ಬ್ರಿಟನ್‌ನಲ್ಲಿ ಶೇ. 53.4 ರಷ್ಟು ಪಾದ್ರಿಗಳಿಂದ ಸಲಿಂಗ ವಿವಾಹಕ್ಕೆ ಬೆಂಬಲ !

ಲಂಡನ್ (ಬ್ರಿಟನ್) – “ದಿ ಟೈಮ್ಸ್” ಪತ್ರಿಕೆ ನಡೆಸಿದ ಸಮೀಕ್ಷೆಯಲ್ಲಿ, ಬ್ರಿಟನ್‌ನ “ಚರ್ಚ್ ಆಫ್ ಇಂಗ್ಲೆಂಡ್” ನ ಶೇಕಡಾ 53.4 ರಷ್ಟು ಪಾದ್ರಿಗಳು ಸಲಿಂಗ ವಿವಾಹವನ್ನು ಬೆಂಬಲಿಸಿದ್ದಾರೆ ಮತ್ತು ಇದಕ್ಕಾಗಿ ಚರ್ಚ್ ಕಾನೂನಿನಲ್ಲಿ ಬದಲಾವಣೆಯನ್ನು ಸಹ ಮಾಡುವಂತೆ ಒತ್ತಾಯಿಸುತ್ತಾರೆ; ಆದರೆ ಶೇ. 36.5 ರಷ್ಟು ಪಾದ್ರಿಗಳು ಸಲಿಂಗ ವಿವಾಹವನ್ನು ವಿರೋಧಿಸಿದ್ದಾರೆ.

1. ವಿಶೇಷವೆಂದರೆ 2014 ರಲ್ಲಿ ಬ್ರಿಟನ್‌ನಲ್ಲಿ ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಲಾಯಿತು. ಆ ಸಮಯದಲ್ಲಿ, ಶೇ. 51 ರಷ್ಟು ಪಾದ್ರಿಗಳು ಇದನ್ನು ವಿರೋಧಿಸಿದ್ದರು ಹಾಗೆಯೇ ಶೇ. 39 ರಷ್ಟು ಜನರು ಅದನ್ನು ಬೆಂಬಲಿಸಿದ್ದರು.

2. ಪ್ರಸ್ತುತ ಸಮೀಕ್ಷೆಯಲ್ಲಿ, ಶೇ. 64.5 ರಷ್ಟು ಪಾದ್ರಿಗಳು, “ಸಲಿಂಗಕಾಮವನ್ನು ಪಾಪವೆಂದು ಪರಿಗಣಿಸಬಾರದು ಅಥವಾ ಕ್ರೈಸ್ತ ಧರ್ಮಗ್ರಂಥಗಳಿಗೆ ವಿರುದ್ಧ ಎಂದು ಪರಿಗಣಿಸಬಾರದು” ಎಂದು ಹೇಳಿದ್ದಾರೆ. ‘ಸಲಿಂಗಕಾಮದಲ್ಲಿ ಲೈಂಗಿಕ ಸಂಬಂಧ ವಿಷಯದಲ್ಲಿ ನಮಗೆ ಯಾವುದೇ ಅಡಚಣೆ ಇಲ್ಲ’, ಎಂದು ಶೇ. 37.3 ರಷ್ಟು ಪಾದ್ರಿಗಳು ಹೇಳಿದ್ದಾರೆ.

ಬ್ರಿಟನ್ಅನ್ನು ‘ಕ್ರೈಸ್ತ ರಾಷ್ಟ್ರ’ ಎಂದು ಕರೆಯಬಾರದು ! – ಶೇ. 75 ರಷ್ಟು ಪಾದ್ರಿಗಳ ಅಭಿಪ್ರಾಯ

‘ದಿ ಟೈಮ್ಸ್’ ನಡೆಸಿದ ಸಮೀಕ್ಷೆಯ ಪ್ರಕಾರ, ಬ್ರಿಟನ್‌ನಲ್ಲಿರುವ ಶೇ. 75 ರಷ್ಟು ಪಾದ್ರಿಗಳು, ಬ್ರಿಟನ್ಅನ್ನು ಈಗ “ಕ್ರೈಸ್ತ ರಾಷ್ಟ್ರ” ಎಂದು ಕರೆಯಬಾರದು ಎಂದು ಹೇಳಿದ್ದಾರೆ, ಆದರೆ ಶೇ. 64 ರಷ್ಟು ಪಾದ್ರಿಗಳು ಬ್ರಿಟನ್ಅನ್ನು ಐತಿಹಾಸಿಕವಾಗಿ “ಕ್ರೈಸ್ತ ರಾಷ್ಟ್ರ” ಎಂದು ಕರೆಯಬಹುದು; ಆದರೆ ಈಗಿನ ಸ್ಥಿತಿಯಲ್ಲಿ ಅದನ್ನು ‘ಕ್ರೈಸ್ತ ರಾಷ್ಟ್ರ’ ಎಂದು ಕರೆಯಬಾರದು. ಎಂದು ಹೇಳಿದ್ದಾರೆ.

 

ಸಂಪಾದಕೀಯ ನಿಲುವು

ಪಾದ್ರಿಗಳಿಂದ ಮಕ್ಕಳು ಮತ್ತು ಮಹಿಳೆಯರ ಮೇಲೆ ನಡೆಯುತ್ತಿರುವ ನೂರಾರು ಲೈಗಿಂಕ ದೌರ್ಜನ್ಯ ಪ್ರಕರಣಗಳು ಇಲ್ಲಿಯವರೆಗೆ ಬೆಳಕಿಗೆ ಬಂದಿರುವುದರಿಂದ ಪಾದ್ರಿಗಳಿಂದ ಇದಕ್ಕಿಂತ ಬೇರೆ ಆಲೋಚನೆಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ !