ಸೆಪ್ಟೆಂಬರ್ 2 ರಂದು ಖಲಿಸ್ತಾನಕ್ಕಾಗಿ ಜನಾಭಿಪ್ರಾಯ ಸಂಗ್ರಹಣೆ
ಒಟಾವಾ (ಕೆನಡಾ) – ಕೆನಡಾದ ಬ್ರಿಟಿಷ್ ಕೊಲಂಬಿಯಾ ರಾಜ್ಯದ ತಮನವಿಸ ಪ್ರೌಢಶಾಲೆಯಲ್ಲಿ ಸಪ್ಟೆಂಬರ 2 ರಂದು ಸಿಖ್ ಫಾರ್ ಜಸ್ಟಿಸ್ ಈ ನಿಷೇಧಿತ ಖಲಿಸ್ತಾನಿ ಭಯೋತ್ಪಾದಕ ಸಂಘಟನೆ ಸಭೆಯನ್ನು ಆಯೋಜಿಸಿದೆ. ಈ ಮೂಲಕ ಭಾರತದ ರಾಜಧಾನಿ ನವ ದೆಹಲಿಯಲ್ಲಿ ಸೆಪ್ಟೆಂಬರ್ 9 ಮತ್ತು 10 ರಂದು ನಡೆಯಲಿರುವ ಜಿ-20 ಶೃಂಗಸಭೆಗೆ ಮುಂಚಿತವಾಗಿ ಅಸಂತೋಷವನ್ನು ನಿರ್ಮಾಣ ಮಾಡುವ ಪ್ರಯತ್ನವಾಗಿದೆ. ಈ ಪರಿಷತ್ತಿನಲ್ಲಿ ಪಾಲ್ಗೊಳ್ಳುವ ರಾಷ್ಟ್ರಗಳ ಮುಖ್ಯಸ್ಥರಿಗೆ ಪತ್ರ ಬರೆಯಲಾಗುವುದು. ಈ ಸಂಸ್ಥೆ 30 ಮಂದಿಗೆ ಜವಾಬ್ದಾರಿ ನೀಡಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಅದೇ ದಿನ ಇಲ್ಲಿ ಖಲಿಸ್ತಾನಕ್ಕೆ ಜನಾಭಿಪ್ರಾಯ ಸಂಗ್ರಹಣೆ ನಡೆಯಲಿದೆ. ತದನಂತರ, ಸೆಪ್ಟೆಂಬರ್ 10 ರಂದು ವ್ಯಾಂಕೋವರನಲ್ಲಿ ಮತ್ತೊಂದು ಸಭೆಯನ್ನು ಆಯೋಜಿಸಲಾಗಿದೆ. ಇದಕ್ಕಾಗಿ ಇಲ್ಲಿನ ಗುರುದ್ವಾರವೊಂದರಲ್ಲಿ ಖಲಿಸ್ತಾನಿ ಬೆಂಬಲಿಗರನ್ನು ಆಹ್ವಾನಿಸಲಾಗಿದೆ. ಇಲ್ಲಿಯೇ ಖಲಿಸ್ತಾನಕ್ಕೆ ಜನಾಭಿಪ್ರಾಯ ಸಂಗ್ರಹಣೆ ನಡೆಯಲಿದೆ ಎಂದು ಹೇಳಿದೆ.
ಗುಪ್ತಚರ ಸಂಸ್ಥೆಗಳ ಮಾಹಿತಿ ಪ್ರಕಾರ, ಬ್ರಿಟಿಷ್ ಕೊಲಂಬಿಯಾ ಮಾತ್ರವಲ್ಲದೆ, ಕೆನಡಾದ ಇತರ ರಾಜ್ಯಗಳಲ್ಲಿಯೂ ಈ ಕಾಲಾವಧಿಯಲ್ಲಿ ವಿವಿಧ ಆಂದೋಲನಗಳನ್ನು ನಡೆಸುವ ಸಂಚನ್ನು ರೂಪಿಸಲಾಗುತ್ತಿದೆ ಎಂದು ಹೇಳಿದೆ.
ಸಂಪಾದಕರ ನಿಲುವು* ಖಲಿಸ್ತಾನವಾದಿಗಳು ಸ್ವತಂತ್ರ ಖಲಿಸ್ತಾನಕ್ಕಾಗಿ ಎಷ್ಟೇ ಪ್ರಯತ್ನಿಸಿದರೂ, ಅದರಿಂದ ಏನೂ ಪ್ರಯೋಜನವಾಗುವುದಿಲ್ಲ ಎಂಬುದನ್ನು ಅವರು ಗಮನದಲ್ಲಿಟ್ಟುಕೊಳ್ಳಬೇಕು! |