`ಭಯೋತ್ಪಾದನೆ ಹಾಗೂ ಅಪಹರಣದ ಅಪಾಯವಿರುವುದರಿಂದ ಜಮ್ಮು- ಕಾಶ್ಮೀರ, ಮಣಿಪುರ ಮತ್ತು ಅಸ್ಸಾಂಗೆ ಹೋಗಬಾರದಂತೆ !’ – ಕೆನಡಾದ ಮಾರ್ಗಸೂಚಿ

ಕೆನಡಾವು ತನ್ನ ಜನತೆಗಾಗಿ ಪ್ರಸಾರ ಮಾಡಿರುವ ಮಾರ್ಗಸೂಚಿ !

ಒಟಾವಾ (ಕೆನಡಾ) – ಕೆನಡಾ ಸರಕಾರವು ಭಾರತದ ಜಮ್ಮು-ಕಾಶ್ಮೀರದಲ್ಲಿನ ಸುರಕ್ಷಾ ಪರಿಸ್ಥಿತಿಯನ್ನು ನೋಡಿ ತನ್ನ ಜನತೆಗೆ ಅಲ್ಲಿ ಹೋಗದಿರಲು ಹೇಳಿದೆ. ಹಾಗೆಯೇ ಅಸ್ಸಾಂ ಮತ್ತು ಮಣಿಪುರಕ್ಕೂ ಹೋಗದಿರುವಂತೆ ಸೂಚಿಸಲಾಗಿದೆ. ಕೆನಡಾವು, ಅಲ್ಲಿ ಭಯೋತ್ಪಾದನೆ ಹಾಗೂ ಅಪಹರಣದ ಅಪಾಯವಿರುವುದಾಗಿ ಹೇಳಿದೆ.

`ನಮಗೆ ಒತ್ತಡ ಹೆಚ್ಚಿಸಲಿಕ್ಕಿಲ್ಲ !’ (ಅಂತೆ) – ಪ್ರಧಾನಮಂತ್ರಿ ಟ್ರುಡೊ

ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೊರವರ ಹೊಸ ನಿಲುವು ಬೆಳಕಿಗೆ ಬಂದಿದೆ. ಅವರು, ನಮಗೆ ಈ ಒತ್ತಡ ಹೆಚ್ಚಿಸಲಿಕ್ಕಿಲ್ಲ. ನಮಗೆ ಎಚ್ಚರಿಕೆ ನೀಡುವುದು ಅಥವಾ ವಾದ ಮಾಡಲು ಇಷ್ಟವಿಲ್ಲ. ನಾವು ಕೆಲವು ತಥ್ಯಗಳನ್ನು ಮುಂದೆ ಇಟ್ಟಿದ್ದೇವೆ. ನಮಗೆ ಈ ಅಂಶಗಳ ಮೇಲೆಯೇ ಭಾರತ ಸರಕಾರದೊಂದಿಗೆ ಕೆಲಸ ಮಾಡಲಿಕ್ಕಿದೆ. ಇದರಿಂದ ಎಲ್ಲವೂ ಸ್ಪಷ್ಟವಾಗುವುದು, ಎಂದು ಹೇಳಿದರು. (ಟ್ರುಡೊರವರು ಅವರಿಗೆ ಪ್ರಾಮಾಣಿಕವಾಗಿ ಹೀಗೆ ಅನಿಸುತ್ತಿದ್ದರೆ ಇದರ ಬಗ್ಗೆ ಮೊದಲೇ ಭಾರತದೊಂದಿಗೆ ಅನೌಪಚಾರಿಕವಾಗಿ ಚರ್ಚೆ ಮಾಡಬೇಕಿತ್ತು. ಆದರೆ ಅವರು ಭಾರದೊಂದಿಗೆ ಸೇಡು ತೀರಿಸಿಕೊಳ್ಳಲು ಭಾರತೀಯ ಅಧಿಕಾರಿಗಳನ್ನು ದೇಶ ಬಿಟ್ಟುಹೋಗಲು ಆದೇಶಿಸಿದ್ದಾರೆ, ಇದು ಜಗತ್ತಿಗೂ ಗಮನಕ್ಕೆ ಬಂದಿದೆ ! – ಸಂಪಾದಕರು)

ಕೆನಡಾದಲ್ಲಿರುವ ಭಾರತೀಯರಿಗಾಗಿ ಭಾರತದಿಂದ ಮಾರ್ಗಸೂಚಿ ಜಾರಿ !

ನವ ದೆಹಲಿ – ಖಾಲಿಸ್ತಾನಿ ಭಯೋತ್ಪಾದಕ ಸಂಘಟನೆ ‘ಸಿಖ್ಸ್ ಫಾರ್ ಜಸ್ಟೀಸ್’ ಕೆನಡಾದಲ್ಲಿರುವ ಹಿಂದೂಗಳಿಗೆ ದೇಶ ಬಿಟ್ಟುಹೋಗುವಂತೆ ಬೆದರಿಕೆ ಹಾಕುತ್ತಿರುವ ಹಿನ್ನೆಲೆಯಲ್ಲಿ ಭಾರತ ಕೆನಡಾದಲ್ಲಿರುವ ಭಾರತೀಯರಿಗೆ ಮಾರ್ಗಸೂಚಿ ಜಾರಿ ಮಾಡಿದೆ.

ಭಾರತದ ವಿದೇಶಾಂಗ ಸಚಿವಾಯವು, ಕೆನಡಾದಲ್ಲಿ ಹೆಚ್ಚುತ್ತಿರುವ ಭಾರತ ವಿರೋಧಿ ಘಟನೆಗಳ ಹಿನ್ನೆಲೆಯಲ್ಲಿ ಭಾರತೀಯ ನಾಗರಿಕರು ಮತ್ತು ವಲಸಿಗರು ಜಾಗರೂಕವಾಗಿರುವುದು ಅವಶ್ಯಕವಾಗಿದೆ. ಕೆನಡಾದಲ್ಲಿ ಗೂಂಡಾಗಳು ಭಾರತೀಯ ಉನ್ನತ ಅಧಿಕಾರಿ ಮತ್ತು ಭಾರತೀಯ ನಾಗರಿಕರನ್ನು ಗುರಿಯಾಗಿಸಿಕೊಂಡಿದ್ದರು. ಅದಕ್ಕಾಗಿಯೇ ಈ ಸಲಹೆ ನೀಡಲಾಗುತ್ತಿದೆ ಎಂದು ಹೇಳಿದೆ.

ಟ್ರುಡೊರವರು ಪುರಾವೆಗಳನ್ನು ನೀಡಬೇಕು ! – ಕೆನಡಾದಲ್ಲಿನ ವಿರೋಧ ಪಕ್ಷದ ನಾಯಕರ ಸಲಹೆ

ಪಿಯರೆ ಪೈಲೀಹ್ವರೆ

ಖಾಲಿಸ್ತಾನಿ ಭಯೋತ್ಪಾದಕ ನಿಜ್ಜರರವರ ಹತ್ಯೆಯಿಂದಾಗಿ ಕೆನಡಾ ಮತ್ತು ಭಾರತದ ನಡುವೆ ನಡೆದಿರುವ ವಾದದ ಸಂದರ್ಭದಲ್ಲಿ ಕೆನಡಾದಲ್ಲಿನ ವಿರೋಧ ಪಕ್ಷವು ಪ್ರಧಾನಮಂತ್ರಿ ಟ್ರುಡೊರವರ ಹೇಳಿಕೆಗಿಂತ ಭಿನ್ನವಾಗಿರುವುದು ಕಂಡುಬರುತ್ತದೆ. ಇಲ್ಲಿನ ವಿರೋಧ ಪಕ್ಷದ ನಾಯಕರಾದ ಪಿಯರೆ ಪೈಲೀಹ್ವರೆಯವರು ಟ್ವೀಟ್ ಮಾಡಿ, `ನಮ್ಮ ಪ್ರಧಾನಮಂತ್ರಿಗಳು ಸ್ಫಷ್ಟ ಹಾಗೂ ನೇರವಾಗಿ ಮಾತನಾಡಬೇಕು. ಅವರ ಬಳಿ ಸಾಕ್ಷಿಗಳಿದ್ದರೆ ಅವರು ಅದನ್ನು ಜನತೆಯ ಎದುರು ಮಂಡಿಸಬೇಕು. ಹೀಗೆ ಮಾಡಿದಾಗಲೇ ಯಾರು ಸರಿ ಹಾಗೂ ಯಾರು ತಪ್ಪು ಎಂಬುದನ್ನು ಜನರೇ ನಿರ್ಧರಿಸುವರು. ಆಶ್ಚರ್ಯದ ಸಂಗತಿ ಅಂದರೆ ಟ್ರುಡೊರವರು ಯಾವುದೇ ತಥ್ಯವನ್ನು ಮಂಡಿಸುತ್ತಿಲ್ಲ. ಅವರು ಕೇವಲ ಹೇಳಿಕೆಗಳನ್ನು ನೀಡುತ್ತಿದ್ದಾರೆ, ಇದನ್ನು ಯಾರು ಬೇಕಾದರೂ ಮಾಡಬಹುದು, ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಕೆನಡಾದಲ್ಲಿನ ಹಿಂದೂಗಳ ದೇವಸ್ಥಾನಗಳ ಮೇಲೆ ಖಾಲಿಸ್ತಾನವಾದಿಗಳಿಂದ ಸತತವಾಗಿ ಅಕ್ರಮಣಗಳಾಗುತ್ತಿರುವಾಗ ಈಗ ಭಾರತವೂ ಇಂತಹ ಮಾರ್ಗಸೂಚಿಯನ್ನು ಪ್ರಸಾರ ಮಾಡಿ ಕೆನಡಾಗೆ ಬುದ್ಧಿ ಕಲಿಸಬೇಕು !