ಲಾಹೋರ (ಪಾಕಿಸ್ತಾನ) – ಭಾರತದಲ್ಲಿ ಮಾದಕ ವಸ್ತುಗಳ ಕಳ್ಳಸಾಗಣೆದಾರರಿಗೆ ಸಹಾಯ ಮಾಡಿದ ಲಾಹೋರನ ಪೊಲೀಸ್ ಉಪಾಯುಕ್ತರನ್ನು ಬಂಧಿಸಲಾಗಿದೆ. ಮಝರ್ ಇಕ್ಬಾಲ್ ಆತನ ಹೆಸರಗಿದ್ದು, ಆತ ಡ್ರೋನ್ ಮೂಲಕ ಭಾರತಕ್ಕೆ ಡ್ರಗ್ಸ್ ಕಳುಹಿಸಲು ಸ್ಥಳೀಯ ಮಾದಕ ವಸ್ತುಗಳ ಕಳ್ಳಸಾಗಣೆದಾರರಿಗೆ ಸಹಾಯ ಮಾಡುತ್ತಿದ್ದ. ಆತ ಪ್ರತಿಬಾರಿ ಮಾದಕ ವಸ್ತುಗಳನ್ನು ಕಳುಹಿಸಲು 8 ಕೋಟಿ ಪಾಕಿಸ್ತಾನಿ ರೂಪಾಯಿಗಳನ್ನು ಪಡೆಯುತ್ತಿದ್ದನು. ಇತ್ತೀಚೆಗೆ ಲಾಹೋರ್‌ನಲ್ಲಿ ಡ್ರೋನ ಪತನಗೊಂಡು ಅದರಲ್ಲಿ 6 ಕೆ.ಜಿ ಮಾದಕ ವಸ್ತು ಇದ್ದವು. ತನಿಖೆಯಲ್ಲಿ ಓರ್ವ ಕಳ್ಳಸಾಗಣೆದಾರನ ಹೆಸರು ಬೆಳಕಿಗೆ ಬಂದಿದೆ. ಆತನನ್ನು ವಿಚಾರಣೆಗೊಳಪಡಿಸಿದ ಬಳಿಕ ಮಝರ್ ಇಕ್ಬಲ್ ನ ಹೆಸರನ್ನು ಹೇಳಿದ್ದಾನೆ. ಇದನ್ನು ತಿಳಿದ ಇಕ್ಬಾಲನು ತಕ್ಷಣ ಮಧ್ಯಂತರ ಜಾಮೀನು ಪಡೆಯಲು ಪ್ರಯತ್ನಿಸಿದನು; ಆದರೆ ಆತ ವಿಫಲನಾದನು. ತದನಂತರ ಆತನನ್ನು ಬಂಧಿಸಲಾಯಿತು.
पाकिस्तान की एंटी नार्कोटिक्स फोर्स ने लाहौर पुलिस के एक DSP को ड्रग्स स्मगलिंग केस में गिरफ्तार कर लिया है। इसका नाम मजहर इकबाल है और ये लोकल ड्रग स्मगलर्स को ड्रोन के जरिए खेप भारत भेजने में मदद करता था।#Pakistan https://t.co/BJogbRYQ1O
— Dainik Bhaskar (@DainikBhaskar) August 30, 2023
ಪಾಕಿಸ್ತಾನಿ ಪತ್ರಿಕೆ ‘ದಿ ಡಾನ್’ ವರದಿ ಪ್ರಕಾರ, ಈ ಪ್ರಕರಣವು ಕೆಲವು ದಿನಗಳ ಹಿಂದೆ ಬೆಳಕಿಗೆ ಬಂದಿತ್ತು. ಅದನ್ನು ಹತ್ತಿಕ್ಕುವ ಪ್ರಯತ್ನವೂ ನಡೆದಿತ್ತು; ಆದರೆ ಹಂಗಾಮಿ ಪ್ರಧಾನಿ ಅನ್ವರ್ ಉಲ್ ಕಾಕರ್ ಅವರು ಕಠಿಣ ನಿಲುವು ತಗೆದುಕೊಂಡ ನಂತರ ಪೊಲೀಸರು ತನಿಖೆ ಆರಂಭಿಸಿದರು.
ಸಂಪಾದಕೀಯ ನಿಲುವುಪಾಕಿಸ್ತಾನ ಇಂತಹವರನ್ನು ಶಿಕ್ಷಿಸುವ ಸಾಧ್ಯತೆ ಕಡಿಮೆಯೇ ! |