ಹಿಂದೂ ಧರ್ಮದ ಮೇಲೆ ಆಗುವ ದಾಳಿಗಳಿಗೆ ‘ಹಿಂದೂ ರಾಷ್ಟ್ರ’ ಸ್ಥಾಪನೆಯೊಂದೇ ಪರಿಹಾರ ! – ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರು ಶ್ರೀ. ರಮೇಶ ಶಿಂದೆ, ಇವರಿಗೆ ರತ್ನಾಗಿರಿಯ ಸಮಸ್ತ ಹಿಂದೂ ಸಮಾಜದ ವತಿಯಿಂದ ಸಾರ್ವಜನಿಕ ಸನ್ಮಾನ !

ಎಡಗಡೆಯಿಂದ ಶ್ರೀ ರಮೇಶ ಶಿಂದೆ ಅವರನ್ನು ಸನ್ಮಾನ ಮಾಡುವಾಗ ಉದ್ಯಮಿ ಶ್ರೀ. ತುಷಾರ ದೇವಳೆಕರ ಮತ್ತು ಇತರ ಹಿಂದುತ್ವನಿಷ್ಠರು

ರತ್ನಾಗಿರಿ, – ಇಂದು ಜಗತ್ತಿನಲ್ಲಿರುವ ರಾಷ್ಟ್ರಗಳೆಲ್ಲವೂ ಧರ್ಮವನ್ನು ಆಧರಿಸಿರುವ ರಾಷ್ಟ್ರಗಳಾಗಿವೆ. ಆದರೆ ಕೇವಲ ಭಾರತವೊಂದೇ ‘ಜಾತ್ಯತೀತ’ ದೇಶವಾಗಿದೆ. ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಸ್ವತಂತ್ರ ದೇಶವಾದಾಗ, ಅವು ‘ಇಸ್ಲಾಮಿಕ್ ಗಣರಾಜ್ಯ’ ಎಂದೇ ಉದಯಿಸಿದವು. ಹೀಗಿರುವಾಗ ಭಾರತ ಏಕೆ ‘ಹಿಂದೂ ಗಣರಾಜ್ಯ’ ಆಗಲಿಲ್ಲ? ವಾಸ್ತವವಾಗಿ, ಜಗತ್ತಿನ ಯಾವುದೇ ಸಂವಿಧಾನವು ಆ ದೇಶದ ಬಹುಸಂಖ್ಯಾತ ಜನರಿಗಾಗಿ ಇರುತ್ತದೆಯೇ ಹೊರತು ಅಲ್ಪಸಂಖ್ಯಾತರಿಗಾಗಿ ಅಲ್ಲ. ಅಲ್ಪಸಂಖ್ಯಾತರಿಗೆ ಎಲ್ಲಾ ಹಕ್ಕುಗಳನ್ನು ನೀಡಲಾಗಿರುವ ಮತ್ತು ಬಹುಸಂಖ್ಯಾತರಿಗೆ ಏನನ್ನೂ ನೀಡದಿರುವ ವಿಶ್ವದ ಏಕೈಕ ದೇಶವೆಂದರೆ ಭಾರತವಾಗಿದೆ, ಬಹುಸಂಖ್ಯಾತರನ್ನು ಯಾರೂ ಕೇಳುವುದೂ ಇಲ್ಲ. ಈ ಪರಿಸ್ಥಿತಿಯ ಲಾಭ ಪಡೆದು ಹಿಂದೂ ಧರ್ಮ, ಸಂಸ್ಕೃತಿ, ಸಂಪ್ರದಾಯ ಇತ್ಯಾದಿಗಳ ಮೇಲೆ ದಾಳಿಗಳು ನಡೆಯುತ್ತಿವೆ. ‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’, ‘ಹಲಾಲ್ ಜಿಹಾದ್’ ಹೀಗೆ ಹಲವು ಜಿಹಾದ್ಗಳ ಮೂಲಕ ಹಿಂದೂಗಳ ಮೇಲೆ ದಾಳಿ ನಡೆಯುತ್ತಿದೆ. ಈ ಎಲ್ಲಾ ದಾಳಿಗಳಿಗೆ ಏಕೈಕ ಉಪಾಯ ಹಿಂದೂ ರಾಷ್ಟ್ರದ ಸ್ಥಾಪನೆಯಾಗಿದೆ. ಆದುದರಿಂದ ನಾವು ಹಿಂದೂಹಿತದ ಸಂವಿಧಾನವನ್ನು ಸಿದ್ಧಪಡಿಸಬಹುದು ಎಂದು ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ರಮೇಶ ಶಿಂಧೆ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಜಯೇಶ್ ಮಂಗಲ್ ಪಾರ್ಕನಲ್ಲಿ ರತ್ನಾಗಿರಿಯ ಸಕಲ ಹಿಂದೂ ಸಮಾಜದ ವತಿಯಿಂದ ಶ್ರೀ. ರಮೇಶ್ ಶಿಂಧೆ ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ ಅವರನ್ನು ಸಾರ್ವಜನಿಕವಾಗಿ ಸನ್ಮಾನಿಸಲಾಯಿತು. ಆ ಸಂದರ್ಭದಲ್ಲಿ ‘, ಹಿಂದೂ ಧರ್ಮದ ಮೇಲಿನ ಎಲ್ಲ ದಾಳಿಗಳಿಗೆ ಹಿಂದೂ ರಾಷ್ಟ್ರವೊಂದೇ ಪರಿಹಾರ’ ಎಂಬ ವಿಷಯದ ಕುರಿತು ಶ್ರೀ. ಶಿಂದೆಯವರು ಮಾತನಾಡುತ್ತಿದ್ದರು.

ಅತಿಥಿಯಾಗಿದ್ದ ಉದ್ಯಮಿ ಶ್ರೀ. ತುಷಾರ್ ದೇವಳೆಕರ ಅವರು ಶ್ರೀ. ರಮೇಶ ಶಿಂದೆಯವರನ್ನು ಶಾಲು, ಶ್ರೀಫಲ, ಪುಷ್ಪಗುಚ್ಛ ಮತ್ತು ಗುರಾಣಿ-ಕತ್ತಿಯ ಚಿತ್ರವನ್ನು ಉಡುಗೊರೆಯಾಗಿ ನೀಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ವ್ಯಾಸಪೀಠದ ಮೇಲೆ ಶ್ರೀ ಶಿವಪ್ರತಿಷ್ಠಾನ ಹಿಂದೂಸ್ಥಾನದ ರತ್ನಗಿರಿ ತಾಲೂಕಾ ಅಧ್ಯಕ್ಷರಾದ ಶ್ರೀ. ರಾಕೇಶ ನಲಾವಡೆ, ಜನಜಾಗೃತಿ ಸಂಘ. ಶ್ರೀ. ಕೇಶವ ಭಟ್ ಮತ್ತು ರಾಷ್ಟ್ರೀಯ ಸೇವಾ ಸಮಿತಿಯ ಜಿಲ್ಲಾಧ್ಯಕ್ಷರು, ಹಾಗೂ ಕಡಲ ಭದ್ರತಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಶ್ರೀ. ಸಂತೋಷ ಪವಾರಿ ಉಪಸ್ಥಿತರಿದ್ದರು.

ಗಣ್ಯರಿಂದ ದೀಪ ಬೆಳಗಿಸುವ ಮೂಲಕ ಹಾಗೂ ಶ್ರೀ. ರಮೇಶ ಶಿಂಧೆ ಅವರು ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಮಾಲಾರ್ಪಣೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಶ್ರೀ. ಚಂದ್ರಕಾಂತ್ ರಾವೂಳ ಇವರು ಶ್ರೀ. ರಮೇಶ ಶಿಂಧೆಯವರನ್ನು ಪರಿಚಯಿಸಿದರು. ಕಾರ್ಯಕ್ರಮದ ಸೂತ್ರ ಸಂಚಾಲನೆಯನ್ನು ಕು. ಮಿಥಿಲಾ ವಾಡೆಕರ್ ಮಾಡಿದರು. ಈ ಕಾರ್ಯಕ್ರಮಕ್ಕೆ ಸರ್ವಶ್ರೀ. ಅಭಯ್ ದಳಿ, ಓಂಕಾರ ರಹಾಟೆ, ಅಮರ್ ಕೀರ, ದೀಪಕ್ ದೇವಲ್, ಪ್ರಭಾಕರ್ ಖಾನವಿಲಕರ, ತೇಜಸ್ ಸಾಳವಿ, ಶುಭಂ ಜೋಶಿ, ವಿನೋದ್ ಗಾದಿಕರ್, ಸಂಜಯ್ ಜೋಶಿ ಮುಂತಾದವರ ಜೊತೆಯಲ್ಲಿ 250 ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಸನ್ಮಾನ ಎಲ್ಲರಿಗೂ ಸೇರಿದ್ದು! – ರಮೇಶ ಶಿಂಧೆ

ಶ್ರೀ. ರಮೇಶ್ ಶಿಂಧೆ ಅವರು ಸನ್ಮಾನಕ್ಕೆ ಉತ್ತರಿಸುತ್ತಾ, ಡಾ. ಝಾಕಿರ್ ನಾಯ್ಕ್ ಅವರನ್ನು ಭಾರತದಿಂದ ಹೊರಹಾಕಿರುವ ಬಗ್ಗೆ ಮತ್ತು ಎಂ.ಪಿ. ಹುಸೇನ್ ವಿರುದ್ಧ ಪ್ರತಿಭಟನೆ ನಡೆಸಿದ್ದಕ್ಕೆ ನನಗೆ ಗೌರವ ಸಿಗುತ್ತದೆ ಎಂದು ನಾನು ಯಾವತ್ತೂ ಅಂದುಕೊಂಡಿರಲಿಲ್ಲ. ಈ ಕಾರ್ಯ ನನ್ನೊಬ್ಬನದೇ ಅಲ್ಲ. ಇದರ ಹಿಂದೆ ಹಲವರ ಪ್ರೇರಣೆ ಹಾಗೂ ಸಹಕಾರವಿದೆ. ಈ ಗೌರವ ಅವರೆಲ್ಲರಿಗೂ ಸಲ್ಲುತ್ತದೆ.

ಶ್ರೀ. ರಮೇಶ್ ಶಿಂಧೆ ತಮ್ಮ ಮಾತನ್ನು ಮುಂದುವರಿಸಿ,

1. ನಾನು ತ್ರಿಪುರಾ, ಮೇಘಾಲಯ, ಅರುಣಾಚಲ ಪ್ರದೇಶ, ಅಸ್ಸಾಂ, ಒಡಿಶಾ, ಬಂಗಾಳ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಪ್ರವಾಸ ಮಾಡಿದ್ದೇನೆ. ಅಲ್ಲಿನ ಜನರಿಗೆ ಹಿಂದೂ ಧರ್ಮ ಮತ್ತು ಹಿಂದುತ್ವದ ಪರಿಕಲ್ಪನೆಗಳೂ ತಿಳಿದಿಲ್ಲ. ನನಗೆ ಈ ಭಾಗದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರನ್ನು ಶ್ಲಾಘಿಸಬೇಕೆನಿಸುತ್ತದೆ.; ಏಕೆಂದರೆ ಅವರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಕೆಲಸ ಮಾಡುತ್ತಿದ್ದಾರೆ. ಅವರು ಸಮಾಜವನ್ನು ರಾಷ್ಟ್ರೀಯತೆಯ ಕಡೆಗೆ ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದಾರೆ.

2. ಇಂದು ಅನೇಕ ರೀತಿಯ ‘ಜಿಹಾದ್’ ನಡೆಯುತ್ತಿದೆ. ಇವುಗಳಲ್ಲಿ ಒಂದು ‘ಹಲಾಲ್ ಜಿಹಾದ್’. ಹಲಾಲ್ ಮಾಂಸಾಹಾರಕ್ಕೆ ಸಂಬಂಧಿಸಿದೆ. ನಾವು ಮಾರುಕಟ್ಟೆಯಿಂದ ಖರೀದಿಸುವ ಆಹಾರವು ‘100 ಪ್ರತಿಶತ ಸಸ್ಯಾಹಾರಿ’ ಎಂದು ಅರ್ಥಮಾಡಿಕೊಳ್ಳಲು ಹಸಿರು ಮುದ್ರೆಯನ್ನು ಹೊಂದಿರುತ್ತದೆ. ಅದು ಏತಕ್ಕಾಗಿ ಇದೆ? ಎನ್ನುವ ಪ್ರಶ್ನೆಯನ್ನು ನಾವು ಕೇಳುವುದಿಲ್ಲ. ಆಹಾರವಷ್ಟೇ ಅಲ್ಲ, ಅನೇಕ ಆಹಾರೇತರ ವಸ್ತುಗಳು ಇಂದು ‘ಹಲಾಲ್’ ಪ್ರಮಾಣ ಪತ್ರ ಪಡೆದಿವೆ. ‘ಹಲಾಲ್ ಜಿಹಾದ್’ ದೇಶದ ಆರ್ಥಿಕತೆಯ ಮೇಲಿನ ದಾಳಿಯಾಗಿದೆ. ದೇಶದ ಆರ್ಥಿಕತೆಯನ್ನು ಉಳಿಸಲು ನಾವು ಇದನ್ನು ಅರ್ಥಮಾಡಿಕೊಂಡು ಎಚ್ಚರಿಕೆಯಿಂದ ಖರೀದಿಸಬೇಕು.

3. ಇಂದು ಜಮಿಯತ್-ಎ-ಉಲೇಮಾನ್ ಸಂಘಟನೆಯು 2028ರ ವರೆಗೆ ಒಂದೂವರೆ ಕೋಟಿ ಮುಸ್ಲಿಮರ ಸೇನೆಯನ್ನು ಸಿದ್ಧಪಡಿಸುವ ಗುರಿಯೊಂದಿಗೆ ಕೆಲಸ ಮಾಡುತ್ತಿದೆ. ಇದಕ್ಕೆ ಎಲ್ಲಿಂದ ಹಣ ಬರುತ್ತದೆ? ಮುಂದುವರಿದು, ‘ಇಸ್ಲಾಮಿಕ್ ನಾಣ್ಯಗಳನ್ನು’ ಮುದ್ರಿಸಲಾಗಿದೆ. ‘ಹಲಾಲ್ ಷೇರು ಮಾರುಕಟ್ಟೆ’ ಪ್ರಾರಂಭವಾಗಿದೆ.

4. ಇದರೊಂದಿಗೆ ‘ಲವ್ ಜಿಹಾದ್’ ಎಂಬ ಸಂಕಟವೂ ನಮ್ಮ ಮುಂದೆ ನಿಂತಿದೆ. ಛತ್ರಪತಿ ಸಂಭಾಜಿ ಮಹಾರಾಜರು ಕಷ್ಟಗಳನ್ನು ಸಹಿಸಿಕೊಂಡು ಪ್ರಾಣ ತ್ಯಾಗ ಮಾಡಿದರು; ಆದರೆ ಧರ್ಮ ಬದಲಾಯಿಸಲಿಲ್ಲ, ರಾಣಿ ಪದ್ಮಿನಿ, 1 ಸಾವಿರದ 600 ಮಹಿಳೆಯರೊಂದಿಗೆ ಜೌಹಾರ ಆತ್ಮಾರ್ಪಣೆ ಮಾಡಿದರು. ಅಂತಹ ಜೌಹರಗಳು ಆ ಸಮಯದಲ್ಲಿ ಅನೇಕ ಸ್ಥಳಗಳಲ್ಲಿ ನಡೆದವು; ಆದರೆ ಅವರು ತಮ್ಮ ಧರ್ಮವನ್ನು ಬದಲಾಯಿಸಲಿಲ್ಲ. ಯಾವ ತಾಯಂದಿರು ಮತ್ತು ಸಹೋದರಿಯರು ಧರ್ಮಕ್ಕಾಗಿ ಪ್ರಾಣ ತ್ಯಾಗ ಮಾಡಿದರೋ, ಅದೇ ತಾಯಂದಿರು ಮತ್ತು ಸಹೋದರಿಯರಿಗೆ ಇಂದು ಸಲ್ಮಾನ್ ಖಾನ್ ಹೇಗೆ ನೆಚ್ಚಿನವನಾಗುತ್ತಾನೆ? ನಮ್ಮ ತಾಯಂದಿರು ಮತ್ತು ಸಹೋದರಿಯರನ್ನು ಸುರಕ್ಷಿತವಾಗಿಡಲು, ‘ಲವ್ ಜಿಹಾದ್’ ಬಗ್ಗೆ ತಿಳಿದುಕೊಳ್ಳುವುದು ಮತ್ತು ಜಾಗೃತರಾಗಿರುವುದು ಅವಶ್ಯಕವಾಗಿದೆ.

5. ಈ ಎಲ್ಲಾ ಸಮಸ್ಯೆಗಳು ಹೀಗೆಯೇ ಮುಗಿಯುವುದಿಲ್ಲ. ಅವುಗಳನ್ನು ಎದುರಿಸಬೇಕಾಗಿದೆ. ನಮ್ಮದು ಹೋರಾಟದ ಪರಂಪರೆಯಾಗಿದೆ. ಛತ್ರಪತಿ ಶಿವಾಜಿ ಮಹಾರಾಜರು, ಛತ್ರಪತಿ ಸಂಭಾಜಿ ಮಹಾರಾಜರು,, ಸ್ವಾತಂತ್ರ್ಯವೀರ ಸಾವರಕರ, ಕ್ರಾಂತಿಕಾರಿಗಳು ಎಲ್ಲರೂ ಈ ಹೋರಾಟವನ್ನೇ ಮಾಡಿದ್ದಾರೆ.