ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರೊಂದಿಗಿನ ಭಾವಭೇಟಿಯಲ್ಲಿ ಸನಾತನದ ೪೨ ನೇ ಸಂತ ಪೂ. ಅಶೋಕ ಪಾತ್ರೀಕರ (೭೩ ವರ್ಷ) ಇವರು ಅನುಭವಿಸಿದ ಭಾವಕ್ಷಣಗಳು !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

೧. ಎಲ್ಲ ಧರ್ಮಪ್ರಚಾರಕ ಸಂತರು ಹಾಗೂ ಆಶ್ರಮದಲ್ಲಿರುವ ಸಂತರೊಂದಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ ಇವರ ಭಾವಭೇಟಿ : ‘ಒಮ್ಮೆ ಧರ್ಮಪ್ರಸಾರಕ ಸಂತರು ಮತ್ತು ರಾಮನಾಥಿ ಆಶ್ರಮದಲ್ಲಿ ವಾಸಿಸುವ ಸಂತರಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆಯವರ ಜೊತೆಗೆ ಭಾವಭೇಟಿ ಇತ್ತು. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು, ”ಇಂದಿನ ಸತ್ಸಂಗದಲ್ಲಿ ಏನೋ ಬೇರೆಯೇ ಅರಿವಾಗುತ್ತಿದೆ. ಎಲ್ಲರೂ ಆನಂದದಿಂದ ಇದ್ದಾರೆ. ನಾವು ಈಗ ಕಣ್ಣುಗಳನ್ನು ಮುಚ್ಚಿಕೊಳ್ಳೋಣ ಮತ್ತು ‘ಏನು ಬೇರೆ ಅರಿವಾಗುತ್ತದೆ ? ‘’ಅದನ್ನು ಅನುಭವಿಸಿ ಹೇಳೋಣ’’ ಎಂದರು.

ಪೂ. ಅಶೋಕ ಪಾತ್ರೀಕರ

೨. ಎಲ್ಲ ಸಂತರಿಗೆ ತುಂಬಾ ಆನಂದವಾಗುವುದು : ನಾವೆಲ್ಲರೂ ಕಣ್ಣುಗಳನ್ನು ಮುಚ್ಚಿಕೊಂಡೆವು ಮತ್ತು ನಂತರ ನನಗೆ ಏನು ಅರಿವಾಯಿತೋ ಅದನ್ನು ನಾನು ಹೇಳಿದೆ. ಇಂದು ಧರ್ಮಪ್ರಚಾರಕ ಸಂತರ ಭಾವಭೇಟಿ ಇದೆ.’ ನಂತರ ಈ ಭೇಟಿಯಲ್ಲಿ ರಾಮನಾಥಿಯಲ್ಲಿ ವಾಸಿಸುವ ಎಲ್ಲ ಸಂತರೂ ಕೂಡ ಬರುವವರಿದ್ದಾರೆ ಎಂಬುದು ತಿಳಿಯಿತು.’ ಆಗ ಆನಂದದಲ್ಲಿ ಇನ್ನೂ ಹೆಚ್ಚಳವಾಯಿತು. ಅನಂತರ ಸಾಯಂಕಾಲ ೫.೪೫ ಕ್ಕೆ ಆಶ್ರಮಕ್ಕೆ ಬಂದೆ. ಅಲ್ಲಿ ರಾಮನಾಥಿ ಆಶ್ರಮದಲ್ಲಿ ವಾಸಿಸುವ ಎಲ್ಲ ಸಂತರೂ ಬಂದಿದ್ದರು. ಅವರನ್ನು ನೋಡಿ ಮತ್ತು ಭೇಟಿಯಾಗಿ ಆನಂದದಲ್ಲಿ ಇನ್ನೂ ಹೆಚ್ಚಳವಾಯಿತು.

೩. ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ ಇವರು ‘ಕಣ್ಣುಗಳನ್ನು ಮುಚ್ಚಿಕೊಂಡು ‘ಬೇರೆ ಏನು ಅನುಭವವಾಗುತ್ತದೆ ಎಂದು ಕೇಳಿದಾಗ ನನಗೆ ಪರಮೋಚ್ಚ ಆನಂದದ ಅನುಭವದಿಂದ ಭಾವಾಶ್ರು ಬರುವುದು : ಚಿನಂತರ ಶ್ರೀಚಿತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳರು ಬಂದರು. ಆಗ ನನ್ನ ಆನಂದಕ್ಕೆ ಮಿತಿಯೇ ಇಲ್ಲವಾಯಿತು. ಅನಂತರ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆಯವರ ಶುಭಾಗಮನವಾಯಿತು. ಅವರು ಕಣ್ಣುಗಳನ್ನು ಮುಚ್ಚಿ ಕೊಳ್ಳಲು ಹೇಳಿದಾಗ ಆನಂದದ ಪರಮೋಚ್ಚ ಕ್ಷಣವನ್ನು ತಲುಪಿ ದಂತೆ ಅರಿವಾಯಿತು ಮತ್ತು ಕಣ್ಣುಗಳಿಂದ ಭಾವಾಶ್ರುಗಳು ಬರುತ್ತಿದ್ದವು.’ ಎಲ್ಲ ಸಂತರೂ ಆನಂದವಾಯಿತೆಂದು ಹೇಳಿ ದರು. ಆಗ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಇತರ ಸಮಯದಲ್ಲಿ ”ಯಾವಾಗ ನಾನು ಸಾಧಕರನ್ನು ಭೇಟಿಯಾಗುತ್ತೇನೆಯೋ, ಆಗ ಸಾಧಕರು ಆ ಸತ್ಸಂಗದ ಕೊನೆಗೆ ಆನಂದವನ್ನು ಅನುಭವಿಸುತ್ತಾರೆ. ಇಂದು ಸತ್ಸಂಗವು ಆನಂದದಿಂದಲೇ ಆರಂಭವಾಗಿದೆ’’ ಎಂದರು.

೪. ಹೊಸ ಪ್ರಕ್ರಿಯೆಯಿಂದ ಸಾಧಕ ನಿರ್ಮಿತಿಯ ಮಹತ್ವ ಕಲಿಯಲು ಸಿಗುವುದು : ಅನಂತರ ಅವರು ”ಯಾರಿಗೆ ಏನಾದರು ಹೇಳಲಿಕ್ಕಿದೆಯೇ ?’’ ಎಂದು ಕೇಳಿದರು. ಆಗ ನಾನು, ”ಇಲ್ಲಿಯ ವರೆಗೆ ನನ್ನ ಸಳೆತ ಕಾರ್ಯದ ಕಡೆಗೆ ಇತ್ತು. ‘ಧರ್ಮಸಭೆ, ಶಿಬಿರ ಮತ್ತು ಧರ್ಮಶಿಕ್ಷಣವರ್ಗ ಇವುಗಳನ್ನು ಹೇಗೆ ಹೆಚ್ಚಿಸುವುದು ?’, ಇದರತ್ತ ಗಮನವಿರುತ್ತಿತ್ತು. ಇದರಿಂದ ಸಾಧಕ ನಿರ್ಮಿತಿಯ ಕಡೆಗೆ ದುರ್ಲಕ್ಷವಾಗುತ್ತಿತ್ತು. ಈ ಶಿಬಿರದಲ್ಲಿ ಶ್ರೀಚಿತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳರು ”ಈಗ ಸಾಧಕರ ಸಾಧನಾವೃದ್ಧಿ ಮತ್ತು ಹೊಸ ಸಾಧಕರ ನಿರ್ಮಿತಿ ಈ ಧ್ಯೇಯವನ್ನಿಟ್ಟುಕೊಳ್ಳೋಣ’’ ಎಂದರು ಮತ್ತು ಅದರಂತೆ ಅವರು ಇಡೀ ವರ್ಷದ ಆಯೋಜನೆಯನ್ನೂ ಮಾಡಿಸಿಕೊಂಡರು. ಈ ಹೊಸ ಪ್ರಕ್ರಿಯೆಯಿಂದ ಸಾಧಕ ನಿರ್ಮಿತಿಯ ಮಹತ್ವ ಕಲಿಯಲು ಸಿಕ್ಕಿತು’’ ಎಂದೆನು.

೫. ಪ್ರಸಾರದ ನಿಮಿತ್ತ ಬೇರೆ ಬೇರೆ ಸ್ಥಳಗಳಿಗೆ ಹೋದಾಗ ವಿವಿಧ ಪ್ರಕಾರದ ತೊಂದರೆಗಳಾಗುತ್ತವೆ. ಆಗ ಆಶ್ರಮದಲ್ಲಿನ ಸಂತರು ಅನೇಕ ಗಂಟೆಗಳ ಕಾಲ ನಾಮಜಪಾದಿ ಉಪಾಯಗಳನ್ನು ಮಾಡುತ್ತಾರೆ . ಇದರ ಬಗ್ಗೆ ಎಲ್ಲರ ಚರಣಗಳಲ್ಲಿ ಕೃತಜ್ಞತೆ ವ್ಯಕ್ತವಾಗುವುದು : ಆಮೇಲೆ ನಾನು ಹೀಗೆ ಹೇಳಿದೆ, ”ನಾವು ಸಂತರು ಪ್ರಸಾರ ಕ್ಕಾಗಿ ವಿವಿಧ ಸ್ಥಳಗಳಿಗೆ ಹೋಗುತ್ತೇವೆ. ಆಗ ಮಳೆ ಬರುವುದು, ಬಿಸಿಲು ಮತ್ತು ಸಾಧಕರ ಆಧ್ಯಾತ್ಮಿಕ ತೊಂದರೆ, ಹೀಗೆ ವಿವಿಧ ಅಡಚಣೆಗಳು ಬರುತ್ತವೆ. ಕೆಲವೊಮ್ಮೆ ನನ್ನ ಆರೋಗ್ಯವೂ ಸರಿ ಇರುವುದಿಲ್ಲ. ಇಂತಹ ಸಮಯದಲ್ಲಿ ಆಶ್ರಮದ ಸಂತರು ನಮಗಾಗಿ ಅನೇಕ ಗಂಟೆಗಳ ಕಾಲ ನಾಮಜಪಾದಿ ಉಪಾಯಗಳನ್ನು ಮಾಡುತ್ತಾರೆ. ಆದುದರಿಂದ ಇಂದು ನಾನು ಇಲ್ಲಿ ಉಪಸ್ಥಿತರಿರುವ ಮತ್ತು ಆಶ್ರಮದಲ್ಲಿ ವಾಸಿಸುವ ಎಲ್ಲ ಸಂತರ ಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ.’’

ಈ ಸಲ ಶಿಬಿರ ಆರಂಭವಾಗುವ ಮೊದಲು ಶ್ರೀಚಿತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳರು, ”ಈ ಬಾರಿಯ ಎರಡೂ ಶಿಬಿರ ಗಳಲ್ಲಿ ಸಾಧಕರು ಒತ್ತಡವನ್ನು ಮಾಡಿಕೊಳ್ಳದೆ ಆನಂದವನ್ನು ಅನುಭವಿಸಬೇಕು’’ ಎಂದಿದ್ದರು. ಅದರಂತೆ ಸಾಧಕರು ಆನಂದ ವನ್ನು ಅನುಭವಿಸಿದರು. ಶಿಬಿರದ ಆರಂಭದಲ್ಲಿ ಮತ್ತು ಮುಕ್ತಾಯದ ಸಮಯದಲ್ಲಿ ಆನಂದವನ್ನು ಕೊಟ್ಟ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆಯವರ ಕೃಪೆ ಅನುಭವಿಸಲು ಸಿಕ್ಕಿತು.’

– (ಪೂ.) ಅಶೋಕ ಪಾತ್ರೀಕರ, ಅಮರಾವತಿ.