|
ಹಾಪುಡ (ಉತ್ತರಪ್ರದೇಶ) – ಇಲ್ಲಿಯ ತತಾರಪುರ ಗ್ರಾಮದಲ್ಲಿನ ಸೇಂಟ್ ಅಂತೋನಿ ಮಾಧ್ಯಮಿಕ ಶಾಲೆಯಲ್ಲಿನ ಶಿಕ್ಷಕರಿಂದ ಹಿಂದೂ ವಿದ್ಯಾರ್ಥಿಗಳ ಹಳೆಯ ಮೇಲಿನ ಬೊಟ್ಟು ಅಳಿಸಿರುವ ಬಗ್ಗೆ ಅವರ ಪೋಷಕರು ಶಾಲೆಗೆ ದೂರು ನೀಡಿದರು. ಈ ಶಿಕ್ಷಕರು ದೇವತೆಗಳ ಅವಮಾನ ಮಾಡುತ್ತಾ ವಿದ್ಯಾರ್ಥಿಗಳಿಗೆ ಕ್ರೈಸ್ತ ಧರ್ಮ ಸ್ವೀಕರಿಸುವುದಕ್ಕಾಗಿ ಆಮಿಷ ಒಡ್ಡಿದರು. ಈ ಸಂದರ್ಭದಲ್ಲಿ ಮನೆಯಲ್ಲಿ ಹೇಳಿದರೆ ಶಾಲೆಯಿಂದ ತೆಗೆದ ಹಾಕಲಾಗುವುದೆಂದು ಶಿಕ್ಷಕರು ವಿದ್ಯಾರ್ಥಿಗಳಿಗೆ ಬೆದರಿಕೆ ನೀಡಿದ್ದರು. ಈ ಘಟನೆಯ ಮಾಹಿತಿ ಸಿಗುತ್ತಲೇ ಹಿಂದುತ್ವನಿಷ್ಠ ಸಂಘಟನೆಯ ಕಾರ್ಯಕರ್ತರು ಶಾಲೆಯ ಹೊರಗೆ ಸೇರಿದರು. ಪೋಷಕರು ಮತ್ತು ಹಿಂದೂ ಸಂಘಟನೆಗಳ ವಿರೋಧದ ನಂತರ ಶಾಲೆಯ ವ್ಯವಸ್ಥಾಪಕರು ಆರೋಪಿ ಶಿಕ್ಷಕರನ್ನು ಮುಂದೆ ಕರೆಸಿ ಅವರಿಂದ ಈ ರೀತಿಯ ಕೃತಿ ಮತ್ತೆ ನಡೆಯದ ಹಾಗೆ ಪ್ರಮಾಣ ಪಡೆದು ಶಿಕ್ಷಕರಿಗೆ ಕ್ಷಮೆ ಯಾಚಿಸಲು ಹೇಳಿದರು. ಹಿಂದೂ ಸಂಘಟನೆಗಳು, ಶಾಲೆಯ ವ್ಯವಸ್ಥಾಪಕರು ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
೧. ವಿಶ್ವ ಹಿಂದೂ ಪರಿಷತ್ತಿನ ನಾಯಕ ಗಿರೀಶ ತ್ಯಾಗಿ ಇವರು, ಶಾಲೆಯಲ್ಲಿ ಕ್ರೈಸ್ತ ಮಿಶನರಿಗಳಿಗೆ ಸಂಬಂಧಿಸಿದ ಜನರು ವಿದ್ಯಾರ್ಥಿಗಳ ಮತಾಂತರ ಮಾಡಲು ಪ್ರಯತ್ನ ಮಾಡುತ್ತಾರೆ. ವಿದ್ಯಾರ್ಥಿಗಳಿಗೆ ಮಾನಸಿಕ ಕಿರುಕುಳ ನೀಡಲಾಗುತ್ತದೆ ಎಂದು ಆರೋಪಿಸಿದ್ದಾರೆ. ಹಾಗೂ ಶಾಲೆಯ ಆಡಳಿತದಿಂದ ಸಂಬಂಧಿಕರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
೨. ಪೋಷಕರು ಇದರ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿಗಳ ಬಳಿ ಆನ್ಲೈನ್ ನಲ್ಲಿ ದೂರು ನೀಡಿದ್ದಾರೆ. ಹಾಗೂ ‘ಚೈಲ್ಡ್ ವೆಲ್ಫೇರ್ ಅಸೋಸಿಯೇಷನ್’ ಮತ್ತು ಪ್ರಾಥಮಿಕ ಶಿಕ್ಷಣ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಹಾಪುಡದ ಹೆಚ್ಚುವರಿ ಪೊಲೀಸ ಅಧಿಕಾರಿ ಮುಕೇಶ ಚಂದ ಇವರು, ನಾವು ವಿಚಾರಣೆ ನಡೆಸಿ ಸಂಬಂಧಿಸಿದ ಮೇಲೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುವೆವು ಎಂದು ಹೇಳಿದ್ದಾರೆ.
UP: St. Anthony School in Hapur forces students to remove rakhis, rub off tilak from forehead, complaint filedhttps://t.co/JpdVBxLmM4
— HinduPost (@hindupost) September 14, 2023
ಸಂಪಾದಕೀಯ ನಿಲುವು
|