ಮುಸಲ್ಮಾನರಿಂದ ಹಿಂದೂ ಹುಡುಗಿಗೆ ಕಿರುಕುಳ : ಹುಡುಗಿಯ ಸಹೋದರ ವಿರೋಧಿಸಿದಕ್ಕೆ ಹತ್ಯೆ

  • ಪ್ರಯಾಗರಾಜನ ಘಟನೆ

  • ಅಸಮಾಧಾನಗೊಂಡ ಹಿಂದುಗಳಿಂದ ೯ ಗಂಟೆಗಳ ಕಾಲ ರಸ್ತೆ ತಡೆ ಪ್ರತಿಭಟನೆ

ಪ್ರಯಾಗರಾಜ (ಉತ್ತರಪ್ರದೇಶ) – ಪ್ರಯಾಗರಾಜನ ಖೀರಿ ಗ್ರಾಮದಲ್ಲಿನ ಸತ್ಯಂ ಶರ್ಮಾ ಈ ೧೬ ವರ್ಷದ ಹುಡುಗನು ತನ್ನ ಸಹೋದರಿಗೆ ಮುಸಲ್ಮಾನರು ಕಿರುಕುಳ ನೀಡುತ್ತಿರುವುದು ವಿರೋಧಿಸಿದ್ದರಿಂದ ಆತನನ್ನು ಥಳಿಸಿದ್ದರಿಂದ ಮೃತನಾದನು. ಪೊಲೀಸರು ಮಾತ್ರ ಈ ಹತ್ಯೆ ಕಿರುಕುಳದಿಂದಲ್ಲ, ಇದು ಶಾಲೆಯಲ್ಲಿನ ವಿವಾದದಿಂದ ನಡೆದಿದೆ ಎಂದು ಹೇಳಿದ್ದಾರೆ. ಈ ಪ್ರಕರಣದಲ್ಲಿ ೪ ಜನರ ವಿರುದ್ಧ ದೂರು ದಾಖಲಿಸಲಾಗಿದೆ. ಇದರಲ್ಲಿ ಸರಪಂಚ ಮಹಮ್ಮದ್ ಯೂಸುಫ್ ಇವನ ಸಮಾವೇಶ ಕೂಡ ಇದೆ. ಹತ್ಯೆಯ ಘಟನೆ ನಂತರ ಆಕ್ರೋಶಗೊಂಡ ಹಿಂದುಗಳು ರಸ್ತೆ ತಡೆ ಪ್ರತಿಭಟನೆ ನಡೆಸಿದರು. ೯ ಗಂಟೆಗಳ ಕಾಲ ಈ ಪ್ರತಿಭಟನೆ ಮುಂದುವರೆದಿತ್ತು.

೧. ಈ ಘಟನೆ ತುರ್ಕಪೂರವಾ ಓಣಿಯಲ್ಲಿ ಮಹಮ್ಮದ್ ಯುಸುಫ್ ಇವನ ಮನೆಯ ಮುಂದೆ ನಡೆದಿದೆ. ಥಳಿತದ ಸಮಯದಲ್ಲಿ ಯುಸುಫ ಇವನು ಥಳಿಸುವವರನ್ನು ತಡೆಯುವ ಪ್ರಯತ್ನ ಮಾಡಲಿಲ್ಲ. ಕಿರುಕುಳ ನೀಡುವ ಹುಡುಗರು ಅವರ ಮನೆಯರೆ ಎಂದು ಆರೋಪಿಸಲಾಗುತ್ತದೆ. ಯೂಸುಫ್ ನ ಮೇಲೆ ಈ ಹಿಂದೆ ಕೂಡ ಕೆಲವು ದೂರುಗಳು ದಾಖಲಾಗಿದ್ದವು.

೨. ಸತ್ಯಂ ಶರ್ಮಾ ಇವರ ಸಂಬಂಧಿಕರು, ಹುಡುಗಿಗೆ ಈ ಹಿಂದೆ ಶಾಲೆಯಲ್ಲಿ ಕೂಡ ಕಿರುಕುಳ ನೀಡಲಾಗಿತ್ತು. ಆಗ ಶಾಲೆಯ ವ್ಯವಸ್ಥಾಪಕರಿಗೆ ದೂರು ನೀಡಲಾಗಿತ್ತು ಎಂದು ಹೇಳಿದರು.

೩. ಇದರ ಬಗ್ಗೆ ಶಾಲೆಯ ವ್ಯವಸ್ಥಾಪಕ ಮನೋಜ ಪಾಂಡೆ ಇವರು, ಸಂಬಂಧಿಕರ ದೂರಿನ ನಂತರ ಕಿರುಕುಳ ನೀಡುವ ಯುವಕನಿಗೆ ತಿಳಿಸಿ ಹೇಳಲಾಗಿತ್ತು. ಕೆಲವು ಸಾರಿ ಶಾಲೆಯ ಹೊರಗೆ ಪೊಲೀಸರನ್ನು ನೇಮಕ ಮಾಡಲಾಗಿತ್ತು ಎಂದು ಹೇಳಿದರು.

ಸಂಪಾದಕೀಯ ನಿಲುವು

ಉತ್ತರ ಪ್ರದೇಶದಲ್ಲಿ ಭಾಜಪದ ಸರಕಾರ ಇರುವಾಗ ಈ ರೀತಿಯ ಘಟನೆ ನಡೆಯಬಾರದೆಂದು ಹಿಂದುಗಳಿಗೆ ಅನಿಸುತ್ತದೆ ! ಈ ಹತ್ಯೆಗೆ ಕಾರಣರಾಗಿರುವವರಿಗೆ ಗಲ್ಲು ಶಿಕ್ಷೆ ವಿಧಿಸಲು ಸರಕಾರ ಪ್ರಯತ್ನಿಸಬೇಕು !

‘ಭಾರತದಲ್ಲಿ ಮುಸಲ್ಮಾನರು ಅಸುರಕ್ಷಿತವಾಗಿರುವರೆಂದು’ ಹೇಳುವ ರಾಜಕೀಯ ಪಕ್ಷ, ಜಾತ್ಯಾತೀತರು, ಪ್ರಗತಿ(ಅಧೋಗತಿ)ಪರರು ಈಗ ಬಾಯಿ ತೆರೆಯುವುದಿಲ್ಲ, ಇದನ್ನು ತಿಳಿಯಿರಿ !