ ದೂರು ದಾಖಲಿಸಲು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಇದಕ್ಕಿಂತ ನಾಚಿಗೇಡಿನ ವಿಷಯ ಬೇರೆ ಯಾವುದಿದೆ ? ಹಿಂದೂಗಳಿಗೆ ಅವರ ದೇಶದಲ್ಲಿಯೇ ಯಾವುದೇ ಸ್ಥಾನಮಾನ ಉಳಿದಿಲ್ಲ, ಇದೇ ಇದರಿಂದ ತಿಳಿಯುತ್ತದೆ !