ಧಾರ್ಮಿಕ ಗ್ರಂಥಗಳನ್ನು ಅಪಮಾನ ಮಾಡುವುದು ಅಪರಾಧವೆಂದು ಕಾನೂನು ರೂಪಿಸಿ ! – ಉತ್ತರ ಪ್ರದೇಶದ ಶಾಸಕ ಡಾ. ರಾಜೇಶ್ವರ್ ಸಿಂಗ್

ಉತ್ತರ ಪ್ರದೇಶದ ಶಾಸಕ ಡಾ. ರಾಜೇಶ್ವರ್ ಸಿಂಗ್ ಇವರ ಕೇಂದ್ರ ಕಾನೂನು ಸಚಿವರಲ್ಲಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿಗಳಲ್ಲಿ ಮನವಿ

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಉತ್ತರ ಪ್ರದೇಶದ ಶಾಸಕ ಡಾ. ರಾಜೇಶ್ವರ ಸಿಂಗ್ ಅವರು ಕೇಂದ್ರ ಕಾನೂನು ಸಚಿವ ಹಾಗೂ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಪತ್ರ ಬರೆದು ಧಾರ್ಮಿಕ ಗ್ರಂಥಗಳ ಅವಹೇಳನ ಮಾಡುವುದನ್ನು ಅಪರಾಧ ಎಂಬ ಕಾನೂನನ್ನು ರೂಪಿಸುವಂತೆ ಆಗ್ರಹಿಸಿದ್ದಾರೆ.

ಡಾ. ರಾಜೇಶ್ವರ ಸಿಂಹರು ಪತ್ರದಲ್ಲಿ, ದೇಶದಲ್ಲಿ ಅನೇಕ ಧರ್ಮಗ್ರಂಥಗಳ ಮೇಲೆ ದಾಳಿ ನಡೆಸಿ ಅವಮಾನ ಮಾಡಿದ ಅನೇಕ ಉದಾಹರಣೆಗಳಿವೆ. ಇಂತಹ ಘಟನೆಗಳು ದೇಶದ ಸಾಮಾಜಿಕ ಸಮಗ್ರತೆಯ ಮೇಲೆ ಪರಿಣಾಮ ಬೀರುತ್ತಿವೆ. ಪ್ರಸ್ತುತ ದೇಶದಲ್ಲಿ ಧಾರ್ಮಿಕ ಗ್ರಂಥಗಳ ಮಹತ್ವವನ್ನು ಗುರುತಿಸುವ ಮತ್ತು ‘ಅವುಗಳ ಅವಮಾನ ಮಾಡುವುದು ಅಪರಾಧ’ ಎಂದು ಯಾವುದೇ ಕಾನೂನು ದೇಶದಲ್ಲಿಲ್ಲ. ಇದಕ್ಕಾಗಿ ಸರಕಾರ ಕಾನೂನು ರೂಪಿಸಬೇಕು ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಭಾರತದಲ್ಲಿ, ಧಾರ್ಮಿಕ ಗ್ರಂಥಗಳನ್ನು ಅವಮಾನಿಸುವುದು ಅಪರಾಧ ಎಂದು ಯಾವುದೇ ಕಾನೂನು ಇಲ್ಲದಿರುವುದು ನಾಚಿಕೆಗೇಡಿನ ಸಂಗತಿ !