ಧರ್ಮ ಸಂಸ್ಥಾಪಕ ಭಗವಂತ ಶ್ರೀ ಕೃಷ್ಣನ ಕುರಿತು ಆಕ್ಷೇಪ ಮತ್ತು ಅದರ ಖಂಡನೆ

ಈಗ ಬುದ್ಧಿಪ್ರಾಮಾಣವಾದಿ, ನಾಸ್ತಿಕರು ಮುಂತಾದ ವ್ಯಕ್ತಿಗಳು ಹಿಂದೂಗಳ ಧರ್ಮಗ್ರಂಥಗಳನ್ನು ದೇವತೆಗಳನ್ನು ಮತ್ತು ಮಹಾಪುರುಷರನ್ನು ಟೀಕಿಸಿ ಹಿಂದೂಗಳ ಬುದ್ಧಿ ಭ್ರಮಣೆ ಮಾಡುತ್ತಾರೆ. ಇಂತಹ ಟೀಕೆಗಳಿಗೆ ಯೋಗ್ಯವಾದ ಆಕ್ಷೇಪಣೆ ಮಾಡದೇ ಇದ್ದರೆ ಹಿಂದೂಗಳ ಶ್ರದ್ಧೆ ಡೋಲಾಯಮಾನವಾಗುತ್ತದೆ, ಹಾಗೂ ಧರ್ಮ ಹಾನಿಯೂ ಆಗುತ್ತದೆ. ಅಯೋಗ್ಯ ಟೀಕೆಗಳಿಗೆ ತಡೆ ಹಾಕುವುದು ಇದು ಕೂಡ ಕಾಲಾನುಸಾರ ಅವಶ್ಯಕವಾಗಿರುವ ಧರ್ಮ ಪಾಲನೆಯೇ ಆಗಿದೆ. ಇದೆ ಉದ್ದೇಶದಿಂದ ಈ ಲೇಖನದಲ್ಲಿ ಶ್ರೀ ಕೃಷ್ಣನ ಕುರಿತಾದ ಆಕ್ಷೇಪ ಮತ್ತು ಅದರ ಖಂಡನೆ ನೀಡಲಾಗಿದೆ. ಪ್ರತಿಯೊಬ್ಬರೂ ಇದನ್ನು ಅಭ್ಯಾಸ ಪೂರ್ವಕ ಮನನ ಮಾಡಬೇಕು. ಭಗವಂತ ಶ್ರೀ ಕೃಷ್ಣನ ಕುರಿತಾದ ಟೀಕೆಗಳಿಗೆ ಆಕ್ಷೇಪ ಎಂಬ ಶೀರ್ಷಿಕೆಯನ್ನೂಮತ್ತು ಅದರ ನಂತರ ಆ ಅಯೋಗ್ಯ ವಿಚಾರಕ್ಕೆ ಪ್ರತಿವಾದವನ್ನು, ಆಕ್ಷೇಪದ ಖಂಡನೆ ಈ ಶೀರ್ಷಿಕೆ ಅಡಿಯಲ್ಲಿ ನೀಡಿದ್ದೇವೆ.

ಆಕ್ಷೇಪ ಕ್ರ. ೧

ದಯಾ ತಿಚೆ ನಾವ ಭೂತಾಚೆ ಪಾಳನ ! ಹೀಗೆ ಸಂತವಚನ ಇರುವಾಗ ಶ್ರೀ ಕೃಷ್ಣನು ಮಾತ್ರ ದುರ್ಯೋಧನಾದಿ üಕೌರವರ ಮೇಲೆ ದಯೆ ತೋರಲಿಲ್ಲ!: ಶ್ರೀ ಕೃಷ್ಣ ತನ್ನನ್ನು ಪರಮೇಶ್ವರನ ಅವತಾರ ಎಂದು ಹೇಳಿಕೊಳ್ಳುತ್ತಾನೆ. ಇಂತಹ ಅವತಾರವು ಶಾಂತಿಸ್ಥಾಪಿಸುವ ಬದಲು ಅರ್ಜುನನಿಗೆ ಪ್ರಚೋದಿಸಿದನು. ಅರ್ಜುನನಿಗೆ ಯುದ್ಧ ಮಾಡಬೇಕೆಂದು ಇರಲಿಲ್ಲ ಆದರೂ ಕೂಡ ಶ್ರೀ ಕೃಷ್ಣನು ಅವನ ಬುದ್ಧಿ ಭ್ರಮಣೆ ಮಾಡಿ ಅವನಿಗೆ ತನ್ನವರ ವಿರುದ್ಧ ಹೋರಾಡುವಂತೆ ಮಾಡಿದನು. ಈ ಯುದ್ಧದಲ್ಲಿ ಲಕ್ಷಾಂತರ ಸೈನಿಕರು ಜೀವ ಕಳೆದುಕೊಂಡರು. ಅವರ ಪತ್ನಿಯರು ವಿಧವೆಯರಾದರು. ಇದೆಲ್ಲಾ ಮಾಡಿ ಕೂಡ ಅವನು ತನ್ನ ಹೆಸರು ಎಲ್ಲಿಯೂ ಬರದಂತೆ ನೋಡಿಕೊಂಡನು.
ಅಹಿಂಸೆಯೇ ಪರಮ ಧರ್ಮವಾಗಿರುವ ಈ ದೇಶದ ಮಹಾನ ಪರಂಪರೆಯನ್ನು ಈ ಧೂರ್ತ ಮತ್ತು ನಿಪುಣನಾಗಿರುವ ಶ್ರೀ ಕೃಷ್ಣನು ಮಣ್ಣುಮುಕ್ಕಿಸಿದನು. ಭಾರತೀಯರ ಅಹಿಂಸಾಧರ್ಮಕ್ಕೆ ಇವನಿಂದಲೇ ನಿಜವಾದ ತೊಂದರೆ ಬಂದಿತು. ಅಹಿಂಸೆ ಎಂದರೆ ದಯೆ ತೋರಿಸುವುದು ! ಶ್ರೀ ಕೃಷ್ಣನು ದುರ್ಯೋಧನಾದಿ üಕೌರವರಿಗೆ ದಯ ತೋರಿಸಬೇಕಿತ್ತು. ದಯಾ ತಿಚೆ ನಾವ ಭೂತಾಚೆ ಪಾಳನ ! ಎಂಬ ಸಂತ ವಚನವೇ ಇದೆ.

ಆಕ್ಷೇಪದ ಖಂಡನೆ

ಅ. ದಯೆಯಲ್ಲಿ ದುಷ್ಟರ ನಾಶ ಕೂಡ ಒಳಗೊಂಡಿದೆ!: ಭಗವಂತ ಶ್ರೀ ಕೃಷ್ಣನ ಕುರಿತು ಆಕ್ಷೇಪಿಸುವವರು ಸಂತ ವಚನದ ಸಾಕ್ಷಿ ನೀಡಿ ನಮ್ಮ ಕೆಲಸ ಸುಲಭ ಮಾಡಿದ್ದಾರೆ ; ಆದರೆ ಅವರು ಸಂತ ವಚನದ ಅರ್ಧಭಾಗ ಮಾತ್ರ ಹೇಳಿದ್ದಾರೆ. ದಯಾ ತಿಚೆ ನಾವ ಭೂತಾಚೆ ಪಾಳನ ! ಈ ವಚನದ ಮುಂದಿನ ಚರಣ ಹೀಗಿದೆ, ಆಣಿಕ ನಿರ್ದಾಳಣ ಕಂಟಕಾಚೆ ! ಎಂದರೆ ಕೇವಲ ಜೀವ ಪ್ರಾಣಿಗಳ ಮೇಲೆ ಪ್ರೀತಿ ತೋರಿಸು ಎಂದರೆ ದುಷ್ಟರ ನಾಶ ಇದು ಕೂಡ ದಯೆಯೇ ಆಗಿದೆ. ದಯೆ ಎಂದರೆ ಪ್ರಾಣಿಮಾತ್ರರ ಪಾಲನೆ ಮಾಡುವುದು, ಆದರೂ ದಯೆಯ ಸೂಕ್ಷ್ಮ ವಿಚಾರ ಮಾಡಿದರೆ ಗಮನಕ್ಕೆ ಬರುತ್ತದೆ ಏನೆಂದರೆ ದಯೆಯಲ್ಲಿ ದುಷ್ಟರ ನಾಶ ಕೂಡ ಒಳಗೊಂಡಿದೆ. ನಿಜವಾದ ವಿಚಾರವಂತರು ಸ್ಥೂಲ ಮತ್ತು ಸೂಕ್ಷ್ಮ ಹೀಗೆ ಎರಡು ಸ್ತರದಲ್ಲಿ ವಿಚಾರ ಮಾಡುತ್ತಾರೆ ; ಏಕೆಂದರೆ ಧರ್ಮದ ತತ್ವಗಳು ಸೂಕ್ಷ್ಮವಾಗಿವೆ. ಆದ್ದರಿಂದ ಯಾವುದಾದರೂ ಗಹನ ವಿಷಯದ ಬಗ್ಗೆ ಸೂಕ್ಷ್ಮ ವಿಚಾರ ಮಾಡದೆ ಅಭಿಪ್ರಾಯ ವ್ಯಕ್ತಪಡಿಸುವುದು ಎಂದರೆ ಮನಸ್ಸಿನಿಂದ ಕೆಟ್ಟವರಾಗಿರುವವರ ಮತ್ತು ರೂಪದಿಂದ ಒಳ್ಳೆಯವರಂತೆ ಕಾಣಿಸುವ ಮನುಷ್ಯನ ಸ್ತುತಿ ಮಾಡಿದ ಹಾಗೆ ಆಗುವುದು.

ಆ. ಕೌರವರು ೫ ಗ್ರಾಮಗಳನ್ನು ಕೂಡ ಪಾಂಡವರಿಗೆ ನೀಡಲು ಒಪ್ಪಲಿಲ್ಲ ಆದ್ದರಿಂದ ಶ್ರೀ ಕೃಷ್ಣನು ಯುದ್ಧದ ನಿರ್ಣಯ ನೀಡಿದನು !: ಭಾರತೀಯ ದಂಡ ಸಂಹಿತೆಯ ಕಲಂ ಮುನ್ನೂರರಲ್ಲಿ ಕೊಲೆಯ ವ್ಯಾಖ್ಯೆಯಲ್ಲಿ ಇನ್ನೊಬ್ಬರನ್ನು ಕೊಲ್ಲುವುದು ಎಂದರೆ ಕೊಲೆ ಎಂದಷ್ಟೇ ಸ್ಥೂಲವಿಚಾರ ನೀಡಿಲ್ಲ, ಆತ್ಮ ರಕ್ಷಣೆಗಾಗಿ ಏನಾದರೂ ಒಬ್ಬನಿಂದ ಇನ್ನೊಬ್ಬನ ಕೊಲೆಯಾಗಿದ್ದರೆ ಅದು ಕೊಲೆ ಆಗುವುದಿಲ್ಲ ಎಂಬ ಸೂಕ್ಷ್ಮ ವಿಚಾರ ಕೂಡ ಮಾಡಿದೆ, ಇಂತಹ ಸೂಕ್ಷ್ಮದೃಷ್ಟಿಯಿಂದ ವಿಚಾರ ಮಾಡಿದರೆ ತಿಳಿಯುವುದು ಏನೆಂದರೆ, ಶ್ರೀ ಕೃಷ್ಣನು ಯುದ್ಧದ ನಿರ್ಣಯ ನೀಡುವುದು ಇದು ಅಹಿಂಸೆಯ ವಿರುದ್ಧವಿರಲಿಲ್ಲ.

ಕೌರವರು ಪಾಂಡವರ ಮೇಲೆ ಪರಾಕಾಷ್ಠೆಯ ಅನ್ಯಾಯ ಮಾಡಿದ್ದರು. ಕಪಟದಿಂದ ಆಡಿದ ಜೂಜಾಟದಲ್ಲಿ ಪಾಂಡವರ ರಾಜ್ಯ ಕಸಿದುಕೊಂಡಿದ್ದರು. ಅವರಿಗೆ ೧೨ ವರ್ಷ ವನವಾಸ ಮತ್ತು ೧ ವರ್ಷ ವರ್ಷ ಅಜ್ಞಾತವಾಸ ಅನುಭವಿಸಬೇಕಾಯಿತ್ತು. ೧೩ ವರ್ಷಗಳ ನಂತರ ಅವರ ರಾಜ್ಯ ಹಿಂತಿರುಗಿಸಲು ಕೌರವರು ಒಪ್ಪಿದ್ದರು. ಆದರೆ ಪಾಂಡವರ ರಾಜ್ಯ ಹಿಂತಿರುಗಿಸಲು ಅವರು ನಿರಾಕರಿಸಿದರು. ಪರಸ್ಪರರಲ್ಲಿ ಹೊಂದಾಣಿಕೆ ಆಗಬೇಕೆಂದು ಶ್ರೀ ಕೃಷ್ಣನು ಸಂಧಿ ನಡೆಸಿದನು. ಸಂಧಿಯ ಸಮಯದಲ್ಲಿ ಶ್ರೀ ಕೃಷ್ಣನು ಕೌರವರು ಪಾಂಡವರಿಗೆ ಅವರ ಸಂಪೂರ್ಣ ರಾಜ್ಯ ನೀಡಲು ತಯಾರು ಇರಲಿಲ್ಲವೆಂದರೆ ಐದು ಗ್ರಾಮವಾದರೂ ನೀಡಬೇಕೆಂಬ ಪ್ರಸ್ತಾವ ಮಂಡಿಸಿದನು. ಇದರ ಹಿಂದೆ ಯುದ್ಧ ತಪ್ಪಿಸುವ ಪ್ರಯತ್ನದ ಉದ್ದೇಶವೇ ಇತ್ತು. ಕೌರವರು ಈ ಪ್ರಸ್ತಾವವನ್ನು ಕೂಡ ತಿರಸ್ಕರಿಸಿದರು ಮತ್ತು ಯುದ್ಧ ಇಲ್ಲದೆ ನಾವು ಪಾಂಡವರಿಗೆ ಐದು ಗ್ರಾಮ ಅಷ್ಟೇ ಏಕೆ ಸೂಜಿಯ ತುದಿಯ ಅಷ್ಟು ಜಾಗ ಕೂಡ ನೀಡುವುದಿಲ್ಲ ಎಂದು ಹೇಳಿದರು. ಇಂಥ ಪರಿಸ್ಥಿತಿಯಲ್ಲಿ ನ್ಯಾಯ ಸ್ಥಾಪಿಸುವುದಕ್ಕಾಗಿ ಯುದ್ಧ ಬಿಟ್ಟರೆ ಬೇರೆ ಪರಿಹಾರ ಇರಲಿಲ್ಲ ಆದ್ದರಿಂದ ಶ್ರೀ ಕೃಷ್ಣನು ಅರ್ಜುನನಿಗೆ ಯುದ್ಧದ ನಿರ್ಣಯ ನೀಡಿದನು.

ಆಕ್ಷೇಪ ಕ್ರ. ೨

ಕೃಷ್ಣನು ಅರ್ಜುನನಿಂದ ಅನ್ಯಾಯ ಮತ್ತು ಅನೈತಿಕತೆಯಿಂದ ಮಹಾತ್ಮಾ ಕರ್ಣನನ್ನು ವಧಿಸಿದನು. ಶ್ರೀ ಕೃಷ್ಣ ಅತ್ಯಂತ ಕಪಟಿಯಾಗಿದ್ದನು. ನ್ಯಾಯ, ನೀತಿ ಮತ್ತು ಧರ್ಮ ಇದರ ಬಗ್ಗೆ ಅವನಿಗೆ ಕಾಳಜಿ ಇರಲಿಲ್ಲ. ಅವನ ಮನಸ್ಸಿನಲ್ಲಿ ಕರ್ಣನ ಬಗ್ಗೆ ದ್ವೇಷವಿತ್ತು. ಯುದ್ಧದ ಸಮಯದಲ್ಲಿ ಕರ್ಣನ ರಥ ಭೂಮಿಯಲ್ಲಿ ಹೂತುಹೋಗಿತ್ತು. ಕರ್ಣ ರಥದ ಚಕ್ರವನ್ನು ಹೊರತೆಗೆಯಲು ಪ್ರಯತ್ನಿಸುತ್ತಿದ್ದನು , ಆದರೂ ಕೂಡ ಶ್ರೀ ಕೃಷ್ಣನ ಅರ್ಜುನನಿಗೆ ಹೇಳಿದನು, ಅರ್ಜುನ ನೀನು ಕರ್ಣನ ಮೇಲೆ ಶರಸಂದಾನ ಮಾಡು. ಅವನ ಮಾತಿನ ಕಡೆಗೆ ಗಮನ ನೀಡಬೇಡ. ಕರ್ಣನ ರಥದ ಚಕ್ರ ಭೂಮಿಯಲ್ಲಿ ಹುಗಿದಿರುವಾಗ ಅವನ ಮೇಲೆ ಬಾಣದ ಸುರಿಮಳೆ ಮಾಡಿಸಿ ಕರ್ಣನ ಹತ್ಯೆಯಲ್ಲಿ ಪರೋಕ್ಷವಾಗಿ ಸಹಭಾಗಿ ಆದ ಶ್ರೀ ಕೃಷ್ಣ ಧರ್ಮ ಸಂಸ್ಥಾಪನೆಗಾಗಿ ರುವ ಅವತಾರವಾಗಿದ್ದಾನೆ ಎಂಬುದರ ಮೇಲೆ ವಿಶ್ವಾಸ ಹೇಗೆ ಇಡುವುದು? ಅಧರ್ಮಿ ಶ್ರೀ ಕೃಷ್ಣನು ಮಹಾತ್ಮಾ ಕರ್ಣನನ್ನು ಮೋಸದಿಂದ ವಧಿಸಿದನು.

ಆಕ್ಷೇಪದ ಖಂಡನೆ

ಅ. ದ್ರೌಪದಿಯನ್ನು ತುಂಬಿದ ಸಭೆಯಲ್ಲಿ ಕರೆದೊಂದು ವಿವಸ್ತ್ರಗೊಳಿಸುವ ಕಲ್ಪನೆ ಕರ್ಣನದ್ದೇ ಆಗಿತ್ತು ! :

ಇಂದಿನ ಕಾಲದಲ್ಲಿ ಕರ್ಣನಿಗೆ ಮಹಾತ್ಮ ಎಂದು ಹೇಳುವ ಪ್ರಯತ್ನ ನಡೆಯುತ್ತಿದೆ. ಖಳನಾಯಕನನ್ನು ನಾಯಕನನ್ನಾಗಿಸುವ ಒಂದು ಚಾಳಿಯೇ ನಡೆಯುತ್ತಿದೆ. ಖಳನಾಯಕನನ್ನು ನಾಯಕನನ್ನಾಗಿ ಬಿಂಬಿಸುವುದು ಚಾಳಿಯೆ ನಡೆಯುತ್ತಿದೆ. ಎಲ್ಲಾ ಸದ್ಗುಣಗಳನ್ನು ಒಟ್ಟಾಗಿ ಸೇರಿಸಿ ಅದರ ಸಾರ ತೆಗೆದು ಅದನ್ನು ಒಂದು ಅಚ್ಚಿನಲ್ಲಿ ಹಾಕಿದರೆ ಅದರಿಂದ ನಿರ್ಮಾಣವಾಗಿರುವ ಸದ್ಗುಣದ ಮೂರ್ತಿ ಎಂದರೆ ಕರ್ಣ! ಎಂದು ಸಾರುವ ಕೆಲವು ಪುಸ್ತಕಗಳು ದೊರೆಯುತ್ತವೆ. ಕರ್ಣನನ್ನು ವೈಭವೀಕರಿಸುವವರು ಅವನ ಪರ ಒಳ್ಳೆಯ ರೀತಿಯಲ್ಲಿ ವಕೀಲಿ ಮಾಡಿದ್ದಾರೆ. ಆದರೆ ಮಹಾಭಾರತದ ಬಗ್ಗೆ ಅವರಿಂದ ಒಳ್ಳೆಯ ಅಧ್ಯಯನವಾಗಿದೆ ಎಂದು ಹೇಳಲು ಸಾಧ್ಯವಿಲ್ಲ.

ಶ್ರೀ. ದುರ್ಗೇಶ ಪರುಳಕರ

ಜೂಜಾಟದ ಸಮಯದಲ್ಲಿ ಧರ್ಮರಾಜನು ದ್ರೌಪದಿಯನ್ನು ಪಣಕ್ಕೆ ಇಟ್ಟನು, ಮತ್ತು ಅವನು ಸೋತನು. ದ್ರೌಪದಿಯನ್ನು ಪಣಕ್ಕೆ ಇಟ್ಟ ತಕ್ಷಣ ಭೀಷ್ಮ, ದ್ರೋಣ, ಕೃಪ ಮತ್ತು ವಿದುರಾ ಇವರಂತಹ ಎಲ್ಲಾ ಸಜ್ಜನರು ಕೊರಗಿದರು. ಮಹಾಭಾರತದಲ್ಲಿ ವ್ಯಾಸರು ಇದರ ಬಗ್ಗೆ ಹೇಳಿರುವುದು , ಧಿಗ್ಧಿಗಿತ್ಯೇವ ವೃದ್ಧಾನಾಂ ಸಭ್ಯಾನಾಂ ನಿಃಸೃತಾ ಗಿರಃ !(ಮಹಾಭಾರತ, ಪರ್ವ ೨, ಅಧ್ಯಾಯ ೫೮, ಶ್ಲೋಕ ೩೮) ಅಂದರೆ ಧಿಕ್ಕಾರವಾಗಲಿ ! ಧಿಕ್ಕಾರವಾಗಲಿ! ಎಂಬ ಪದಗಳು ವೃದ್ಧ ಸಭಿಕರ ಬಾಯಿಂದ ಹೊರ ಬಂದವು. ಕರ್ಣನು ಮಾತ್ರ ಆನಂದಿತನಾಗಿದ್ದನು. ದ್ರೌಪದಿಯನ್ನು ತುಂಬಿರುವ ಸಭೆಯಲ್ಲಿ ಕರೆತಂದು ವಿವಸ್ತ್ರಗೊಳಿಸುವ ಕಲ್ಪನೆ ದುರ್ಯೋಧನನದ್ದು ಅಥವಾ, ದುಶಾಸನನದ್ದಾಗಿರಲಿಲ್ಲ. ದ್ರೌಪದಿ ಏಕವಸ್ತ್ರದಲ್ಲಿರಲಿ ಅಥವಾ ವಿವಸ್ತ್ರಳಾಗಿರಲಿ ಆಕೆಯನ್ನು ಸಭೆಗೆ ಕರೆ ತರಲೇಬೇಕು ! ಎಂಬುದು ಕರ್ಣನ ಕಲ್ಪನೆಯಾಗಿತ್ತು. ದುಃಶಾಸನನು ರಜಸ್ವಲೆಯಾಗಿದ್ದ ಮತ್ತು ಏಕವಸ್ತ್ರದಲ್ಲಿರುವ ದ್ರೌಪದಿಯನ್ನು ರಾಜಸಭೆಗೆ ಕರೆ ತಂದನು, ಆಗ ಕರ್ಣನು ಕೂಗಿ ಹೇಳಿದನು, ಪಾಂಡವಾನಾಂ ಚ ವಾಸಾಂಸಿ ದೌಪದ್ಯಾಶ್ಚಾಪ್ಯೂಪಾಹರ !(ಮಹಾಭಾರತ, ಪರ್ವ ೨, ಅಧ್ಯಾಯ ೬೧, ಶ್ಲೋಕ ೩೮) ಅಂದರೆ ಪಾಂಡವ ಮತ್ತು ದ್ರೌಪದಿ ಇವರಿಬ್ಬರ ವಸ್ತ್ರಗಳನ್ನು ಕಸಿದುಕೊಳ್ಳಿ. ದ್ರೌಪದಿಯನ್ನು ತುಂಬಿರುವ ಸಭೆಯಲ್ಲಿ ವಿವಸ್ತ್ರಗೊಳಿಸುವ ಕರ್ಣ ಮಹಾತ್ಮ ನಾಗಲು ಸಾಧ್ಯವಿದೆಯೇ ?

ಆ. ಕರ್ಣನ ತನಗಾಗಿ ಸಿದ್ಧಮಾಡಿಟ್ಟಿದ್ದ ಎರಡನೆಯ ರಥ ಉಪಯೋಗಿಸುವ ಬದಲು ಉದ್ದೇಶಪೂರ್ವಕವಾಗಿ ಭೂಮಿಯಲ್ಲಿ ಹುಗಿದಿದ್ದ ರಥಧ ಚಕ್ರ ತೆಗೆಯುವ ಪ್ರಯತ್ನ ನಡೆಸಿ ಸಮಯ ಮುಂದೂಡುತ್ತಿದ್ದ. ಕರ್ಣನ ರಥದ ಚಕ್ರ ಭೂಮಿಯಲ್ಲಿ ಹುಗಿದಿತ್ತು. ಆಗ ಕರ್ಣನು ಅರ್ಜುನನಿಗೆ ಹೇಳಿದನು, ಸ್ವಲ್ಪ ಸಮಯ ನಿಲ್ಲು ನಾನು ನನ್ನ ರಥದ ಚಕ್ರ ಹೊರತೆಗೆಯುತ್ತೇನೆ. ಆ ಸಮಯದಲ್ಲಿ ಶ್ರೀ ಕೃಷ್ಣನು ಅರ್ಜುನನಿಗೆ ಹೇಳಿದನು, ಅರ್ಜುನ ಯುದ್ಧ ನಿಲ್ಲಿಸಬೇಡ, ಅದನ್ನು ಮುಂದುವರೆಸು. ಯುದ್ಧದ ಮೊದಲು ಕರ್ಣನು ದುರ್ಯೋಧನನಿಗೆ ಹೇಳಿದ್ದನು, ದುರ್ಯೋಧನ ಯುದ್ಧದ ಸರಿ ಸಮಯದಲ್ಲಿ ನನ್ನ ರಥದ ಚಕ್ರ ಭೂಮಿಯಲ್ಲಿ ಹುಗಿಯುವುದು, ಎಂದು ನನಗೆ ಶಾಪ ನೀಡಲಾಗಿದೆ. ಆದ್ದರಿಂದ ಅಂತಹ ಪ್ರಸಂಗ ಬಂದರೆ, ಉತ್ತಮವಾದ ಕುದುರೆಗಳನ್ನು ಜೋಡಿಸಿರುವ ಉತ್ಕೃಷ್ಟವಾದಂತಹ ರಥ ನನ್ನ ರಥದ ಹಿಂದೆ ಸಿದ್ಧವಿರಲಿ.
ಕರ್ಣನ ಈ ವಿನಂತಿ ಒಪ್ಪಿ ದುರ್ಯೋಧನನು ಅವನಿಗಾಗಿ ಪರ್ಯಾಯ ರಥದ ವ್ಯವಸ್ಥೆ ಮಾಡಿದ್ದನು. ಕರ್ಣನು ಅವನ ರಥದ ಚಕ್ರ ಭೂಮಿಯಿಂದ ಹೊರತೆಗೆಯುವ ಬದಲು ಅವನ ಇನ್ನೊಂದು ರಥವನ್ನೇಕೆ ಉಪಯೋಗಿಸಲಿಲ್ಲ ? ಆ ಕಾಲದಲ್ಲಿ ಯುದ್ಧದ ನಿಯಮಗಳ ಪ್ರಕಾರ ಸೂರ್ಯಸ್ತದ ನಂತರ ಯುದ್ಧ ನಿಲ್ಲಿಸಬೇಕಿತ್ತು. ಕರ್ಣನ ರಥದ ಚಕ್ರ ಹುಗಿದಿರುವಾಗ ಸೂರ್ಯಸ್ತದ ಸಮಯ ಸಮೀಪದಲ್ಲಿತ್ತು. ಅದನ್ನು ತಿಳಿದು ಬೇಕಂತಲೇ ಸಮಯ ಮುಂದೂಡುವುದಕ್ಕಾಗಿ ಕರ್ಣನು ಇನ್ನೊಂದು ರಥವನ್ನು ಉಪಯೋಗಿಸಲಿಲ್ಲ. ಅವನು ರಥದ ಚಕ್ರ ಹೊರತೆಗೆಯುವ ಪ್ರಯತ್ನ ಮಾಡುತ್ತಿದ್ದನು. ನಡೆಯುತ್ತಿರುವ ಯುದ್ಧ ಇದರಿಂದ ನಿಲ್ಲಿಸುವುದು ಮತ್ತು ಮರುದಿನ ದಣಿವು ಆರಿಸಿಕೊಂಡು ಯುದ್ಧ ಮಾಡುವುದು ಇದು ಅವನ ಉದ್ದೇಶವಾಗಿತ್ತು. ಕರ್ಣನ ಈ ಧೂರ್ತತನವು ಶ್ರೀ ಕೃಷ್ಣನಿಗೆ ತಿಳಿದಿತ್ತು, ಆದ್ದರಿಂದ ಶ್ರೀ ಕೃಷ್ಣನು ಅರ್ಜುನನಿಗೆ ಕರ್ಣನ ಜೊತೆ ಯುದ್ಧ ಮುಂದುವರಿಸು ಎಂದು ಆದೇಶ ನೀಡಿದನು. ಕರ್ಣನು ಪಾಂಡವರ ಜೊತೆಗೆ ನ್ಯಾಯ ಮತ್ತು ನೀತಿಯಿಂದ ವರ್ತಿಸಲಿಲ್ಲ. ಅನ್ಯಾಯ ಮತ್ತು ಅನೈತಿಕತೆಯಿಂದ ವರ್ತಿಸುವವರ ಜೊತೆಗೆ ನ್ಯಾಯ ಮತ್ತು ನೈತಿಕತೆಯಿಂದ ವರ್ತಿಸುವುದು ಸರಿಯಲ್ಲ. ತಕ್ಕ ಶಾಸ್ತಿ ಮಾಡುವ ನ್ಯಾಯದಿಂದ ಶ್ರೀ ಕೃಷ್ಣನು ವರ್ತಿಸಿದನು ಮತ್ತು ಅವನು ಅರ್ಜುನನಿಗೂ ಹಾಗೆ ವರ್ತಿಸಲು ಹೇಳಿದನು.

ಆಕ್ಷೇಪ ಕ್ರ. ೩

ಶ್ರೀ ಕೃಷ್ಣನು ಗೀತೆಯಲ್ಲಿ ಜಾತಿಯ ಬಗ್ಗೆ ಅನಗತ್ಯ ಮಹತ್ವ ನೀಡಿದನು ! ಶ್ರೀ ಕೃಷ್ಣ ಇವನು ಜಗತ್ತಿನಲ್ಲಿನ ಮೊದಲು ಮನುಷ್ಯನಾಗಿದ್ದಾನೆ, ಏಕೆಂದರೆ ಅವನು ಜಾತಿ ವ್ಯವಸ್ಥೆ ನಿರ್ಮಾಣ ಮಾಡಿ ಸಮಾಜದಲ್ಲಿ ಅರಾಜಕತೆಯನ್ನು ಪಸರಿಸಿದನು. ಗೀತೆಯಲ್ಲಿ ಶ್ರೀಕೃಷ್ಣ ಹೇಳುತ್ತಾನೆ, ಚಾತುರ್ವರ್ಣಂ ಮಯಾ ಸೃಷ್ಟಂ !(ಶ್ರೀಮದ್‌ ಭಗವದ್ಗೀತಾ, ಅಧ್ಯಾಯ ೪, ಶ್ಲೋಕ ೧೩) ಎಂದರೆ ನಾನು ನಾಲ್ಕು ವರ್ಣದ (ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ) ಸಮೂಹ ನಿರ್ಮಾಣ ಮಾಡಿದ್ದೇನೆ. ಶ್ರೀ ಕೃಷ್ಣನ ಈ ಹೇಳಿಕೆಯಿಂದ ಅಸ್ಪೃಶ್ಯತೆಯ ಜನ್ಮವಾಯಿತು, ಇದನ್ನು ಮರೆಯಲು ಸಾಧ್ಯವಿಲ್ಲ. ಜಾತಿಯ ಬಗ್ಗೆ ಅನಗತ್ಯವಾಗಿ ಗೀತೆ ಮತ್ತು ಅದನ್ನು ಹೇಳುವ ಕೃಷ್ಣನನ್ನು ನಿರಾಕರಿಸಬೇಕು. ಮನುಷ್ಯ ಮನುಷ್ಯರಲ್ಲಿ ಒಡಕು ಮೂಡಿಸುವ ಶ್ರೀ ಕೃಷ್ಣನನ್ನು ಪೂಜನಿಯ ಎಂದು ಹೇಳಲಾಗದು .

ಆಕ್ಷೇಪದ ಖಂಡನೆ

ಅ. ಶ್ರೀಕೃಷ್ಣ ತಪ್ಪಿತಸ್ಥನಲ್ಲ, ಚಾತುರ್ವರ್ಣದ ಬಗ್ಗೆ ವಿಪರೀತ ಅರ್ಥ ಕಲ್ಪಿಸುವವರು ತಪ್ಪಿತಸ್ಥರಾಗಿದ್ದಾರೆ. ಸಮಾಜದಲ್ಲಿ ಅಸ್ಪೃಶ್ಯತೆಯನ್ನು ದೂರ ಮಾಡುವ ಮಹಾನ ಕಾರ್ಯ ಮಾಡಿರುವ ಸಮಾಜ ಸುಧಾರಕ ಸ್ವಾತಂತ್ರ್ಯ ವೀರ ಸಾವರಕರರು ಕೇಸರಿ ಪತ್ರಿಕೆಯಲ್ಲಿ ೨.೧೨.೧೯೩೦ ರಲ್ಲಿ ಸನಾತನ ಧರ್ಮ ಎಂದರೆ ಜಾತಿಭೇದವಲ್ಲ ಎಂಬ ಶೀರ್ಷಿಕೆ ಅಡಿಯಲ್ಲಿ ಒಂದು ಲೇಖನ ಬರೆದಿದ್ದರು. ಆ ಲೇಖನದಲ್ಲಿ ಅವರು ಮುಂದಿನಂತೆ ಹೇಳಿದ್ದಾರೆ ಚಾತುರ್ವರ್ಣ ಎಂದರೆ ನಾಲ್ಕು ವರ್ಣಗಳು, ಇದನ್ನು ಗುಣಕರ್ಮ ವಿಭಾಗಶಃ ಎಂದು ಗೀತೆಯಲ್ಲಿ ಸ್ಪಷ್ಟ ಪಡಿಸಲಾಗಿದೆ, ಅಂದರೆ ಅದು ಜನ್ಮ ಜಾತವಲ್ಲ. ಅದರಲ್ಲಿ ಗುಣಕರ್ಮದ ಉಲ್ಲೇಖವಿದೆ. ವಂಶ ಪರಂಪರೆಯ ಸುಳಿವು ಕೂಡ ಇದರಲ್ಲಿ ಇಲ್ಲ . ಅಸ್ಪೃಶ್ಯತೆಯಿಂದ ಸಮಾಜದ ಧಾರಣೆ ಆಗುವುದಿಲ್ಲ. ಜನ್ಮನಾ ಜಾಯತೆ ಶೂದ್ರ ಸಂಸ್ಕಾರಾತ್‌ ದ್ವಿಜ ಉಚ್ಚತೆ ! (ಸ್ಕಂದ ಪುರಾಣ, ನಾಗರ ಖಂಡ, ಅಧ್ಯಾಯ ೨೩೯, ಶ್ಲೋಕ ೩೧) ಎಂದರೆ ಎಲ್ಲಾ ಮನುಷ್ಯರು ಜನ್ಮದಿಂದ ಶೂದ್ರನಾಗಿರುತ್ತಾರೆ. ಅವರ ಮೇಲೆ ಉಪನಯನಾದಿ ಸಂಸ್ಕಾರವಾದ ನಂತರ ಅವನನ್ನು ದ್ವಿಜ ಎನ್ನುತ್ತಾರೆ.

ಚಾತುರ್ವರ್ಣದಿಂದ ಅಸ್ಪೃಶ್ಯತೆ ನಿರ್ಮಾಣವಾಗಿದೆ ಹೀಗೆ ಹೇಳುವುದು ಸತ್ಯಕ್ಕೆ ದೂರವಾಗಿದೆ. ನಾಲ್ಕು ವರ್ಣ ಅಸ್ತಿತ್ವದಲ್ಲಿ ಇದ್ದರೆ, ಹಾಗಾದರೆ ಅಸ್ಪೃಶ್ಯ ಎಂದು ಐದನೇ ವರ್ಣ ಹೇಗೆ ನಿರ್ಮಾಣವಾಯಿತು. ಒಂದು ಪ್ರಾಚೀನ ವಚನವಿದೆ –

ಬ್ರಾಹ್ಮಣ ಕ್ಷತ್ರಿಯೋ ವೈಶಾಸ್ತ್ರಯೋ ವರ್ಣ ದ್ವಿಜಾತಯಃ
ಚತುರ್ಥ ಏಕಜಾತಿಸ್ತು ಶೂದ್ರೋ ನಾಸ್ತಿತು ಪಂಚಮಃ
ಮನುಸ್ಮೃತಿ , ಅಧ್ಯಾಯ ೧೦, ಶ್ಲೋಕ ೪

ಅರ್ಥ : ಬ್ರಾಹ್ಮಣ, ಕ್ಷತ್ರಿಯ, ಮತ್ತು ವೈಶ್ಯ ಈ ಮೂರು ವರ್ಣ ದ್ವಿಜ ಎಂದರೆ ಎರಡು ಜನ್ಮ ಇರುವವರು (ಉಪನಯನಾದಿ ಸಂಸ್ಕಾರ ಇದು ಎರಡನೆಯ ಜನ್ಮ ಎಂದು ತಿಳಿಯಲಾಗಿದೆ) ಆಗಿದ್ದಾರೆ, ನಾಲ್ಕನೆಯ ಶೂದ್ರ ವರ್ಣ ಇದು ಒಂದೇ ಜನ್ಮ ಇರುವುದಾಗಿದೆ. ಇದನ್ನು ಬಿಟ್ಟರೆ ಐದನೇ ವರ್ಣವಿಲ್ಲ.

ಇನ್ನೊಂದು ವಚನ ಇರುವುದು, ಕರ್ಮಕ್ರಿಯಾವಿಭೇದೇನೆ ಚಾತುರ್ವರ್ಣ್ಯ ಪ್ರತಿಷ್ಠಿತಂ ! ಎಂದರೆ ಕರ್ಮ ಕ್ರಿಯಾ ಭೇದದಿಂದ ನಾಲ್ಕು ವರ್ಣ ಸ್ಥಾಪಿತವಾಗಿದೆ. ಮನುಷ್ಯ ಯಾವ ಜಾತಿಯಲ್ಲಿ ಜನಿಸಿದನು ಎಂಬುದಕ್ಕೆ ಮಹತ್ವ ಇರುವುದಿಲ್ಲ ಅವನಲ್ಲಿ ಯಾವ ಗುಣ ಇದೆ ಎಂಬುದಕ್ಕೆ ಮಹತ್ವ ಇದೆ.

ಚಾತುರ್ವರ್ಣದ ಬಗ್ಗೆ ವಿಪರೀತ ಅರ್ಥ ಹಾಕಿ ಯಾರು ಸಮಾಜದಲ್ಲಿ ಸ್ಪೃಶ್ಯ ಅಸ್ಪೃಶ್ಯತೆಯ ವಿವಾದ ನಿರ್ಮಿಸಿದ್ದಾರೆಯೋ, ದೋಷ ಅವರದ್ದಾಗಿದೆ. ಶ್ರೀ ಕೃಷ್ಣನು ಏನು ಹೇಳಿದ್ದಾನೆ ಅದರಲ್ಲಿ ಏನೂ ದೋಷವಿಲ್ಲ.

ಆ. ಗೀತಾ ಧರ್ಮ ಇದು ವಿಶ್ವಧರ್ಮ ಆಗಿದೆ. ಹಾಗಾಗಿ ಗೀತಾ ಮತ್ತು ಶ್ರೀ ಕೃಷ್ಣ ಇವರಿಗೆ ದೋಷ ನೀಡುವುದು ಸರಿಯಲ್ಲ : ಇದರ ಸಂದರ್ಭದಲ್ಲಿ ಭೂತಪೂರ್ವ ನ್ಯಾಯಮೂರ್ತಿ ರಾಮ ಕೇಶವ ರಾನಡೆ ಇವರು, ಶ್ರೀ ಕೃಷ್ಣನು ಹೇಳಿರುವ ಗೀತಾ ಧರ್ಮ ಇದು ವಿಶ್ವಧರ್ಮವಾಗಿದೆ. ಅದು ಮಾನವ ಧರ್ಮವಾಗಿದೆ. ಈ ಶುದ್ಧ ಸಾತ್ವಿಕ ಧರ್ಮದಲ್ಲಿ ಅಸ್ಪೃಶ್ಯತೆಯ ಕಲುಷಿತ ನೀರನ್ನು ಸೇರಿಸಲಾಗಿದೆ. ಆದ್ದರಿಂದ ಶ್ರೀ ಕೃಷ್ಣನ ಧರ್ಮಗಂಗೆಯನ್ನು ಹಳಿಯಲಾಗುತ್ತಿದೆ. ಇದು ಆತ್ಮಘಾತಕವಾಗಿದೆ. ಅದಕ್ಕಿಂತಲೂ ಈ ಕಲುಷಿತ ನೀರು ಸೇರದಂತೆ ತಡೆಯುವುದೇ ನಿಜವಾದ ಧರ್ಮವಾಗಿದೆ. ಯಾರಿಗಾದರೂ ಹಾಲು ಜೀರ್ಣವಾಗುತ್ತಿಲ್ಲವಾದರೆ ಆಗ ಆ ದೋಷ ಹಾಲಿನದ್ದಲ್ಲ; ಅದು ದುರ್ಬಲ ಜೀರ್ಣಶಕ್ತಿಯದಾಗಿದೆ. ಅದರಂತೆಯೇ ಆಕ್ಷೇಪ ವ್ಯಕ್ತಪಡಿಸುವವರು ಶ್ರೀ ಕೃಷ್ಣನ ವಿಚಾರಗಳಿಗೆ ದೋಷ ನೀಡುವ ಬದಲು ತಮ್ಮ ಗ್ರಹಣ ಕ್ಷಮತೆಯ ಮತ್ತು ವಿವೇಕ ಶಕ್ತಿ ಪರಿಪಕ್ವಗೊಳಿಸಬೇಕು ಎಂದು ಹೇಳಿದರು.

ಆಕ್ಷೇಪ ಕ್ರ. ೪.

ಶ್ರೀ ಕೃಷ್ಣನು ಧರ್ಮದ ಸೂಕ್ಷ್ಮ ವಿಚಾರ ಮತ್ತು ಧರ್ಮದ ರಹಸ್ಯ ಇವುಗಳ ಅರ್ಥವನ್ನು ಹೇಗೆ ಬೇಕು ಹಾಗೆ ಬದಲಾಯಿಸಿ ಪ್ರತಿಸಾರಿಯು ಪಾಂಡವರ ಪರ ನಿಂತಿದ್ದಾನೆ ! ಇದರ ಒಂದು ಉದಾಹರಣೆ ನೀಡಬಹುದು. ಕೌರವ ಪಾಂಡವ ಯುದ್ಧದಲ್ಲಿ ಕರ್ಣನು ಯುಧಿಷ್ಠಿರನನ್ನು ಸೋಲಿಸಿದನು. ಯುಧಿಷ್ಠಿರನು ಯುದ್ಧ ಭೂಮಿಯನ್ನು ಬಿಟ್ಟು ಶಿಬಿರಕ್ಕೆ ಹಿಂತಿರುಗಿದನು. ಕೆಲವು ಸಮಯದ ನಂತರ ಅರ್ಜುನನು ಅವನ ಭೇಟಿಯಾಗಲು ಬಂದನು. ಕರ್ಣನು ಸೋಲಿಸಿರುವುದರಿಂದ ಅವಮಾನಿತನಾಗಿರುವ ಯುಧಿಷ್ಠಿರನು ಅರ್ಜುನನಿಗೆ ಸಿಟ್ಟಿನಿಂದ ಹೇಳಿದನು, ಏನು ನಿನ್ನ ಗಾಂಡಿವ ಧನುಷ್ಯ? ಕೊಟ್ಟುಬಿಡು ಬೇರೆಯವರಿಗೆ? ಅರ್ಜುನನು ಮೊದಲೇ ಒಂದು ಪ್ರತಿಜ್ಞೆ ಮಾಡಿದ್ದನು, ಏನೆಂದರೆ ತನ್ನ ಗಾಂಡಿವ ಧನುಷ್ಯವನ್ನು ಬೇರೆಯವರಿಗೆ ನೀಡು ಎಂದು ಹೇಳುವವರನ್ನು ವಧಿಸುವುದು. ಪ್ರತಿಜ್ಞೆಯ ಪ್ರಕಾರ ಅರ್ಜುನನು ಯುಧಿಷ್ಠಿರನನ್ನು ವಧಿಸಲು ಮುಂದೆ ಬಂದನು, ಆಗ ಶ್ರೀ ಕೃಷ್ಣನು ಅವನನ್ನು ತಡೆದನು.

ಅರ್ಜುನ, ಅಯೋಗ್ಯವಾಗಿ ವರ್ತಿಸುವ ಕೌರವರ ಜೊತೆಗೆ ಯುದ್ಧ ಮಾಡು ಎಂದು ಹೇಳುವ ಶ್ರೀಕೃಷ್ಣ ಅರ್ಜುನನಿಗೆ ಮಾತ್ರ ಅಯೋಗ್ಯವಾಗಿ ವರ್ತಿಸಿರುವ ಯುಧಿಷ್ಠಿರನನ್ನು ವಧಿಸಲು ಬಿಡಲಿಲ್ಲ. ಹಾಗಾದರೆ ಯಾವ ಕೃಷ್ಣ ಸತ್ಯ ?

ಆಕ್ಷೇಪದ ಖಂಡನೆ –

ಅ. ದುರ್ಯೋಧನಾದಿ ಕೌರವರಂತಹ ಗಂಭೀರ ಅಪರಾಧ ಯುಧಿಷ್ಠಿರನಿಂದ ನಡೆದಿರಲಿಲ್ಲ. ಧರ್ಮದ ತತ್ವಗಳು ಸೂಕ್ಷ್ಮವಾಗಿರುತ್ತವೆ. ಈಗ ಈ ರೀತಿಯ ಕಲ್ಪನೆ ಮಾಡೋಣ, ನಾವೆಲ್ಲರೂ ಮೌನವಾಗಿ ಕುಳಿತಿದ್ದೇವೆ. ಅಷ್ಟರಲ್ಲಿ ಓರ್ವ ಹೆದರಿರುವ ಮನುಷ್ಯ ಓಡೋಡಿ ಬಂದು ನಮಗೆ ಹೇಳುತ್ತಾನೆ, ಕೆಲವು ಗೂಂಡಾಗಳು ನನ್ನನ್ನು ಹಿಂಬಾಲಿಸುತ್ತಿದ್ದಾರೆ. ಅವರು ಕೊಲೆ ಮಾಡುವುದನ್ನು ನಾನು ಪ್ರತ್ಯಕ್ಷ ನೋಡಿದ್ದೇನೆ ; ಆದಕಾರಣ ಅವರು ನನ್ನನ್ನು ಕೂಡ ಕೊಲ್ಲಲು ಬರುತ್ತಿದ್ದಾರೆ. ದಯವಿಟ್ಟು ನನಗೆ ಆಶ್ರಯ ನೀಡಿರಿ. ನಾವು ಆಗ ಅವನಿಗೆ ಬಚ್ಚಿಟ್ಟುಕೊಳ್ಳಲು ಸ್ಥಳ ನೀಡುತ್ತೇವೆ. ಅಷ್ಟರಲ್ಲಿ ಆ ಮನುಷ್ಯನನ್ನು ಹುಡುಕುತ್ತಾ ಅಲ್ಲಿಗೆ ಬರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ನಿರಪರಾಧಿ ಮನುಷ್ಯನನ್ನು ಗುಂಡಾಗಳಿಗೆ ಒಪ್ಪಿಸುವುದು ಅಥವಾ ಅಸತ್ಯ ಮಾತನಾಡಿ ಅವನನ್ನು ಕಾಪಾಡುವುದು ಯೋಗ್ಯವಾಗಿದೆ? ಅಂತಹ ಸಮಯದಲ್ಲಿ ಧರ್ಮದ ಸೂಕ್ಷ್ಮ ವಿಚಾರ ಮಾಡಿ ಅಸತ್ಯ ಮಾತನಾಡುವುದೇ ಶ್ರೇಯಸ್ಕರವಾಗಿರುತ್ತದೆ; ಏಕೆಂದರೆ ಅದರಲ್ಲಿ ಜೀವದ ಹಿತ ಅಡಗಿರುತ್ತದೆ ಅದು ಸತ್ಯ! ಹೀಗೆ ಸತ್ಯದ ಒಂದು ವ್ಯಾಖ್ಯೆ ಇದೆ.

ಆದ್ದರಿಂದ ಗೂಂಡಾಗಳ ಜೊತೆಗೆ ಅಸತ್ಯ ಮಾತನಾಡುವುದು ಇದು ಲೌಕಿಕ ಅರ್ಥದಲ್ಲಿ ಅಸತ್ಯ ವಾಗಿದ್ದರೂ ಕೂಡ ಧರ್ಮದ ಸೂಕ್ಷ್ಮದೃಷ್ಟಿಯಿಂದ ಅದು ಅಸತ್ಯವಾಗಿಲ್ಲ !

ಭಗವಾನ್‌ ಶ್ರೀ ಕೃಷ್ಣನಿಗೆ ಧರ್ಮ ಪರ ಸೂಕ್ಷ್ಮದೃಷ್ಟಿ ಲಭಿಸಿತ್ತು, ಆದ್ದರಿಂದ ಅವನು ಅರ್ಜುನನನ್ನು ಸ್ವಂತ ಮತ್ತು ದಾಯಾದಿ ಸಹೋದರರ ಸಂದರ್ಭದಲ್ಲ್ಲಿ ಪರಸ್ಪರ ವಿರೋಧಿ ನಿರ್ಣಯ ನೀಡಿದನು.

ಇದರಿಂದ ಶ್ರೀ ಕೃಷ್ಣ ಸತತ ಸತ್ಯದ ಪರ ವಹಿಸುವವನಾಗಿದ್ದನು ಎಂದು ಕಾಣುತ್ತದೆ. ದುರ್ಯೋಧನನು ಅನೈತಿಕತೆ ಮತ್ತು ಅನ್ಯಾಯದ ಮಾರ್ಗದಿಂದ ಪಾಂಡವರ ರಾಜ್ಯದ ಮೇಲೆ ಸ್ವಂತ ಅಧಿಕಾರ ಸ್ಥಾಪಿಸಿದ್ದನು. ಇಂತಹ ಗಂಭೀರ ಅಪರಾಧ ಯುಧಿಷ್ಠಿರನಿಂದ ಘಟಿಸಿರಲಿಲ್ಲ. ಇದನ್ನುತಿಳಿದುಕೊಳ್ಳಬೇಕು. ಆದ್ದರಿಂದ ದುರ್ಯೋಧನ ಮತ್ತು ಯುಧಿಷ್ಠಿರ ಇವರ ಕೃತ್ಯಗಳನ್ನು ಒಂದೇ ತಕ್ಕಡಿಯಲ್ಲಿ ಅಳೆಯಲು ಸಾಧ್ಯವಿಲ್ಲ.

ಆ. ಧರ್ಮದ ಸೂಕ್ಷ್ಮತೆ ತಿಳಿಯುವ ಶ್ರೀ ಕೃಷ್ಣನು ಅರ್ಜುನನಿಗೆ ಯುಧಿಷ್ಠಿರನನ್ನು ನಿರ್ಲಕ್ಷಿಸಲು ಹೇಳಿ ಒಂದು ರೀತಿಯಲ್ಲಿ ಯುಧಿಷ್ಠಿರನ ವಧೆ ಮಾಡಿಸಿದ್ದನು ! ಗಾಂಡಿವ ಧನುಷ್ಯದ ಬಗ್ಗೆ ಯುಧಿಷ್ಠಿರನ ಉದ್ಗಾರದಿಂದ ಆಕ್ರೋಶಗೊಂಡ ಅರ್ಜುನನು ತನ್ನ ಪ್ರತಿಜ್ಞೆಯ ರೀತಿಯಲ್ಲಿ ಸತ್ಯದ ಪಾಲನೆ ಮಾಡಿದ್ದರೆ ಆಗ ದೊಡ್ಡ ಅನರ್ಥವೇ ನಡೆಯುತ್ತಿತ್ತು. ಆ ಅನರ್ಥವನ್ನು ತಪ್ಪಿಸುವುದಕ್ಕಾಗಿ ಶ್ರೀ ಕೃಷ್ಣನು ಅರ್ಜುನನಿಗೆ ಧರ್ಮದ ಸೂಕ್ಷ್ಮತೆ ಹೇಳಿದನು, ನಮಗಿಂತಲೂ ವಯಸ್ಸಿನಲ್ಲಿ ಮತ್ತು ಗೌರವದಲ್ಲಿ ಹಿರಿಯರಾಗಿರುವ ವ್ಯಕ್ತಿಯನ್ನು ನಿರ್ಲಕ್ಷಿಸುವುದು ಎಂದರೆ ಆ ವ್ಯಕ್ತಿಯನ್ನು ವಧಿಸಿದ ಹಾಗೆಯೇ ಆಗುತ್ತದೆ, ಹೀಗೆ ಅವನು ಅರ್ಜುನನಿಗೆ ಹೇಳಿದನು. ಅರ್ಜುನನು ಅದರ ಪ್ರಕಾರ ಯುಧಿಷ್ಠಿರನನ್ನು ನಿರ್ಲಕ್ಷಿಸಿದನು ಮತ್ತು ಒಂದು ರೀತಿಯಲ್ಲಿ ಅವನನ್ನು ವಧಿಸಿದನು, ಈ ರೀತಿ ಶ್ರೀ ಕೃಷ್ಣನು ಅರ್ಜುನನಿಂದ ಪ್ರತಿಜ್ಞೆಯ ಪಾಲನೆಯನ್ನೂ ಮಾಡಿಸಿಕೊಂಡನು.

ಇ. ಯುಧಿಷ್ಠಿರನ ಅವಹೇಳನೆ ಮಾಡುವವನನ್ನು ನಾನು ವಧಿಸುತ್ತೇನೆ ಹೀಗೆ ಪ್ರತಿಜ್ಞೆ ಮಾಡಿರುವ ಅರ್ಜುನನಿಗೂ ಕೂಡ ಶ್ರೀ ಕೃಷ್ಣನು ಆತ್ಮ ಸ್ತುತಿ ಮಾಡಲು ಹೇಳಿ ಒಂದು ರೀತಿ ಅರ್ಜುನನ ವಧೆ ಮಾಡಿಸಿದನು. ಅರ್ಜುನನು ಯುಧಿಷ್ಠಿರನನ್ನು ನಿರ್ಲಕ್ಷಿಸುವ ಘಟನೆಯಿಂದ ಇನ್ನೊಂದು ಪ್ರಸಂಗ ನಿರ್ಮಾಣವಾಯಿತು. ಯಾರು ಯುಧಿಷ್ಠಿರನನ್ನು ನಿರ್ಲಕ್ಷಿಸುತ್ತಾರೆ ಅವರನ್ನು ನಾನು ವಧಿಸುತ್ತೇನೆ ಎಂದು ಅರ್ಜುನನು ಇನ್ನೊಂದು ಪ್ರತಿಜ್ಞೆ ಮಾಡಿದ್ದನು. ಅರ್ಜುನ ಸಜ್ಜನನಾಗಿದ್ದನು. ಪ್ರಾಣ ಹೋದರು ನಡೆಯುತ್ತದೆ ಆದರೆ ತನ್ನ ವಚನ ಮತ್ತು ಪ್ರತಿಜ್ಞೆಯಿಂದ ಸಜ್ಜನರು ದೂರ ಸರಿಯುವುದಿಲ್ಲ. ಯುಧಿಷ್ಠಿರನನ್ನು ನಿರ್ಲಕ್ಷ ಮಾಡಿದ ಅರ್ಜುನನು (ತನ್ನ ಪ್ರತಿಜ್ಞೆ ಪೂರ್ಣಗೊಳಿಸುವ ಉದ್ದೇಶದಿಂದ) ತನ್ನ ಮೇಲೆ ಖಡ್ಗ ಎತ್ತಿದನು. ಆತ್ಮಹತ್ಯೆ ಮಾಡಿಕೊಳ್ಳಲು ಸಿದ್ದನಿರುವ ಅರ್ಜುನನಿಗೆ ಶ್ರೀ ಕೃಷ್ಣನು ಧರ್ಮದ ರಹಸ್ಯ ಬಿಡಿಸಿ ಹೇಳಿದನು. ಶ್ರೀ ಕೃಷ್ಣ ಹೇಳಿದನು, ಸಜ್ಜನರು ಸ್ವಪ್ರಶಂಸೆ ಮಾಡುವುದು, ಎಂದರೆ ಸ್ವತಃ ವಧಿಸಿಕೊಂಡಂತೆಯೇ. ನೀನು ಸಜ್ಜನನಾಗಿರುವೆ ಆದ ಕಾರಣ ನೀನು ಸ್ವಪ್ರಶಂಸೆ ಮಾಡಿಕೋ ಅಂದರೆ ತನ್ನಿಂದ ತಾನೇ ನಿನ್ನ ವಧೆ ಆಗಿರುವ ಹಾಗೆ ಆಗುವುದು. ಅರ್ಜುನನು ಅದರ ಪ್ರಕಾರ ಸ್ವಪ್ರಶಂಸೆ ಮಾಡಿಕೊಂಡನು. ಈ ರೀತಿ ಶ್ರೀ ಕೃಷ್ಣನು ಅರ್ಜುನನಿಂದ ಪ್ರತಿಜ್ಞೆಯ ಪಾಲನೆ ಮಾಡಿಸಿಕೊಂಡನು ಮತ್ತು ಅವನನ್ನು ಆತ್ಮಹತ್ಯೆಯಿಂದ ತಡೆದನು.
ಯಾವುದೇ ಕೃತ್ಯದ ಹಿಂದಿನ ಉದ್ದೇಶ ಏನಾಗಿದೆ ? ಇದನ್ನು ನೋಡಿ ನೈತಿಕತೆ ನಿಶ್ಚಯಿಸಬೇಕು. ಸುಳ್ಳು ಹೇಳುವುದರಿಂದ ಯಾರದಾದರೂ ಕಲ್ಯಾಣವಾಗುತ್ತಿದ್ದರೆ ಆಗ ಆ ಸಮಯದಲ್ಲಿ ಸುಳ್ಳು ಹೇಳುವುದೇ ಕರ್ತವ್ಯವಾಗುತ್ತದೆ. ಶಾಬ್ದಿಕ ಸತ್ಯ ಮತ್ತು ಧಾರ್ಮಿಕ ಸತ್ಯದಲ್ಲಿ ವ್ಯತ್ಯಾಸವಿದೆ. ಲೌಕಿಕ ಅರ್ಥದಲ್ಲಿ ಕೃಷ್ಣ ಕೆಲವು ಸಾರಿ ಸುಳ್ಳು ಮಾತನಾಡಿದರು ಧರ್ಮದ ಸೂಕ್ಷ್ಮದೃಷ್ಟಿಯಿಂದ ಅದು ಸುಳ್ಳಾಗಿರಲಿಲ್ಲ.

ಆಕ್ಷೇಪ ಕ್ರ. ೫

ಶ್ರೀ ಕೃಷ್ಣನುಯುದ್ಧಕ್ಕಾಗಿ ದುರ್ಯೋಧನ ಮತ್ತು ಅರ್ಜುನ ಇವರಿಬ್ಬರಿಗೂ ಕೂಡ ಸಹಾಯ ಮಾಡಿ ಭಯದಿಂದ ಕುಯುಕ್ತಿ(ದ್ವಂದ್ವದ) ವರ್ತನೆ ಮಾಡಿದ್ದಾನೆ ! ಯುದ್ಧದ ಪ್ರಸಂಗ ಬರುತ್ತದೆ ಶ್ರೀ ಕೃಷ್ಣನು ಕೌರವರಿಗೆ ತನ್ನ ಸೈನ್ಯ ನೀಡಿದನು ಮತ್ತು ಪಾಂಡವರ ಪರ ತಾನೊಬ್ಬನೇ ನಿಂತನು. ಅವನು ಪಾಂಡವರಿಗೆ ಸೈನ್ಯ ಸಹಾಯ ಏಕೆ ಮಾಡಲಿಲ್ಲ ? ಅಥವಾ ಅವನಿಗೆ ಕೌರವರ ಭಯ ಅನಿಸಿತೆ? ಅಥವಾ ಯುದ್ಧದಲ್ಲಿ ಕೌರವರು ಜಯಶಾಲಿ ಆದರೆ ನನಗೆ ಉಳಿಗಾಲವಿಲ್ಲ, ಅದರಿಂದ ಸೈನ್ಯ ನೀಡುವುದೇ ಒಳ್ಳೆಯದು, ಎಂದು ಅವನಿಗೆ ಅನಿಸಿತ್ತೆ ? ಶ್ರೀ ಕೃಷ್ಣನು ಕೌರವ ಮತ್ತು ಪಾಂಡವ ಇವರಿಬ್ಬರಿಗೂ ಸಹಾಯ ಮಾಡಿ ದ್ವಂದ್ವದಿಂದ ವರ್ತಿಸಿದ್ದಾನೆ .
ಆಕ್ಷೇಪದ ಖಂಡನೆ –

ಅ. ದುರ್ಯೋಧನನಿಗೆ ಶಸ್ತ್ರ ಹಿಡಿಯದ ಕೃಷ್ಣನಿಗಿಂತಲೂ ಶ್ರೀ ಕೃಷ್ಣನ ಸೈನ್ಯವೇ ಬೇಕಿತ್ತು !

ಮಹಾಭಾರತದ ಸಮಯದಲ್ಲಿ ಯುದ್ಧದ ಸಂಬಂಧಿತ ಒಂದು ಪದ್ಧತಿ ಇದೆ. ಯುದ್ಧದಲ್ಲಿ ನಮ್ಮ ಪರ ಹೋರಾಡುವುದಕ್ಕಾಗಿ ಸಹಾಯ ಕೇಳುವವರಲ್ಲಿ ಯಾರ ಕರೆ ಮೊದಲು ಬರುತ್ತದೆ ಅವರ ಪರ ಹೋಗುವುದು. ದುರ್ಯೋಧನನು ಶ್ರೀ ಕೃಷ್ಣನ ಬಳಿ ಸಹಾಯ ಕೇಳುವುದಕ್ಕಾಗಿ ಬಂದನು. ಆ ಸಮಯದಲ್ಲಿ ಶ್ರೀ ಕೃಷ್ಣ ನಿದ್ರಿಸಿದ್ದನು. ದುರ್ಯೋಧನನು ಶ್ರೀ ಕೃಷ್ಣನ ಶಯನ ಮಹಲನಲ್ಲಿ ತಲುಪಿದನು ಮತ್ತು ಅವನ ತಲೆ ಕಡೆಗೆ ಕುಳಿತನು. ನಂತರ ತಲುಪಿದ ಅರ್ಜುನನು ಶ್ರೀ ಕೃಷ್ಣನ ಕಾಲಿನ ಬಳಿ ಕುಳಿತನು. ಶ್ರೀ ಕೃಷ್ಣ ಎದ್ದ ನಂತರ ಮೊದಲು ಅರ್ಜುನನನ್ನು ನೋಡಿದನು. ಅರ್ಜುನ ದುರ್ಯೋಧನಕ್ಕಿಂತಲೂ ಚಿಕ್ಕವನಾಗಿದ್ದನು. ಶ್ರುತಿ (ವೇದವಾಕ್ಯ) ಹೇಳುತ್ತದೆ, ಚಿಕ್ಕವರ ಇಚ್ಛೆ ಮೊದಲು ಪೂರ್ಣಗೊಳಿಸಬೇಕು. ಶ್ರೀ ಕೃಷ್ಣನು ಮಾಡುವ ಸಹಾಯವನ್ನು ಎರಡು ಭಾಗಗಳಲ್ಲಿ ವಿಂಗಡಿಸಿದನು. ಒಂದು ಕಡೆಗೆ ಅವನ ನಾರಾಯಣಿ ಎಂಬ ಸೈನ್ಯ ಮತ್ತು ಇನ್ನೊಂದು ಕಡೆಗೆ ಶಸ್ತ್ರಧಾರಣೆ ಮಾಡದೇ ಇರುವ ಶ್ರೀ ಕೃಷ್ಣ (ಅವನು ಸ್ವತಃ) ಅವನು ಈ ಎರಡರಲ್ಲಿ ಏನು ಬೇಕು? ಎಂದು ಅರ್ಜುನನಿಗೆ ಕೇಳಿದನು. ಅರ್ಜುನನು ಶ್ರೀ ಕೃಷ್ಣನನ್ನು ಆಯ್ಕೆ ಮಾಡಿದನು. ದುರ್ಯೋಧನನು ಸೈನ್ಯ ಕೇಳಿದನು. (ಈ ಕಥಾ ಭಾಗ ೧ ಗ ೧೦. ವಿಲಕ್ಷಣ ಬುದ್ಧಿಮಾನ್‌ ಮತ್ತು ಚತುರ ಈ ಸೂತ್ರದಲ್ಲಿ ನೀಡಿದ್ದಾರೆ)

ಆ. ಶ್ರೀ ಕೃಷ್ಣನಿಗೆ ಕೌರವರ ಭಯ ಅನಿಸುತ್ತಿದ್ದರೆ ಆಗ ಅವನು ಸಂಧಾನಕ್ಕಾಗಿ ಅವನ ರಾಜಸಭೆಗೆ ಹೋಗುತ್ತಿರಲಿಲ್ಲ !: ದುರ್ಯೋಧನ ಮತ್ತು ಇತರ ಕೌರವರು ಕಪಟಿ ಮತ್ತು ನೀಚರಾಗಿದ್ದರು. ಇದು ಶ್ರೀ ಕೃಷ್ಣನಿಗೆ ತಿಳಿದಿತ್ತು : ಆದ್ದರಿಂದ ಅವನು ಜಾಗೃತವಾಗಿ ಕೂಡ ಇದ್ದನು. ದುರ್ಯೋಧನಾದೀ ಕೌರವರಿಂದ ಸಂಧಾನಕ್ಕಾಗಿ ಬಂದಿರುವ ಶ್ರೀ ಕೃಷ್ಣನನ್ನು ಬಂಧಿಸುವ ಷಡ್ಯಂತ್ರ ರಚಿಸಲಾಗಿತ್ತು. ಈ ಷಡ್ಯಂತ್ರದ ವಾರ್ತೆ ತಿಳಿದ ನಂತರ ಶ್ರೀ ಕೃಷ್ಣನ ಜೊತೆಗೆ ಹೋಗಿರುವ ಸಾತ್ಯಕಿ ಮತ್ತು ಕೃತವರ್ಮ ಇವರು ಶ್ರೀ ಕೃಷ್ಣನ ಸಹಾಯಕ್ಕಾಗಿ ಸಂಪೂರ್ಣ ನಾರಾಯಣಿ ಸೇನೆಯನ್ನು ಕೌರವರ ವಿರುದ್ಧ ನಿಲ್ಲಿಸಿದರು. ಯಾದವರ ಎರಡುವರೆ ಲಕ್ಷ ಸೈನ್ಯ ನೋಡಿ ಶ್ರೀ ಕೃಷ್ಣನನ್ನು ಬಂಧಿಸುವ ದುರ್ಯೋಧನನ ಷಡ್ಯಂತ್ರ ವಿಫಲವಾಯಿತು.

ಆಕ್ಷೇಪ ಕ್ರ. ೬

ಶ್ರೀ ಕೃಷ್ಣ ಹದಿನಾರು ಸಾವಿರದ ೧೦೮ (೧೬,೧೦೮) ಸ್ತ್ರೀಯರಿಗೆ ಪತಿಯಾಗಿದ್ದನು !- ನರಕಾಸುರನು ಬಂಧಿಸಿರುವ ಎಲ್ಲಾ ಸ್ತ್ರೀಯರನ್ನು ಶ್ರೀ ಕೃಷ್ಣನು ಬಿಡಿಸಿದ್ದನು. ಮತ್ತು ನಂತರ ಅವರ ಎಲ್ಲರ ಜೊತೆಗೆ ವಿವಾಹ ಮಾಡಿಕೊಂಡಿದ್ದನು.

ಅಕ್ಷೇಪದ ಖಂಡನೆ :

ಅ . ಪಾರಮಾರ್ಥಿಕ ಉತ್ತರ : ಅಥರ್ವ ವೇದದಲ್ಲಿ ಏನು ಹೇಳಲಾಗಿದೆಯೆಂದರೆ, ವೇದ ಮತ್ತು ಉಪನಿಷತ್ತು ಇವುಗಳಲ್ಲಿ ಯಾವ ಮಂತ್ರಗಳಿವೆ ಅವು ಪರಮಾತ್ಮನ ಸ್ತ್ರೀಯರಾಗಿದ್ದಾರೆ. ಋಗ್ವೇದದಲ್ಲಿ ೧೦೫೮೦, ಇತರ ವೇದಗಳಲ್ಲಿ ೪೩೪೮ ಮತ್ತು ಉಪನಿಷತ್ತುಗಳಲ್ಲಿ ೧೧೮೦ ಮಂತ್ರಗಳಿದ್ದು ಈ ಎಲ್ಲವನ್ನೂ ಒಟ್ಟಾಗಿ ಸೇರಿಸಿದರೆ ೧೬,೧೦೮ ಆಗುತ್ತದೆ ಇವರೇ ಶ್ರೀ ಕೃಷ್ಣ ಪರಮಾತ್ಮನ ಸ್ತ್ರೀಯರಾಗಿದ್ದಾರೆ. ಇದು ಪಾರಮಾರ್ಥಿಕ ಉತ್ತರವಾಯಿತು.

ಆ. ಶ್ರೀ ಕೃಷ್ಣನು ಆ ತಂದೆಯ ಸ್ಥಾನ ಪಡೆದನು, ಪತಿಯ ಸ್ಥಾನವಲ್ಲ ! – ಮಹಾಭಾರತದಲ್ಲಿ ಶ್ರೀ ಕೃಷ್ಣನ ೧೬೧೦೮ ಸ್ತ್ರೀಯರ ಪತಿ ಎಂದು ಉಲ್ಲೇಖ ದೊರೆಯುತ್ತದೆ. ಪತಿ ಈ ಶಬ್ದಕ್ಕೆ ಸಂಸ್ಕೃತದಲ್ಲಿ ಎರಡು ಅರ್ಥ ಇದೆ. ಒಂದು ಅರ್ಥ ಪತಿ ಹಾಗೂ ಇನ್ನೊಂದು ಅರ್ಥ ಪಾಲನಕರ್ತನು ಎಂದಿದೆ. ಶ್ರೀ ಕೃಷ್ಣನು ನರಕಾಸುರನ ಸೆರೆಮನೆಯಲ್ಲಿ ಇರುವ ಸ್ತ್ರೀಯರನ್ನು ಬಿಡುಗಡೆಗೊಳಿಸಿದ ನಂತರ ಅವರ ಪೋಷಕರು ಅವರನ್ನು ಸ್ವೀಕರಿಸಲಿಲ್ಲ. ಆದ್ದರಿಂದ ಅವರೆಲ್ಲರೂ ಅನಾಥರಾದರು. ಯುವತಿಯರ ರಕ್ಷಣೆಯ ದಾಯಿತ್ವ ಅವರ ಪೋಷಕರ ಮೇಲೆ ಇರುತ್ತದೆ. ಈಗ ಈ ದಾಯಿತ್ವ ಶ್ರೀ ಕೃಷ್ಣನು ತೆಗೆದುಕೊಂಡನು ಆದ್ದರಿಂದ ಆ ಸ್ತ್ರೀಯರ ಪೋಷಕನಾದನು. ಅವನು ಅವರ ತಂದೆಯ ಸ್ಥಾನ ಪಡೆದನು ಪತಿಯ ಸ್ಥಾನವಲ್ಲ. ನಾವು ಸಭಾಪತಿ, ರಾಷ್ಟ್ರಪತಿ ಎಂದು ಹೇಳುತ್ತೇವೆ. ಆಗ ಆ ವ್ಯಕ್ತಿ ಸಭೆಯ ಅಥವಾ ರಾಷ್ಟ್ರದ ಪತಿಯಾಗಿರುವುದಿಲ್ಲ, ಆದರೆ ಪೋಷಕನಾಗಿರುತ್ತಾನೆ.

ಆಕ್ಷೇಪ ಕ್ರ. ೭

ಶ್ರೀ ಕೃಷ್ಣನು ಗೋಕುಲದಲ್ಲಿಯ ಗೋಪಿಯರ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದನು !

ಆಕ್ಷೇಪದ ಖಂಡನೆ

ಶ್ರೀ ಕೃಷ್ಣನು ಗೋಪಿಯರ ಜೊತೆಗೆ ಇರುವ ಸಂಬಂಧ ತಾಯಿ ಮತ್ತು ಮಗನ ಸಂಬಂಧವಾಗಿತ್ತು. ಈ ಆಕ್ಷೇಪ ಹಾಸ್ಯಾಸ್ಪದವಾಗಿದೆ. ಶ್ರೀ ಕೃಷ್ಣ ಗೋಕುಲದಲ್ಲಿ ವಾಸವಾಗಿರುವಾಗ ಅವನುಕೇವಲ ೧೨ ವರ್ಷದವನಾಗಿದ್ದನು. ಆ ಸಮಯದಲ್ಲಿ ಗೋಕುಲದಲ್ಲಿನ ಎಲ್ಲಾ ಗೋಪಿ ಮಾತೆಯರು ಯಶೋದೆಯ ವಯಸ್ಸಿನವರಾಗಿದ್ದರು. ಗೋಪಿಯರು ತಮ್ಮ ಪುತ್ರನಂತೆ ಶ್ರೀ ಕೃಷ್ಣನನ್ನು ಪ್ರೀತಿಸಿದರು. ಭಕ್ತಿ ಮಾರ್ಗದಲ್ಲಿ ನಾರದರು ಇದನ್ನು ವಾತ್ಸಲ್ಯ ಭಕ್ತಿ ಎಂದು ಹೇಳಿದ್ದಾರೆ. ವಾತ್ಸಲ್ಯ ಭಾವ ಅನೈತಿಕತೆಯಲ್ಲಿ ಬರುವುದಿಲ್ಲ. ಆದ್ದರಿಂದ ಶ್ರೀ ಕೃಷ್ಣನ ಗೋಪಿಯರ ಜೊತೆಗೆ ಇರುವ ಸಂಬಂಧ ತಾಯಿ ಮತ್ತು ಮಗ ಇಂತಹ ಪವಿತ್ರ ಸಂಬಂಧವಾಗಿತ್ತು. ಕಂಸವಧೆಗಾಗಿ ಗೋಕುಲದಿಂದ ಹೊರಹೋದ ನಂತರ ನಿಜ ಧಾಮಕ್ಕೆ ಹೋಗುವವರೆಗೆ ಶ್ರೀ ಕೃಷ್ಣ ಮತ್ತೆ ಯಾವತ್ತೂ ಗೋಕುಲಕ್ಕೆ ಹಿಂತಿರುಗಲಿಲ್ಲ .

ಆಕ್ಷೇಪ ಕ್ರ. ೮

ಶ್ರೀ ಕೃಷ್ಣನು ಗೋಮಂತ ಪರ್ವತದ ಮೇಲೆ ಮದ್ಯ ಸೇವನೆ ಮಾಡಿದ್ದನು ! ಹರಿವಂಶದಲ್ಲಿ ಹೀಗೆ ಹೇಳಲಾಗಿದೆ.
ಜರಾಸಂಧನು ಮಥುರೆಯ ಮೇಲೆ ನಡೆಸಿರುವ ದಾಳಿಯಲ್ಲಿ ಶ್ರೀ ಕೃಷ್ಣ ಮತ್ತು ಬಲರಾಮರು ಮಥುರಾವನ್ನು ಬಿಟ್ಟು ಗೋಮಂತಪರ್ವತದ ಮೇಲೆ ಹೋದರು. ಅಲ್ಲಿ

ಶ್ರೀ ಕೃಷ್ಣನು ಮದ್ಯ ಸೇವನೆ ಮಾಡಿದನು.

ಆಕ್ಷೇಪದ ಖಂಡನೆ –

ಶ್ರೀ ಕೃಷ್ಣನಲ್ಲ, ಬಲರಾಮನು ಕುಡಿದಿರುವ ವಾರುಣಿ ಇದು ಮದ್ಯ ಅಲ್ಲ ಅದು ಅಮೃತದ ಜನನಿ ಆಗಿದೆ. ಹರಿವಂಶದ ವಿಷ್ಣು ಪರ್ವದಲ್ಲಿನ ಅಧ್ಯಾಯ ೧೪೦ ರಲ್ಲಿ ಹೀಗೆ ಹೇಳಲಾಗಿದೆ. ಗೋಮಂತ ಪರ್ವತದ ಮನೋಹರ ಶಿಖರದ ಮೇಲೆ ಒಬ್ಬನೇ ವಿಹರಿಸಲು ಹೋಗಿರುವ ಬಲರಾಮನು ಕದಂಬ ವೃಕ್ಷದ ನೆರಳಿನಲ್ಲಿ ಕುಳಿತಿದ್ದನು. ಮಳೆಗಾಲದಲ್ಲಿ ಕದಂಬ ವೃಕ್ಷ ಪುಷ್ಪಗಳಿಂದ ತುಂಬುತ್ತದೆ. ಆ ವೃಕ್ಷದ ಕೆಲವು ಹೂಗಳು ಅದೇ ವೃಕ್ಷದ ತಗ್ಗುಗಳಲ್ಲಿ ಬೀಳುತ್ತವೆ. (ವೃಕ್ಷದ ರೆಂಬೆಗಳು ಅಥವಾ ಕಾಂಡ ಗಳಲ್ಲಿನ ತೆಗ್ಗು ಭಾಗ ) ಆ ಹೂವಿನ ಮೇಲೆ ಮಳೆಯ ನೀರು ಬಿದ್ದ ನಂತರ ಅದರ ಸಂಯೋಗದಿಂದ ಒಂದು ಪೇಯ ತಯಾರಾಗುತ್ತದೆ. ಅದಕ್ಕೆ ವಾರುಣಿ ಎನ್ನುತ್ತಾರೆ. ಈ ವಾರುಣಿಯನ್ನು ಬಲರಾಮನು ಸೇವಿಸಿದ್ದನು.

ವಾರುಣಿಯನ್ನು ಅಮೃತದ ಜನನಿ ಎಂದು ಗೌರವಿಸಲಾಗುತ್ತದೆ. ವಾರುಣಿ ಶಕ್ತಿವರ್ಧಕವಾಗಿದೆ, ಈ ವಾರುಣಿಯನ್ನು ಶ್ರೀಕೃಷ್ಣನಲ್ಲ , ಬಲರಾಮನು ಸೇವಿಸಿದ್ದನು. ವಾರುಣಿ ಸೇವನೆಯಿಂದ ಬಲರಾಮನ ದೇಹದಲ್ಲಿ ಪ್ರಚಂಡ ಶಕ್ತಿ ನಿರ್ಮಾಣವಾಯಿತು. ನಂತರ ಅವನು ಜರಾಸಂಧ ಮತ್ತು ಅವನ ಸೈನ್ಯಕ್ಕೆ ಒಳ್ಳೆಯ ಪಾಠ ಕಲಿಸಿದನು. ಮದ್ಯ ಸೇವನೆಯ ನಂತರ ಮನುಷ್ಯನಿಗೆ ತನ್ನ ಸ್ಥಿರತೆ ಕಾಪಾಡಲು ಬರುವುದಿಲ್ಲ. ಅಲ್ಲಿ ಬಲರಾಮನು ಪರಾಕ್ರಮದಿಂದ ಮೆರೆದನು. ಆದ್ದರಿಂದ ವಾರುಣಿಯನ್ನು ಮದ್ಯದ ಜೊತೆಗೆ ತುಲನೆ ಮಾಡುವುದು ಎಂದರೆ ನಮ್ಮ ಬುದ್ಧಿಯ ದಿವಾಳಿತನವನ್ನು ಪ್ರದರ್ಶನ ಮಾಡಿದಂತಾಗಿದೆ.

ಆಕ್ಷೇಪ ಕ್ರ. ೯

ಶ್ರೀ ಕೃಷ್ಣ ರಣಚೋಡದಾಸ (ಪಲಾಯನವಾದಿ) ಆಗಿರುವನು!: ಶ್ರೀ ಕೃಷ್ಣನು ಶೂರನಾಗಿರಲಿಲ್ಲ . ಅವನು ಹೆದರಿಕೆ ಉಳ್ಳವನು ಮತ್ತು ಪಲಾಯನವಾದಿಯಾಗಿದ್ದನು. ಮಥುರೆಯ ಮೇಲೆ ಜರಾಸಂಧನು ದಾಳಿ ಮಾಡಿದಾಗ ಅವನು ಅಲ್ಲಿಂದ ಓಡಿ ಹೋಗಿದ್ದನು. ಕಾಲಯವನ ಇವನನ್ನು ಹೊಡೆಯಲು ಬಂದಾಗ ಆಗಲು ಕೂಡ ಇವನು ಓಡಿ ಹೋಗಿದ್ದನು. ಕೃಷ್ಣ ಭಕ್ತರು ಕೂಡ ಇವನನ್ನು ರಣಚೋಡದಾಸ ಎನ್ನುತ್ತಾರೆ. ಆದ್ದರಿಂದ ಕೃಷ್ಣ ಓಡಿಹೋಗಿರುವುದು ಸಾಬೀತಾಗುತ್ತದೆ.

ಆಕ್ಷೇಪದ ಖಂಡನೆ

ಅ. ಕೃಷ್ಣ ಭಕ್ತ ಭಗವಂತ ಶ್ರೀ ಕೃಷ್ಣನನ್ನು ರಣಚೋಡದಾಸ ಎಂದು ಪ್ರಶಂಸೆಯಿಂದ, ಭಕ್ತಿಯಿಂದ ಮತ್ತು ಪ್ರೇಮದಿಂದ ಹೇಳುತ್ತಾರೆ. ಭಗವಂತ ಶ್ರೀಕೃಷ್ಣನ ಚರಿತ್ರೆ ಎಂದರೆ ಎಲ್ಲಾ ಧರ್ಮದ ತವರು, ಕರ್ತವ್ಯದ ಅತ್ತೆ ಮನೆ, ಸಂತರ ಅಂತಕರಣ ಮತ್ತು ಪಂಡಿತರಿಗಾಗಿ ರತ್ನ ಭಂಡಾರವಾಗಿದೆ. ದ್ವಾರಕಾದಲ್ಲಿ ದ್ವಾರಕಾದೀಶನ ದೇವಸ್ಥಾನವಿದೆ. ಈ ದೇವಸ್ಥಾನದಲ್ಲಿ ಶ್ರೀ ಕೃಷ್ಣನ ಭಜನೆ ಮಾಡುವಾಗ ಎಲ್ಲಾ ಭಕ್ತರು ರಣಚೋಡದಾಸ ಕಿ ಜೈ ಎಂದು ಭಕ್ತಿ ಭಾವದಿಂದ ಜಯಕಾರ ಮಾಡುತ್ತಾರೆ.

ಆ. ರಣರಂಗ ಬಿಟ್ಟು ಓಡಿ ಹೋಗುವುದರ ಹಿಂದೆ ಶ್ರೀಕೃಷ್ಣನಿಗೆ ಕಾಲಯವನನನ್ನು ಯುಕ್ತಿಯಿಂದ ವಧಿಸುವ ಉದ್ದೇಶವಿತ್ತು ! ಜರಾಸಂಧನು ಮಥುರಾದ ಮೇಲೆ ೧೭ ಸಾರಿ ದಾಳಿ ನಡೆಸಿದನು. ಪ್ರತಿಸಾರಿಯೂ ಶ್ರೀ ಕೃಷ್ಣನು ಅವನನ್ನು ಸೋಲಿಸಿದನು.೧೮ ನೇ ಸಾರಿ ಜರಾಸಂಧನು ಕಾಲಯವನನನ್ನು ಕರೆದುಕೊಂಡು ಮಥುರಾದ ಮೇಲೆ ದಾಳಿ ಮಾಡಿದನು. ಕಾಲಯವನನನ್ನು ನೋಡಿ ಶ್ರೀ ಕೃಷ್ಣನು ಓಡಲು ಆರಂಭಿಸಿದನು. ಕಾಲಯವನನನು ಅವನನ್ನು ಬೆಂಬೆತ್ತಿದನು. ಶ್ರೀ ಕೃಷ್ಣ ಒಂದು ಗುಹೆಗೆ ಹೋದನು. ಅಲ್ಲಿ ಮುಚುಕುಂದ ರಾಜನು ನಿದ್ರಿಸುತ್ತಿದ್ದನು. ಇಂದ್ರದೇವನು ಮುಚುಕುಂದ ರಾಜನಿಗೆ ನಿದ್ರೆಯಲ್ಲಿ ತೊಂದರೆ ನೀಡುವ ವ್ಯಕ್ತಿ ಮುಚುಕುಂದ ರಾಜನ ದೃಷ್ಟಿಗೆ ಬೀಳುತ್ತಲೇ ಅವನು ಸುಟ್ಟು ಬಸ್ಮವಾಗುವನು ಎಂದು ವರ ನೀಡಿದ್ದನು. ಶ್ರೀ ಕೃಷ್ಣನು ನಿದ್ರೆಯಲ್ಲಿರುವ ಮುಚಕುಂದ ರಾಜನ ಮೈಮೇಲೆ ತನ್ನ ಶಲ್ಯವನ್ನು ಹೊದಿಸಿದನು. ಶ್ರೀ ಕೃಷ್ಣನನ್ನು ಬೆಂಬತ್ತಿ ಬರುತ್ತ ಗುಹೆಯೊಳಗೆ ಬಂದ ಕಾಲಯವನನು ಮಲಗಿರುವ ರಾಜನನ್ನು ಶ್ರೀ ಕೃಷ್ಣನೆಂದು ತಿಳಿದು ಕಾಲಲ್ಲಿ ಒದೆದನು. ಆದ್ದರಿಂದ ನಿದ್ರಾಭಂಗವಾಗಿರುವ ರಾಜ ಮುಚುಕುಂದನು ಎದ್ದು ಕುಳಿತನು. ಅವನ ದೃಷ್ಟಿ ಕಾಲಯವನನ ಮೇಲೆ ಬಿದ್ದಿತು ಮತ್ತು ತಕ್ಷಣ ಕಾಲಯವನನು ಸುಟ್ಟು ಭಸ್ಮವಾದನು. (ಈ ಕಥೆಯನ್ನು, ಭಾಗ ೧ ಎ ೩. ಜರಾಸಂಧನ ಸಹಾಯಕ್ಕಾಗಿ ಬಂದಿರುವ ಕಾಲಯವನನನ್ನು ಶ್ರೀಕೃಷ್ಣನು ನಾಶಮಾಡುವುದು. ಈ ಸೂತ್ರದಲ್ಲಿ ವಿಸ್ತೃತವಾಗಿ ನೀಡಲಾಗಿದೆ) ಈ ರೀತಿ ವಿಶಿಷ್ಟ ಉದ್ದೇಶ ಇಟ್ಟು ತಮ್ಮ ಶತ್ರುವನ್ನು ಇಚ್ಛ್ಚಿತ ಸ್ಥಳಕ್ಕೆ ಕೊಂಡೊಯ್ಯುವುದು ಮತ್ತು ಅವನ ನಾಶ ಮಾಡುವುದರಲ್ಲಿ ಶ್ರೀ ಕೃಷ್ಣ ಯಶಸ್ವಿಯಾದನು. ಕಾಲಯವನನನ್ನು ವಧಿಸುವುದಕ್ಕಾಗಿ ಶ್ರೀ ಕೃಷ್ಣನು ತನ್ನ ಶಕ್ತಿಯನ್ನು ವ್ಯರ್ಥ ಮಾಡಲಿಲ್ಲ. ರಣರಂಗ ಬಿಟ್ಟು ಓಡುವುದರ ಹಿಂದೆ ಶ್ರೀಕೃಷ್ಣನ ದೂರದೃಷ್ಟಿ ಮತ್ತು ಕೌಶಲ್ಯ ಪ್ರಕಟವಾಗುತ್ತದೆ, ಆದ್ದರಿಂದ ರಣಚೋಡದಾಸ ಈ ಉಪಾಧಿ ಅವನಿಗೆ ಒಪ್ಪುತ್ತದೆ.

ಇ. ಜರಾಸಂಧನಿಂದ ಮಥುರಾದ ಮೇಲೆ ಪದೇ ಪದೇ ನಡೆಯುವ ದಾಳಿಯಿಂದ ಪ್ರಜೆಗಳಿಗೆ ತೊಂದರೆ ಆಗಬಾರದೆಂದು : ಶ್ರೀ ಕೃಷ್ಣನು ಮಥುರೆಯಿಂದ ದ್ವಾರಕೆಗೆ ಸ್ಥಳಾಂತರಗೊಂಡನು !: ಜರಾಸಂಧನಿಂದ ಪದೇಪದೇ ನಡೆಯುವ ದಾಳಿಯಿಂದ ಮಥುರಾದ ಜನರು ಸತತ ಯುದ್ಧ ಜನ್ಯ ಪರಿಸ್ಥಿತಿಯನ್ನು ಎದುರಿಸುತ್ತಿದ್ದರು. ನಿರಂತರ ನಡೆಯುವ ಯುದ್ಧದಿಂದ ಪ್ರಜೆಗಳು ಸಂತ್ರಸ್ತರಾಗಿದ್ದರು : ಆದ್ದರಿಂದ ಶ್ರೀ ಕೃಷ್ಣನು ಮಥುರಾದಿಂದ ದ್ವಾರಕೆಗೆ ಸ್ಥಳಾಂತರಗೊಂಡನು. ಅವನು ದ್ವಾರಕೆಯನ್ನು ನಿರ್ಮಿಸಿದನು. ಆ ದ್ವಾರಕೆಯ ಪ್ರಮುಖ ಸ್ಥಾನವನ್ನು ತನ್ನ ತಂದೆ ವಸುದೇವನಿಗೆ ನೀಡಿದನು. ಹಿರಿಯ ಸಹೋದರ ಬಲರಾಮನಿಗೆ ಯುವರಾಜ ಪದವಿ ನೀಡಿದನು. ಶೂರ ಸ್ನೇಹಿತ ಸಾತ್ಯಕಿ ಇವನನ್ನು ಸೇನಾಪತಿ ಮಾಡಿದನು. ಗುರು ಸಾಂದೀಪನಿ ಋಷಿಗಳಿಗೆ ರಾಜಪುರೋಹಿತ ಪದವಿ ನೀಡಿ ಗೌರವಿಸಿದನು. ಅಧಿಕಾರ ಕೈಯಲ್ಲಿ ಇಟ್ಟುಕೊಳ್ಳದೆ (ಕಿಂಗ್‌ ಮೇಕರ್‌ ಆಗದೆ) ಅವನು ಎಲ್ಲರ ದಾಸನಾದನು. ಇಂತಹ ಎಲ್ಲರಿಗೆ ದಾಸನಾಗಿರುವ ಶ್ರೀಕೃಷ್ಣನನ್ನು ಭಕ್ತರ ದೃಷ್ಟಿಯಲ್ಲಿ ಅವರ ಪ್ರೀತಿಯ ರಣಚೋಡದಾಸ ಇರುವನು.

(ಶ್ರೀ. ದುರ್ಗೇಶ ಪರುಳಕರ ಇವರು ಬರೆದಿರುವ ಯೋಗೇಶ್ವರ ಶ್ರೀ ಕೃಷ್ಣ ಎಂಬ ಸನಾತನದ ಗ್ರಂಥವು ಬೇಗನೇ ಪ್ರಕಾಶಿತವಾಗುವುದು.)