ಮುಂಬರುವ ಭೀಕರ ಆಪತ್ಕಾಲದ ಅಪಾಯವನ್ನು ಗುರುತಿಸಿ ಕುಟುಂಬಕ್ಕೆ ಬೇಕಾಗುವ ವಸ್ತುಗಳನ್ನು ಈಗಲೇ ಖರೀದಿಸಿಡಿರಿ !

‘೨೦೨೦ ರಲ್ಲಿ ಸಂಪೂರ್ಣ ಜಗತ್ತೇ ‘ಕೊರೊನಾ’ ಸಾಂಕ್ರಾಮಿಕ ರೋಗದ ರೂಪದಲ್ಲಿ ಆಪತ್ಕಾಲದ ತುಣುಕನ್ನು (ಟ್ರೇಲರನ್ನು) ಅನುಭವಿಸಿತು. ಈಗ ನಡೆದಿರುವ ರಷ್ಯಾ-ಯುಕ್ರೇನ್‌ ಯುದ್ಧ, ತುರ್ಕಿಯೇ ಮತ್ತು ಸಿರಿಯಾ ದೇಶಗಳಲ್ಲಿ ಸಂಭವಿಸಿದ ದೊಡ್ಡ ಭೂಕಂಪಗಳು, ದಿನೇದಿನೇ ಜಾಗತಿಕ ತಾಪಮಾನದಲ್ಲಾಗುತ್ತಿರುವ ಹೆಚ್ಚಳ, ಅಮೇರಿಕಾ ಮತ್ತು ಯುರೋಪ್‌ ಖಂಡಗಳ ಅರಣ್ಯಗಳಲ್ಲಿ ಹತ್ತಿಕೊಂಡ ಭೀಕರ ಬೆಂಕಿಯಂತಹ ಘಟನೆಗಳು ಸಹ ನಮ್ಮ ಕಣ್ಣೆದುರು ಇವೆ. ಅನೇಕ ಸಂತಮಹಾತ್ಮರು, ಭವಿಷ್ಯಕಾರರು ಮುಂತಾದವರು ‘ಮುಂಬರುವ ಆಪತ್ಕಾಲವು ಬಹಳ ಭೀಕರವಾಗಿದೆ’, ಎಂದು ಆಗಾಗ ಹೇಳಿದ್ದಾರೆ. ಬಹಳಷ್ಟು ಸಲ ಸಮಷ್ಟಿ ಪ್ರಾರಬ್ಧ, ಸೂಕ್ಷ್ಮ ಜಗತ್ತಿನ ಕೆಟ್ಟ ಶಕ್ತಿಗಳ ಬದಲಾಗುವ ಕುತಂತ್ರಗಳು, ಕಾಲಚಕ್ರ ಇತ್ಯಾದಿಗಳಿಂದ ಆಪತ್ಕಾಲದ ಅವಧಿ ಹಿಂದೆ-ಮುಂದೆ ಆಗುತ್ತಿದ್ದರೂ ಆಪತ್ಕಾಲವನ್ನು ಎದುರಿಸಲು ಎಲ್ಲರೂ ಯಾವಾಗಲೂ ಸಿದ್ಧರಾಗಿರಬೇಕು. ಆಪತ್ಕಾಲದಲ್ಲಿ ಆಹಾರಧಾನ್ಯ, ನೀರು, ಔಷಧಿ, ಇಂಧನ ಮುಂತಾದವುಗಳು ಸಕಾಲದಲ್ಲಿ ಸಿಗುವುದು ಕಠಿಣವಾಗುತ್ತದೆ. ಆಪತ್ಕಾಲದಲ್ಲಿ ಕುಟುಂಬಕ್ಕೆ ಬೇಕಾಗುವ ದಿನಬಳಕೆಯ ವಸ್ತುಗಳ, ಹಾಗೆಯೇ ಕೆಲವೊಂದು ಸಲ ತಾತ್ಕಾಲಿಕವಾಗಿ ಬೇಕಾಗುವ ವಸ್ತುಗಳ ಕೊರತೆಯೂ ಉದ್ಭವಿಸುತ್ತದೆ. ಆಪತ್ಕಾಲದ ದೃಷ್ಟಿಯಿಂದ ಉಪಯುಕ್ತವಾಗಿರುವ ವಸ್ತುಗಳನ್ನು ಖರೀದಿಸುವುದು ಸುಲಭವಾಗಬೇಕೆಂದು ಕೆಳಗೆ ವಿವಿಧ ವಸ್ತುಗಳ ಪಟ್ಟಿಯನ್ನು ನೀಡಲಾಗಿದೆ. ಕುಟುಂಬದಲ್ಲಿನ ಸದಸ್ಯರ ಸಂಖ್ಯೆ, ಅವರ ವಯಸ್ಸು ಮತ್ತು ಮನೆಯಲ್ಲಿನ ಕೋಣೆಗಳ ಸಂಖ್ಯೆ ಇವುಗಳಿಗನುಸಾರ ಅವುಗಳಲ್ಲಿನ ಆವಶ್ಯಕವಾಗಿರುವ ವಸ್ತುಗಳನ್ನು ಯೋಗ್ಯ ಪ್ರಮಾಣದಲ್ಲಿ ಖರೀದಿಸಿಡಬೇಕು. ಮುಂದಿನ ವಸ್ತುಗಳನ್ನು ಹೊರತುಪಡಿಸಿ ಇನ್ನಿತರ ಕೆಲವು ವಸ್ತುಗಳು ಬೇಕಾದರೆ ಅವುಗಳನ್ನೂ ಖರೀದಿಸಬಹುದು.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

೧. ನಿತ್ಯ ಬಳಸುವ ವಸ್ತುಗಳು

ದಂತಮಂಜನ, ಗಡ್ಡದ(ಶೇವಿಂಗ್) ಸಾಮಾನುಗಳು, ಕ್ಷೌರದ ವಸ್ತುಗಳು, ಸ್ನಾನದ ಮತ್ತು ಬಟ್ಟೆಗಳನ್ನು ತೊಳೆಯುವ ಸಾಬೂನು, ಬಟ್ಟೆ, ಕೂದಲುಗಳಿಗೆ ಹಚ್ಚುವ ಎಣ್ಣೆ, ಕುಂಕುಮ, ಕನ್ನಡಿ, ಹಣಿಗೆ, ಬಾಚಣಿಕೆ, ‘ನೇಲ್‌ ಕಟರ್’ (ಉಗುರು ಕತ್ತರಿಸುವ ಉಪಕರಣ)’, ಉಪನೇತ್ರ ಅಂದರೆ ಕನ್ನಡಕ (ದಿನನಿತ್ಯದ ಬಳಕೆಯ ಕನ್ನಡಕ ಒಡೆಯಬಹುದು ಅಥವಾ ಕಳೆಯಬಹುದು) ಇಸ್ತ್ರೀ (ಸಾಧ್ಯವಿದ್ದಷ್ಟು ಇದ್ದಲು ಬಳಸಿ ಉಪಯೋಗಿಸುವ ಇಸ್ತ್ರಿ), ಹಾಸಿಗೆ-ಹೊದಿಕೆ, ಪೊರಕೆ (ಕಸಬರಿಗೆ), ಬಚ್ಚಲುಮನೆಯನ್ನು ಸ್ವಚ್ಛಗೊಳಿಸಲು ಬೇಕಾಗುವ ಸಾಮಾನುಗಳು, ಲೇಖನಿಗಳು (ಪೆನ್‌ ಮತ್ತು ಪೆನ್ಸಿಲ್‌), ಪಾದರಕ್ಷೆ ಇತ್ಯಾದಿ.

೨. ಅಡುಗೆಮನೆಗೆ ಸಂಬಂಧಿಸಿದ ವಸ್ತುಗಳು

ಚಿಮುಟ (ಪಕ್ಕಡ), ಇಕ್ಕಳ (ಬಳಸುತ್ತಿರುವ ಚಿಮುಟ ಅಥವಾ ಇಕ್ಕಳ ಮುರಿಯಬಹುದು), ಚಿಕ್ಕ ಒರಳುಕಲ್ಲು, ಈಳಿಗೆ ಮಣೆ, ಈಳಿಗೆ ಮಣೆಯನ್ನು ಹರಿತಗೊಳಿಸುವ ಕಲ್ಲು ಇತ್ಯಾದಿ.

೩. ಋತುಗಳಿಗನುಸಾರ ಬೇಕಾಗುವ ವಸ್ತುಗಳು

೩ ಅ. ಬೇಸಿಗೆಯಲ್ಲಿ ಬೇಕಾಗುವ ವಸ್ತುಗಳು : ಗಾಳಿ ಹಾಕಿ ಕೊಳ್ಳಲು ಬೀಸಣಿಕೆ, ಕಪ್ಪು ಕನ್ನಡಕ (ಗಾಗಲ್‌), ಬಿಸಿಲಿನಲ್ಲಿ ತಿರುಗಾಡುವಾಗ ಮುಖ ಮತ್ತು ಕುತ್ತಿಗೆಯನ್ನು ಮುಚ್ಚಿಕೊಳ್ಳಲು ಬೇಕಾಗುವ ದೊಡ್ಡ ಕರವಸ್ತ್ರ (ಸ್ಕಾರ್ಫ್‌), ಟೊಪ್ಪಿಗೆ ಇತ್ಯಾದಿ.
೩ ಆ. ಮಳೆಗಾಲದಲ್ಲಿ ಬೇಕಾಗುವ ವಸ್ತುಗಳು : ಛತ್ರಿ, ‘ರೆನ್‌ಕೋಟ್‌’, ಮಳೆಗಾಲದ ಪಾದರಕ್ಷೆಗಳು ಇತ್ಯಾದಿ.
೩ ಇ. ಚಳಿಗಾಲದಲ್ಲಿ ಬೇಕಾಗುವ ವಸ್ತುಗಳು : ‘ಸ್ವೆಟರ್‌’, ಕೈಗವಸು, ಕಾಲುಚೀಲ, ಕಿವಿಟೊಪ್ಪಿಗೆ (ಮಂಕಿ ಕ್ಯಾಪ್‌), ಶಾಲು, ಮಫಲರ್, ಕಂಬಳಿ (ಬ್ಲ್ಯಾಂಕೆಟ್) ಇತ್ಯಾದಿ.

೪. ಮನೆಯಲ್ಲಿ ಬೇಕಾಗುವ ವಸ್ತುಗಳು

೪ ಅ. ಮನೆಯಲ್ಲಿನ ಚಿಕ್ಕ ದುರಸ್ತಿಗಳನ್ನು ಮಾಡಲು ಉಪಯುಕ್ತ ವಸ್ತುಗಳು : ಟೆಕಸ್‌ (ಸಣ್ಣ ಮೊಳೆಗಳು, ಚರ್ಮದ ಚಪ್ಪಲಿಗಳ ಹೆಬ್ಬೆರಳಿನ ಭಾಗ ಕಿತ್ತರೆ ಅದನ್ನು ಅಂಟಿಸಲು ಟೆಕಸ್‌ ಉಪಯೋಗಿಸುತ್ತಾರೆ), ಚಿಕ್ಕ ಮೊಳೆಗಳು, ಇತರ ಮೊಳೆಗಳು, ಸುತ್ತಿಗೆ, ಸ್ಪ್ಯಾನರ್‌ ಪಕ್ಕಡ್, ‘ಸ್ಕ್ರೂ ಡ್ರೈವರ್, ‘ಕಟರ್‌’, ಚಿಕ್ಕ ಹಲಗೆಯನ್ನು ಕತ್ತರಿಸಲು ಗರಗಸ, ಹಲಗೆಯ ಅಂಚುಗಳನ್ನು ಉಜ್ಜಲು ‘ಪಾಲಿಶ್‌ ಪೇಪರ್‌’, ಕತ್ತರಿ, ‘ಅಳತೆಯ ಟೇಪ (ಮೇಜರಿಂಗ ಟೇಪ್‌)’ ಇತ್ಯಾದಿ.
೪ ಆ. ಹೊಲಿಗೆಯ ವಸ್ತುಗಳು : ಸೂಜಿ-ದಾರ, ಗುಂಡಿಗಳು (ಬಟನ್‌ಗಳು), ಚಿಕ್ಕ ಮತ್ತು ದೊಡ್ಡ ಕತ್ತರಿ, ಅಳತೆ ಟೇಪ್‌ (ಬಟ್ಟೆಗಳನ್ನು ಅಳೆಯಲು ‘ಮೇಶರಿಂಗ್‌ ಟೇಪ್‌’), ಚಿಕ್ಕ ಕೈ ಹೊಲಿಗೆ ಯಂತ್ರ ಇತ್ಯಾದಿ
೪ ಇ. ತೊಂದರೆ ಕೊಡುವ ಪ್ರಾಣಿಗಳನ್ನು ನಿರ್ಬಂಧಿಸುವ ವಸ್ತುಗಳು : ಸೊಳ್ಳೆ, ಇಲಿ, ತಿಗಣೆ, ಇರುವೆ, ಹೇನು, ಶೀರು (ಹೇನುಗಳ ತತ್ತಿ) ಇತ್ಯಾದಿಗಳನ್ನು ತಡೆಗಟ್ಟುವ ಔಷಧಿಗಳು; ಇಲಿಗಳನ್ನು ಹಿಡಿಯುವ ಪಂಜರ, ಸೊಳ್ಳೆಪರದೆ ಇತ್ಯಾದಿ.
೪ ಈ. ಮನೆಯಲ್ಲಿ ಹೆಚ್ಚುವರಿಯಾಗಿಡಬೇಕಾದ ವಸ್ತುಗಳು : ಸ್ನಾನದ ಬಕೇಟು ಮತ್ತು ನೀರನ್ನು ಮೈಮೇಲೆ ಹಾಕಿಕೊಳ್ಳಲು ‘ಮಗ್‌’, ಬಟ್ಟೆಗಳನ್ನು ನೆನೆಸಿಡಲು ಬಕೇಟು, ಬಟ್ಟೆಗಳನ್ನು ತೊಳೆಯುವ ‘ಬ್ರಶ್‌’, ವಿದ್ಯುತ್‌ಗೆ ಸಂಬಂಧಿಸಿದ ವಸ್ತುಗಳು (ವಿದ್ಯುತ್‌ ದೀಪಗಳು, ದಂಡದೀಪ (ಟ್ಯೂಬ್ಸ್‌), ವಿದ್ಯುತ್ನ್ನು ಜೋಡಿಸುವ ‘ಥ್ರಿಪಿನ್’ (ಗೋಡೆಯ ಮೇಲಿರುವ ವಿದ್ಯುತ್, ಅಂದರೆ ಸ್ವಿಚ್‌ಬೋರ್ಡ್‌’ನ ಮೇಲೆ ಇಸ್ತ್ರಿಗಾಗಿ ಅಥವಾ ಇತರ ಕಾರಣಗಳಿಗಾಗಿ ಮೂರು ತೂತುಗಳು ಇರುವ ಒಂದು ಸ್ಥಾನವಿರುತ್ತದೆ. ಅಲ್ಲಿ ‘ಥ್ರಿಪಿನ್’ ಹಾಕುತ್ತಾರೆ. ಅಲ್ಲಿಂದ ಹೊಸ ಸ್ಥಳಕ್ಕೆ ವಿದ್ಯುತ್ನ್ನು ಒಯ್ಯಬಹುದು.) ಮತ್ತು ‘ಹೋಲ್ಡರ್’ (ಇದರಲ್ಲಿ ವಿದ್ಯುತ್‌ ದೀಪ, ಅಂದರೆ ‘ಬಲ್ಬ್‌’ಗಳನ್ನು ಹಾಕಲಾಗು ತ್ತದೆ.), ಕಾಲುಗಳಿಗೆ ಹಾಕುವ ‘ಸ್ಲೀಪರ್‌’ನ ಪಟ್ಟಿ ಅಥವಾ ಹೊಸ ಸ್ಲೀಪರ್‌ ಇತ್ಯಾದಿ.
೪ ಉ. ಇತರ ವಸ್ತುಗಳು : ಆಕಾಶವಾಣಿಯಿಂದ ನೀಡಲಾಗುವ ಸರಕಾರಿ ಸೂಚನೆಗಳನ್ನು ಕೇಳಲು ಚಿಕ್ಕ ರೇಡಿಯೋ (ಟ್ರಾನ್ಸಿಸ್ಟರ್) ಅಥವಾ ರೇಡಿಯೋ, ಕೀಲಿಯಿಂದ ನಡೆಯುವ ಗೋಡೆಗೆ ತೂಗಾಡಿಸುವ ಅಥವಾ ಟೇಬಲ್‌ ಮೇಲಿಡುವ ಗಡಿಯಾರ, ಉತ್ಪಾದನೆಯ ದಿನಾಂಕದಿಂದ ಮುಂದೆ ಅನೇಕ ವರ್ಷಗಳ ಕಾಲ ನಡೆಯುವ ಸ್ವಯಂಚಾಲಿತ (ಆಟೊಮೆಟಿಕ್) ಕೈಗಡಿಯಾರ (ಇಂತಹ ಕೈಗಡಿಯಾರಗಳು ೫೦ ವರ್ಷಗಳವರೆಗೆ ಚೆನ್ನಾಗಿ ನಡೆಯುತ್ತವೆ. ಕೈಯ ಚಲನವಲನದಿಂದ ಅವು ನಡೆಯುತ್ತವೆ. ಕೈಯಿಂದ ತೆಗೆದಿಟ್ಟರೆ ಸಾಮಾನ್ಯವಾಗಿ ೩ ದಿನ ನಡೆಯುತ್ತವೆ.) ಸೌರಶಕ್ತಿಯಿಂದ ನಡೆಯುವ ಗಡಿಯಾರ, ಸಂಚಾರವಾಣಿಗಳನ್ನು ಚಾರ್ಜ್ ಮಾಡಲು ‘ಪೊರ್ಟೆಬಲ್‌ ಸೋಲಾರ್‌ ಚಾರ್ಜರ್‌’, ‘ಗ್ಯಾಸ್‌ ಲೈಟರ್‌’, ಗಾಳಿಯಿಂದ ಜ್ಯೋತಿ ಆರದಿರುವ ‘ಲೈಟರ್’ (ವಿಂಡಪ್ರುಫ್‌ ಲೈಟರ್‌), ಮೇಣಬತ್ತಿ, ಸೆಣಬಿನ ದಾರ, ತೆಂಗಿನ ನಾರು, ಬಟ್ಟೆಗಳನ್ನು ಒಣಗಿಸಲು ಹಗ್ಗ, ಸೈಕಲ್‌ಗೆ ಗಾಳಿ ತುಂಬುವ ಚಿಕ್ಕ ‘ಕೈಪಂಪ್‌’, ವಿದ್ಯುತ್‌ ಪ್ರವಾಹವನ್ನು ತಪಾಸಣೆ ಮಾಡುವ ‘ಟೆಸ್ಟರ್’ ಇತ್ಯಾದಿ.

೫. ರೋಗಿಗಳಿಗೆ ಉಪಯುಕ್ತ ವಸ್ತುಗಳು

ಜ್ವರಮಾಪಕ (ಥರ್ಮಾಮೀಟರ್‌), ಶರೀರಕ್ಕೆ ಶಾಖ ನೀಡಲು ಬಿಸಿನೀರಿನ ರಬ್ಬರ್‌ ಚೀಲ, ಆಯುರ್ವೇದ ಮಾತ್ರೆ ಗಳನ್ನು ಪುಡಿ ಮಾಡಲು ಸಣ್ಣ ಒರಳು ಕಲ್ಲು, ‘ಕಮೋಡ್‌’ನ ಕುರ್ಚಿ, ಡೈಪರ್‌ (ಮಲ-ಮೂತ್ರಗಳನ್ನು ಹೀರಿಕೊಳ್ಳುವ ವಸ್ತ್ರಗಳು) ಇತ್ಯಾದಿ.

‘ಮುಂಬರುವ ಆಪತ್ಕಾಲದಲ್ಲಿ ನಮಗೆ ಉಪಯೋಗವಾಗು ವಂತಹ ವಸ್ತುಗಳನ್ನು ಸಂಗ್ರಹಿಸಿಡಬೇಕು’, ಎಂದು ಪ್ರಾಣಿಗಳಿಗೆ ತಿಳಿಯುವುದಿಲ್ಲ. ನಾವು ಮನುಷ್ಯರಾಗಿದ್ದೇವೆ, ಆದುದರಿಂದ ನಾವು ಅದರ ಲಾಭವನ್ನು ಪಡೆಯೋಣ.’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (೧.೮.೨೦೨೩)