ಹಿಂದೂದ್ವೇಷಿ ‘ಎಡಿಟರ್ಸ ಗಿಲ್ಡ್’!

ಮಣಿಪುರ ಹಿಂಸಾಚಾರದ ಕುರಿತು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾದ ‘ಒಮ್ಮುಖ’ ವರದಿ!

ಮಣಿಪುರ ರಾಜ್ಯದಲ್ಲಿ, ‘ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ’ದ ಅಧ್ಯಕ್ಷೆ ಸೀಮಾ ಮುಸ್ತಫಾ ಮತ್ತು ನಾಲ್ವರು ಸದಸ್ಯರಾದ ಸೀಮಾ ಗುಹಾ, ಭಾರತ ಭೂಷಣ ಮತ್ತು ಸಂಜಯ ಕಪೂರ ವಿರುದ್ಧ ದೂರು ದಾಖಲಿಸಲಾಗಿದೆ. ಈ ನಾಲ್ವರು ಮಣಿಪುರ ರಾಜ್ಯದಲ್ಲಿ ನಡೆದ ಹಿಂಸಾಚಾರದ ಹಿಂದಿನ ‘ಸತ್ಯ’ವನ್ನು ಕಂಡುಹಿಡಿಯಲು ವೀಕ್ಷಕರೆಂದು ಮಣಿಪುರ ಪ್ರವಾಸಕ್ಕೆ ಹೋಗಿದ್ದರು ಮತ್ತು ತದನಂತರ ಅವರು ತಮ್ಮ ವರದಿಯನ್ನು ಸಾರ್ವಜನಿಕಗೊಳಿಸಿದ್ದರು. ‘ಎಡಿಟರ್ಸ್ ಗಿಲ್ಡ್’ ವರದಿ ಸುಳ್ಳು ಮತ್ತು ನಕಲಿಯಾಗಿದ್ದು, ಗಿಲ್ಡ್ ಸದಸ್ಯರು ರಾಜ್ಯದಲ್ಲಿ ಹಿಂಸಾಚಾರವನ್ನು ಉತ್ತೇಜಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಿರೇನ್ ಸಿಂಗ್ ಆರೋಪಿಸಿದ್ದಾರೆ. ಮೇಲ್ನೋಟಕ್ಕೆ ಈ ಸಂಸ್ಥೆ ‘ಸತ್ಯವನ್ನು ಶೋಧಿಸಲು ಪ್ರಯತ್ನಿಸುವ ಸಂಸ್ಥೆ’ ಎಂದು ಬಿಂಬಿಸಿಕೊಂಡರೂ, ಈ ಸಂಸ್ಥೆ ಸ್ಥಾಪನೆಯಾದಾಗಿನಿಂದಲೂ ಹಿಂದೂದ್ವೇಷಿ ಮತ್ತು ಹಿಂದೂವಿರೋಧಿ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದೆ. ಹಿಂದೂವಿರೋಧಿಗಳನ್ನು ವೈಭವೀಕರಿಸುವುದು, ದೇಶದಲ್ಲಿ ನಡೆದಿರುವ ವಿವಿಧ ಗಲಭೆಗಳಲ್ಲಿ ಹಿಂದೂಗಳಿಗೆ ಆಗಿರುವ ಅನ್ಯಾಯದ ಬಗ್ಗೆ ಮೌನವಾಗಿರುವುದು, ಹಿಂದೂ ಸಾಧು-ಸಂತರು ಮತ್ತು ಸಂಘಟನೆಗಳಿಗೆ ಅನ್ಯಾಯವಾದರೆ ಎಂದಿಗೂ ಧ್ವನಿ ಎತ್ತದಿರುವುದು, ಹಿಂದೂವಿರೋಧಿ ಕಾರ್ಯ ಮಾಡುವ ಪತ್ರಕರ್ತರು-ಸಂಪಾದಕರನ್ನು ಬೆಂಬಲಿಸುವುದು ಮತ್ತು ನಿರಂತರವಾಗಿ ‘ನಿಧರ್ಮಿವಾದ’, ಜಾತ್ಯತೀತವಾದದ ಮುಸುಕು ಹಾಕಿಕೊಳ್ಳುವುದು ಇದೇ ಕಾರ್ಯವನ್ನು ಇದುವರೆಗೆ ‘ಎಡಿಟರ್ಸ್ ಗಿಲ್ಡ್’ ಮಾಡಿದೆ.

‘ಎಡಿಟರ್ಸ ಗಿಲ್ಡ’ ಸದಸ್ಯರ ವರದಿಯಲ್ಲಿ, ‘ಮಣಿಪುರದಲ್ಲಿ ನಡೆದ ಹಿಂಸಾಚಾರಕ್ಕೆ ಬಹುತೇಕ ಹಿಂದೂಗಳನ್ನೇ ಅಪರಾಧಿಗಳೆಂದು ನಿರ್ಧರಿಸಲಾಗಿತ್ತು ಮತ್ತು ‘ಈ ವಿಚಾರದಲ್ಲಿ ಸರಕಾರ ಯಾವ ರೀತಿ ವಿಫಲವಾಗಿದೆ’ ಎಂದು ನಮೂದಿಸಿದೆ. ಈ ವರದಿಯಲ್ಲಿ ಚುರಾಚಂದ್‌ಪುರ ಜಿಲ್ಲೆಯ ಉರಿಯುತ್ತಿರುವ ಒಂದು ಮನೆಯ ಚಿತ್ರವನ್ನು ಪ್ರಕಟಿಸಿ , ‘ಕುಕಿ’ ಸಮುದಾಯದ ವ್ಯಕ್ತಿಯ ಮನೆ’ ಎಂದು ಛಾಯಾಚಿತ್ರಸಾಲನ್ನು ಬರೆಯಲಾಗಿತ್ತು. ವಾಸ್ತವದಲ್ಲಿ ಇದು ಅರಣ್ಯಾಧಿಕಾರಿಗಳ ಕಚೇರಿಯಾಗಿತ್ತು. ಇದರಿಂದ ‘ಎಡಿಟರ್ಸ್ ಗಿಲ್ಡ್’ ಸುಳ್ಳು ಮಾಹಿತಿ ನೀಡಲು ಪ್ರಯತ್ನಿಸಿದೆ ಎನ್ನುವುದು ಗಮನಕ್ಕೆ ಬರುತ್ತದೆ. ಗಲಭೆಕೋರರಿಗೆ ಉತ್ತೇಜನ ನೀಡುವ ಸಲುವಾಗಿಯೇ ಒಂದು ರೀತಿಯಲ್ಲಿ ಈ ವರದಿಯನ್ನು ಸಿದ್ಧಪಡಿಸಲಾಗಿದೆಯೆಂದು ಹೇಳಬೇಕಾಗುತ್ತದೆ.

ಉದ್ದೇಶ ಒಂದು ಮತ್ತು ಕೆಲಸ ಮತ್ತೊಂದು

೧೯೭೮ ರಲ್ಲಿ ಸ್ಥಾಪನೆಯಾದ ‘ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ’ ಸಂಘಟನೆಯ ಮುಖ್ಯ ಉದ್ದೇಶವೆಂದರೆ ‘ವಾರ್ತಾಪತ್ರಿಕೆಗಳ ಸ್ವಾತಂತ್ರ್ಯವನ್ನು ರಕ್ಷಿಸುವುದು ಮತ್ತು ಪತ್ರಿಕೆಗಳು ಮತ್ತು ಮಾಸಪತ್ರಗಳಂತಹ ನಿಯತಕಾಲಿಕೆಗಳ ಸಂಪಾದಕೀಯದ ಗುಣಮಟ್ಟವನ್ನು ವೃದ್ಧಿಸುವುದು’ ಆಗಿತ್ತು. ಹೀಗಿರುವಾಗಲೂ ಈ ಸಂಘಟನೆಯು ಸಾಮ್ಯವಾದಿ ಮತ್ತು ಜಾತ್ಯತೀತ ಸಂಪಾದಕರಿಂದ ತುಂಬಿರುವುದರಿಂದ ಯಾವಾಗಲೂ ‘ಹಿಂದೂವಿರೋಧಿ ನಿಲುವು’ ತೆಗೆದುಕೊಳ್ಳುವಲ್ಲಿ ಧನ್ಯತೆಯನ್ನು ಹೊಂದಿದೆ. ‘ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ’ ಯಾವತ್ತೂ ಅನ್ಯಾಯಕ್ಕೊಳಗಾದ ಹಿಂದುತ್ವನಿಷ್ಠ ಸಂಪಾದಕರನ್ನು ಬೆಂಬಲಿಸಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಹಿಂದೂವಿರೋಧಿ ಸುದ್ದಿ ನೀಡಿದ ಪತ್ರಕರ್ತರು ಮತ್ತು ಸಂಪಾದಕರ ಬಕೆಟ್ ಹಿಡಿಯುವ ಕೆಲಸ ಮಾಡಿದೆ.

‘ಸನಾತನ ಪ್ರಭಾತ’ ದಿನಪತ್ರಿಕೆಯ ಅಂದಿನ ಸಂಪಾದಕರಾದ ಪೂ. ಪೃಥ್ವಿರಾಜ್ ಹಜಾರೆ ಅವರನ್ನು ಪೊಲೀಸರು ಸುಳ್ಳು ಪ್ರಕರಣಗಳನ್ನು ದಾಖಲಿಸಿ ಎರಡು ಬಾರಿ ಬಂಧಿಸಿದ್ದರು. ಆ ಸಮಯದಲ್ಲಿ, ಇದನ್ನು ‘ಎಡಿಟರ್ಸ ಗಿಲ್ಡ್’ ಒಂದು ಸಾಮಾನ್ಯ ಖಂಡನೆ ಸಹ ವ್ಯಕ್ತಪಡಿಸಿರಲಿಲ್ಲ ‘ನಾವು ಸನಾತನ ಪ್ರಭಾತ ಸಂಪಾದಕರನ್ನು ಸಮರ್ಥಿಸುತ್ತೇವೆ ಎಂದೂ ಹೇಳಲಿಲ್ಲ. ಕಳೆದ ೨೦ ವರ್ಷಗಳಲ್ಲಿ, ಹಿಂದುತ್ವಕ್ಕಾಗಿ ಕೆಲಸ ಮಾಡುತ್ತಿರುವ ಅನೇಕ ಪತ್ರಕರ್ತರು ಮತ್ತು ಸಂಪಾದಕರು ಬಂಧನವನ್ನು ಎದುರಿಸಿದ್ದಾರೆ. ಅದರಲ್ಲಿ ಇದುವರೆಗೆ ಯಾರನ್ನೂ ‘ಎಡಿಟರ್ಸ್ ಗಿಲ್ಡ್’ ಬೆಂಬಲಿಸಿರುವುದು ಕೇಳಿ ಬಂದಿಲ್ಲ.

ಇದರ ವಿರುದ್ಧ ಹಿಂದೂ ದೇವತೆಗಳನ್ನು ಅವಮಾನಿಸಿದ ಪ್ರಕರಣದಲ್ಲಿ ‘ಆಲ್ಟ್ ನ್ಯೂಸ್’ ಇದರ ಸಹಸಂಸ್ಥಾಪಕ ಮಹಮ್ಮದ್ ಜುಬೇರ್ ನನ್ನು ಬಂಧಿಸಿದಾಗ, ತಕ್ಷಣವೇ ‘ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ’ ಅವರ ಬೆಂಬಲಕ್ಕೆ ಮುಂದಾಯಿತು. ವಾಸ್ತವವಾಗಿ, ‘ಈ ಪ್ರಕರಣದಲ್ಲಿ ‘ಎಡಿಟರ್ಸ ಗಿಲ್ಡ್’ವು ‘ಸರ್ಕಾರ ಮಾಡಿದ್ದು ಸರಿ’ ಎಂದು ಹೇಳಿ ‘ಆಲ್ಟ್ ನ್ಯೂಸ್’ನ ಮಹಮ್ಮದ್ ಜುಬೇರ್‌ಗೆ ಛೀಮಾರಿ ಹಾಕಿ, ಇನ್ನು ಮುಂದೆ ಯಾರೂ ಹಿಂದೂ ದೇವರುಗಳನ್ನು ಅವಮಾನಿಸಬಾರದು ಎಂದು ಕರೆ ನೀಡುವುದೆಂದು ನಿರೀಕ್ಷಿಸಲಾಗಿತ್ತು.

ಹಿಂದುಳಿದ ವರ್ಗದ ಮಹಿಳೆಯೊಬ್ಬರು ಅವಳ ಬಗ್ಗೆ ಸುಳ್ಳು ವರದಿ ಪ್ರಕಟಿಸಿದ್ದಾರೆ ಎಂದು ಆರೋಪಿಸಿದಾಗ ಉತ್ತರ ಪ್ರದೇಶ ಪೊಲೀಸರು ‘ಸ್ಕ್ರೋಲ್ ಡಾಟ್ ಇನ್’ ಸಂಪಾದಕಿ ಸುಪ್ರಿಯಾ ಶರ್ಮಾ ವಿರುದ್ಧ ಪ್ರಕರಣ ದಾಖಲಿಸಿದ್ದರು. ತಕ್ಷಣ ಇದನ್ನು ಟೀಕಿಸಿ, ‘ಇದೊಂದು ವಿಪರೀತ ಪ್ರತಿಕ್ರಿಯೆ ಮತ್ತು ಮಾಧ್ಯಮದ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲಾಗುತ್ತಿದೆ’ ಎಂದು ಘೋಷಿಸಿತ್ತು. ಪತ್ರಕರ್ತ ತರುಣ್ ತೇಜಪಾಲ್, ಎಂ.ಜೆ. ಅಕ್ಬರ್, ಗೌತಮ್ ಅಧಿಕಾರಿ ಈ ‘ಎಡಿಟರ್ಸ್ ಗಿಲ್ಡ್’ ಸದಸ್ಯರ ಮೇಲೆ ಲೈಂಗಿಕ ಕಿರುಕುಳ ಪ್ರಕರಣಗಳು ದಾಖಲಾದ ಬಳಿಕವೂ ಅವರು ಸದಸ್ಯರಾಗಿ ಉಳಿದಿದ್ದರು. ೨೦೦೧ ರಲ್ಲಿ ಆಗಿನ ಸರ್ಕಾರ ಭಯೋತ್ಪಾದನಾವಿರೋಧಿ ಪ್ರತಿಬಂಧಕ ಸುಗ್ರೀವಾಜ್ಞೆ ತಂದಿತ್ತು. ಇದರಲ್ಲಿ ಸುಳ್ಳು ಮಾಹಿತಿ ನೀಡುವ ಪತ್ರಕರ್ತರನ್ನು ಬಂಧಿಸಲು ನಿಬಂಧನೆಗಳಿದ್ದವು. ಆಗ ತಕ್ಷಣವೇ ‘ಎಡಿಟರರ್ಸ ಗಿಲ್ಡ್’ನಲ್ಲಿದ್ದ ಸಾಮ್ಯವಾದಿ ಪತ್ರಕರ್ತರಿಗೆ ‘ಈ ಮಸೂದೆ ಜಾರಿಯಾದರೆ ಹಿಂದೂವಿರೋಧಿ ಚಟುವಟಿಕೆ ನಡೆಸಲು ಸಾಧ್ಯವಿಲ್ಲ’ ಎಂದು ಮನದಟ್ಟಾದ ಕೂಡಲೇ ಅದನ್ನು ವಿರೋಧಿಸಿ, ‘ಸಂಸತ್ತು ಸುಗ್ರೀವಾಜ್ಞೆಗಳನ್ನು ಹೊರಡಿಸುವಾಗ ಪತ್ರಕರ್ತರ ಸ್ವಾತಂತ್ರ್ಯವನ್ನು ಗಮನದಲ್ಲಿಟ್ಟುಕೊಳ್ಳಬೇಕು’, ಎಂದು ಹೇಳಿತ್ತು.

ಅರ್ನವ್ ಗೋಸ್ವಾಮಿಯವರ ರಾಜೀನಾಮೆ !

೨೦೨೦ ರಲ್ಲಿ, ‘ರಿಪಬ್ಲಿಕ್ ಟಿವಿ’ಯ ಸಂಪಾದಕರಾದ ಅರ್ನವ್ ಗೋಸ್ವಾಮಿ ಅವರು ತಮ್ಮ ಚಾನೆಲ್‌ನಲ್ಲಿ, ‘ಪಾಲಘರ್ ಪ್ರಕರಣದಲ್ಲಿ ೨ ಅಮಾಯಕ ಹಿಂದೂ ಸಾಧುಗಳನ್ನು ಜನಸಮೂಹ ಹೇಗೆ ಹತ್ಯೆಮಾಡಿತು’ ಎಂದು ಚರ್ಚಿಸುತ್ತಿದ್ದರು. ಆ ಸಮಯದಲ್ಲಿ ಗೋಸ್ವಾಮಿ ಅವರು ಈ ಬಗ್ಗೆ ಚಕಾರವನ್ನೂ ನುಡಿಯದೇ ಮೌನ ವಹಿಸಿದ್ದಕ್ಕಾಗಿ ‘ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ’ದ ಅಧ್ಯಕ್ಷ ಶೇಖರ್ ಗುಪ್ತಾ ವಿರುದ್ಧ ವಾಗ್ದಾಳಿ ನಡೆಸಿದ್ದರು ಮತ್ತು ಸಂಘಟನೆಯ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ ಎಂದು ಆರೋಪಿಸಿ ಸಂಘಟನೆಯ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ಗೋಸ್ವಾಮಿಯವರಂತೆಯೇ, ‘ಎಡಿಟರ್ಸ್ ಗಿಲ್ಡ್’ನ ಸದಸ್ಯರಾದ ಪೆಟ್ರೀಷಿಯಾ ಮುಖಿಮ್ ಅವರು ‘ಸಂಘಟನೆಯು ‘ಸ್ಟಾರ್’ ಸಂಪಾದಕರನ್ನು ಮಾತ್ರ ಸಮರ್ಥಿಸುತ್ತದೆ’ ಎಂದು ಆರೋಪಿಸಿ ೨೦೨೦ ರಲ್ಲಿ ರಾಜೀನಾಮೆ ನೀಡಿದರು,

ಮಣಿಪುರದ ನಿಮಿತ್ತದಿಂದ ಒಟ್ಟಾರೆ ನಿಷ್ಪಕ್ಷಪಾತ ಪತ್ರಿಕೋದ್ಯಮದ ಮುಸುಕನ್ನು ಹಾಕಿಕೊಂಡು ನ್ಯಾಯ ಒದಗಿಸಲು ತಥಾಕಥಿತ ಪ್ರಯತ್ನಿಸುವ ‘ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ’ದ ಹಿಂದೂವಿರೋಧಿ ಮುಖವಾಡ ಈಗ ಜಗತ್ತಿನೆದುರಿಗೆ ಬಂದಿದೆ. ಆದ್ದರಿಂದ ಸರಕಾರವು ಈ ಪ್ರಕರಣದಲ್ಲಿ ಹಿಂದೆ ಸರಿಯದೇ ನಿರಂತರವಾಗಿ ದ್ವಿಮುಖ ನೀತಿಯನ್ನು ಅನುಸರಿಸುವ ‘ಎಡಿಟರ್ಸ ಗಿಲ್ಡ’ನ ಬೇರುಗಳನ್ನು ಅಲ್ಲಾಡಿಸಿ ‘ಅದರ ಹಿಂದೆ ಯಾರಿದ್ದಾರೆ?’, ‘ಅದಕ್ಕೆ ಯಾರು ಆರ್ಥಿಕ ಸಹಾಯ ಮಾಡುತ್ತಾರೆ?’, ಎನ್ನುವ ಸತ್ಯವನ್ನು ಹೊರತೆಗೆದು ಜನರೆದುರಿಗೆ ಮಂಡಿಸಿ ಹಿಂದೂವಿರೋಧಿ ಪತ್ರಿಕಾ ವರದಿಗೆ ತಕ್ಕ ಪಾಠ ಕಲಿಸಬೇಕು.

ಸರಕಾರ ಈಗಲಾದರೂ ಹಿಂದೂಗಳನ್ನು ಯಾವಾಗಲೂ ಆರೋಪಿಯ ಪಂಜರದೊಳಗೆ ನಿಲ್ಲಿಸುವ ‘ಎಡಿಟರ್ಸ ಗಿಲ್ಡ’ ಸಂಘದ ವಿಸ್ತ್ರತ ತನಿಖೆ ನಡೆಸಬೇಕು.