ಯುನೈಟೆಡ್‌ ಅರಬ್‌ ಎಮಿರೇಟ್ಸ್ ವು ಭಾರತದ ನಕ್ಷೆಯಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಭಾರತದಲ್ಲಿ ತೋರಿಸಿದ್ದಕ್ಕೆ ಕಿಡಿಕಾರಿದ ಪಾಕಿಸ್ತಾನ !

ಯುನೈಟೆಡ್‌ ಅರಬ್‌ ಎಮಿರೇಟ್ಸ್ ಬಳಿ ಉತ್ತರ ಕೇಳಿತು !


ಇಸ್ಲಾಮಾಬಾದ್‌ (ಪಾಕಿಸ್ತಾನ್) – ಯುನೈಟೆಡ್‌ ಅರಬ್‌ ಎಮಿರೇಟ್‌ನ ಉಪಪ್ರಧಾನಿ ಸೈಫ್‌ ಬಿನ್‌ ಜಾಯದ್‌ ಅಲ್‌ ನಾಹಯಾನ್‌ ಇವರು ಸೆಪ್ಟೆಂಬರ್‌ ೧೦ ರಂದು ಒಂದು ವಿಡಿಯೋ ಪ್ರಸಾರ ಮಾಡಿ ಭಾರತ-ಮಧ್ಯ-ಪ್ರಾಚ್ಯ ದೇಶಗಳು-ಯುರೋಪ್‌-ಅಮೇರಿಕಾ ನಡುವಿನ ಅಂತರರಾಷ್ಟ್ರೀಯ ಆರ್ಥಿಕ ಹೆದ್ದಾರಿಯ ನಕ್ಷೆಯನ್ನು ತೋರಿಸಿತ್ತು. ಅದರಲ್ಲಿ ಪಾಕಿಸ್ತಾನ್ ಆಕ್ರಮಿತ ಕಾಶ್ಮೀರ್ ಮತ್ತು ಅಕ್ಸಾಯಿ ಚೀನಾ ಈ ಭಾಗಗಳನ್ನು ಭಾರತದಲ್ಲಿ ತೋರಿಸಿದೆ. ಅಂತರರಾಷ್ಟ್ರೀಯ ವೇದಿಕೆಯ ಯಾವುದಾದರೊಂದು ನಕ್ಷೆಯನ್ನು ಪ್ರದರ್ಶಿಸುವಾಗ ವಿವಾದಾತ್ಮಕ ಭಾಗವನ್ನು ಬೇರೆಯೇ ತೋರಿಸಲಾಗುತ್ತದೆ; ಆದರೆ ಇದರಲ್ಲಿ ಈ ಎರಡೂ ಭಾಗಗಳನ್ನು ಭಾರತದಲ್ಲಿ ತೋರಿಸಿದ ಕಾರಣ ಪಾಕಿಸ್ತಾನವು ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನ ಬಳಿ ಉತ್ತರ ಕೇಳಿದೆ. ವಿಶೇಷವೆಂದರೆ ಈ ಬಗ್ಗೆ ಚೀನಾ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ. ದೆಹಲಿಯಲ್ಲಿ ನಡೆದ ‘ಜಿ-೨೦ ಶೃಂಗ ಸಭೆಯಲ್ಲಿಯೂ ಇದೇ ನಕ್ಷೆಯನ್ನು ತೋರಿಸಲಾಗಿತ್ತು, ಆಗಲೂ ಚೀನಾ ಯಾವುದೇ ಅಕ್ಷೇಪ ವ್ಯಕ್ತಪಡಿಸಿರಲಿಲ್ಲ. ಯುನೈಟೆಡ್‌ ಅರಬ್‌ ಎಮಿರೇಟ್ಸ್ ಪಾಕಿಸ್ತಾನದ ಆಕ್ಷೇಪವನ್ನು ದುರ್ಲಕ್ಷಿಸಿದೆ. ಇದಕ್ಕೂ ಮೊದಲು ೨೦೧೯ ರಲ್ಲಿ ಭಾರತವು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಕಲಂ ೩೭೦ ರದ್ದು ಪಡಿಸಿದ ನಂತರ ಯುನೈಟೆಡ್‌ ಅರಬ್‌ ಎಮಿರೇಟ್ಸ್ ಅದನ್ನು ಭಾರತದ ಆಂತರಿಕ ವಿಷಯವೆಂದು ಹೇಳುತ್ತಾ ಅದಕ್ಕೆ ಯಾವುದೇ ಪ್ರತಿಕ್ರಿಯೆಯನ್ನು ವ್ಯಕ್ತ ಪಡಿಸಿರಲಿಲ್ಲ.

(ಸೌಜನ್ಯ – newsx)

ಸಂಪಾದಕೀಯ ನಿಲುವು

ಯುನೈಟೆಡ್‌ ಅರಬ್‌ ಎಮಿರೇಟ್ಸ್ ಬಳಿ ಉತ್ತರವನ್ನು ಪಡೆಯುವ ಯೋಗ್ಯತೆ ಪಾಕಿಸ್ತಾನಕ್ಕೆ ಇದೆಯೇ ? ಯಾವುದು ಸತ್ಯ ಇದೆ ಅದನ್ನು ಒಪ್ಪಿಕೊಂಡರೆ, ಅದರಲ್ಲಿ ತಪ್ಪೇನು ?