‘ಪಾಕಿಸ್ತಾನ ಏರ್ ಲೈನ್ಸ್’ ಕೊನೆಗೊಳ್ಳುವ ಹಾದಿಯಲ್ಲಿ !

  • ಸೇವೆಯನ್ನು ಮುಂದುವರಿಸಲು 636 ಕೋಟಿ ರೂಪಾಯಿಗಳ ಆವಶ್ಯಕತೆ !

  • 20 ಸಾವಿರ ಕೋಟಿ ರೂಪಾಯಿಗಳಷ್ಟು ಸಾಲ !

ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ‘ಪಾಕಿಸ್ತಾನ್ ಇಂಟರ್ನ್ಯಾಶನಲ್ ಏರ್ಲೈನ್ಸ್’ (ಪಿಐಎ) ಕೊನೆಗೊಳ್ಳುವ ಮಾರ್ಗದಲ್ಲಿದೆ. ಈ ಸೇವೆಯನ್ನು ಸಮರ್ಪಕವಾಗಿ ಮುನ್ನಡೆಸಲು ಸುಮಾರು 636 ಕೋಟಿ ರೂಪಾಯಿಗಳ ಆವಶ್ಯಕತೆಯಿದೆ. ಈ ಸಂಸ್ಥೆಯು 20 ಸಾವಿರ ಕೋಟಿ ರೂಪಾಯಿಗಳ ಸಾಲ ಮಾಡಿಕೊಂಡಿದ್ದೂ ಇದು ಅದರ ಒಟ್ಟು ಆಸ್ತಿಗಿಂತ 5 ಪಟ್ಟು ಹೆಚ್ಚಾಗಿದೆ.

1. ಸಧ್ಯಕ್ಕೆ ಈ ಸಂಸ್ಥೆಯು ಗುತ್ತಿಗೆ ಪಡೆದ 13 ವಿಮಾನಗಳಲ್ಲಿ 5 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದ್ದು, ಇನ್ನೂ 4 ವಿಮಾನಗಳ ಹಾರಾಟವನ್ನು ರದ್ದುಗೊಳಿಸುವ ಸಾಧ್ಯತೆಯಿದೆ. ಇಂಧನ ತುಂಬಿಸದ ಕಾರಣ ಹಲವಾರು ಗಲ್ಫ್ ರಾಷ್ಟ್ರಗಳಲ್ಲಿ ಈ ಸಂಸ್ಥೆಗಳ ವಿಮಾನ ಹಾರಾಟಗಳನ್ನು ಸ್ಥಗಿತಗೊಳಿಸಲಾಗಿದೆ.

ಈ ಸಂಸ್ಥೆಯ ವಿಮಾನಗಳನ್ನು ಸಂಯುಕ್ತ ಅರಬ ಎಮಿರಾಟ್ಸ ಮತ್ತು ಸೌದಿ ಅರೇಬಿಯಾ ದೇಶಗಳು ಹಾರಾಟವನ್ನು ನಿಷೇಧಿಸಿವೆ.

2. ಪಾಕಿಸ್ತಾನದ `ಜಿಯೋ ನ್ಯೂಸ್’ ಪ್ರಕಾರ, ಪಿ.ಐ.ಎ. ನಿರ್ದೇಶಕರು, ಒಂದು ವೇಳೆ ತುರ್ತು ನಿಧಿಯನ್ನು ನಿಗದಿತ ಸಮಯದಲ್ಲಿ ನೀಡದಿದ್ದರೆ, ಸೆಪ್ಟೆಂಬರ್ 15 ರ ವರೆಗೆ ನಏರ್ ಲೈನ್ಸ್’ನ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

3. ಈ ಹಿಂದೆ, ಪಿ.ಐ.ಎ.ಯು, ‘ಬೋಯಿಂಗ್ ಮತ್ತು ಏರ್ಬಸ್ ಕಂಪನಿಗಳು ವಿಮಾನದ ಬಿಡಿಭಾಗಗಳ ಪೂರೈಕೆಯನ್ನು ಸೆಪ್ಟೆಂಬರ್ ಮಧ್ಯದ ವೇಳೆಗೆ ಸ್ಥಗಿತಗೊಳಿಸಬಹುದು’ ಎಂದು ಹೇಳಿತ್ತು. ಇದರ ಕಾರಣವೆಂದರೆ ಪಿ.ಐ.ಎ. ಈ ಸಂಸ್ಥೆಗಳ ಹಿಂದಿನ ಬಾಕಿಯನ್ನು ಪಾವತಿಸಿಲ್ಲ.

4. ‘ಪಾಕಿಸ್ತಾನ್ ಟುಡೆ’ ಸುದ್ದಿಯನುಸಾರ ಇಂಧನದ ಹಣ ಪಾವತಿಸಲು ಅಸಮರ್ಥರಾಗಿರುವ ಕಾರಣ ಸೌದಿ ಅರೇಬಿಯಾ ಮತ್ತು ದುಬೈ ವಿಮಾನ ನಿಲ್ದಾಣಗಳಿಗೆ ಪಿ.ಐ.ಎ. ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿತ್ತು; ಆದರೆ ಪಿ.ಐ.ಎ. ಹಣ ಪಾವತಿಸುವುದಾಗಿ ಲಿಖಿತ ಭರವಸೆ ನೀಡಿದ ಬಳಿಕ ವಿಮಾನಗಳನ್ನು ಪುನರಾರಂಭಿಸಲಾಯಿತು.

5. ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಪಾಕಿಸ್ತಾನವು ಇಸ್ಲಾಮಾಬಾದ್ ವಿಮಾನನಿಲ್ದಾಣವನ್ನು ಬಾಡಿಗೆಗಾಗಿ ನೀಡಲು ನಿರ್ಧರಿಸಿದೆ. ಪಾಕಿಸ್ತಾನದ ವಾಯು ಸಾರಿಗೆ ಸಚಿವ ಖ್ವಾಜಾ ಸಾದ ರಫಿಕ ಇವರು ಸಂಸತ್ತಿನಲ್ಲಿ ಈ ಮಾಹಿತಿಯನ್ನು ನೀಡಿದ್ದರು.

ಸಂಪಾದಕೀಯ ನಿಲುವು

ಇದು ಜಿಹಾದಿ ಭಯೋತ್ಪಾದನೆಯನ್ನು ನಿರ್ಮಿಸಲು ಹಣವನ್ನು ವೆಚ್ಚ ಮಾಡಿರುವುದರ ಪರಿಣಾಮ !

‘ಭಾರತದ ವಿರುದ್ಧ ಹೋರಾಡಲು ಅಣುಬಾಂಬ್ ತಯಾರಿಸಲು ಹುಲ್ಲನ್ನು ತಿನ್ನಬೇಕಾಗಿ ಬಂದರೂ ನಡೆಯುತ್ತದೆ’ ಎಂದು ಅಹಂಕಾರದಿಂದ ಪಾಕಿಸ್ತಾನವು ಅಣುಬಾಂಬುಗಳನ್ನು ತಯಾರಿಸಿದ್ದರೂ, ಈಗ ಅಲ್ಲಿಯ ನಾಗರಿಕರಿಗೆ ಹುಲ್ಲನ್ನು ತಿನ್ನುವ ಸಮಯವೇ ಬಂದಿದೆ !