ಸ್ಟಾಕಹೋಮ್ – ಸ್ವೀಡನ್ ನಲ್ಲಿ ಕುರಾನ್ ನ ಪ್ರತಿಗಳನ್ನು ಸುಡುವುದು ಮುಂದುವರೆದಿದೆ. ಈಗ ಸ್ವೀಡನ್ ನ ಮೂರನೆಯ ಅತಿ ದೊಡ್ಡ ಪಟ್ಟಣವಾದ ಮಾಲಮೊದಲ್ಲಿ ಕುರಾನ್ ಸುಟ್ಟ ನಂತರ ಪುನಃ ಹಿಂಸಾಚಾರ ಆಗಿದೆ. ಮಾಲಮೊ ನಗರದ ರೋಜನ್ ಗಾರ್ಡ್ ಪ್ರದೇಶದಲ್ಲಿ ಇಸ್ಲಾಂಗೆ ವಿರೋಧ ಮಾಡುವಾಗ ಸಲವಾನ ಮೊಮಿಕನು ಕುರಾನಿನ ಪ್ರತಿಯನ್ನು ಸುಟ್ಟಿದ್ದಾರೆ. ಇದರಿಂದ ಅನೇಕ ಕಡೆಗಳಲ್ಲಿ ಬೆಂಕಿ ಹಚ್ಚುವುದು ಮತ್ತು ಕಲ್ಲು ತೂರಾಟ ನಡೆದಿದೆ. ಈ ಹಿಂಸಾಚಾರದಲ್ಲಿ ಅನೇಕ ಕಾರುಗಳು ಮತ್ತು ಕಟ್ಟಡಗಳಿಗೆ ಹಾನಿಯಾಗಿದೆ. ಪೊಲೀಸರು ಪ್ರತಿಭಟನಾಕಾರರನ್ನು ತಡೆಯಲು ಯತ್ನಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಹಿರಿಯ ಪೋಲೀಸ್ ಅಧಿಕಾರಿ ಪೆಟ್ರೊ ಸ್ಟಾನಕುಲ ಇವರು, ‘ನಾವು ಜನರ ಭಾವನೆಗಳನ್ನು ಗೌರವಿಸುತ್ತೇವೆ: ಆದರೆ ಹಿಂಸಾಚಾರ ಮಾಡಲು ಯಾರಿಗೂ ಅನುಮತಿಯಿಲ್ಲ’, ಎಂದು ಹೇಳಿದರು.
कुरान जलाए जाने के बाद स्वीडन में फिर बवाल! माल्मो शहर में फूंकी गईं गाड़ियां, जमकर पत्थरबाजीhttps://t.co/HDIr67Nnf5
— Jansatta (@Jansatta) September 4, 2023