ಪ್ರವಚನಕ್ಕೆ ಬಂದ ಜಿಜ್ಞಾಸುಗಳು ಪ್ರವಚನದತ್ತ ಗಮನಹರಿಸಬೇಕು ಮತ್ತು ಸಾಧಕರು ತಮಗೆ ಬರುವ ಅನುಭೂತಿಗಳತ್ತ ಗಮನ ಹರಿಸಬೇಕು !
ವರ್ಷ ೧೯೯೭-೯೮ ರಲ್ಲಿ ಮಹಾರಾಷ್ಟ್ರದ ಅನೇಕ ಜಿಲ್ಲೆಗಳಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಸಾರ್ವಜನಿಕ ಸಭೆಗಳು ನಡೆದವು. ಸಭೆಯ ಆರಂಭದಲ್ಲಿ ಅವರು ಮುಂದಿನ ಅಂಶಗಳನ್ನು ಹೇಳುತ್ತಿದ್ದರು. ‘ಇಂದಿನ ಪ್ರವಚನಕ್ಕೆ ಬಂದ ಜಿಜ್ಞಾಸುಗಳು ‘ನಾನು ಏನು ಹೇಳುತ್ತೇನೆ ?’, ಅದರತ್ತ ಗಮನ ಹರಿಸಬೇಕು. ಸಾಧಕರು ನಾನು ಶಬ್ದಗಳಲ್ಲಿ ಏನು ಹೇಳುತ್ತೇನೆ ?’, ಅದಕ್ಕಿಂತ ‘ಏನಾದರೂ ಅನುಭೂತಿಗಳು ಬರುತ್ತಿವೆಯಾ ?
ಉದಾ. ಪ್ರಕಾಶ ಕಾಣಿಸುವುದು, ನಾದ ಕೇಳಿಸುವುದು’ ಇತ್ಯಾದಿಗಳ ಕಡೆ ಗಮನಕೊಡಬೇಕು. ಶಬ್ದದಲ್ಲಿರುವ ಜ್ಞಾನವು ಮೆದುಳಿನ ಕೋಶಗಳಲ್ಲಿ ಸಂಗ್ರಹವಾಗುತ್ತದೆ. ಸಾವಿನ ನಂತರ ಕೋಶಗಳು ಸುಟ್ಟು ಹೋಗಿ ಮುಂದಿನ ಜನ್ಮದಲ್ಲಿ ಮತ್ತೆ ಆರಂಭ ಮಾಡಬೇಕಾಗುತ್ತದೆ. ಆದರೆ ಈ ಜನ್ಮದ ಅನುಭೂತಿಗಳು ಮಾತ್ರ ಜೀವಾತ್ಮಕ್ಕೆ ಬರುವ ಕಾರಣ ಅವು ಮುಂದಿನ ಜನ್ಮದಲ್ಲಿ ನಮ್ಮ ಜೊತೆಗೆ ಬರುತ್ತವೆ.’ – (ಪರಾತ್ಪರ ಗುರು) ಡಾ. ಆಠವಲೆ
(ಸಂಗ್ರಾಹಕರು : ಆಧುನಿಕ ವೈದ್ಯ (ಡಾ.) ಮಂಗಲ ಕುಮಾರ ಕುಲಕರ್ಣಿ, ಸನಾತನ ಆಶ್ರಮ, ದೇವದ, ಪನವೇಲ. (೬.೬.೨೦೨೩)