ನಟ ಕಮಲ ಹಾಸನ ಇವರಿಂದ ಉದಯನಿಧಿಯವರು ನೀಡಿದ ಸನಾತನ ಧರ್ಮದ್ವೇಷಿ ಹೇಳಿಕೆಗೆ ಬೆಂಬಲ !
ಚೆನ್ನೈ (ತಮಿಳುನಾಡು) – ಉದಯ ನಿಧಿ ಸ್ಟಾಲಿನ್ ಇವರಿಗೆ ಸನಾತನ ಧರ್ಮದ ಬಗ್ಗೆ ಅವರ ಅಭಿಪ್ರಾಯ ಮಂಡಿಸುವ ಅಧಿಕಾರ ಇದೆ. ಹಾಗಾದರೆ ನೀವು ಅವರ ದೃಷ್ಟಿಕೋನದ ಜೊತೆಗೆ ಒಪ್ಪಿಗೆ ಇಲ್ಲದಿದ್ದರೆ, ಅವರನ್ನು ಬೆದರಿಸುವುದು, ಕಾನೂನ ರೀತಿಯಲ್ಲಿ ಅವರನ್ನು ಸಿಲುಕಿಸುವ ಪ್ರಯತ್ನ ಮಾಡುವುದು ಅಥವಾ ಸಂಕುಚಿತ ರಾಜಕೀಯ ಲಾಭಕ್ಕಾಗಿ ಅವರ ಶಬ್ದಗಳನ್ನು ತಿರುಚುವ ಬದಲು ಸನಾತನ ಧರ್ಮದ ವೈಶಿಷ್ಟ್ಯ ಸಾರುವ ಚರ್ಚೆ ನಡೆಸುವುದು ಮಹತ್ವದ್ದಾಗಿದೆ, ಎಂದು ನಟ ಕಮಲ ಹಾಸನ್ ಇವರು ಉದಯನಿಧಿ ಸ್ಟಾಲಿನ್ ಇವರ ಸನಾತನ ಧರ್ಮದ ಕುರಿತು ಹೇಳಿಕೆಯ ಬಗ್ಗೆ ಟ್ವೀಟ್ ಮಾಡಿ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದರು. (ಇಸ್ಲಾಂನ ವಿರುದ್ಧ ಯಾರಾದರೂ ಅಭಿಪ್ರಾಯ ಮಂಡಿಸಿದರೆ, ಸರ್ ತನಸೇ ಜುದ (ದೇಹದಿಂದ ತಲೆಯನ್ನು ಬೇರ್ಪಡಿಸುವುದು) ಈ ರೀತಿಯ ಬೆದರಿಕೆ ನೀಡಲಾಗುತ್ತದೆ. ಅದಕ್ಕೆ ಕಮಲ ಹಾಸನ ಎಂದಾದರೂ ಚರ್ಚೆ ನಡೆಸುವ ಸಲಹೆ ನೀಡಿದ್ದಾರೆಯೇ ? ನೂಪುರ ಶರ್ಮಾ ಇವರ ಪ್ರಕಾರಣದಲ್ಲಿ ಕಮಲ ಹಾಸನ್ ಏಕೆ ಮೌನವಾಗಿದ್ದರು ? ಕನ್ಹೈಯಾಲಾಲ ಇವರ ಶಿರಚ್ಚೆದದ ಬಗ್ಗೆ ಅವರು ಏಕೆ ಮಾತನಾಡಲಿಲ್ಲ ? – ಸಂಪಾದಕರು)
(ಸೌಜನ್ಯ – MIRROR NOW)
ಕಮಲ ಹಾಸನ್ ಮಾತು ಮುಂದುವರೆಸುತ್ತಾ, ನಾಗರಿಕರಿಗೆ ಯಾವುದಾದರೂ ವಿಷಯದ ಬಗ್ಗೆ ಒಪ್ಪಿಗೆ ಆಗದಿದ್ದರೆ ಮತ್ತು ಸತತ ಚರ್ಚೆ ನಡೆಸುವ ಕ್ಷಮತೆ ಇದೇ ನಿಜವಾದ ಪ್ರಜಾಪ್ರಭುತ್ವದ ವೈಶಿಷ್ಟವಾಗಿದೆ. ಯೋಗ್ಯ ಪ್ರಶ್ನೆ ಕೇಳಿದರೆ ಅನೇಕ ಮಹತ್ವಪೂರ್ಣ ಉತ್ತರಗಳು ಸಿಗುತ್ತವೆ ಇತಿಹಾಸದಲ್ಲಿ ನಮಗೆ ಮತ್ತೆ ಮತ್ತೆ ಅದನ್ನೇ ಕಲಿಸಲಾಗಿದೆ ಮತ್ತು ಒಂದು ಒಳ್ಳೆಯ ಸಮಾಜ ಎಂದು ನಮ್ಮ ವಿಕಾಸದಲ್ಲಿ ಕೊಡುಗೆ ನೀಡಿದೆ ಎಂದು ಹೇಳಿದರು.
ಸಂಪಾದಕೀಯ ನಿಲುವುಉದಯನಿಧಿ ಇವರ ಪಕ್ಷದ ಮತ್ತು ಅವರ ಅಜ್ಜ ಕರುಣಾನಿಧಿ ಇವರದ್ದು ಸನಾತನದ್ವೇಷ ವಿಚಾರಧಾರೆ ಇತ್ತು ಮತ್ತು ಅದರ ಆಧಾರವಾಗಿ ಅವರ ಪಕ್ಷ ತಮಿಳುನಾಡಿನಲ್ಲಿ ರಾಜಕಾರಣ ಮಾಡುತ್ತಾ ಅಧಿಕಾರ ಪಡೆಯುವ ಪ್ರಯತ್ನ ಮಾಡುತ್ತಾ ಬಂದಿದೆ. ಸರ್ವಧರ್ಮಸಮಭಾವದ ವಿರುದ್ಧ ವರ್ತಿಸುವವರು ಸನಾತನ ಧರ್ಮದ ಬಗ್ಗೆ ದ್ವೇಷದ ವಿಚಾರ ಮಂಡಿಸುವ ಅಧಿಕಾರ ನೀಡಲಾಗುವುದಿಲ್ಲ ! ಉದಯನಿಧಿ ಎಂದಾದರೂ ಇತರ ಧರ್ಮದ ಬಗ್ಗೆ ಅವರನ್ನು ಮುಗಿಸುವ ಅಭಿಪ್ರಾಯ ಮಂಡನೆ ಅಧಿಕಾರ ತೋರಿಸುವುದಿಲ್ಲ. ಅದರ ಬಗ್ಗೆ ಕಮಲ ಹಾಸನ ಏಕೆ ಮಾತನಾಡುವುದಿಲ್ಲ ? |