ಸಾಧಕರ ಸಾಧನೆಯಾಗಲು ಅಪಾರ ಕಷ್ಟಪಡುವ, ಸಾಧಕರಿಗೆ ತಮ್ಮ ಅಮೂಲ್ಯ ಸಹವಾಸವನ್ನು ನೀಡಿ ಮತ್ತು ಕಾಲಕಾಲಕ್ಕೆ ಆಧಾರವನ್ನು ನೀಡಿ ಅವರನ್ನು ರೂಪಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

‘೧೯೮೪ ರಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ನನ್ನ ಜೀವನದಲ್ಲಿ ಬಂದು ಅವರು ನನಗೆ ಪ್ರತ್ಯಕ್ಷ ಸಹವಾಸವನ್ನು ನೀಡಿದರು. ಅವರು ನನಗೆ ಪುನಃಪುನಃ ಸಾಧನೆಯನ್ನು ಹೇಳಿ ನನ್ನಿಂದ ಅದನ್ನು ಮಾಡಿಸಿಕೊಳ್ಳಲು ಪ್ರಯತ್ನಿಸಿದರು. ಅದಕ್ಕಾಗಿ ಅವರು ನನಗೆ ವಿವಿಧ ಅವಕಾಶಗಳನ್ನು ಒದಗಿಸಿ ಕೊಟ್ಟರು. ಗುರುಗಳಲ್ಲಿ ಮತ್ತು ದೇವರಲ್ಲಿ ದೃಢ ಶ್ರದ್ಧೆ ಬರಲು ಅವರು ನನಗೆ ದಿವ್ಯ ಅನುಭೂತಿಯನ್ನು ಕೊಟ್ಟರು. ನನ್ನ ಅನೇಕ ಗಂಭೀರ ತಪ್ಪುಗಳನ್ನು ಮಾತೃವಾತ್ಸಲ್ಯದಿಂದ ಹೊಟ್ಟೆಯಲ್ಲಿ ಹಾಕಿಕೊಂಡರು. ಅವರು ನನ್ನನ್ನು ಎಂದಿಗೂ ದೂರವಿಡಲಿಲ್ಲ. ಇದುವರೆಗೆ ಪ.ಪೂ. ಗುರುದೇವರು ನನಗೆ ನೀಡಿದ ಅನೇಕ ಅನುಭೂತಿಗಳು ಮತ್ತು ನನ್ನಿಂದ ಮಾಡಿಸಿಕೊಂಡಿರುವ ಸಾಧನೆಯ ಪ್ರಯತ್ನಗಳನ್ನು ನಾನು ಕೃತಜ್ಞತೆಯಿಂದ ಅವರ ಚರಣಗಳಲ್ಲಿ ಅರ್ಪಿಸುತ್ತೇನೆ. ೨೪/೫೧ ರ ಸಂಚಿಕೆಯಲ್ಲಿ ಪರಮಪೂಜ್ಯ ಡಾಕ್ಟರರ ಪರಿಚಯ, ಪರಮಪೂಜ್ಯ ಡಾಕ್ಟರ್‌ ರ ಸಹವಾಸ ಮೊದಲ ಭಾಗ ನೋಡಿದೆವು. ಇಂದು ಈ ಲೇಖನದ ಅಂತಿಮ ಭಾಗ ನೋಡೋಣ .

ಭಾಗ – ೨

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

೪. ಅನುಭೂತಿಗಳು

೪ ಅ. ಗುರುಪೂರ್ಣಿಮೆಯ ಉತ್ಸವದ ಸಮಯದಲ್ಲಿ ಜವಾಬ್ದಾರ ಸಾಧಕರು ಹೇಳಿದಂತೆ ಛಾಯಾಚಿತ್ರ ತೆಗೆಯುವುದು ಮತ್ತು ಸ್ವಂತ ಮನಸ್ಸಿನಿಂದ ತೆಗೆದ ಛಾಯಾಚಿತ್ರಗಳು ಸರಿಯಾಗಿ ಬರದಿರುವುದು : ೧೯೯೮ ರಲ್ಲಿ ಪಾಚಾಲದಲ್ಲಿ ಸನಾತನ ಸಂಸ್ಥೆಯ ಗುರುಪೂರ್ಣಿಮಾ ಉತ್ಸವವು ನಡೆಯಿತು. ಆ ಸಮಯದಲ್ಲಿ ಜವಾಬ್ದಾರ ಸಾಧಕರು ಆಯ್ದ ಛಾಯಾಚಿತ್ರಗಳನ್ನು ತೆಗೆಯಲು ಹೇಳಿದ್ದರು; ಆದರೆ ನಾವು ಕೇಳಲಿಲ್ಲ ಮತ್ತು ಬಹಳ ಛಾಯಾಚಿತ್ರಗಳನ್ನು ತೆಗೆದೆವು. ಆಗ ಜವಾಬ್ದಾರ ಸಾಧಕರು ಹೇಳಿ ದ್ದಷ್ಟು ಛಾಯಾಚಿತ್ರಗಳು ಮಾತ್ರ ಒಳ್ಳೆಯ ರೀತಿಯಲ್ಲಿ ಬಂದಿ ದ್ದವು, ಇತರ ಛಾಯಾಚಿತ್ರಗಳು ಒಳ್ಳೆಯ ರೀತಿಯಲ್ಲಿ ಬಂದಿರ ಲಿಲ್ಲ. ಆ ಸಮಯದಲ್ಲಿ ಗುರುದೇವರು ನನಗೆ ಸಾಧನೆಯಲ್ಲಿ ಆಜ್ಞಾಪಾಲನೆಗಿರುವ ಮಹತ್ವದ ಅರಿವು ಮಾಡಿಕೊಟ್ಟರು.

೪ ಆ. ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಜೊತೆ ಸುಖಾಸನದ ಮೇಲೆ ಕುಳಿತುಕೊಳ್ಳುವ ತಪ್ಪು ಮಾಡುವುದು ಮತ್ತು ಆದರೂ ಅಲ್ಲಿಂದ ಹೊರಡುವಾಗ ಗುರುದೇವರು ಪ್ರೀತಿ ಯಿಂದ ಬೆನ್ನ ಮೇಲೆ ಕೈ ಆಡಿಸುವುದು : ಸಾಧನೆಗೆ ಬಂದ ನಂತರ ನಾನು ಒಮ್ಮೆ ಮುಂಬಯಿಯ ಸೇವಾಕೇಂದ್ರಕ್ಕೆ ಹೋಗಿದ್ದೆ. ಅಲ್ಲಿ ಶ್ರೀ. ಆಠಲೆಕರ ಕಾಕಾ ಮತ್ತು ಶ್ರೀ. ರಾಜಾರಾಮ ಪಾಧ್ಯೆ (ಆಧ್ಯಾತ್ಮಿಕ ಮಟ್ಟ ಶೇ. ೬೨) ಇವರ ಜೊತೆಗೆ ನಾನು ಗುರುದೇವರು ಸೇವೆ ಮಾಡುವ ಸ್ಥಳಕ್ಕೆ ಹೋದೆ. ಅಲ್ಲಿ ಗುರುದೇವರು ಸುಖಾಸನದಲ್ಲಿ ಕುಳಿತಿದ್ದರು. ಗುರುದೇವರು ನಮ್ಮನ್ನು ಪ್ರೀತಿಯಿಂದ ಬರಮಾಡಿಕೊಂಡರು ಮತ್ತು ಕುಳಿತುಕೊಳ್ಳಲು ಹೇಳಿದರು. ನಾನು ಗುರುದೇವರ ಪಕ್ಕದಲ್ಲಿ ಸುಖಾಸನದಲ್ಲಿ ಕುಳಿತೆ ಮತ್ತು ಎದುರಿನ ಆಸನದ ಮೇಲೆ ಶ್ರೀ. ರಾಜಾರಾಮ ಪಾಧ್ಯೆ ಕುಳಿತರು. ಆ ಸಮಯದಲ್ಲಿ ನನಗೆ ಸಂತರು ಮತ್ತು ಗುರುಗಳ ಜೊತೆಗೆ ಹೇಗೆ ವರ್ತಿಸಬೇಕು ? ಇದು ಗೊತ್ತಿರಲಿಲ್ಲ. ಆಗ ಗುರುದೇವರು, ನಾವು ಈಶ್ವರಿ ರಾಜ್ಯ ತರಲಿಕ್ಕಿದೆ ಎಂದು ಹೇಳಿದರು. ಏನಾದರೂ ಮಾತನಾಡಬೇಕೆಂದು ನಾನು ಹೇಳಿದೆ, ‘ಈಶ್ವರಿ ರಾಜ್ಯ ಭಾರತದಲ್ಲಿಯೇ ಬರುವುದೋ ಅಥವಾ ಸಂಪೂರ್ಣ ಜಗತ್ತಿನಲ್ಲಿ ಬರಲಿದೆ ?’ ಆ ಸಮಯದಲ್ಲಿ ಗುರುದೇವರು ಹೇಳಿದರು, ‘ನಮಗೇನು ಮಾಡಲಿಕ್ಕಿದೆ, ಭಾರತದ್ದು ಮಾತ್ರ ಯೋಚನೆ ಮಾಡೋಣ’.

ಶ್ರೀ. ಗಜಾನನ ಮುಂಜ

ನಾನು ಅವರ ಪಕ್ಕದಲ್ಲಿ ಸುಖಾಸನದ ಮೇಲೆ ಕುಳಿತಿದ್ದೆ, ಅನಾವಶ್ಯಕವಾಗಿ ಏನೇನೋ ಮಾತನಾಡಿದೆ, ಆದರೂ ಕೂಡ ಅಲ್ಲಿಂದ ಹೊರಡುವಾಗ ಗುರುದೇವರು ಮಾತೃವಾತ್ಸಲ್ಯದಿಂದ ನನ್ನ ಮತ್ತು ಶ್ರೀ. ಪಾಧ್ಯೆ ಇವರ ಬೆನ್ನ ಮೇಲೆ ಕೈ ಆಡಿಸಿದರು. ಇಂದಿಗೂ ಆ ದೇವರ ವಾತ್ಸಲ್ಯದ ಸ್ಪರ್ಶ ನನ್ನ ನೆನಪಿನಲ್ಲಿದೆ.

೫ ಇ. ಗುರುದೇವರನ್ನು ಭೇಟಿಯಾಗುವ ಆಸೆ ಆಗುತ್ತಲೇ ಸಭೆಯ ಸೇವೆಗಾಗಿ ಕರೆಯುವುದು : ಪಾಚಾಲದ ನಮ್ಮ ಮನೆಯಲ್ಲಿ ೩ ದಿನ ಇದ್ದು ಹೋದ ನಂತರ ಸತತವಾಗಿ ಗುರುದೇವರನ್ನು ಭೇಟಿಯಾಗಬೇಕು ಅವರ ಸಹವಾಸದಲ್ಲಿರಬೇಕು ಎಂದು ನನಗೆ ಅನಿಸುತ್ತಿತ್ತು. ಒಂದು ಬಾರಿ ಪರಮಪೂಜ್ಯ ಡಾಕ್ಟರರು ಮುಂಬಯಿ ಗೋವಾ ಮಹಾಮಾರ್ಗದಿಂದ ಗೋವಾಕ್ಕೆ ಹೊರಟಿದ್ದಾರೆ ಎಂದು ನನಗೆ ತಿಳಿಯಿತು, ಆಗ ಅವರ ಪ್ರತ್ಯಕ್ಷ ಭೇಟಿಯಾಗುವುದಿಲ್ಲ, ಆದರೆ ಹೆದ್ದಾರಿಯ ಪಕ್ಕದ ಮರದ ಮೇಲೆ ಕುಳಿತು ಗುರುದೇವರು ಮತ್ತು ಅವರ ವಾಹನದ ದರ್ಶನ ಪಡೆಯಬೇಕು, ಇಂತಹ ಹುಚ್ಚು ಯೋಚನೆ ನನ್ನ ಮನಸ್ಸಿಗೆ ಬಂದಿತು. ಆ ದಿನ ಶ್ರೀ. ಕೇಳುಸಕರ ಇವರಿಂದ ದೂರವಾಣಿ ಕರೆ ಬಂದಿತು, ಕರಾಡದಲ್ಲಿ ಪರಮಪೂಜ್ಯ ಡಾಕ್ಟರ್‌ರ ಸಭೆ ಯಿದೆ, ಅಲ್ಲಿ ನೀವು ಪ್ರಸಾರ ಸೇವೆಗೆ ಹೋಗಬಹುದೇ ? ನಾವು ನಾಲ್ವರು ಪಾಚಾಲದಿಂದ ಕರಾಡದ ಸಭೆಯ ಸೇವೆಗೆ ಹೋದೆವು.

೪ ಈ. ಕನಾತದ ಸಂದಿಯಿಂದ ಗುರುದೇವರ ದರ್ಶನ ಪಡೆಯು ತ್ತಿರುವಾಗ ಗುರುದೇವರು ಇಷ್ಟು ಹತ್ತಿರ ಇರುವಾಗ ಸಂದಿಯಿಂದ ನೋಡಿ ಏನು ಸಿಗುವುದು ? ಎಂದು ಹೇಳಿದ್ದು ಸೂಕ್ಷ್ಮದಲ್ಲಿ ಕೇಳಿಸುವುದು : ಕರಾಡದ ಸಭೆ ಹತ್ತಿರದ ರೆಠರೆ ಬುದ್ರುಕ್‌ ಎಂ ಗ್ರಾಮದಲ್ಲಿತ್ತು. ನನಗೆ ಅಂತರ್ಮನಸ್ಸಿನಲ್ಲಿ ಗುರುದೇವರ ದರ್ಶನ ಪಡೆಯಬೇಕು, ಅವರ ಚೈತನ್ಯಮಯ ವಾಣಿಯನ್ನು ಕೇಳಬೇಕೆಂದು ಅನಿಸುತ್ತಿತ್ತು. ಕನಾತದ ಚಿಕ್ಕ ಸಂದಿಯಿಂದ ನಾನು ಕಣ್ಣುಗಳನ್ನು ಮಿಟುಕಿಸುತ್ತ ಗುರುದೇವರನ್ನು ನೋಡಲು ಪ್ರಯತ್ನಿಸುತ್ತಿದ್ದೆ. ಸಭಾಗೃಹ ಸಂಪೂರ್ಣ ತುಂಬಿರುವುದರಿಂದ ವೇದಿಕೆಯ ಮೇಲೆ ಕೂಡ ಜನರು ಕುಳಿತಿದ್ದರು. ಗುರುದೇವರು ವೇದಿಕೆಗೆ ಬಂದು ಕುಳಿತರು. ಅವರು ಹೇಳಿದರು, ಮುಂದೆ ಸರಿಯಿರಿ, ಗುರುಗಳು ಇಷ್ಟು ಹತ್ತಿರ ಇರುವಾಗ ಹೀಗೆ ಸಂದಿಯಿಂದ ಬಗ್ಗಿ ನೋಡಿದರೆ ಏನು ಸಿಗುವುದು ? ಈ ವಾಕ್ಯ ನನ್ನ ಸಂಪೂರ್ಣ ಶರೀರದಲ್ಲಿ ರೋಮಾಂಚನ ಮೂಡಿಸಿತು. ನನಗೆ ಏನು ತಿಳಿಯಲಿಲ್ಲ. ಕೇವಲ ಗುರುದೇವರ ಆ ಶಬ್ದಗಳು ನನಗೆ ಕೇಳಿಸಿದವು ಮತ್ತು ಇದು ಆಕಾಶತತ್ತ್ವದ ಅನುಭೂತಿಯಾಗಿತ್ತು ಎಂದು ನನಗೆ ಸತ್ಸಂಗಕ್ಕೆ ಹೋದ ನಂತರ ತಿಳಿಯಿತು. ಗುರುದೇವರೇ ನೀವು ಸರ್ವವ್ಯಾಪಿ ಆಗಿರುವಿರಿ. ಪ್ರತಿಯೊಂದು ಜೀವದ ಕಡೆಗೆ ನಿಮ್ಮ ಗಮನ ಇರುತ್ತದೆ.

೪ ಉ. ಗುರುದೇವರ ಚರಣಗಳ ಮೇಲೆ ಮಸ್ತಕ ಇರಿಸುವ ಅಂತರ್ಮನಸ್ಸಿನ ಆಸೆ ತಿಳಿದು ಗುರುದೇವರು ಎರಡು ಚರಣಗಳನ್ನು ಮುಂದೆ ಚಾಚುವುದು ಮತ್ತು ಮಸ್ತಕ ಇಡಿಸಿಕೊಳ್ಳುವುದು : ನಾನು ಸಾಧನೆಗೆ ಬಂದಿದ್ದರೂ, ವಿವಿಧ ರೀತಿಯ ಕೌಟುಂಬಿಕ ಸಮಸ್ಯೆ ಗಳು, ಮಕ್ಕಳ ಕಾಳಜಿ, ಇತ್ಯಾದಿಗಳಿಂದ ಮನಸ್ಸಿನಲ್ಲಿ ಒತ್ತಡ ಇರುತ್ತಿತ್ತು. ಆ ಸಮಯದಲ್ಲಿ ಗುರುದೇವರು ಸಾಧಕರನ್ನು ಭೇಟಿ ಯಾಗುತ್ತಿದ್ದರು ಮತ್ತು ಅವರ ಜೊತೆ ಮಾತನಾಡುತ್ತಿದ್ದರು. ಒಂದು ಬಾರಿ ನನಗೂ ಗುರುದೇವರ ಭೇಟಿಯ ಯೋಗ ಬಂದಿತು. ಆ ಸಮಯದಲ್ಲಿ ಗುರುದೇವರ ಎದುರಿಗೆ ಹೋದೆನು ಮತ್ತು ಆರ್ತತೆಯಿಂದ ನನ್ನ ಮನಸ್ಸಿನಲ್ಲಿ ನನಗೆ ಗುರುದೇವರ ಚರಣಗಳಲ್ಲಿ ಮಸ್ತಕ ಇಡಲು ಅವಕಾಶ ಸಿಗಬೇಕು ಎಂಬ ವಿಚಾರ ಬಂದಿತು. ಆ ಸಮಯದಲ್ಲಿ ಗುರುದೇವರು ಸಾಧಕರ ಜೊತೆಗೆ ಮಾತನಾಡುತ್ತಿದ್ದರು. ಗುರುದೇವರು ಆ ಸಾಧಕರಿಗೆ, ಸ್ವಲ್ಪ ಸಮಯ ನಿಲ್ಲಿರಿ, ಅವರನ್ನು ಭೇಟಿ ಆಗುತ್ತೇನೆ ಎಂದರು. ಗುರುದೇವರು ನನ್ನ ಮನಸ್ಸಿನಲ್ಲಿನ ಆಸೆ ತಿಳಿದುಕೊಂಡು ಹೇಳಿ ದರು, ‘ನಿಮಗೆ ನಮಸ್ಕಾರ ಮಾಡಬೇಕೆಂದಿದೆ ಅಲ್ಲವೇ ?’

ಹೀಗೆ ಹೇಳಿ ಅವರು ಎರಡು ಚರಣಗಳನ್ನು ಮುಂದೆ ಚಾಚಿದರು. ನಾನು ಗುರುದೇವರ ಎರಡು ಚರಣಗಳಲ್ಲಿ ಮಸ್ತಕವನ್ನು ಇರಿಸಿದೆ ಮತ್ತು ನನ್ನ ಎಲ್ಲಾ ಒತ್ತಡವು ಆ ದಿವ್ಯ ಚರಣಗಳಲ್ಲಿ ಅರ್ಪಣೆ ಆಯಿತು. ಆಗ ನನಗೆ ಅತ್ಯಂತ ಸಮಾಧಾನ ದೊರೆಯಿತು. ಅವರು ಕೇಳಿದರು, ‘ಈಗ ಸಮಾಧಾನ ಆಯಿತೇ ?’ ನಾನು ‘ಹೌದು’ ಎಂದೆ. ಗುರುದೇವರೇ ನೀವು ಪ್ರತಿಯೊಂದು ಸೋತಿರುವ ಜೀವಕ್ಕೆ ಕ್ಷಣಕ್ಷಣಕ್ಕೂ ಆಧಾರ ನೀಡುತ್ತೀರಿ, ಇದಕ್ಕಾಗಿ ಎಷ್ಟು ಕೃತಜ್ಞತೆ ವ್ಯಕ್ತಪಡಿಸಿದರು ಅದು ಕಡಿಮೆಯಾಗಿದೆ.

೪ ಊ. ಅಂತರ್ಮನಸ್ಸಿನಲ್ಲಿನ ಕೊರಗನ್ನು ತಿಳಿದು ನಿಶ್ಚಿಂತ ಗೊಳಿಸುವುದು ಮತ್ತು ಆಧಾರ ನೀಡುವುದು : ಒಮ್ಮೆ ಫೋಂಡಾ, ಗೋವಾದ ಸುಖಸಾಗರ ಇಲ್ಲಿ ಗುರುದೇವರು ನನಗೆ ಹೇಳಿದರು, ‘ಸಂತರ ಹಾಗೆ ನಮಗೂ ಎಲ್ಲರನ್ನು ಪ್ರೀತಿಸಲು ಬರಬೇಕು’. ಅದರ ನಂತರ ನಾನು ಪಾಚಾಲಕ್ಕೆ ಬಂದೆ. ಆರು ತಿಂಗಳು ನನ್ನಿಂದ ಇದರ ಬಗ್ಗೆ ಯಾವುದೇ ಪ್ರಯತ್ನವಾಗಲಿಲ್ಲ. ಆರು ತಿಂಗಳ ನಂತರ ನನಗೆ ಮತ್ತೆ ಸುಖಸಾಗರಕ್ಕೆ ಸೇವೆಗಾಗಿ ಕರೆಸಿದರು. ಆಗ ನನ್ನ ಮನಸ್ಸಿನಲ್ಲಿ ಕೊರಗು ಇತ್ತು, ಗುರುದೇವರು ನಮಗೆ ಪ್ರೇಮಭಾವ ಹೆಚ್ಚಿಸಲು ಹೇಳಿದ್ದಾರೆ, ಆದರೆ ನನ್ನಿಂದ ಯಾವುದೇ ಪ್ರಯತ್ನವಾಗಲಿಲ್ಲ. ನಾನು ಸುಖಸಾಗರದಲ್ಲಿ ಸಾಧಕರ ಜೊತೆಗೆ ಮಾತನಾಡುತ್ತಿದ್ದೆ. ಅಷ್ಟರಲ್ಲಿ ಗುರುದೇವರು ಯಾವುದೋ ಕೆಲಸಕ್ಕಾಗಿ ಎದುರಿಗೆ ಬಂದರು ಮತ್ತು ನನಗೆ, ‘ಕಾಳಜಿ ಮಾಡಬೇಕೆಂದಿಲ್ಲ, ಯೋಗ್ಯ ಸಮಯ ಬಂದರೆ ಎಲ್ಲವೂ ಆಗುವುದು’ ಎಂದು ಹೇಳಿ ಹೋದರು.

೫. ಪ್ರಾರ್ಥನೆ

ಗುರುದೇವರೇ, ನೀವು ನನ್ನನ್ನು ನಿರಂತರ ಕಾಪಾಡುತ್ತಿದ್ದೀರಿ, ಸಮಯ ಸಮಯದಲ್ಲಿ ನನಗೆ ಆಧಾರ ನೀಡುತ್ತಿದ್ದೀರಿ. ಪೂರ್ವ ಜನ್ಮದಲ್ಲಿ ಕೂಡ ನೀವೇ ನನ್ನನ್ನು ಕಾಪಾಡಿದ್ದೀರಿ. ನನ್ನ ಸಾಧನೆ ಆಗಬೇಕೆಂದು ನೀವು ಅಪಾರ ಕಷ್ಟ ಸಹಿಸಿ ನಿಮ್ಮ ಅಮೂಲ್ಯ ಸಹವಾಸ ನೀಡಿದ್ದೀರಿ. ಸಮಯ ಸಮಯದಲ್ಲಿ ಆಧಾರ ನೀಡಿ ರಕ್ಷಿಸಿದ್ದೀರಿ; ಆದರೆ ನಿಮಗೆ ಅಪೇಕ್ಷಿತ ರೀತಿಯಲ್ಲಿ ನಾನು ಸಾಧನೆ ಮಾಡಲು ಸಾಧ್ಯವಾಗಿಲ್ಲ. ಗುರುದೇವರೇ, ನನಗೆ ಈಗ ಕೇವಲ ನಿಮ್ಮ ಚರಣಗಳಲ್ಲಿ ನಿರಂತರ ಸ್ಥಾನ ನೀಡಿ. ಇದೇ ನಿಮ್ಮ ಚರಣಗಳಲ್ಲಿ ಪ್ರಾರ್ಥನೆ.
– ಶ್ರೀ. ಗಜಾನನ ಮುಂಜ (ವಯಸ್ಸು ೬೮), ಓರಸ್‌ ಕೇಂದ್ರ, ಕುಡಾಳ ತಾಲೂಕು, ಸಿಂಧುದುರ್ಗ ಜಿಲ್ಲೆ. (೨೬.೧೧.೨೦೨೨)

ಇದರ ಹಿಂದಿನ ಲೇಖನವನ್ನು ಓದಲು – https://sanatanprabhat.org/kannada/97426.html