‘೧೯೮೪ ರಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ನನ್ನ ಜೀವನದಲ್ಲಿ ಬಂದು ಅವರು ನನಗೆ ಪ್ರತ್ಯಕ್ಷ ಸಹವಾಸವನ್ನು ನೀಡಿದರು. ಅವರು ನನಗೆ ಪುನಃಪುನಃ ಸಾಧನೆಯನ್ನು ಹೇಳಿ ನನ್ನಿಂದ ಅದನ್ನು ಮಾಡಿಸಿಕೊಳ್ಳಲು ಪ್ರಯತ್ನಿಸಿದರು. ಅದಕ್ಕಾಗಿ ಅವರು ನನಗೆ ವಿವಿಧ ಅವಕಾಶಗಳನ್ನು ಒದಗಿಸಿ ಕೊಟ್ಟರು. ಗುರುಗಳಲ್ಲಿ ಮತ್ತು ದೇವರಲ್ಲಿ ದೃಢ ಶ್ರದ್ಧೆ ಬರಲು ಅವರು ನನಗೆ ದಿವ್ಯ ಅನುಭೂತಿಯನ್ನು ಕೊಟ್ಟರು. ನನ್ನ ಅನೇಕ ಗಂಭೀರ ತಪ್ಪುಗಳನ್ನು ಮಾತೃವಾತ್ಸಲ್ಯದಿಂದ ಹೊಟ್ಟೆಯಲ್ಲಿ ಹಾಕಿಕೊಂಡರು. ಅವರು ನನ್ನನ್ನು ಎಂದಿಗೂ ದೂರವಿಡಲಿಲ್ಲ. ಇದುವರೆಗೆ ಪ.ಪೂ. ಗುರುದೇವರು ನನಗೆ ನೀಡಿದ ಅನೇಕ ಅನುಭೂತಿಗಳು ಮತ್ತು ನನ್ನಿಂದ ಮಾಡಿಸಿಕೊಂಡಿರುವ ಸಾಧನೆಯ ಪ್ರಯತ್ನಗಳನ್ನು ನಾನು ಕೃತಜ್ಞತೆಯಿಂದ ಅವರ ಚರಣಗಳಲ್ಲಿ ಅರ್ಪಿಸುತ್ತೇನೆ. (ಭಾಗ ೧) |
೧. ಪ.ಪೂ. ಡಾಕ್ಟರರ ಪರಿಚಯವಾಗುವುದು
೧ ಅ. ಪ.ಪೂ. ಡಾಕ್ಟರರು ಯಾವುದೇ ಔಷಧಿಯನ್ನು ನೀಡದೇ ೩ ವರ್ಷಗಳಿಂದಿದ್ದ ಮಾನಸಿಕ ಒತ್ತಡದಿಂದ ೪ ದಿನಗಳಲ್ಲಿ ಹೊರ ತೆಗೆಯುವುದು : ಗುರುದೇವರ ಮೊದಲನೇ ಭೇಟಿಯಾಗುವ ೨-೩ ವರ್ಷ ಮೊದಲು ನಾನು ಕೆಲವು ಅಯೋಗ್ಯ ವಿಚಾರ ಗಳಲ್ಲಿ ಸಿಲುಕಿದ ಕಾರಣ ಮಾನಸಿಕ ಒತ್ತಡದಲ್ಲಿದ್ದೆನು. ಅದೇ ಕಾಲಾವಧಿಯಲ್ಲಿ ನನ್ನ ಸ್ನೇಹಿತ ಶ್ರೀ. ದಿಲೀಪ ಗೋವೆಕರ, ಕಡಾವಲ, ಕುಡಾಳ ತಾಲೂಕು ಇವನು ನನಗೆ, ”ದೈನಿಕ ಸಕಾಳ ಪತ್ರಿಕೆಯಲ್ಲಿ ಡಾಕ್ಟರ ಆಠವಲೆಯವರ ವ್ಯಾಖ್ಯಾನಮಾಲೆ ನಡೆಯುತ್ತಿದೆ ಹಾಗೂ ಅವರು ಮಾರ್ಗದರ್ಶನ ಮಾಡುತ್ತಾರೆ. ನೀನು ಮುಂಬಯಿಗೆ ಹೋದಾಗ ಅವರನ್ನು ಭೇಟಿಯಾಗು” ಎಂದು ಹೇಳಿದನು. ಅದರಂತೆ ನಾನು ಅಕ್ಟೋಬರ್ ೧೯೮೪ ರಲ್ಲಿ ಮುಂಬಯಿಯಲ್ಲಿ ಗುರುದೇವರ ಚಿಕಿತ್ಸಾಲಯಕ್ಕೆ ಹೋದೆನು. ಗುರುದೇವರು ನನ್ನನ್ನು ೪ ದಿನಗಳಲ್ಲಿ ನನ್ನ ಅಯೋಗ್ಯ ವಿಚಾರಗಳಿಂದ ಸಂಪೂರ್ಣ ಹೊರ ತೆಗೆದರು ಮತ್ತು ಅದೇ ಸಮಯದಲ್ಲಿ ‘ಸ್ವಯಂಸೂಚನೆಗಳನ್ನು ಹೇಗೆ ತೆಗೆದುಕೊಳ್ಳಬೇಕು ?’, ಎಂಬುದನ್ನೂ ಕಲಿಸಿದರು. ನಾನು ಅನೇಕ ವರ್ಷಗಳಿಂದ ಆ ಆಯೋಗ್ಯ ವಿಚಾರಗಳಲ್ಲಿದ್ದು ಮಾನಸಿಕ ಒತ್ತಡದಲ್ಲಿದ್ದೆನು; ಆದರೆ ಒಂದು ರೂಪಾಯಿಯ ಔಷಧಿಯನ್ನೂ ನೀಡದೇ ಗುರುದೇವರು ನನಗೆ ಪುನರ್ಜನ್ಮವನ್ನು ನೀಡಿದರು. ನಾಲ್ಕನೇ ದಿನ ನಾನು ಅವರ ಚಿಕಿತ್ಸಾಲಯದಿಂದ ಹೊರಡುವಾಗ ಗುರುದೇವರು ನನಗೆ, ”ಇದನ್ನು ನೀವು ಮುಂದೆ ಇತರರಿಗೂ ಕಲಿಸಬಹುದು” ಎಂದು ಹೇಳಿದರು.
೧ ಆ. ‘ಮಾನಸಿಕ ಉಪಾಯಗಳಿಗಿಂತ ಆಧ್ಯಾತ್ಮಿಕ ಸ್ತರದ ಉಪಾಯವೇ ಅಂತಿಮ ಮತ್ತು ಸರ್ವೋಚ್ಚವಾಗಿರುತ್ತದೆ’, ಎಂಬ ಬೀಜವನ್ನು ಮನಸ್ಸಿನಲ್ಲಿ ಬಿತ್ತುವುದು : ಈ ೪ ದಿನಗಳಲ್ಲಿ ನನಗೆ ಗುರುದೇವರು ‘ಸ್ವಯಂಸೂಚನೆಯನ್ನು ಹೇಗೆ ಕೊಡಬೇಕು ?’, ಎಂಬುದನ್ನು ಕಲಿಸಿದರು. ಚಿಕಿತ್ಸಾಲಯದ ಹೊರಗಿನ ಕೋಣೆ ಯಲ್ಲಿ ಅಧ್ಯಾತ್ಮದ ವಿಷಯದ ಬಗೆಗಿನ ಮಾಹಿತಿಯ ತಖ್ತೆಯನ್ನು ಹಾಕಿದ್ದರು. ಆಗ ಗುರುದೇವರು ನನಗೆ, ”ಅದನ್ನು ಓದಿರಿ. ಇದೇ ನಿಜವಾದ ಉಪಾಯವಾಗಿದೆ” ಎಂದು ಹೇಳಿದರು.
೧ ಇ. ‘ಮನಸ್ಸು ಅಸ್ವಸ್ಥಗೊಂಡಿದೆ’, ಎಂದು ಹೇಳಲು ಪ್ರಯತ್ನಿಸು ತ್ತಿರುವಾಗ ಅದನ್ನು ದುರ್ಲಕ್ಷ್ಯಿಸಿ ಸಾಧನೆ ಮತ್ತು ಸೇವೆಯ ಸಂಸ್ಕಾರಗಳನ್ನು ಮಾಡುವುದು : ಅನಂತರ ಪುನಃ ನಾನು ೧೯೮೯ ರಲ್ಲಿ ಮುಂಬೈಯ ಸೇವಾಕೇಂದ್ರದಲ್ಲಿ ಗುರುದೇವರ ಭೇಟಿಗಾಗಿ ಹೋದೆನು. ಆ ಸಮಯದಲ್ಲಿ ಗುರುದೇವರು ನನಗೆ ”ನೀವು ಇಲ್ಲಿ ಎಷ್ಟು ಸಮಯ ಇರುವಿರಿ ?”, ಎಂದು ಕೇಳಿದರು ಮತ್ತು ಕೆಲವು ಲೇಖನಗಳನ್ನು ಪರಿಶೀಲಿಸಲು ಹೇಳಿದರು. ಆ ಸಮಯದಲ್ಲಿ ನನಗೆ ‘ಸೇವೆ ಎಂದರೇನು ?’, ಎಂಬುದೇ ಗೊತ್ತಿರಲಿಲ್ಲ. ನಂತರ ಪ.ಪೂ. ಗುರುದೇವರು ನನಗೆ ಒಂದು ನಕಾಶೆಯನ್ನು ತೋರಿಸಿದರು. ”ಇಲ್ಲಿ ನಮಗೆ ಆಶ್ರಮವನ್ನು ಕಟ್ಟಲಿಕ್ಕಿದೆ” ಎಂದು ಹೇಳಿದರು. ನಾನು ಅವರ ಮಾತುಗಳನ್ನು ಕೇಳುತ್ತಿದ್ದೆನು. ಗುರುದೇವರು ನನಗೆ ‘ಅಧ್ಯಾತ್ಮಶಾಸ್ತ್ರ’ ಈ ಗ್ರಂಥದ ‘ಸೈಕ್ಲೋಸ್ಟೈಲ್’ ಪ್ರತಿಯನ್ನು ಕೊಟ್ಟರು (ಆ ಕಾಲದಲ್ಲಿ ಝೆರಾಕ್ಸ್ ವ್ಯವಸ್ಥೆ ಇರಲಿಲ್ಲ; ಆದ್ದರಿಂದ ಕೈಯಿಂದ ಬರೆದಿರುವ ಲೇಖನದ ‘ಸೈಕ್ಲೋಸ್ಟೈಲ್’ ಪ್ರತಿಯನ್ನು ತೆಗೆಯಲಾಗುತ್ತಿತ್ತು.) ಮತ್ತು ಅವುಗಳನ್ನು ಓದಲು ಹೇಳಿದರು.
೧ ಈ. ಪ್ರತ್ಯಕ್ಷ ಸಾಧನೆಯಲ್ಲಿ ಇರದಿದ್ದರೂ ಸಾಧಕನೆಂದು ಪರಿಚಯಿಸುವುದು : ಅದರ ನಂತರ ಪುನಃ ೮ ವರ್ಷಗಳ ಕಾಲ ಕಳೆದವು. ೧೯೯೭ ರಲ್ಲಿ ನಾನು ಗುರುದೇವರ ಪ್ರವಚನಕ್ಕೆ ಲಾಂಜಾ (ರತ್ನಾಗಿರಿ) ಯಲ್ಲಿಗೆ ಹೋದೆನು. ನಾನು ಪ್ರವಚನಕ್ಕೆ ಮೊದಲನೇ ಸಾಲಿನಲ್ಲಿ ಕುಳಿತಿದ್ದೆನು. ಸಭೆಯ ಆರಂಭದಲ್ಲಿ ಆ ಪ್ರದೇಶದಲ್ಲಿ ಹೊಸದಾಗಿ ಸಾಧನೆಯನ್ನು ಪ್ರಾರಂಭಿಸಿದ ಹೊಸ ಸಾಧಕರು ವೇದಿಕೆಯ ಮೇಲೆ ಬಂದು ತಮ್ಮ ಪರಿಚಯವನ್ನು ಮಾಡಿಕೊಡುತ್ತಿದ್ದರು. ಕಾರ್ಯಕ್ರಮ ಆರಂಭವಾದ ನಂತರ ಹೊಸ ಸಾಧಕರು ವೇದಿಕೆಯ ಮೇಲೆ ಬಂದು ತಮ್ಮ ಹೆಸರು ಮತ್ತು ಊರಿನ ಹೆಸರು ಹೇಳುತ್ತಿದ್ದರು. ನನಗೆ ಸನಾತನ ಸಂಸ್ಥೆ ಮತ್ತು ಸಾಧನೆ ಈ ಬಗ್ಗೆ ಏನೂ ಗೊತ್ತಿರಲಿಲ್ಲ, ಆದರೂ ನನ್ನನ್ನು ಒಬ್ಬರು ಕರೆದೊಯ್ದರು, ಅದರಂತೆ ನಾನು ಸಾಧಕರ ಸಾಲಿನಲ್ಲಿ ನಿಂತೆನು ಮತ್ತು ‘ಗಜಾನನ ಮುಂಜ, ಪಾಚಲ’ ಎಂದು ಪರಿಚಯ ಮಾಡಿಕೊಟ್ಟೆನು ಮತ್ತು ಪುನಃ ನನ್ನ ಜಾಗ ದಲ್ಲಿ ಬಂದು ಕುಳಿತೆನು, ‘ನಾನು ಹೇಗೆ ಹೋದೆನು ? ಏಕೆ ಹೋದೆನು ?’, ನನಗೆ ಏನೂ ಗೊತ್ತಾಗಲಿಲ್ಲ.
೨. ಪಾಚಲ, ರಾಜಾಪುರದಲ್ಲಿ ಪ್ರಸಾರ
೨ ಅ. ಸಾಧಕನೆಂದು ಪರಿಚಯಿಸಿದ ನಿಮಿತ್ತದಿಂದ ಗುರುದೇವರು ಸಾಧನೆಯಲ್ಲಿ ಎಳೆದುಕೊಳ್ಳುವುದು : ಈ ಪ್ರವಚನದಿಂದ ನನಗೆ ಸಾಧನೆಯ ಬಗ್ಗೆ ತಿಳಿಯಿತು ಮತ್ತು ಅದು ಇಷ್ಟವಾಯಿತು. ಸುಮಾರು ೭-೮ ತಿಂಗಳಕಾಲ ಉರುಳಿದವು. ‘ಪಾಚಲ’ ಈ ಊರು ದೊಡ್ಡದಾಗಿರುವುದರಿಂದ ಲಾಂಜಾದ ಶ್ರೀ. ಉದಯ ಕೆಳುಸಕರ ಇವರಿಗೆ ‘ಅಲ್ಲಿ ಪ್ರಸಾರ ಮಾಡಬೇಕು’, ಎಂದು ಅನಿಸುತ್ತಿತ್ತು. ‘ಅಲ್ಲಿ ಯಾರ ಬಳಿ ಹೋಗಬೇಕು ?’, ಎಂಬುದರ ಬಗ್ಗೆ ಅವರಿಗೆ ಏನೂ ಗೊತ್ತಾಗುತ್ತಿರಲಿಲ್ಲ. ಒಮ್ಮೆ ಕೆಳುಸಕರ ಪತಿ-ಪತ್ನಿ ಇಬ್ಬರೂ ಲಾಂಜಾದ ಸಭೆಯ ಧ್ವನಿತಟ್ಟೆಯನ್ನು (ಕ್ಯಾಸೆಟ್) ಕೇಳುತ್ತಿದ್ದರು. ಅದನ್ನು ಕೇಳುವಾಗ ಅವರಿಗೆ ‘ಗಜಾನನ ಮುಂಜ, ಪಾಚಲ’, ಎಂಬ ಹೆಸರು ಕೇಳಲು ಸಿಕ್ಕಿತು. ಆ ಮಾಹಿತಿಯನ್ನು ತೆಗೆದುಕೊಂಡು ಶ್ರೀ. ಕೆಳುಸಕರ ಇವರು ಪಾಚಲನಲ್ಲಿ ನಮ್ಮ ಬಳಿಗೆ ಬಂದರು. ಆಗ ಅವರು ನನಗೆ ಸಾಧನೆಯನ್ನು ಹೇಳಿದರು ಮತ್ತು ಪ್ರವಚನವನ್ನಿಡಲು ನಿರ್ಧರಿಸಿದರು. ಮುಂದಿನ ೧-೨ ತಿಂಗಳಲ್ಲಿ ಆ ಪರಿಸರದಲ್ಲಿ ತುಂಬಾ ಪ್ರಸಾರವಾಯಿತು.
೩. ಪ.ಪೂ. ಡಾಕ್ಟರರ ಸಹವಾಸ ಮತ್ತು ಕೃತಿಯಿಂದ ಕಲಿಸುವುದು
೩ ಅ. ನಮ್ಮ ಸಾದಾ ಮನೆಯಲ್ಲಿ ಹೆಚ್ಚೇನು ಸೌಲಭ್ಯವಿಲ್ಲದಿದ್ದರೂ ಗುರುದೇವರು ೩ ದಿನ ಆನಂದದಿಂದ ಇರುವುದು : ಆ ಸಮಯದಲ್ಲಿ ಊರೂರಿನಲ್ಲಿ ಗುರುದೇವರ ಸಭೆಗಳಾಗುತ್ತಿದ್ದವು. ‘ಪಾಚಲದಲ್ಲಿ ಸಭಾ ತೆಗೆದುಕೊಳ್ಳುವುದಿದೆ’, ಎಂದು ಕೆಳುಸಕರ ಮತ್ತು ಇನ್ನು ಕೆಲವರು ಹೇಳಿದರು. ಪಾಚಲದಲ್ಲಿ ಸಭೆಯನ್ನು ತೆಗೆದುಕೊಳ್ಳುವುದು ಖಚಿತವಾಯಿತು. ಆಗ ಅವರು ನನಗೆ, ”ಗುರುದೇವರು ನಿಮ್ಮ ಮನೆಯಲ್ಲಿರುವರು” ಎಂದು ಹೇಳಿದರು. ನಮ್ಮ ಮನೆ ಸಾದಾ ಇತ್ತು. ಮನೆಯಲ್ಲಿ ಅಂತಹದೇನು ಸೌಲಭ್ಯಗಳಿರಲಿಲ್ಲ, ಆದರೂ ಸಹ ಕೆಳುಸಕರ ಇವರು ”ಪ.ಪೂ. ಡಾಕ್ಟರರು ಇಲ್ಲೇ ಇರುವರು”, ಎಂದು ಹೇಳಿದರು. ಆಗ ನನಗೆ ಬಹಳ ಒತ್ತಡ ಬಂದಿತ್ತು.
೩ ಆ. ತಮ್ಮ ಬಳಿ ಯಾರನ್ನೂ ಇಟ್ಟುಕೊಳ್ಳದೇ ಗುರುದೇವರು ಎಲ್ಲ ಸಾಧಕರನ್ನು ಪ್ರಸಾರಕ್ಕೆ ಕಳುಹಿಸುವುದು : ನಾವು ಪತಿ-ಪತ್ನಿಯರು ಶಿಕ್ಷಕರಾಗಿರುವುದರಿಂದ ಮರುದಿನ ಗುರುದೇವರು ನಮಗೆ, ”ನೀವು ಶಾಲೆಗೆ ಹೋಗಬಹುದು, ಈಗ ನನಗೆ ಮನೆಯಲ್ಲಿ ಎಲ್ಲವೂ ಗೊತ್ತಿದೆ. ನನಗೆ ಬೇಕಾಗಿರುವುದನ್ನು ನಾನು ತೆಗೆದುಕೊಳ್ಳುತ್ತೇನೆ” ಎಂದು ಹೇಳಿದರು. ಸಭೆಯ ದಿನದಂದು ಬೆಳಗ್ಗೆ ನಾವು ಮನೆಯಲ್ಲಿಯೇ ಇದ್ದೆವು, ಆಗ ಗುರುದೇವರು, ”ಹತ್ತಿರದ ಪರಿಸರದಲ್ಲಿ ಹೋಗಿ ಪ್ರಸಾರ ಮಾಡಿರಿ. ಜನರಿಗೆ ಹೇಳಿ. ಹೇಳಿದಾಗಲೇ ಜನರು ಬರುತ್ತಾರೆ” ಎಂದು ಹೇಳಿದರು. ಪಾಚಲಿಯ ಸಭೆ ಮುಗಿದ ನಂತರ ಗುರುದೇವರು, ಶ್ರೀ. ವಿಜಯ ಕದಮ ಮತ್ತು ನಾನು ಮನೆಗೆ ಬಂದೆವು.
ಗುರುದೇವರು, ”ಸಭೆಗಾಗಿ ದೂರದಿಂದ ಜನರು ಬಂದಿದ್ದಾರೆ. ಅವರಿಗೆ ಹೋಗುವ ವ್ಯವಸ್ಥೆಯನ್ನು ಮಾಡಬೇಕು. ನನಗೆ ಈಗ ಮನೆಯಲ್ಲಿ ಎಲ್ಲೆಲ್ಲಿ ಏನೇನಿದೆ ಎಲ್ಲವೂ ಗೊತ್ತಾಗಿದೆ. ನೀವು ಮೈದಾನಕ್ಕೆ ಹೋಗಿ ಸೇವೆಯನ್ನು ಮಾಡಿರಿ” ಎಂದು ಹೇಳಿದರು.
೩ ಇ. ಆ ದಿನ ರಾತ್ರಿ ಊಟವಾದ ನಂತರ ಓರ್ವ ಜಿಜ್ಞಾಸು ಮನೆಗೆ ಬಂದಿದ್ದರು. ಅವರು ತುಂಬಾ ಸಮಯದವರೆಗೆ ‘ಗುರುದೇವರು ಗುರುಮಂತ್ರವನ್ನು ಕೊಡಬೇಕು’, ಎಂದು ಹಠ ಹಿಡಿದು ಕುಳಿತಿದ್ದರು. ಜೋರುಜೋರಾಗಿ ವಾದಿಸುತ್ತಿದ್ದರು. ಗುರುದೇವರು ಶಾಂತರೀತಿಯಿಂದ ಎಲ್ಲವನ್ನು ಕೇಳುತ್ತಿದ್ದರು ಮತ್ತು ಅವರಿಗೆ ಶಾಸ್ತ್ರವನ್ನು ತಿಳಿಸಿ ಹೇಳುತ್ತಿದ್ದರು. ಗುರುದೇವರು ಆ ಪ್ರಸಂಗವನ್ನು ಅತ್ಯಂತ ಶಾಂತರೀತಿಯಿಂದ ನಿಭಾಯಿಸಿದರು ಮತ್ತು ನಮಗೆ ಆ ಪ್ರಸಂಗದಿಂದ ಕಲಿಸಿದರು.
೩ ಈ. ಗುರುದೇವರಿಂದ ಸಾಧಕರ ಪ್ರಶಂಸೆ : ೫.೧೨.೧೯೯೭ ರಂದು ರಾಜಾಪುರದ ಸಭೆ ಮುಗಿದ ನಂತರ ಪ.ಪೂ. ಡಾಕ್ಟರರು ಸಾಯಂಕಾಲ ಸುಮಾರು ಏಳು ಗಂಟೆಗೆ ಪಾಚಲಕ್ಕೆ ಬಂದರು. ನಾನು ದಿನವಿಡಿ ರಾಜಾಪುರದಲ್ಲಿದ್ದೆನು. ನನ್ನ ಸ್ನೇಹಿತರು ಗೇಟಿನಿಂದ ಹಿಡಿದು ಮನೆಯ ಬಾಗಿಲಿನ ವರೆಗೆ ಕಮಾನು ಕಟ್ಟಿದ್ದರು. ವಿದ್ಯುತ್ ಮಾಲೆಯನ್ನು ಹಚ್ಚಿದ್ದರು. ಗುರುದೇವರು ಗೇಟಿನ ಹತ್ತಿರ ಬಂದ ತಕ್ಷಣ ಪ್ರಶಂಸಿಸುತ್ತಾ, ”ಸಂತ ಎತಿ ಘರಾ, ತೋಚ ದಿವಾಳಿ ದಸರಾ !” ಎಂದು ಹೇಳಿದರು.
ಅರ್ಥ : ಸಂತರು ಮನೆಗೆ ಬಂದಾಗಲೇ ದೀಪಾವಳಿ ದಸರಾ ಹಬ್ಬ !” ಎಂದು ಹೇಳಿದರು.
(ಮುಂದುವರಿಯುವುದು)
– ಶ್ರೀ. ಗಜಾನನ ಮುಂಜ (ವಯಸ್ಸು ೬೮), ಓರಸ್ ಕೇಂದ್ರ, ಕುಡಾಳ ತಾಲೂಕು, ಸಿಂಧುದುರ್ಗ ಜಿಲ್ಲೆ. (೨೬.೧೧.೨೦೨೨)