2023 ರಲ್ಲಿ ಪಾಕಿಸ್ತಾನದ ಅಹಮದೀಯ ಸಮುದಾಯದ 28 ಧಾರ್ಮಿಕ ಸ್ಥಳಗಳ ಮೇಲೆ ದಾಳಿ !

ಇಸ್ಲಾಮಾಬಾದ್ – 2023 ರಲ್ಲಿ ಮತಾಂಧರು ಪಾಕಿಸ್ತಾನದ ವಿವಿಧ ಸ್ಥಳಗಳಲ್ಲಿ ಅಹಮದೀಯಾ ಸಮುದಾಯದ 23 ಧಾರ್ಮಿಕ ಸ್ಥಳಗಳ ಮೇಲೆ ಕಟ್ಟರವಾದಿ ಇಸ್ಲಾಮಿಕ್‌ ಮತಾಂಧರು ದಾಳಿ ಮಾಡಿದರು. ‘ಜಮಾತ್-ಎ-ಅಹಮದೀಯಾ ಪಾಕಿಸ್ತಾನ್’ ಎಂಬ ಸಂಘಟನೆಯು ಈ ಮಾಹಿತಿಯನ್ನು ಪ್ರಸಾರ ಮಾಡಿದೆ. ಇಸ್ಲಾಂನಲ್ಲಿ ಮುಹಮ್ಮದ್ ಪೈಗಂಬರ ಇವರನ್ನು ಏಕೈಕ ಪ್ರವಾದಿ ಎಂದು ನಂಬಲಾಗಿದೆ. ಆದರೆ ಅಹಮದೀಯಾ ಸಮುದಾಯವು ಮಿರ್ಜಾ ಗುಲ್ ಅಹ್ಮದ್ ಅವರನ್ನು ಪ್ರವಾದಿ ಎಂದು ಪರಿಗಣಿಸುತ್ತದೆ. ಆದ್ದರಿಂದ, ಮುಸ್ಲಿಂ ಸಮಾಜವು ಅಹಮದೀಯರನ್ನು ‘ಮುಸ್ಲಿಮರು’ ಎಂದು ಪರಿಗಣಿಸುವುದಿಲ್ಲ. ಇದರಿಂದಾಗಿ ಪಾಕಿಸ್ತಾನದಲ್ಲಿ ಈ ಸಮುದಾಯಗಳ ಮೇಲೆ ಆಗಾಗ್ಗೆ ದಾಳಿಗಳು ನಡೆಯುತ್ತವೆ. ಕಟ್ಟರವಾದಿ ಭಯೋತ್ಪಾದಕ ಸಂಘಟನೆಯಾದ ‘ತೆಹ್ರೀಕ್-ಎ-ಲಬ್ಬೈಕ್ ಪಾಕಿಸ್ತಾನ್'(ಟಿ.ಎಲ್‌.ಪಿ) ಅಹಮದೀಯರ ವಿರುದ್ಧ ಕಾರ್ಯಾಚರಣೆಯಲ್ಲಿ ಮುಂಚೂಣಿಯಲ್ಲಿದೆ. ಆದರೆ, ಅಹಮದೀಯರ ವಿರುದ್ಧದ ಕಾರ್ಯಾಚರಣೆಯ ಪ್ರಕರಣದಲ್ಲಿ ಈ ಸಂಘಟನೆಯ ಯಾವುದೇ ಕಾರ್ಯಕರ್ತನ ವಿರುದ್ಧ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.

ಸಂಪಾದಕೀಯ ನಿಲುವು

ಎಲ್ಲಿ ಮತಾಂಧರು ಅಲ್ಪಸಂಖ್ಯಾತರಿರುತ್ತಾರೋ ಅಲ್ಲಿ ಅವರು ಬಹುಸಂಖ್ಯಾತರ ಮೇಲೆ ದಾಳಿ ಮಾಡುತ್ತಾರೆ, ಹಾಗೆಯೇ ಅವರು ಎಲ್ಲಿ ಬಹುಸಂಖ್ಯಾತರು ಇರುತ್ತಾರೋ ಅಲ್ಲಿ ಪರಸ್ಪರರ ಮೇಲೆ ದಾಳಿ ಮಾಡುತ್ತಾರೆ, ಇದೇ ಇಲ್ಲಿಯವರೆಗಿನ ಇತಿಹಾಸ !