ಡೆಂಗ್ಯೂ, ಮಲೇರಿಯಾ, ಕೊರೊನಾ ದಂತೆ ಸನಾತನ ಧರ್ಮವನ್ನು ಮುಗಿಸಬೇಕಿದೆ ! (ಅಂತೆ) – ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಇವರ ಪುತ್ರ ಉದಯನಿಧಿ

ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಇವರ ಪುತ್ರ ಉದಯನಿಧಿ ಇವರು ‘ಸನಾತನ ನಿರ್ಮೂಲನೆ ಸಭೆಯಲ್ಲಿ’ ಹಿಂದೂ ದ್ವೇಷಿ ಹೇಳಿಕೆ !

ಚೆನ್ನೈ (ತಮಿಳುನಾಡು) – ತಮಿಳನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಇವರ ಮಗ ಹಾಗೂ ರಾಜ್ಯದ ಯುವ ಕಲ್ಯಾಣ ಮತ್ತು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ಇವರು ಸಪ್ಟೆಂಬರ್ ೨ ರಂದು ‘ಸನಾತನ ನಿರ್ಮೂಲನೆ ಸಭೆ’ಯಲ್ಲಿ ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾ ಮತ್ತು ಕೋರೋನ ರೋಗಗಳ ಜೊತೆಗೆ ಹೋಲಿಸಿದರು. ಅವರು, ”ಸನಾತನ ಧರ್ಮವು ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ವಿರುದ್ಧವಾಗಿದೆ. ಕೆಲವು ವಿಷಯದ ವಿರೋಧ ಮಾಡಲಾಗುವುದಿಲ್ಲ, ಅದನ್ನು ನಾಶವೇ ಮಾಡಬೇಕಾಗುತ್ತದೆ. ನಾವು ಡೆಂಗ್ಯೂ, ಮಲೇರಿಯಾ ಅಥವಾ ಕೊರೊನಾ ಇದರ ವಿರೋಧ ಮಾಡಲು ಸಾಧ್ಯವಿಲ್ಲ. ಅವುಗಳನ್ನು ನಾಶ ಮಾಡಲೇಬೇಕು, ಹಾಗೆಯೇ ಸನಾತನ ಧರ್ಮವನ್ನೂ ನಾಶ ಮಾಡಬೇಕು” ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಉದಯನಿಧಿ ಸ್ಟಾಲಿನ್ ಇವರ ಜೊತೆಗೆ ದ್ರಮುಕ(ದ್ರಾವಿಡ ಮುನ್ನೆತ್ರಿ ಕಳಗಂ – ದ್ರಾವಿಡ ಪ್ರಗತಿ ಸಂಘದ) ಇತರ ಅನೇಕ ನಾಯಕರು ಕೂಡ ಭಾಗವಹಿಸಿದ್ದರು. ರಾಜ್ಯದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪಿ.ಕೆ ಶೇಖರ ಬಾಬು ಇವರು ಕೂಡ ಸಹಭಾಗಿ ಆಗಿದ್ದರು.

(ಸೌಜನ್ಯ – News18 Kannada)

‘ಕೇಸರಿ ಬೆದರಿಕೆಗೆ ಹೆದರುವುದಿಲ್ಲ !’ (ಅಂತೆ) – ಉದಯನಿಧಿ ಸ್ಟಾಲಿನ್

‘ಎಕ್ಸ್’ (ಹಿಂದಿನ ಟ್ವಿಟರ್) ಈ ಸಾಮಾಜಿಕ ಜಾಲತಾಣದಲ್ಲಿ ‘ಲೀಗಲ್ ರೈಟ್ಸ್ ಆಬ್ಸರ್ವೇಟರಿ’ ಹೆಸರಿನ ಖಾತೆಯಿಂದ ಉದಯನಿಧಿ ಸ್ಟಾಲಿನ್ ಇವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳುವ ಯೋಚನೆ ಮಾಡುತ್ತಿದ್ದೇವೆ ಎಂದು ಟ್ವೀಟ್ ಮಾಡಿದೆ. ಈ ಟ್ವಿಟರ್ ಗೆ ಉದಯನಿಧಿ ಇವರು ಟ್ವೀಟ್ ಮಾಡಿ ಪ್ರತ್ಯುತ್ತರ ನೀಡುತ್ತಾ. ‘ನಾನು ಯಾವುದೇ ಕಾನೂನಿನ ಆವಾಹನೆಗೆ ಸಿದ್ಧನಿದ್ದೇನೆ. ಇಂತಹ ಕೇಸರಿ ಬೆದರಿಕೆಗೆ ನಾವು ಹೆದರುವುದಿಲ್ಲ. ನಾವು ಪೆರಿಯಾರ್ (ತಮಿಳುನಾಡಿನಲ್ಲಿನ ನಾಸ್ತಿಕವಾದಿ ಚಿಂತಕ) ಮತ್ತು ಅಣ್ಣ (ಅಣ್ಣ ದುರೈ – ಮಾಜಿ ದ್ರಾವಿಡ ಮುಖಂಡ) ಇವರ ಅನುಯಾಯಿಗಳಾಗಿದ್ದೇವೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಇವರ ನೇತೃತ್ವದಲ್ಲಿ ಸಾಮಾಜಿಕ ನ್ಯಾಯ ಕಾಪಾಡುವುದಕ್ಕಾಗಿ ಸಂಘರ್ಷ ನಡೆಸುತ್ತಿದ್ದೇವೆ, ನಾನು ಇಂದು ನಾಳೆ ಮತ್ತು ಎಂದಿಗೂ, ದ್ರಾವಿಡ ಭೂಮಿಯಿಂದ ಸನಾತನ ಧರ್ಮವನ್ನು ತಡೆಯುವದಕ್ಕಾಗಿ ನಮ್ಮ ಸಂಕಲ್ಪ ಎಂದಿಗೂ ಕಡಿಮೆ ಆಗುವುದಿಲ್ಲ ಎಂದು ಹೇಳುವೆ.” ಎಂದು ಹೇಳಿದ್ದಾರೆ.

‘ಇಂಡಿಯಾ’ ಮೈತ್ರಿಕೂಟದ ಸಭೆಯಲ್ಲಿ ಇದು ನಿರ್ಧರಿಸಲಾಗಿತ್ತಾ ? – ಭಾಜಪದ ಪ್ರಶ್ನೆ

ಭಾಜಪದ ಮುಖಂಡ ಅಮಿತ್ ಮಾಲವಿಯ ಇವರು ಟ್ವೀಟ್ ಮಾಡುತ್ತಾ, ‘ಸನಾತನ ಧರ್ಮ ನಂಬುವವರು ದೇಶದಲ್ಲಿ ಶೇಕಡ ೮೦ ರಷ್ಟು ಇರುವ ಜನಸಂಖ್ಯೆ ಮುಗಿಸುವ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ. ದ್ರಮುಕ ಇದು ವಿರೋಧಿಪಕ್ಷದಲ್ಲಿನ ಪ್ರಮುಖ ಹಾಗೂ ಕಾಂಗ್ರೆಸ್ಸಿನ ಸಹಯೋಗಿ ಪಕ್ಷವಾಗಿದೆ. ಸ್ಟಾಲಿನ್ ಇವರ ಹೇಳಿಕೆಯ ಬಗ್ಗೆ ಮುಂಬಯಿಯಲ್ಲಿನ ಸಭೆಯಲ್ಲಿ ಒಮ್ಮತವಾಗಿದೆಯೆ ?’, ಎಂದು ಮಾಲವಿಯ ಇವರು ಪ್ರಶ್ನೆ ಕೇಳಿದ್ದಾರೆ. ಭಾಜಪದ ತಮಿಳುನಾಡು ಪ್ರದೇಷಾಧ್ಯಕ್ಷ ಅಣ್ಣಾಮಲೈ ಇವರು, ಉದಯನಿಧಿ ಸ್ಟಾಲಿನ್, ನಿಮ್ಮ ತಂದೆ ಅಥವಾ ನಿಮ್ಮ ಯೋಚನೆ ಇದು ಕ್ರೈಸ್ತ ಮಷೀನರಿಗಳಿಂದ ಸಾಲವಾಗಿ ಪಡೆದಿದೆ ಎಂದು ಹೇಳಿದರು.

ರಾಜಕಾರಣದಲ್ಲಿ ಧರ್ಮ ತರಲು ಭಾಜಪದ ನಾಯಕರೇ ಹೊಣೆ ! – ಕಾಂಗ್ರೆಸ್

ಕಾಂಗ್ರೆಸ್ಸಿನ ಮುಖಂಡ ರಶೀದ್ ಅಲ್ವಿ ಇವರು, ನಮ್ಮ ಸಂವಿಧಾನ ಜಾತ್ಯತೀತವಾಗಿದೆ. ದೇಶದಲ್ಲಿ ಎಲ್ಲಾ ಧರ್ಮದ ಜನರು ವಾಸಿಸುತ್ತಾರೆ; ಆದರೆ ಕಳೆದ ೯ ವರ್ಷಗಳಿಂದ ಭಾಜಪ ಧರ್ಮದ ರಾಜಕಾರಣ ಮಾಡುತ್ತಿದೆ. ಆದ್ದರಿಂದ ಈಗ ಯಾರಬೇಕಾದರೂ ಧರ್ಮದ ಬಗ್ಗೆ ಬಡಬಡಾಯಿಸುತ್ತಾನೆ. ಈಗ ಅವರು ಹೇಳಿಕೆ ನೀಡಿರುವುದು ತಪ್ಪಾಗಿದೆ; ಆದರೆ ರಾಜಕಾರಣದಲ್ಲಿ ಧರ್ಮ ತರುವುದಕ್ಕೆ ಭಾಜಪದ ನಾಯಕರೇ ಹೊಣೆ, ಎಂದು ಟೀಕಿಸಿದರು. (ಇದಕ್ಕೆ ಹೇಳೋದು ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದ ಹಾಗೆ ! – ಸಂಪಾದಕರು)

ಉದಯನಿಧಿ ಸ್ಟಾಲಿನ್ ಇವರ ಹೇಳಿಕೆಗೆ ಪ್ರತಿಕ್ರಿಯೆ ವ್ಯಕ್ತಪಡಿಸುವಾಗ ಮಹಾರಾಷ್ಟ್ರದಲ್ಲಿನ ಕಾಂಗ್ರೆಸ್ಸಿನ ಪ್ರದೇಶಾಧ್ಯಕ್ಷ ನಾನಾ ಪಟೋಲೆ ಇವರು, ನಾವು ಯಾವುದೇ ಧರ್ಮ ಟೀಕಿಸಲು ಇಚ್ಚಿಸುವುದಿಲ್ಲ ಮತ್ತು ಯಾರ ಭಾವನೆಗೆ ನೋವುಂಟು ಮಾಡಲು ಸಿದ್ದರಿಲ್ಲ, ನಮ್ಮ ನೀತಿ ಸ್ಪಷ್ಟವಾಗಿದೆ ಎಂದು ಹೇಳಿದರು.

ಸನಾತನ ಧರ್ಮ ಯುಗಾನುಯುಗಗಳಿಂದ ಅಸ್ತಿತ್ವದಲ್ಲಿ ! – ಆಚಾರ್ಯ ಸತ್ಯೇಂದ್ರ ದಾಸ

ಶ್ರೀರಾಮ ಜನ್ಮ ಭೂಮಿಯಲ್ಲಿ ಶ್ರೀರಾಮ ಮಂದಿರದ ಮುಖ್ಯ ಅರ್ಚಕರಾದ ಆಚಾರ್ಯ ಸತ್ಯೇಂದ್ರ ದಾಸ ಇವರು, ಸನಾತನ ಧರ್ಮಕ್ಕೆ ಯಾವುದೇ ಬೆಲೆಕೊಟ್ಟರು ನಾಶ ಮಾಡಲು ಸಾಧ್ಯವಿಲ್ಲ. ಸನಾತನ ಧರ್ಮ ಯುಗಾನುಯುಗಗಳಿಂದ ಅಸ್ತಿತ್ವದಲ್ಲಿದೆ ಮತ್ತು ಇರಲಿದೆ. ಉದಯನಿಧಿ ಇವರಿಗೆ ಸನಾತನ ಧರ್ಮದ ಅರ್ಥವೇ ತಿಳಿದಿಲ್ಲ. ಅವರು ಏನೆಲ್ಲಾ ಮಾತನಾಡುತ್ತಿದ್ದಾರೆ ಅದು ತಪ್ಪಾಗಿರುವುದು, ಎಂದು ಹೇಳಿದರು.

(ಸೌಜನ್ಯ – Oneindia Hindi | वनइंडिया हिंदी)

ಸನಾತನ ನಿರ್ಮೂಲನೆ ಸಭೆಯ ವಿರುದ್ಧ ದೂರು

ಭಾರತ ಹಿಂದೂ ಮುನ್ನಾನಿಯ ರಾಜ್ಯ ಸಮನ್ವಯಕ ಡಿ. ರಾಮಕೃಷ್ಣನ್ ಇವರು ಈ ಸಭೆಯ ವಿರುದ್ಧ ಮತ್ತು ಅದರ ಆಯೋಜಕರಾದ ವಿರಾಮಾನಿ, ಸೆಂತಿನಾಥನ್, ಜಗದೀಶ್ವರನ್ ಭೂಪಲನ್ ಮತ್ತು ರೋಹಿಣಿ ಇವರ ವಿರುದ್ಧ ಚೆನ್ನೈ ಪೋಲಿಸ ಅಧಿಕಾರಿ ಕಾರ್ಯಾಲಯದಲ್ಲಿ ಲಿಖಿತ ಸ್ವರೂಪದಲ್ಲಿ ದೂರು ನೀಡಿದ್ದಾರೆ. ಈ ದೂರಿನ ಮುಂದಿನ ಕ್ರಮಕ್ಕಾಗಿ ಜಿಲ್ಲಾಧಿಕಾರಿಗಳ ಬಳಿ ಕಳುಹಿಸಲಾಗಿದೆ. ಹಿಂದುತ್ವನಿಷ್ಠ ನ್ಯಾಯವಾದಿ ಮುಥಾರಸು ಇವರು ಈ ದೂರು ನೀಡಲು ಸಹಾಯ ಮಾಡಿದರು.

ಸಂಪಾದಕೀಯ ನಿಲುವು

ಉದಯನಿಧಿ ಸ್ಟಾಲಿನ್ ಇವರು ಮೊಘಲರಿಗೆ ಯಾವುದು ಸಾಧ್ಯವಾಗಿಲ್ಲ, ಅದನ್ನು ಮಾಡುವಂತಹ ಹಾಸ್ಯಸ್ಪದ ಹೇಳಿಕೆ ನೀಡಿದ್ದಾರೆ. ಉದಯನಿಧಿ ಇವರು ರಾಜ್ಯದಲ್ಲಿನ ಡೆಂಗ್ಯೂ, ಮಲೇರಿಯಾ ಮತ್ತು ಕೊರೊನ ಇದನ್ನು ಮೊದಲು ನಾಶ ಮಾಡಿ ತೋರಿಸಲಿ ನಂತರ ಸನಾತನ ಧರ್ಮದ ಬಗ್ಗೆ ಮಾತನಾಡಲಿ !

ಜಗತ್ತಿನಲ್ಲಿ ಜಿಹಾದಿ ಭಯೋತ್ಪಾದನೆ ಮಿತಿಮೀರಿರುವಾಗ ಅದನ್ನು ನಾಶ ಮಾಡುವ, ಜಿಹಾದಿಗಳನ್ನು ನಾಶ ಮಾಡುವ, ಜಿಹಾದಿ ಯಾವ ಧರ್ಮದವರಾಗಿದ್ದಾರೆ, ಅದನ್ನು ನಾಶ ಮಾಡುವ, ಹೀಗೆ ಹೇಳುವ ಧೈರ್ಯ ಉದಯನಿಧಿ ತೋರುತ್ತಿಲ್ಲ ಇದನ್ನು ಗಮನಿಸಿ !

‘ಶ್ರೀಲಂಕಾದಲ್ಲಿ ತಮಿಳರ ನರಸಂಹಾರ ನಡೆಸುವ ಶ್ರೀಲಂಕಾವನ್ನು ನಾಶ ಮಾಡುವೆವು’, ಎಂದು ದ್ರವೀಡ ನಾಯಕರು ಹೇಳಿಕೆ ನೀಡುವುದಿಲ್ಲ ಇದನ್ನು ತಿಳಿದುಕೊಳ್ಳಿ !

ತಮಿಳುನಾಡಿನಲ್ಲಿ ಸನಾತನ ನಿರ್ಮೂಲನೆ ಸಭೆ ನಡೆಸಲಾಗುತ್ತದೆ ಮತ್ತು ಅದಕ್ಕೆ ರಾಜ್ಯದ ಸಚಿವರು ಉಪಸ್ಥಿತರಿರುತ್ತಾರೆ, ಇದೇ ಅವರ ಜಾತ್ಯತೀತತೆಯೇ ? ಸಂವಿಧಾನದ ನಿಜವಾದ ರಕ್ಷಕರಾಗಿರುವದೆಂದು ಹೇಳುವ ರಾಜಕೀಯ ಪಕ್ಷಗಳಿಗೆ ಇದು ಒಪ್ಪಿಗೆ ಇದೆಯೇ ?