ಕೆನಡಾದ ಮಾಜಿ ಅರೋಗ್ಯ ಸಚಿವ ಉಜ್ಜ್ವಲ ದಾಸಾಂಝರವರ ಮನವಿ !
ಒಟಾವಾ (ಕೆನಡಾ) – ಕೆನಡಾದ ಭಾರತೀಯ ಮೂಲದ ಮಾಜಿ ಆರೋಗ್ಯಸಚಿವ ಉಜ್ಜ್ವಲ ದೊಸಂಝರವರು ಕೆನಡಾದಲ್ಲಿಯೇ `ಖಾಲಿಸ್ತಾನ’ ಮಾಡಬೇಕೆಂದು ಮನವಿ ಮಾಡಿದ್ದಾರೆ. ಅವರು `ಪ್ರಧಾನಮಂತ್ರಿ ಟ್ರುಡೊರವರಿಗೆ ಖಾಲಿಸ್ತಾನಿಗಳೊಂದಿಗೆ ಸಂಬಂಧವಿರಬಹುದು’, ಎಂದೂ ಹೇಳಿದರು. ದೊಸಂಝರವರು ಮೂಲತಃ ಪಂಜಾಬಿನಲ್ಲಿರುವ ಜಾಲಂಧರನವರಾಗಿದ್ದಾರೆ. ಅವರು ೨೦೦೪ ರಿಂದ ೨೦೨೫ರ ವರೆಗೆ ಆರೋಗ್ಯಸಚಿವರಾಗಿದ್ದರು.
ಅಲ್ಬರ್ಟಾ ಅಥವಾ ಸಾಸ್ಕಚೆವಾನಿನಲ್ಲಿ ಖಾಲಿಸ್ತಾನ ನಿರ್ಮಿಸಿ !
ಆಂಗ್ಲ ದಿನಪತ್ರಿಕೆಯಲ್ಲಿ ನೀಡಿದ ಸಂದರ್ಶನದಲ್ಲಿ ದೊಸಂಝರವರು ಮಾತನಾಡುತ್ತ, ಕೆನಡಾದಲ್ಲಿ ಸಿಖ್ಖರ ಜನಸಂಖ್ಯೆಯು ಶೇ. ೨ರಷ್ಟಿದೆ. ಇಷ್ಟು ಚಿಕ್ಕ ಸಮುದಾಯ ಖಾಲಿಸ್ತಾನದ ಬೇಡಿಕೆ ಇಡುತ್ತಿದ್ದರೆ ಅದನ್ನು ಕೆನಡಾದ ಅಲ್ಬರ್ಟಾ ಅಥವಾ ಸಾಸ್ಕಚೆವಾನಿನಲ್ಲಿ ಮಾಡಿಕೊಡಬೇಕು. ಇದರಿಂದ ಭಾರತಕ್ಕೆ ಯಾವ ತೊಂದರೆಯಾಗಬಹುದು ?, ಎಂದು ಹೇಳಿದರು.
ಟ್ರುಡೊರವರು ಭಾರತದ ವಿರುದ್ಧ ಸಾಕ್ಷಿಗಳನ್ನು ಒದಗಿಸಬೇಕು !
ಡೊಸಂಝರವರು ಮುಂದುವರೆಸುತ್ತಾ, ಪ್ರಧಾನಮಂತ್ರಿ ಟ್ರುಡೊರವರು ಭಾರತದ ಮೇಲೆ ನಿಜ್ಜರನ ಹತ್ಯೆಯ ಆರೋಪವನ್ನು ಹೊರಿಸುವಾಗ ಯಾವುದೇ ಸಾಕ್ಷಿಗಳನ್ನು ನೀಡಲಿಲ್ಲ. ಅವರು ಪುರಾವೆಗಳನ್ನು ನೀಡುತ್ತಿದ್ದರೆ ಅದು ಇನ್ನೂ ಉತ್ತಮವಾಗಿರುತ್ತಿತ್ತು. ಹೀಗೆ ಮಾಡುವುದರಿಂದ ಪೊಲೀಸ ವ್ಯವಸ್ಥೆಯು ತನಿಖೆಯನ್ನು ಪೂರ್ಣಗೊಳಿಸಿ ಆರೋಪವನ್ನು ಸಾಬೀತು ಮಾಡಬಹುದಿತ್ತು, ಎಂದು ಹೇಳಿದರು.
ಖಾಲಿಸ್ತಾನದ ಬೇಡಿಕೆಯನ್ನಿಡುವ ಕೆನಡಾದಲ್ಲಿನ ಸಿಖ್ಖರು ಎಂದಿಗೂ ಭಾರತಕ್ಕೆ ಹೋಗಿಯೇ ಇಲ್ಲ !
ಅವರು ಖಾಲಿಸ್ತಾನದ ಪ್ರಶ್ನೆಯ ಮೇಲೆ ಮಾತನಾಡುತ್ತ, ಭಾರತದಲ್ಲಿನ ಸಿಖ್ಖರು ಖಾಲಿಸ್ತಾನದ ಮನವಿ ಮಾಡುತ್ತಿಲ್ಲ. ಕೆನಡಾದಲ್ಲಿದ್ದು ಖಾಲಿಸ್ತಾನದ ಮನವಿ ಮಾಡುವವರಲ್ಲಿ ಹೆಚ್ಚಿನ ಸಿಖ್ಖರು ಎಂದಿಗೂ ಭಾರತಕ್ಕೆ ಹೋಗಿಯೇ ಇಲ್ಲ, ಎಂದು ಹೇಳಿದರು.
ಸಂಪಾದಕೀಯ ನಿಲುವುಕೆನಡಾದ ಖಾಲಿಸ್ತಾನಿ ಭಯೋತ್ಪಾದಕರ ಅಭಿವ್ಯಕ್ತಿಸ್ವಾತಂತ್ರ್ಯದ ಪ್ರೇಮಿಯಾಗಿರುವ ಟ್ರುಡೊರವರು ಈ ಮನವಿಯನ್ನು ಪೂರೈಸುವರೇ ? ಹೀಗೆ ಮಾಡಿದರೆ ಅವರಿಗೆ ಅಲ್ಲಿ ಅಡಗಿ ಕುಳಿತಿರುವ ಖಾಲಿಸ್ತಾನಿ ಭಯೋತ್ಪಾದಕರ ಹಾಗೂ ಅವರನ್ನು ಬೆಂಬಲಿಸುವ ಖಾಲಿಸ್ತಾನಿ ಬೆಂಬಲಿಗರ ಒಟ್ಟೂ ಮತ ದೊರೆಯುವುದು ಹಾಗೆಯೇ ಖಲಿಸ್ತಾನದ ಪ್ರಶ್ನೆಯು ಶಾಶ್ವತವಾಗಿ ದೂರವಾಗುವುದು ! |