ಹಿಂದೂ ಧರ್ಮದ ಅದ್ವಿತೀಯತೆ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಈಶ್ವರೀ ಕಾನೂನು ಮತ್ತು ಜಮಾಖರ್ಚಿನ ಮಹತ್ವ !

‘ಪೃಥ್ವಿಯ ಕಾನೂನು ಮತ್ತು ಜಮಾ-ಖರ್ಚು ಮುಂತಾದವುಗಳೆಲ್ಲಾ ವ್ಯರ್ಥವಾಗಿದೆ. ಕೊನೆಯಲ್ಲಿ ಪ್ರತಿ ಯೊಬ್ಬರೂ ಈಶ್ವರನ ಕಾನೂನು ಮತ್ತು ಜಮಾ-ಖರ್ಚು ಇತ್ಯಾದಿಗಳನ್ನು ಎದುರಿಸಬೇಕಾಗುತ್ತದೆ.’

ಹಿಂದೂ ಧರ್ಮದ ಅದ್ವಿತೀಯತೆ

‘ಇತರ ಕೆಲವು ಪಂಥಗಳಲ್ಲಿದ್ದಂತೆ ಹಿಂದೂ ಧರ್ಮದಲ್ಲಿ ಧರ್ಮಪ್ರಸಾರ ಮಾಡಿ ಕೇವಲ ತಮ್ಮ ಧರ್ಮದ ಜನರ ಅಥವಾ ತಮ್ಮ ಅನುಯಾಯಿಗಳ ಸಂಖ್ಯೆ ಹೆಚ್ಚಿಸುವುದಕ್ಕೆ ಮಹತ್ವವಿಲ್ಲ. ತದ್ವಿರುದ್ಧ ಹಿಂದೂ ಧರ್ಮದಲ್ಲಿ ಧರ್ಮವನ್ನು ಆಳವಾಗಿ ಮತ್ತು ಸೂಕ್ಷ್ಮದಲ್ಲಿ ಅರಿತು ಕೊಳ್ಳುವುದು ಮಹತ್ವಪೂರ್ಣವಾಗಿದೆ. ಇದರ ಅರ್ಥ, ‘ಹಿಂದೂ ಧರ್ಮದಲ್ಲಿ ಹಿಂದೂ ಧರ್ಮದ ಶಾಶ್ವತ ಮೌಲ್ಯ ಗಳನ್ನು ಮತ್ತು ಸಿದ್ಧಾಂತಗಳನ್ನು ಅರ್ಥೈಸಿ ಕೊಂಡು, ಅದಕ್ಕನುಸಾರ ಆಚರಣೆ ಮಾಡಿ, ಧರ್ಮದ ಅನುಭೂತಿ ಪಡೆಯುವುದು ಅರ್ಥಾತ್‌ ಸಾಕ್ಷಾತ್‌ ಈಶ್ವರನ ಅನುಭೂತಿ ಪಡೆಯುವುದು ಮಹತ್ವಪೂರ್ಣವಾಗಿದೆ.’ ಹಿಂದೂಗಳ ಧರ್ಮ ಪ್ರಸಾರವು ಇದೇ ಸಿದ್ಧಾಂತದ ಮೇಲಾಧಾರಿತವಾಗಿದೆ. ಈ ಕಾರಣದಿಂದಲೇ ಹಿಂದೂ ಧರ್ಮದ ಗಂಧಗಾಳಿಯಿಲ್ಲದ ಇತರ ಪಂಥಗಳ ಸಾವಿರಾರು ವಿದೇಶಿ ಜನರು ಇಂದೂ ಹಿಂದೂ ಧರ್ಮದತ್ತ ಆಕರ್ಷಿತರಾಗಿ, ಹಿಂದೂ ಧರ್ಮ ಕ್ಕನುಸಾರ ಆಚರಣೆ ಮಾಡುತ್ತಿದ್ದಾರೆ.’

ಅಭ್ಯರ್ಥಿಗಳಿಗೆ ಮತಕ್ಕಾಗಿ ಏಕೆ ಭಿಕ್ಷೆ ಬೇಡಬೇಕಾಗುತ್ತದೆ ?

‘ಮತದಾರರಿಂದ ಮತಗಳ ಭಿಕ್ಷೆ ಬೇಡಬೇಕಾಗುತ್ತದೆ, ಇದು ಅಭ್ಯರ್ಥಿ ಗಳಿಗೆ ಲಜ್ಜಾಸ್ಪದವಾಗಿದೆ. ಅವರು ಚುನಾವಣೆಯಲ್ಲಿ ಗೆದ್ದ ನಂತರ ಮತದಾರರಿಗಾಗಿ ಏನಾದರೂ ಮಾಡಿದ್ದರೆ ಅವರಿಗೆ ಈ ಪ್ರಮೇಯ ಬರುತ್ತಿರಲಿಲ್ಲ.’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ