ಕೆನಡಾವು ಭಾರತದೊಂದಿಗಿನ ಮುಕ್ತ ವ್ಯಾಪಾರದ ಬಗೆಗಿನ ಚರ್ಚೆಯನ್ನು ಮುಂದೂಡಿತು !

ಎಲ್ಲಿಯ ವರೆಗೆ ಖಲಿಸ್ತಾನಿಗಳ ಮೇಲೆ ಕಾರ್ಯಾಚರಣೆಯಾಗುವುದಿಲ್ಲವೋ ಅಲ್ಲಿಯವೆರೆಗೆ ಚರ್ಚೆ ಮುಂದುವರಿಯುವುದಲ್ಲ ! – ಭಾರತದ ಧೋರಣೆ

ಒಟಾವಾ (ಕೆನಡಾ) – ಕೆನಡಾವು ಭಾರತದೊಂದಿಗಿನ ಮುಕ್ತ ವ್ಯಾಪಾರದ ಮೇಲಿನ ಚರ್ಚೆಯನ್ನು ಮುಂದೂಡಿದೆ. ಕೆನಡಾದ ವ್ಯಾಪಾರ ಸಚಿವಾಲಯದ ವಕ್ತಾರರು ಇದನ್ನು ನಿರ್ಲಕ್ಷಿಸಿದ್ದರೂ ಇದರ ಹಿಂದಿನ ಕಾರಣವನ್ನು ತಿಳಿಸಿಲ್ಲ. ಈ ಚರ್ಚೆಯ ಸಂದರ್ಭದಲ್ಲಿ ಓರ್ವ ಭಾರತೀಯ ಅಧಿಕಾರಿಯು, ‘ಎರಡೂ ದೇಶಗಳ ನಡುವಿನ ವ್ಯಾಪಾರಕ್ಕೆ ಸಂಬಂಧಿಸಿದ ಚರ್ಚೆಯು ಇತರ ಸಮಸ್ಯೆಗಳು ದೂರವಾದ ನಂತರವೇ ಆಗುವುದು. ಕೆನಡಾದಲ್ಲಿ ಇಂತಹ ಕೆಲವು ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದವು, ಇದನ್ನು ಭಾರತವು ಆಕ್ಷೇಪಿಸಿದೆ. ಇವು ದೂರವಾಗುವ ವರೆಗೆ ಕೆನಡಾದೊಂದಿಗಿನ ವ್ಯಾಪಾರ ಒಪ್ಪಂದದ ಚರ್ಚೆಯು ಸ್ಥಗಿತಗೊಂಡಿದೆ, ಎಂದು ಹೇಳಿದರು.

ದೆಹಲಿಯಲ್ಲಿ ಸಪ್ಟೆಂಬರ ೧೦ರಂದು ಜಿ-೨೦ ಪರಿಷತ್ತಿನ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕೆನಡಾದ ಪ್ರಧಾನಿ ಜಸ್ಟಿನ ಟ್ರುಡೊರವರೊಂದಿಗೆ ಚರ್ಚೆಯಲ್ಲಿ ಕೆನಡಾದಲ್ಲಿನ ಖಲಿಸ್ತಾನಿಗಳ ಭಾರತವಿರೋಧಿ ಕಾರ್ಯಾಚರಣೆಗಳ ಸಂದರ್ಭದಲ್ಲಿ ಕಠೋರಕ್ರಮ ಕೈಗೊಳ್ಳಲು ತಿಳಿಸಲಾಗಿತ್ತು. ಅನಂತರ ಕೇವಲ ೬ ದಿನಗಳಲ್ಲಿ ಕೆನಡಾ ಭಾರತದೊಂದಿಗಿನ ಚರ್ಚೆಯನ್ನು ಮುಂದೂಡಿದೆ. ಕೆನಡಾದೊಂದಿಗಿನ ೧೦ ವರ್ಷಗಳ ಮುಕ್ತ ವ್ಯಾಪಾರದ ಒಪ್ಪಂದಕ್ಕಾಗಿ ಚರ್ಚೆ ನಡೆಯುತ್ತಿದೆ.

ಸಂಪಾದಕೀಯ ನಿಲುವು

ಕೆನಡಾದ ಪ್ರಧಾನಿ ಜಸ್ಟಿನ ಟ್ರುಡೊರವರ ಭಾರತದ್ವೇಷಿ ಹಾಗೂ ಖಲಿಸ್ತಾನಪ್ರೇಮಿ ಮಾನಸಿಕತೆಯು ಎಲ್ಲಿಯವರೆಗೆ ನಷ್ಟ ಆಗುವುದಿಲ್ಲವೋ ಅಲ್ಲಿಯವೆರೆಗೆ ಕೆನಡಾದಿಂದ ಯಾವುದೇ ಅಪೇಕ್ಷೆಯನ್ನಿಡುವುದು ವ್ಯರ್ಥವೇ ಆಗಿದೆ !